Saturday, January 22, 2011

ನಿರಂತರ


ಬಣ್ಣ ಬಣ್ಣದ ಹೂವಿಂದ ಬಣ್ಣ ಹೀರುವ ಮೋಹ ಚಿಟ್ಟೆಗೆ
ಇಬ್ಬನಿಗೂ ಚಳಿ ಹಿಡಿಸುವ ಆತುರ ಹಿಮಕೆ
ಪಚ್ಚ ಹಸುರಿನ ಪೈರಲಿ ಮರೆಯಾಗುವ ಆಸೆ ಗಿಣಿಗೆ
ನಿನ್ನ ಕಣ್ಣಲಿ ಕುಳ್ಳುವ ಹಂಬಲ ನನ್ನೀ ಕಣ್ಣಿಗೆ
ಮಳೆಯ ತುಂತುರಿಗೆ ಬಾಯಾರಿಕೆ ತೀರಿಸಿಕೊಂಡಿತೇ ಹಂಸ
ಕಾಲದ ವೇಗವ ಹಿಂದಿಕ್ಕುವ ಗಾಳಿಯ ಪ್ರಯತ್ನ ದ್ವಂಸ ಒಂದು ಕ್ಷಣಕೆ ಮಿಂಚಿ ಮರೆಯಾಗಿ ತನ್ನ ಅಸ್ತಿತ್ವ ತೋರಿಸುತಲಿದೆ ಮಿಂಚು
ನೀ ಬಾರದ ನಿಮಿಷಕೆ ತಿಳಿಯದೆ ಒದ್ದೆ ಆದದ್ದೇಕೆ ಈ ಕಣ್ಣ ಅಂಚು

ತನ್ನ ಇತಿಮಿತಿ ಗೊತ್ತಿದ್ದೂ ದಿಗಂತಕೆ ಮುತ್ತಿಕ್ಕುವ ಪ್ರಯತ್ನದಿ ಆ ಗಾಳಿಪಟ
ಕನಸ ಲೋಕಕೆ ಸ್ವಾಗತ ಕೋರಲು ಮಳೆಬಿಲ್ಲ ಮೂಡಿಸಿದೆ ಈ ಬೆಟ್ಟ
ನಾಳೆಯ ಸಾವಿಗೆ ನಗುತಾ ಸುವಾಸನೆಯೊಂದಿಗೆ ಬಿರಿಯುತಲಿದೆ ಮೊಗ್ಗೊಂದು ಇವಲ್ಲಿ ನಿನ್ನನ್ನೆಲ್ಲಿ ಕಳಕೊಂಡೆನೋ ಎಂಬ ದಿಗಿಲಲ್ಲಿ ಮಿಡಿಯುತಿದೆ ಮನ ಒಂದು
ಕಾಮತ್ ಕುಂಬ್ಳೆ

No comments:

Post a Comment