Saturday, January 22, 2011

ಹುಚ್ಚು ಬಯಕೆ


ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ
ನನ್ನ  ಕನಸ ಪಾಲುಗಾರ ನೀನಾಗ ಬೇಕಿದೆ
ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ
ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ
ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ
ನಿನ್ನೊಂದಿಗೆ ನನ್ನ ಪಾಲು ನಾ ಸವೆಯಬೇಕಿದೆ


ಮುಚ್ಚಿರುವ ನಿನ್ನ ಆ ಕಣ್ಣ ಒಳನೋಟ ನಾ ನೋಡ ಬೇಕಿದೆ
ಆ ಕಣ್ಣಿಗೆ ಅರಿವಾಗದಂತೆ ನಾ ಮುತ್ತನೊಂದು ಇಡಬೇಕಿದೆ
ಬಯಲೋಳು ತುಸುದೂರ ನನ್ನ ನಾ ಮರೆತು ನಿನ್ನ ನಾ ಹಿಂಬಾಲಿಸಬೇಕಿದೆ
ನಿನ್ನ ಪ್ರತಿ ಹೆಜ್ಜೆಯ ಅಚ್ಚಿಗೂ ನನ್ನ ಪಾದ ಮುತ್ತಿಡಬೇಕಿದೆ


ಪ್ರತಿ ಇರುಳು ನಿನ್ನೊಂದಿಗೆ ನಾ ಹುಸಿ ಮುನಿಸು ಮಾಡ ಬೇಕಿದೆ
ಪ್ರತಿ ಮುನಿಸಿಗೂ ಕಾರಣ ನಾನಾಗಿರಬೇಕಾಗಿದೆ
ನೀ ಬಿಕ್ಕಿ ಅಳುವಾಗ ಕಣ್ಣೇರು ಬರುವಾಗ ನಾ ಸಮಾಧಾನ ಮಾಡಿಸಬೇಕಿದೆ
ತೊಡೆಯಲ್ಲಿ ಮಲಗಿಸಿ ನಿನ್ನ ನೇವರಿಸುವ ಕ್ಷಣಕೆ ಅವು ಪನ್ನಿರಾಗಬೇಕಿದೆ

ಕಾಮತ್ ಕುಂಬ್ಳೆ


No comments:

Post a Comment