Thursday, March 1, 2012

ಡೈರಿ : ಪುಟ ೨


ಪುಟ
ಅಮ್ಮ ಊಟಕ್ಕೆ ಬಡಿಸಿದಳು, ಊಟ ಮಾಡುವಾಗಲು ಅವಳದ್ದೇ ಆಲೋಚನೆ, ಅವಳ ಒಂದೇ ದಿನದ ದಿನಚರಿ ನನಗೆ ಅವಳಲ್ಲಿ ಇಂಥಹ ವಿಚಿತ್ರ ಸೆಳೆತ ಯಾಕಾಯಿತೋ ಎಂಬ ಮೂಕ ಪ್ರಶ್ನೆ ನನ್ನಲ್ಲೇ ಕಾಡುತಿತ್ತು. ಊಟ ಮುಗಿಸಿ ಬಂದು ನನ್ನ ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿದೆ.
ಆಗ ನನಗೆ ನನ್ನ ಪ್ರಿಯೆಯ ನೆನಪಾದದ್ದು. ಕಳೆದ ಎರಡು ತಿಂಗಳಿಂದ ಮೌನದಲ್ಲಿದ್ದ ಅವಳು ನಿನ್ನ ಮತ್ತೆ ಮಾತಾಡಿದ್ದಳು.ಇಲ್ಲದಿದ್ದರೆ ದಿನಕ್ಕೆ 4 -5 ಪ್ರೀತಿಯ ಕುರಿತಾದ ಮೆಸ್ಸೇಜ್ ಮಾಡುತಿದ್ದಳು ಆದರೆ ಇವತ್ತು ಬೆಳಗ್ಗೆ ಬಂದ ಶುಭೋದಯದ ನಂತರ ಯಾವುದೇ ಮೆಸ್ಸೇಜ್ ಅವಳು ಕಳುಹಿಸಿರಲಿಲ್ಲ. ಎರಡು ತಿಂಗಳಿಂದ ಕಾಯುತಿದ್ದ ಅವಳು ಕಡೆಗೂ ಮೌನ ಮುರಿದಿದ್ದಳು. ಅವಳು ಯಾಕಾಗಿ ಈ ರೀತಿ ನನ್ನನ್ನು ಕಾಡುತ್ತಾಳೆಎಂಬ ಚಿಂತೆ ನನ್ನನ್ನು ಕಾಡಲಾರಂಬಿಸಿತು. ಏನಾಗಿದೆ ಯೋ ಅಂತ ಕಾಲ್ ಮಾಡಲು "ಈ ನಂಬರ್ ಸ್ವಿಚ್ ಆಫ್ ಆಗಿದೆ ಸಲ್ಪ ಸಮಯದ ನಂತರ ಪ್ರಯತ್ನಿಸಿ " ಅಂತ ಬರುತಿತ್ತು. ಎರಡು ಮೂರು ಬಾರಿ ಫೋನ್ ಅಯಿಸಿದೆ, ಅದಕ್ಕೂ ಅದೇ ಪ್ರತಿಕ್ರಿಯೆ, ಮನಸಲ್ಲೇ ನನ್ನವಳ ಬಗ್ಗೆ ಇಲ್ಲದ ಚಿಂತೆ ಆರಂಭವಾಯಿತು.

ಮನಸ್ಸು ಒಂದು ಬದಿಯಲ್ಲಿ ನಾಲ್ಕು ತಿಂಗಳಿಂದ ಪ್ರಿತಿಸುತಿದ್ದ ಹ್ರದಯದೆಡೆಗೆ  ವಾಲುತಿದ್ದರೆ, ಇನ್ನೊಂದೆಡೆ ಪರಿಚಯ ವಿಲ್ಲದ ಆ ಅಜ್ಞಾತ ಮನಸ್ಸಿನ ತುಮುಲಾಟ ತಿಳಿಯಲು ಹೆಣಗುತ್ತಿತ್ತು.ಮತ್ತೊಮ್ಮೆ ನನ್ನ ಗೆಳತಿಗೆ ಫೋನ್ ಅಯಿಸಿದೆ ಆಗಲೂ ಅವಳ ಸಂಕೆ ಸ್ಪಂದಿಸುತ್ತಿರಲಿಲ್ಲ, ಮೊದಲೇ ಒಂದು ದಿನದ ದಿನಚರಿ ಓದಿಯಾದ ನಾನು ಎಲ್ಲಿ ಶ್ರಾವಣಿ ಯ ಬಗ್ಗೆ  ಚಿಂತಿಸಲು ತೊಡಗುವೇನೋ, ನನ್ನವಳಿಗೆ ನಾನು ಎಲ್ಲಿ ಮೋಸ ಮಾಡುವೆನೋ ಎಂಬ ದ್ವಂದ್ವ ನನ್ನಲ್ಲಿ.

ನಿನ್ನೆ ಸಂಜೆ ನನ್ನ ಸಹನಾ "ನಾಳೆ ನನಗೆ ಮಂಗಳೂರಿನಲ್ಲಿ ಕೆಲಸ ಇದೆ, ನಾವಿಬ್ಬರು ಬೇಟಿಯಾಗೋಣ" ಅಂದಿದ್ದಳು. ತನ್ನ ಮೌನ ಮುರಿಯುತ್ತಾ.
ಅವಳಿಗೆ ಇಷ್ಟು ಬೇಗ ನನ್ನ ಮುಖ ಪರಿಚಯ ಮಾಡುವುದು ಬೇಡ,ಸಲ್ಪ ಸಮಯ ಕಾಯಿಸೋಣ ಎಂದು ನಾನು ನನ್ನ ಕಾಲೇಜ್ ನ ನೆಟ್ ನಲ್ಲೆ ಆನ್ಲೈನ್ ಲಲ್ಲೆ ಹೊಡೆದದ್ದು ನನ್ನ ಸಹನಾನಿಗೆ ಇಷ್ಟು ಬೇಜಾರು ತರಬಹುದು ಎಂದು ಆ ಗಳಿಗೆಗೆ ಯೋಚಿಸಿಯೇ ಇರಲಿಲ್ಲ, ಈಗ ಅವಳಿಗೆ ಕರೆ ಮಾಡಿ ಅದ ವಿಷಯ ತಿಳಿಸುವ ಎಂದರೆ ಅವಳ ನಂಬರ್ ಸಂಪರ್ಕ ಪಡೆಯುತ್ತಿರಲಿಲ್ಲಾ. ಏನು ಮಾಡುವುದು ಎಂದು ತೋಚದೆ ಹೋಯಿತು. ಅವಳ ಭಾವನೆಯೊಂದಿಗೆ ಆಡಬಾರದಿತ್ತು ಎಂದು ನನ್ನಲ್ಲಿ ಪಾಪಪ್ರಜ್ಞೆ ಮೂಡುತಿತ್ತು. ಅವಳನ್ನು ಭೇಟಿ ಆಗಬೇಕಿತ್ತು, ಎನಿಸತೊಡಗಿತು.


ಊಟಕ್ಕೆ ಮೊದಲು ಮೇಜ್ ಮೇಲೆ ಬಿಟ್ಟು ಹೋಗಿದ್ದ ಆ ಮರೂನ್ ಬಣ್ಣದ ಡೈರಿ ದೀಪ ನಂದಿದ್ದರೂ ನನಗೆ ಕಾಣುತಿತ್ತು.ಮಂಚದಿಂದ ಎದ್ದೆ , ರೂಂನ ಬಾಗಿಲನ್ನು ಮುಚ್ಚಿ ಅವಳ ಮುಂದಿನ ದಿನಚರಿ ಓದಲು ಮುಂದಾದೆ.ಮಾರನೆ ದಿನ ಭಾನುವಾರ ಆದುದರಿಂದ ಚಿಂತೆ ಇರಲಿಲ್ಲ, ಎಷ್ಟು ಹೊತ್ತಾದರೂ ಓದಿ ಮುಗಿಸುವೆ ಎಂಬ ಹುಚ್ಚುಬಯಕೆ ಹುಟ್ಟಿತ್ತು.

********

ಜನವರಿ 29

ಅರೆ ನಾಲ್ಕು ದಿನ ಹೇಗೆ ಹೋಯಿತು ಅಂತಾನೆ ಗೊತ್ತಾಗಲಿಲ್ಲ ನೋಡು, ಕಾಲೇಜ್ ಸಹಪಾಟಿಗಳೊಂದಿಗೆ ಕೈಗೊಂಡ ಆ ಪ್ರಯಾಣ ನಿಜಕ್ಕೂ ಮರೆಯಲಾಗದ ಅನುಭವ, ಆ ಹಿಂದಿ ಲೆಕ್ಚರರ್ ನ ತರಲೆ ಹರಟೆಗಳು, ನಮ್ಮ ಸಹಪಾಟಿ ನವೀನ ಮಾಡಿದ  ನಮ್ಮ ಪ್ರಿನ್ಸಿಪಾಲ್ ರ ಮಿಮಿಕ್ರಿ ಎಲ್ಲವೂ ಮೂರು ದಿನ ನನ್ನನ್ನು ನಿನ್ನ ಮರೆಯುವಂತೆ ಮಾಡಿತು.ಮೈಸೂರು ಈ ಬಾರಿ ಇನ್ನೂ ಸುಂದರವಾದಂತಿತ್ತು ನಾವೆಲ್ಲರೂ ಒಟ್ಟಿಗಿರಲು.ಮೊದಲದಿನ ಮೈಸೂರು ಸುತ್ತಿ ಮಾರನೆ ದಿನ ಮದ್ಯಾಹ್ನ ದ ಒಳಗೆ ಚಾಮುಂಡಿಬೆಟ್ಟ, ಮತ್ತು ಟಿಪ್ಪುನ ಅರಮನೆ ನೋಡಿ ಹೊರಟಿದ್ದೆವು ಕೊಡಗಿನ ದುಬಾರೆ ಜಲಪಾತದ ಕಡೆಗೆ ಆಗ ಬಂದಿತ್ತು ಅವನ ಮೆಸ್ಸೇಜ್.

"
ನಾನು ನನ್ನ ಮನಸ್ಸಿನ ಮಾತು ನಿನ್ನೆ ಅಂದದಕ್ಕೆ ಕೋಪವೇ ...?ನಿನ್ನೆ ಇಂದ  ಒಂದು ಮೆಸ್ಸೇಜ್ ನೀನು ಕಳುಹಿಸಲಿಲ್ಲ, ಕಾಲ್ ಮಾಡಿದರು ನಿನ್ನ ನಂಬರ್ ಚಾಲನೆಯಲಿಲ್ಲ ಎಂದು ಬರುತಲಿದೆ ... ಆದಕಾರಣ ಈ ಮೆಸ್ಸೇಜ್ ಕಳುಹಿಸುತ್ತಲಿರುವೆ ನಿನಗೆ ಮೆಸ್ಸೇಜ್ ತಲುಪಿದೊಡನೆ ಪ್ರತಿಕ್ರಿಯಿಸು ... ನಿನ್ನ ಪ್ರತಿಕ್ರಿಯೆ ಗಾಗಿ ಕಾಯುತಿದ್ದೇನೆ.. ನಿನ್ನ .." ಮುಂದೆ ಬರಿಯಲಿಲ್ಲ ಅವನು.

ನನಗೂ ನಿನ್ನೆಯ ಬೆಳಗ್ಗಿನ ಗಡಿಬಿಡಿಯಲ್ಲಿ ಅವನಿಗೆ ಮೆಸ್ಸೇಜ್ ಕಳುಹಿಸಲು ಮರೆತಿದ್ದೆ, ನಂತರ ಬಸ್ ನಲ್ಲಿ ಸರಿಯಾದ ನೆಟ್ವರ್ಕ್ ಇಲ್ಲದ ಕಾರಣ ಅವನಿಗೆ ಸಂದೇಶ ಕಳುಹಿಸವ ಎಂದು ಕೊಂಡರು ಕಳುಹಿಸಲಾಗಲಿಲ್ಲ, ಮೈಸೂರು ತಲುಪುತಿದ್ದಂತೆ ನನ್ನ ಮೊಬೈಲ್ ನ ಚಾರ್ಜ್ ಖಾಲಿಯಾಗಿತ್ತು, ಮೆಸ್ಸೇಜ್ ಮಾಡಲಾಗಲಿಲ್ಲ, ಮತ್ತೆ ರಾತ್ರಿ ಮೊಬೈಲ್ ಚಾರ್ಜ್ ಗೆ ಹಾಕುವಷ್ಟರಲ್ಲಿ ನನಗೆ ನಿದ್ದೆ ಬಂದಿತ್ತು,

ನನಗೂ ಅವನೊಂದಿಗೆ ಮಾತಾಡಬೇಕೆಂಬ ಹಂಬಲ ಆದರೆ ಎಲ್ಲಿ ನನ್ನ ಪಕ್ಕ ಕುಳಿತಿದ್ದ ಸ್ನೇಹಾಳಿಗೆ ಎಲ್ಲಾ ವಿಚಾರ ತಿಳಿದು ಬಿಡುತ್ತದೋ ಎಂಬ ಹೆದರಿಕೆ,ನಾನು ಅವನಿಗೆ ನಾನು ಮೈಸೂರ್ ನಲ್ಲಿ ಕಾಲೇಜ್ ವಿದ್ಯಾರ್ಥಿ ಗಳೊಂದಿಗೆ ಪ್ರವಾಸಕ್ಕೆ ಬಂದಿರುವೆ, ಮಂಗಳೂರು ತಲುಪಿದೊಡನೆ ಮೆಸ್ಸೇಜ್ ಮಾಡುತ್ತೇನೆ ಎಂದು ಕಳುಹಿಸಿದೆ. ಅವನು ನನ್ನ ಪ್ರವಾಸಕ್ಕೆ ಶುಭಕೋರಿ ಮತ್ತೆರಡು ಮೆಸ್ಸೇಜ್  ಕಳುಹಿಸಿದ.ಮುಂದೆ ಪುನಃ ಸಂಪರ್ಕದಲ್ಲಿ ಅಡಚಣೆ ಉಂಟಾಯಿತು, ನಾನು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ನನ್ನ ಬದಿಯ ಬ್ಯಾಗ್ ನಲ್ಲಿ ಹಾಕಿದೆ.

ಇತ್ತ ಸ್ನೇಹ ನನ್ನಲ್ಲಿ "ನಿನ್ನ ಮೊಬೈಲ್ ಕೊಡು ನನಗೆ ಬೋರ್ ಆಗ್ತಾ ಇದೆ ಹಾಡು ಕೇಳಿ ಕೊಟ್ಟ್ ಬಿಡ್ತೇನೆ " ಅಂದಳು, ಹಿಂದೆ ಅವಳು ಯಾವ ಸಮಯದಲ್ಲಿ ಏನು ಕೇಳಿದರೂ ನಾನು ಕೊಡುವಷ್ಟು ಉಧಾರಿ ಆಗಿದ್ದೆ, ಆದರೆ ಇಂದು ಅವಳು ನನ್ನಿಂದ ನನ್ನವನನ್ನು ಕಸಿದುಕೊನ್ಡಾಳು ಎಂಬ ಚಿಂತೆ ಇಂದಲೇ ನಾನು "ಚಾರ್ಜ್ ಇಲ್ಲ ಕಣೆ... ಮಂಗಳೂರು ತಲುಪಿದೊಡನೆ ಕೊಡುತ್ತೇನೆ, ನಾಳೆ ಒಂದು ದಿನ ತೆಗೆಯ ಬೇಕು ಬರೇ ಒಂದು ಕಡ್ಡಿಯಲ್ಲಿ ... " ಅಂದೆ. ಇದೊಂದೇ ನನ್ನಲ್ಲಿದ್ದ ಉತ್ತರ. ಅವಳ ಕೈಯಲ್ಲಿರುವಾಗ ಅವ ಎಲ್ಲಿ ಮೆಸ್ಸೇಜ್ ಕಳುಹಿಸುತ್ತನೋ ..? ಅದನ್ನು ಅವಳು ಓದಿದರೆ ಏನಾಗ ಬಹುದು ಎಂಬೆಲ್ಲ ಚಿಂತೆ ನನ್ನಲ್ಲಿ.
ರಾತ್ರಿಯ ಕ್ಯಾಂಪ್ ಫೈರ್  ನಲ್ಲಿ ರಾಹುಲ್  'ಈ ಸಂಜೆ ಯಾಕಾಗಿದೆ' ಎಂದು ಹಾಡಬೇಕಾದರೆ ಅವನ ನೆನಪು ನನ್ನನ್ನು ಅತಿಯಾಗಿ ಕಾಡುತಿತ್ತು. ಅವನಿಗೆ "I MISS YOU " ಅಂತ ಮೆಸ್ಸೇಜ್ ಕಳುಹಿಸುವ ಅಂದರೂ ಅಲ್ಲಿ ನೆಟ್ವರ್ಕ್ ಇರಲಿಲ್ಲ, ಅವನದ್ದೇ ಕನಸಲ್ಲಿ ನಾ ನಿದ್ದೆ ಹೋದೆ.
 
ನಿನ್ನೆಯ ಹಿಡಿ ದಿನ ದುಬಾರೆ ಜಲಪಾತ , ರಕ್ಷಿತಾರಣ್ಯ, ಆನೆಗಳ ಸಾವರಿ ಎಲ್ಲಾ ಮಾಡಿ ಕೊಂಡೆವು. ಹಾಗೆ ಮಂಗಳೂರಿಗೆ ಎಲ್ಲಾ ಸಿಹಿ ನೆನಪನ್ನು ಹೊತ್ತು ಕೊಂಡು ಬಂದಿಳಿದೆವು.ನಮ್ಮ ರೂಂ ತಲುಪುತಿದಂತೆ ಅವನಲ್ಲಿ ಮಾತಾಡಬೇಕು ಎಂಬ ಬಯಕೆ ಅತಿಯಾಯಿತು, ಅವನಿಗೆ ಫೋನ್ ಆಯಿಸಿದೆ, ಆಗಲೇ 11 ಆಗಿದ್ದ ಕಾರಣ ಅವನ ಉತ್ತರ ವಿರಲಿಲ್ಲ, "good night sweet dreams, good morning in advance" ಎಂದು ಮೆಸ್ಸೇಜ್ ಟೈಪ್ ಮಾಡಿ, ಅವನು ಹೇಗಿರ ಬಹುದು ಎಂಬ ಕಲ್ಪನೆಗೆ ಜಾರ ಬೇಕೆಂದಿದ್ದೇನೆ.

ಇಂತಿ
ಶ್ರಾವಣಿ


***********


ಮೊದಲಿಗೆ ಇವಳು ನನ್ನ ಸಹನಾ ಆಗಿರಬಹುದೇ ಎಂಬ ಸಣ್ಣದೊಂದು ಊಹೆ ಇತ್ತು, ಈ ಪುಟ ಮುಗಿಸುತಿದ್ದಂತೆ ಅದು ಐವತ್ತು ಪ್ರತಿಶತ ನಿಜವೆನಿಸಿತು, ನಾನು ಹಿಂದೆ ನನ್ನ ಸಹನಾಲಿಗೆ ನನ್ನ ಪ್ರೇಮ ವ್ಯಕ್ತ ಪಡಿಸಿದಾಗಿನ ಎಲ್ಲಾ ವಿಚಾರ ಇಲ್ಲಿ ಶ್ರಾವಣಿಯ ಡೈರಿಯಲ್ಲಿ ಅಚ್ಚಾಗಿತ್ತು, ಬದಲಾಗಿ  ನಾನು ಕಳುಹಿಸಿದ ಮೆಸ್ಸೇಜ್ ಅನ್ನು ಚಾಚು ತಪ್ಪಿಲ್ಲದೆ ಇಲ್ಲಿ ಅವಳು ಬರೆದಿದ್ದಳು.

ಈ ಶ್ರಾವಣಿ ನನ್ನ ಸಹನಾ ಯಾಕಾಗಿರಬಾರದು, ಆದರೂ ಆಗಿರಬಹುದು, ಆದರೆ ನನ್ನಲ್ಲಿ ಇಕೆ ಸಹನಾ ಎಂದು ಸಂಭೋಧಿಸಲು ಕಾರಣವಾದರು ಏನಿರಬಹುದು ಎಂಬೆಲ್ಲ ವಿಚಾರಗಳು ನನ್ನ ತಲೆ ತಿನ್ನಲಾರಂಬಿಸಿದವು. ಅಮ್ಮ ನಿದ್ದೆ ಇಂದ ಎದ್ದವರೇ ಬಾಗಿಲ ಸಂದಿನಿಂದ ಒಳಗೆ ದೀಪ ಹತ್ತುತಿರುವುದನ್ನು ನೋಡಿ "ನಾಳೆ ಓದು, ಆದಿತ್ಯವಾರ ಆಡುವ ಬದಲು ಓದು ಈಗ ನಿದ್ದೆ ಮಾಡು "ಅಂದರು. ನಾನು ಓದುತ್ತಿರುವುದು ಬೇರೊಬ್ಬರ ಡೈರಿ ಯಾಗಿತ್ತೆ ವಿನಃ ಕಾಲೇಜ್ ಬುಕ್ ಆಗಿರಲಿಲ್ಲ. ಈ ಪುಟ ಓದುತಿದ್ದಂತೆ ನನಗೆ ಯಾವುದ್ಯಾವುದೋ ಯೋಚನೆಗಳು ತಲೆಯಲ್ಲಿ ಒಡಲಾರಂಬಿಸಿದವು. ಬೇಗನೆ ನಿದ್ದೆಯೂ ಹತ್ತಲಿಲ್ಲ.

ಒಮ್ಮೊಮ್ಮೆ ಇವಳು ನನ್ನ ಸಹನಾ ಅಲ್ಲ ಅನಿಸುತಿತ್ತು, ಏಕೆಂದರೆ ಎಲ್ಲಾ ವಿಚಾರ ನನ್ನಲ್ಲಿ ಹೇಳುತ್ತಿರುವವಳು ಎರ್ನಾಕುಲಂ ಗೆ ಉನ್ನತ ಶಿಕ್ಷಣಕ್ಕೆ ಹೋಗುವ ವಿಚಾರ ನನ್ನಿಂದ ಮುಚ್ಚಿಡುತಿರಲಿಲ್ಲ. ಅವಳು ಒಂದು ವೇಳೆ ನನ್ನ ಸಹನಾ ಆಗಿದ್ದು ಅವಳು ಟ್ರೈನ್ ನಲ್ಲಿ ಎರ್ನಾಕುಲಂ ಗೆ ಹೋದಳೆಂದು ಆ ರಿಕ್ಷ ಓಡಿಸುತಿದ್ದ ದಾಮೋದರ್ ಯಾಕಾದರೂ ಸುಳ್ಳು ಹೇಳಿಯಾರು ? ಅವರು ಅವಳು ಟ್ರೈನ್ ಹಿಡಿದು ಹೋದಳು ಎಂದಿದ್ದರು, ಅವರು ಹೇಳಿದ ಮಾತಿನಲ್ಲಿ ನಿಜ ವಿರಲೂಬಹುದು, ಅದಕ್ಕಾಗಿಯೇ ನನ್ನ ಭೇಟಿ ಅವಳು ಬಯಸಿರಬಹುದು ನಿನ್ನೆ , ಸುಮ್ಮನೆ ಹುಡುಗಾಟಕ್ಕೆ ಅಡ್ಡ ಬಿದ್ದು ಅವಳನ್ನು ಪಡೆಯುವ ಕ್ಷಣವನ್ನು ನಾನು ಕಳೆದುಕ್ಕೊಂಡೆ.
ಯಾವುದಕ್ಕೂ ನಾಳೆ ಒಮ್ಮೆ ಈ ಕುರಿತು ಕೇಳೋಣ ಅಂದುಕೊಂಡೆ.

ಒಮ್ಮೆ ನನ್ನ ಸಹನಾ ನಿಗೆ ಫೋನ್ ಆಯಿಸೋಣ ಇಗಲಾದರು ಅವಳ ಕೋಪ ತಣ್ಣಗಾಗಿದೆಯ ನೋಡೋಣ ಅನಿಸಿ ಅವಳ ನಂಬರ್ ಗೆ ಫೋನ್ ಮಾಡಲು ಅದು ಇನ್ನೂ ಸ್ವಿಚ್ ಆಫ್ ಆಗಿತ್ತು.
ಮನಸಲ್ಲಿ ಇಷ್ಟೆಲ್ಲಾ ಗೊಂದಲ, ಯಾಕೋ ಏನೋ ಕಳಕೊಂಡ ಅನುಭವ, ಯಾರಲ್ಲಿ ನನ್ನ ಮನಸ್ಸಿನ ವೇದನೆ ಹೇಳಲಿ..? ಯಾರು ನನ್ನ ಈ ಮಾತು ಕೇಳಲು ತಯಾರಿರುವರು...??********
ಮುಂದುವರಿಯುವುದು ..... 

No comments:

Post a Comment