Saturday, March 3, 2012

ಡೈರಿ : ಪುಟ ೪







ಪುಟ೪

ಫೆಬ್ರವರಿ 14
ವಿಶ್ವದಲ್ಲೆಲ್ಲ ಪ್ರೇಮಿಗಳ ದಿನದ ಆಚರಣೆ ಜೋರಾಗಿಯೇ ಇತ್ತು. ನನಗೆ ಅವನನ್ನು ಕಳಕೊಳ್ಳಬೇಕಾದ ಅನಿವಾರ್ಯತೆ !!!
ಸ್ನೇಹ ಅವನನ್ನು ಭೇಟಿ ಆಗುವ ಹುಮ್ಮಸ್ಸಿನಲ್ಲಿದ್ದಳು, ನಾನು ಅವಳಿಗೆ ನೀನು ಇಂದೇ ಅವನಿಗೆ ಪ್ರೊಪೋಸ್ ಮಾಡು, ಅವನು ಒಪ್ಪುವಾ, ಮತ್ತೆ ನಿನ್ನ ಚಿಂತೆ ಎಲ್ಲಾ ತೀರುತ್ತದೆ ಎಂದು ಅವಳಿಗೆ ಹೇಳಿದೆ, ಅವಳು ಅದಕ್ಕೆ ಸಮ್ಮತಿಸಿದಳು. ನಾನು ಅವಳು ಸೇರಿ ಇಡಿ ಮಂಗಳೂರು ಸುತ್ತಿ ಅವನಿಗಾಗಿ ಒಂದು ಚಂದದ ಉಡುಗೊರೆ ಖರೀದಿಸಿದೆವು, ಅವನಿಗೆ ಐದು ಗಂಟೆಗೆ ಬರಲು ಹೇಳಿದ್ದಳು ಆದರೆ ಮೂರಕ್ಕೆ ಅವಳು ಪಬ್ಬಾಸ್ಗೆ ಹೋಗುವ ಅಂತ ನನ್ನಲ್ಲಿ ಒಂದು ಗಂಟೆಗೆ ಒತ್ತಾಯ ಶುರು ಮಾಡಿದ್ದಳು.ನನಗೂ ಅವನನ್ನು ಒಮ್ಮೆ ನೋಡಬೇಕು ಎಂಬ ಹಂಬಲ.

ಆದರೆ ಅವಳ ತಯಾರಿ ಆಗುತ್ತಲೇ 4 :30 ದಾಟಿತ್ತು , 5 ಗಂಟೆಗೆ ನಾವು ಪಬ್ಬಾಸ್ತಲುಪಿದೆವು.ಅವನು ಇನ್ನೂ ತಲುಪಿರಲಿಲ್ಲ. ಅವಳು ಇನ್ನೊಮ್ಮೆ ಕಾಲ್ ಮಾಡಿ ಕೇಳುವಾಗ ಇನ್ನೂ 5 ನಿಮಿಷದಲ್ಲಿ ಸ್ಥಳಕ್ಕೆ ತಲುಪುತ್ತೇನೆ ಅಂತ ಹೇಳಿದ. ಅವಳಲ್ಲಿ ಒಂದು ಬಗೆಯ ಗೊಂದಲ.
ನನ್ನಲ್ಲಿ ಅವಳು "ಶ್ರಾವಣಿ ಬೇಡ ಕಣೇ ಪ್ರೊಪೋಸ್ ಮಾಡುವುದು, ಅವ ಕೋಪಿಸಿಕೊಂಡರೆ ಈಗಿರುವ ಸಂಭಂದವು ಕೆಟ್ಟುಹೋಗುವುದು"ಅಂದಳು.
ನಾನು ಅವಳಿಗೆ "ಹಾಗೇನು ಆಗುವುದಿಲ್ಲ, ಅವನಿಗೂ ನಿನ್ನಲ್ಲಿ ಪ್ರೀತಿ ಮೂಡಿರಬಹುದು, ನಿನ್ನೆ ಏನೋ ವಿಚಾರ ನಿನ್ನಲ್ಲಿ ಹೇಳುವುದು ಇದೆ ಅಂದನಲ್ಲ ಅದು ಈ ವಿಚಾರ ಆಗಿದ್ದರೂ ಆಗಿರಬಹುದು" ಅಂದೆ ಮನಸ್ಸು ಅವನನ್ನು ಕಳಕೊಳ್ಳಬೇಕಲ್ಲ ಅಂತ ಕೂಗುತಲಿತ್ತು.
ನಾನಂದ ಮಾತಿಗೆ ಅವಳು ಇನ್ನೊಮ್ಮೆ ಸಂಭ್ರಮಿಸಿದಳು.
ಅವಳು "ಅವ ಬೇಡ ಎಂದರೆ ಅವನಿಗೆ convince ಮಾಡ್ತಿಯಲ್ಲ ನೀನು ... promise ...ಅವನಿಲ್ಲದೆ ನಾ ಬದುಕಲಾರೆ "ಎನ್ನುತ್ತಾ ಕೈ ಮುಂದೆ ಹಿಡಿದಳು
ಒಳಮನಸ್ಸು ಅವಳ ಕೈಗೆ ಕೈ ಜೋಡಿಸು ಎನ್ನುತಿತ್ತು, ಆದರೆ ಅವನ ಧ್ಯಾನದಲ್ಲಿದ್ದ ನನ್ನ ಹೃದಯ ಗೆಳತಿಗಾಗಿ ಕಟ್ಟಿದ ಪ್ರೇಮ ಗೋಪುರ ನೀನು ಕೈಯಾರೆ ಕೆಡವುತ್ತಿಯಾ ಎಂದು ಪ್ರಶ್ನಿಸುತ್ತಿತ್ತು .ನಾನು ಮನಸ್ಸಿನ ಮಾತನ್ನು ಕೇಳಿದೆ, ಸ್ನೇಹಳಂತೆ ನನ್ನನ್ನು ಪ್ರೀತಿಸಲು ಆಗದು , ಅವನನ್ನು ಅವಳು ಚೆನ್ನಾಗಿ ನೋಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.

ನಾನು ಕೈ ತೆಗೆದು ಅವಳ ಕೈಮೇಲೆ ಇಡುತಿದ್ದಂತೆ ಬಾಗಿಲು ತೆರೆದು ಅವನು ಒಳ ಬಂದ.ಇಪ್ಪತ್ತರ ನವತರುಣ.ಆಗತಾನೆ ಮೂಡಿದ ಮೀಸೆ, ಸಣ್ಣಗಿನ ಕೂದಲು,ಇಂದಿನವರಂತೆ ಅವ ಲೋ ಜೀನ್ಸ್ ಹಾಕಿರಲಿಲ್ಲ ಬದಲಿಗೆ ಒಂದು ಸಭ್ಯ ಉಡುಪನ್ನೇ ಹಾಕಿ ಕೊಂಡಿದ್ದ.ಸ್ನೇಹ ಅವನನ್ನು ನೋಡಿ ಹಾಯ್ ಅಂದಳು.ನಾನು ಅವನಿಗೆ ಒಂದು ಮುಗುಳ್ನಗೆ ಕೊಟ್ಟೆ.
ಆಗ ಅವನ ಗಲ್ಲದಲ್ಲಿ ಮೂಡಿದ ಆ ಗುಳಿ !!!. ಅವನ ಆ ಗುಳಿಗಲ್ಲ ಎಂತಹ ಹುಡುಗಿಯನ್ನು ಸೆಳೆಯುವಂತಿದ್ದವು, ನನ್ನ ಒಳಮನಸ್ಸು ಅವನೆಡೆಗೆ ಆಕರ್ಷಿತಳಾಗಬೇಡಎಂದು ಎಚ್ಚರಿಸಿತು.

ಸ್ನೇಹ ಅವನಲ್ಲಿ "ಇವಳು ಶ್ರಾವಣಿ ಅಂತ, ನನ್ನ ಬೆಸ್ಟ್ ಫ್ರೆಂಡ್ "ಅಂತ ನನ್ನನು ಪರಿಚಯಿಸಿದಳು,
ಅವನು ಅದಕ್ಕೆ ಪ್ರತಿಯಾಗಿ ಇನ್ನೊಮ್ಮೆ ಆ ಗುಳಿ ತುಂಬಿದ ಮಂದಹಾಸ ನೀಡಿದ. ಕೈ ಮುಂದೆ ಚಾಚಿದ. ಅವನನ್ನು ಸ್ಪರ್ಶಿಸುವ ಮನಸ್ಸಾಗುತ್ತಿತ್ತು, ಆದರೆ ನಿನ್ನೆ ರಾತ್ರಿ ಮಾಡಿದ ನಿರ್ಧಾರ ನನ್ನ ಕೈಯನ್ನು ಜೋಡಿಸಿ ಅವನಿಗೆ ವಂದನೆ ಸಲ್ಲಿಸುವಂತೆ ಮಾಡಿತು.
ಅವನು "ನೀನೇನೋ ಅನ್ನಬೇಕೆಂದಿಯಲ್ಲ ಸ್ನೇಹ  ಹೇಳು ...ಬಳಿಕ ನಾನಂದುಕೊಂಡ ವಿಚಾರ ಹೇಳುತ್ತೇನೆ "ಅಂದ
 
ನನಗೆ ಇವರಿಬ್ಬರು ತಮ್ಮ ಪ್ರಣಯ ಪಯಣ ಇಷ್ಟುಬೇಗ ಶುರು ಮಾಡುವುದು ಬೇಡ ಎಂದೆನಿಸಿ, ಐದು ನಿಮಿಷಕ್ಕಾದರೂ ನಾನು ಅವರನ್ನು ತಡೆಯುವ ಅಂತ "ಆರ್ಡರ್ ಕೊಡೊಣ ಮತ್ತೆ ಮುಂದುವರಿಸಿದರಾಯಿತು ..."ಅಂದೆ
ಅವನು ನನ್ನಲ್ಲಿ "ಸರಿ ಶ್ರಾವಣಿ ,ನಿನ್ನ ಗೆಳತಿಯ ಇಷ್ಟ ನನ್ನಗಿಂತ ನಿನಗೆ ಹೆಚ್ಚು ತಿಳಿದಿರಬಹುದು ನೀನು ಆರ್ಡರ್ ಮಾಡು " ಅಂದ, ಅವ್ವು ಅವ ನನ್ನಲ್ಲಿ ಆಡಿದ ಮೊದಲ ಮಾತಾಗಿತ್ತು , ಫೋನ್ ನಲ್ಲಿ ಹಿಂದೆ ಮಾತಾಡಿದಾಗ ಇಂತಃ ಮುಗ್ದತೆಯ ಪರಿಚಯವಾಗಿರಲಿಲ್ಲ, ಆದರೆ ಇವತ್ತು ಅನುಭವವಾಗಿತ್ತು.
ನಾನು "ಸರಿ .... ಅಣ್ಣ ಮೆನು ತಕೊಂಡು ಬಾ "ಅಂತ ಪ್ರೇಮಿಗಳ ನಡುವಲ್ಲಿ ಬ್ಯುಸಿಯಾಗಿರುವ ವೈಟರ್ ಒಬ್ಬನಿಗೆ ಹೇಳಿದೆ.
ನನ್ನ ಪಕ್ಕದಲ್ಲಿ ಸ್ನೇಹ ಕುಳಿತಿದ್ದಳು, ಅವಳ ಎದುರಿಗೆ ಅವನು ಕುಳಿತುಕೊಂಡಿದ್ದ, ಅವನು "ನೀನು ಹೇಳು ..."ಎಂದ ಸ್ನೇಹಳಿಗೆ.

ಅವಳು ನನ್ನ ಕೈಯಲ್ಲಿದ್ದ ಗಿಫ್ಟ್ ತೆಗೆದು ಟೇಬಲ್ ಮೇಲೆ ಇಟ್ಟು"ಇದು ನಿನಗಾಗಿ ನನ್ನ ಸಣ್ಣದೊಂದು ಕಾಣಿಕೆ "ಅಂದಳು
ಅವನು "ನಿನ್ನ ಬರ್ತ್ಡೇ ಗೆ ನಾನು ಉಡುಗೊರೆ ಕೊಡಬೇಕಾದುದ್ದು ಆದರೆ ನೀನು ಉಡುಗೊರೆ ಕೊಡುತ್ತ ಇದ್ದೀಯ... ಏನು ವಿಚಾರ...?"
ಸ್ನೇಹ "ನನ್ನ ಬರ್ತ್ಡೇ ನಿನ್ನೆ ಇದ್ದದ್ದು, ಈ ಉಡುಗೊರೆ ಈ ದಿನದ ವಿಶೇಷತೆ, ಪ್ರೇಮಿಗಳ ದಿನದ ಉಡುಗೊರೆ !!!"

ಅವನಲ್ಲಿ ಒಂದು ಮೌನ ಮೂಡಿತು.

ಸ್ನೇಹ ಮುಂದುವರೆಸಿದಳು "ನನಗೆ ನೀನೆಂದರೆ ತುಂಬಾ ಇಷ್ಟ, ಸಣ್ಣಾಗಿಂದ ನಿನ್ನೊಡನೆ ಕಂಡ ಕನಸು ನನಸಾಗಬೆಂಬ ಆಶೆ ... ಇಲ್ಲ ಅನ್ನ ಬೇಡ ..."
ಅವನಿನ್ನೂ ಮೌನಿಯಾಗಿದ್ದ, ವೈಟರ್ ನಾನು ಆರ್ಡರ್ ಐಸ್ ಕ್ರೀಂ ತಂದು ಮೇಜಿನ ಮೇಲೆ ಇಟ್ಟ, ನಾನು "ಐಸ್ ಕ್ರೀಮ್ "ಅಂದೆ. ಇದು ಇಬ್ಬರಿಗೂ ಕೇಳಲಿಲ್ಲ. ಅವರು ಅವರ ಮಾತಿನಲ್ಲಿ ಮುಳುಗಿದ್ದರು.

ಸ್ನೇಹ "ನಿನ್ನ ಮನಸಲ್ಲಿ ಏನಿದೆ ಎಂದು ಹೇಳು .."ಅಂದಳು
ಅವನು "ಸ್ನೇಹಾ ನನಗೆ ನಿನ್ನಲ್ಲಿ ಅತ್ತೆ ಮಗಳೆಂಬ ಸೆಳೆತವಿದೆ ಹೊರತು ನನ್ನ ಪ್ರೇಮಿಯಾಗ ಬೇಕೆಂಬ ವಿಚಾರ ಇಲ್ಲಿ ವರೆಗೆ ಬಂದೇ ಇಲ್ಲ , ನಾವಿಬ್ಬರು ಹೀಗೆ ಇರೋಣಾ..."
ಈಗ ಮೌನಿಯಾಗುವ ಸರದಿ ಸ್ನೇಹಳದ್ದು, ಅವಳ ಮೈಯೆಲ್ಲಾ ಕಂಪಿಸುತ್ತಿತ್ತು, ಕೈಯಲ್ಲಿದ್ದ ಸ್ಪೂನ್ ನಡುಗುತಿತ್ತು.ಅವ ಮುಂದುವರಿಸಿದ

"
ನಾನು ನಿನ್ನಲ್ಲಿ ಹೇಳ ಬೇಕೆಂದ ವಿಚಾರ ಹೇಳಿಬಿಡುತ್ತೇನೆ, ನಾನು ಒಬ್ಬ ಸಹನಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಾ ಇದ್ದೇನೆ, ಅವಳು ನನ್ನನ್ನು ಪ್ರೀತಿಸುತ್ತಾ ಇದ್ದಾಳೆ, "
ಮೌನಿಯಾಗಿದ್ದ ಸ್ನೇಹ ಒಮ್ಮೆಲೇ "ಯಾರು ಆ ಸಹನಾ ..? ನನ್ನ ಸವತಿ ...?"ಅಂತ ಕಿರುಚಿದಳು.
ನಾನು ಅವಳನ್ನು ಸಮಾಧಾನಿಸುತ್ತಾ "ಮನೆ ಅಲ್ಲ ಕಣೆ ಇದು. ಕಂಟ್ರೋಲ್ .... "ಅಂದೆ
ಅವನು "ಅವಳ್ಯಾರೋ ಅಂತ ನನಗಿನ್ನೂ ಗೊತ್ತಿಲ್ಲ ... ನಿಜ ಹೇಳಬೇಕೆಂದರೆ ಇನ್ನೂ ನೋಡದ ಮುಖವನ್ನು ನಾನು ಪ್ರೀತಿಸುತ್ತಾ ಇದ್ದೇನೆ " ಅಂದ.

ನಾನು ಮೌನಿ ಆದೆ.
ಅವ ನನ್ನ ಬಗ್ಗೆ ಮಾತಾಡುತಿದ್ದದ್ದು .ಇಲ್ಲಿ ಸ್ನೇಹ ಪೂರ್ತಿ ಹತಾಶೆಯಲ್ಲಿ "ಹಂಗಾದ್ರೆ ನೀನು ಅವಳನ್ನೇ ಮದುವೆ ಆಗು , ನಾನು ಲೈಫ್ ಲಾಂಗ್ ನಿನ್ನ ನೆನಪಲ್ಲೇ ಸನ್ಯಾಸಿ ಆಗಿರುತ್ತೇನೆ, ಅವಳು ಒಂದು ವೇಳೆ ಸತ್ತರೆ ನಿನ್ನ ಎರಡನೇ ಹೆಂಡತಿಯಾಗಿ ಬರಲು ನಾನು ಸಿದ್ದ , ನನ್ನ ಆಗಲಾದರೂ ಸ್ವಿಕರಿಸುತ್ತಿಯಾ ...?" ಅಂದಳು.

ಅವನು "ಅರೆ ಸ್ನೇಹ ನೀನ್ಯಾಕೆ ಈ ಹುಚ್ಚು ನಿರ್ಧಾರ ತಕೊಳ್ಳುತಿದ್ದಿಯ ...?ನಿನಗೆ ನನಗಿಂತ ಒಳ್ಳೆ ಹುಡುಗ ಸಿಗುತ್ತಾನೆ... ನಾನೇ ನಿಂತು ನಿನ್ನ ಮದುವೆ ಮಾಡಿಸುತ್ತೇನೆ .."ಅಂದ

ಇಲ್ಲಿ ಅವಳ ಮಾತು ಕೆಳುತಿದ್ದಂತೆ ಅವಳಿಗೆ ಅವನಲ್ಲಿರುವ ಪ್ರೀತಿ ನನಗರ್ಥವಾಯಿತು, ಮೌನ ವಾಗಿದ್ದ ನಾನು ಇನ್ನೂ ಮೌನವಾಗಿರುವುದು ಸರಿಯಲ್ಲ.ಎಲ್ಲ ವಿಚಾರ ಹೇಳಿ ಬಿಡುತ್ತೇನೆ ಅಂದುಕೊಂಡೆ ಆದರೆ ಹೇಗೆ ಹೇಳುವುದು ತಿಳಿಯಲಿಲ್ಲ.
ಅವನ ಕಲ್ಪನೆಯ ಪ್ರೇಮಿ ಅವನ ಕಲ್ಪನೆಯಲ್ಲೇ ಇರಲಿ ಎಂದು ನಾನು ಅವನಲ್ಲಿ "ನಿನ್ನನ್ನು ಇವಳು ತುಂಬಾ ಇಷ್ಟ ಪಡುತ್ತಾಳೆ, ಇವಳನ್ನೇ ಮದುವೆ ಆಗಿ, ಗೊತ್ತಿಲ್ಲದ ,ಇನ್ನೂ ನೋಡಿರದ ಅದ್ಯಾವುದೋ ಸಹನಾಳಿಗೆ ಮನ ಸೋಲುವ ಬದಲು ಇವಳನ್ನು ಇಷ್ಟಪಡಿ , ನಾವು ನಮ್ಮನ್ನು ಇಷ್ಟ ಪಟ್ಟವರನ್ನು ಖುಷಿ ಯಲ್ಲಿಡುವುದು,ನಾವು ಇಷ್ಟ ಪಡುವವರನ್ನು ಖುಷಿಯಲ್ಲಿ ಇಡುವುದಕ್ಕಿಂತ ಹೆಚ್ಚು ಸೂಕ್ತ, ಅವಳನ್ನು ಮರೆತು ಬಿಡಿ, ಅವಳು ನಿಮ್ಮನ್ನು ದಿನ ಕಳೆದಂತೆ ಮರೆತು ಬಿಡುತ್ತಾಳೆ"ಅಂದೆ.
ಅವನು ಆಗಲೇ ಸಹನಳ  ಪ್ರೀತಿಯಲ್ಲಿ ಸಂಪೂರ್ಣ ಮುಳುಗಿದ್ದ ಅವನಿಗೆ ಈ ಶ್ರಾವಣಿಯ ಮಾತು ಕೇಳುತಿರಲಿಲ್ಲ.

ಮೂವರು ಮೌನಿ ಯಾಗಿದ್ದೆವು. ಐಸ್ ಕ್ರೀಮ್ ಇನ್ನು ಕೆಳಗಿಳಿಯಲಿಲ್ಲ. ಅಲ್ಲಿಂದ ಹೊರಡುವುದು ನಮ್ಮ ಮೂವರಿಗೂ ಸೂಕ್ತ ಎಂದನಿಸಿತು, ಮೂವರು ಎದ್ದೆವು, ನನ್ನಲಿ ಅವನು ಬದಿಗೆ ಕರೆಯಿಸಿ
"
ನಿನ್ನ ಗೆಳತಿಯಬಗ್ಗೆ ಜಾಗ್ರತೆ ವಹಿಸು, ನಾನು ಹೀಗೆ ಮಾತಾಡ ಬಾರದಿತ್ತು ಆದರೆ ನನ್ನ ಮನಸ್ಸಲ್ಲಿರುವುದು ಅವಳಿಗೆ ತಿಳಿಸುವುದು ಅನಿವಾರ್ಯ ವಾದ ಕಾರಣ ಹೇಳಿದೆ.ಬೇರೆ ವಿಷಯದ ಬಗ್ಗೆ ಅವಳಲ್ಲಿ ಮಾತಾಡಿ... ನನ್ನ ಮರೆಯುವಂತೆ ಹೇಳಿ" ಅಂದ.

ರೂಮಿಗೆತಲುಪಿದಂತೆನನಗೆ ನಾನು ಮಾಡಿದ್ದು ಅದೆಷ್ಟು ದೊಡ್ಡ ತಪ್ಪು ಎಂದು ಇವತ್ತು ಮನವರಿಕೆ ಆಯಿತು, ಇನ್ನೂ ಮುಂದೆ ನಾನು ಮೇಲಾನೆ ಅವನಿಂದ ದೂರ ಹೋಗುವೆ, ಮರೆಯಲು ಪ್ರಯತ್ನಿಸುತ್ತೇನೆ ಅಂತ ನಿರ್ಧಾರ ತೆಗೆದು ಕೊಂಡೆ, ಇಲ್ಲಿ ಸ್ನೇಹ ಆಕಾಶವೇ ಕಳಚಿ ಬಿದ್ದಂತೆ ಆಡುತಿದ್ದಳು, ನಾನು ನನ್ನ ಮುಂದಿನ ಚಿಂತೆಯಲ್ಲಿದ್ದರೆ ಅವಳು ಬಿಕ್ಕಿ ಬಿಕ್ಕಿ ಅಳುತಿದ್ದಳು, ಅರ್ದ ಗಂಟೆಯಲ್ಲಿ ಗೊಳ್ಳೆಂದು ವಾಂತಿ ಮಾಡಿದಳು..

ಅರರೆ ಇವಳು ಜೀವಕ್ಕೆ ಏನಾದರು ಹೆಚ್ಚು ಕಮ್ಮಿ ಮಾಡಿ ಕೊಂಡಳೇ ಎಂಬ ಪ್ರಶ್ನೆ ಮೂಡಿತು, ಅವಳನ್ನು ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ ಕರಕೊಂಡು ಹೋಗಿ ತೋರಿಸಿದ್ದು ಆಯಿತು ಡಾಕ್ಟರ್ ಅದು ಪಿತ್ತ ಅಂದಾಗ ನನಗೆ ಹೋದ ಜೀವ ಬಂದಂತಾಯಿತು.ಆಸ್ಪತ್ರೆ ಇಂದ ಬರ ಬೇಕಾದರೆ ಅವಳು ನನ್ನಲ್ಲಿ "ನೀನು ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ ಅಂದು ಕೊಂಡಿಯ ...ಇಲ್ಲ ಕಣೆ ... ಹಾಗೆ ಮಾಡಲ್ಲ ... ನನ್ನ ನಂಬಿದ ನನ್ನ ಹೆತ್ತವರಿಗಾಗಿ ನಾನು ಬದುಕಬೇಕು, ಎರಡು ವರುಷ ಹಿಂದೆ ಇದೆ ಕಾರಣಕ್ಕೆ ನಾನು ಆತ್ಮಹತ್ಯೆಗೆ ಪ್ರಯತ್ನ ಪಟ್ಟಾಗ ಅವರು ಅನುಭವಿಸಿದ ಸಂಕಟ ಇನ್ನೂ ನನಗೆ ನೆನಪಿದೆ ...ನಾನು ಅವನನ್ನು ಮರೆತು ಬಿಡುತ್ತೇನೆ, ಅವ ಸಹನಾ ನೊಂದಿಗೆ ಸುಖವಾಗಿರಲಿ ..." ಅಂದಳು
ಅರೆ ತನ್ನ ಪ್ರೀತಿಯನ್ನು ಪ್ರಿಯಕರನಿಗಾಗಿ ತ್ಯಾಗ ಮಾಡುತ್ತಿರುವ ನನ್ನ ಸ್ನೇಹಳನ್ನು ಕಂಡು ನಾ ಕನಿಕರ ಪಟ್ಟೆ, ಇನ್ನೂ ಅವನಲ್ಲಿ ನಾನು ನನ್ನ ಪ್ರೇಮ ವಿಷಯ ತೆರೆಯುವುದಿಲ್ಲ, ಹೀಗೆ  ಸಾಗಲಿ ದಿನ, ಒಂದು ದಿನ ಅವನಿಂದ ದೂರ ಹೋಗುತ್ತೇನೆ, ಇವಳನ್ನು ಇವಳ ಪ್ರಿಯಕರನಿಗೆ ಸೇರಲು ಎಲ್ಲಾ ಪ್ರಯತ್ನ ಮಾಡುತ್ತೇನೆ ....

ಶ್ರಾವಣಿ
**********

No comments:

Post a Comment