ಡೈರಿ ಮುಚ್ಚಿದ ಬಳಿಕ
ಅಂತೂ ಇಂತೂ ನನ್ನ ಇಂಜಿನಿಯರಿಂಗ್ ಮುಗಿಯಿತು, ಕೆಲಸವೂ ಸಿಕ್ಕಿತು. ಆದರೆ ಆ ಶ್ರಾವಣಿಯ ಬಗ್ಗೆ ಹಂಬಲ ಕಡಿಮೆ ಆಗಲಿಲ್ಲ, ಎಲ್ಲಿದ್ದಾಳೋ ಎಂಬ ಪ್ರಶ್ನೆ ..? ಯಾರಿಗೂ ಗೊತ್ತಾಗದಂತೆ ಎಲ್ಲೋ ದೂರದಲ್ಲಿದ್ದಾಳೆ.
ಅವಳಂದು ಕೊಂಡಂತೆ ನನಗೇ ಸ್ನೇಹಳನ್ನು ಸ್ವೀಕರಿಸಲು ಮನ ಒಪ್ಪಲಿಲ್ಲ ನಾನೇ ಸರ್ವಸ್ವ ಎನ್ನುತಿದ್ದ ಸ್ನೇಹ ಎರಡು ತಿಂಗಳ ಹಿಂದೆ ಅವಳ ತಂದೆ ತಾಯಿ ನೋಡಿದ ಗಂಡನ್ನೇ ಮದುವೆ ಆಗಿ ಹೋದಳು. ಅವಳಿಗೆ ನಾನು ಕೊಟ್ಟ ಮಾತಂತೆ ಎರಡು ವಾರ ರಜೆ ಗಿಟ್ಟಿಸಿ ಊರಿಗೆ ಹೋಗಿ ಎಲ್ಲದರ ಮೇಲ್ವಿಚಾರಣೆ ನೋಡಿದ್ದೆ.
ಇವ್ವೆಲ್ಲದರ ನಡುವೆ ನಮ್ಮ ಪ್ರೇಮ ಕಥೆಯಲ್ಲಿನ ಇನ್ನೊಂದು ಪಾತ್ರ ಡ್ರೈವರ್ ದಾಮೋದರ್ ಅನ್ನು ಬೇಟಿಯಾಗಿದ್ದೆ. ಅವರು ಈಗ ರಿಕ್ಷಾ ಓಡಿಸುತ್ತಿಲ್ಲ. ನಾಲ್ಕು ತಿಂಗಳ ಹಿಂದೆ ರಿಕ್ಷಾ ಆಕ್ಸಿಡೆಂಟ್ ನಲ್ಲಿ ತನ್ನ ಒಂದು ಕಾಲಿನ ಹಿಡಿತವನ್ನೇ ಕಳಕೊಂಡಿದ್ದರು. ಪಾಪ ಎರಡು ಹೆಣ್ಣು ಮಕ್ಕಳು ಅವರಿಗೆ, ಅವರ ಮನೆಯ ಪರಿಸ್ಥಿತಿ ನೋಡಿದರೆ ಬೇಜಾರೆನಿಸುತ್ತದೆ. ಹೋದಾಗ ಶ್ರಾವಣಿ ಸಿಕ್ಕಳೆ..? ಎಂದು ಹೇಳಿ ಗೇಲಿ ಮಾಡುತಿದ್ದರು, ಅವಳ ಆ ಡೈರಿ ಎಲ್ಲಿದೆ ಎಂದು ಹುಡುಕಿದೆ, ನನ್ನ ಹುಡುಕುವ ನೋಟ ನೋಡಿ ಅವರು ಮಗಳಲ್ಲಿ "ಶಾಂತ ಆ ಡೈರಿ ತಕೊಂಡು ಬಾ "ಅಂದರು .ಆ ಬಡ ಜೀವ ಇದನ್ನು ತುಂಬಾ ಜೋಪಾನವಾಗಿ ಒಂದು ಟ್ರಂಕ್ ನಲ್ಲಿ ಇಟ್ಟಿದ್ದರು. ಶಾಂತ ಆ ಡೈರಿ ತೆಗೆದು ಕೊಂಡು ಬಂದಳು.
ನಾನು "ಒಮ್ಮೆ ಓದಿ ನಿಮಗೆ ಹಿಂತಿರುಗಿಸುವೆ "ಅಂದೆ
ಅವರು "ಸರಿಯಪ್ಪ ..." ಅಂದರು.

ಒಮ್ಮೆಗೆ ಎಲ್ಲಾ ಕೆಂಪು ಪುಟಗಳು, ಅವಳು ಸ್ನೇಹ ಆಗಿ ಬರೆದ ಪತ್ರ ಎಲ್ಲಾ ಓದಿದೆ, ನನಗರಿವಿಲ್ಲದಂತೆ ಒಂದು ಹನಿ ಕಣ್ಣೇರು ಜಾರಿತು. ಇದನ್ನು ಕಂಡ ಅವರು "ನಿನ್ನಲ್ಲೇ ಇರಲಿ ಆ ಡೈರಿ, ಶ್ರಾವಣಿ ನನಗಿಂತ ನಿನಗೆ ಹೆಚ್ಚು ಹತ್ತಿರವಾದವಳು ... ನೀನು ತೆಗೆದು ಕೊಂಡು ಹೋಗು ಆ ಪವಿತ್ರ ಗ್ರಂಥ !!! " ಅಂದರು.
ನಿಜಕ್ಕೂ ಅದು ಪ್ರೇಮ ಗ್ರಂಥವೇ ಆಗಿತ್ತು
ಊರಿನಿಂದ ಬಂದಮೇಲೆ ನಡ ನಡುವೆ ದಾಮೋದರ್ ರಿಗೆ ಫೋನ್ ಆಯಿಸಿ ಅವರ ಕಷ್ಟ ಸುಖ ವಿಚಾರಿಸುತಿದ್ದೆ .
ಮೊನ್ನೆ ದಾಮೋದರ್ ಫೋನ್ ಮಾಡಿದ್ದರು, ನಾನು ಕಾಲ್ ಕಟ್ ಮಾಡಿ ತಿರುಗಿ ಅವರಿಗೆ ಕಾಲ್ ಮಾಡಿದೆ
ಅವರು"ನಿನಗೊಂದು ಸಿಹಿ ಸುದ್ದಿ ಇದೆ,"ಅಂದರು.

ನಾನು "ಏನು ಶ್ರಾವಣಿಯನ್ನು ಮತ್ತೆ ಮಂಗಳೂರಿನಲ್ಲಿ ಬೇಟಿ ಆದಿರೆ..? "ಅಂದೆ
ಅದಕ್ಕೆ ಅವರು "ಹಾಗೆಯೇ ಅನ್ನ ಬಹುದು ..." ಅಂದರು
ನನ್ನಲ್ಲಿ ಇನ್ನೂ ಕುತುಹಲ ಹೆಚ್ಚಿತು, ನಮ್ಮಲ್ಲಿನ ಪವಿತ್ರ ಪ್ರೇಮ ನಿಜವಾಗುವ ಗಳಿಗೆ ಬಂತಲ್ಲಾ ಎಂದು ಖುಷಿ ಪಟ್ಟೆ, ಅವರಲ್ಲಿ "ಹೇಳಿ ನೀವು ... ಏನಾಯ್ತು...?"
ಅವರು "ಇವತ್ತು ಶ್ರಾವಣಿ ನನಗೆ ಕಾಲ್ ಮಾಡಿದ್ದಳು .."

ನಾನು ಮದ್ಯದಲ್ಲೇ ಅವರನ್ನು ತಡೆದೆ "ಕಾಲಾ ...? ಅವಳಿಗೆ ನಿಮ್ಮ ನಂಬರ್ ಎಲ್ಲಿಂದ ಸಿಕ್ಕಿತು ...?"ಅಂದೆ
ಅವರು "ಅದೇ ಕಣಪ್ಪ ಆ ಸಂಜೆ ನಾನು ಅವಳನ್ನು ರಿಕ್ಷಾದಲ್ಲಿ ರೈಲ್ವೆ ಸ್ಟೇಷನ್ ಗೆ ಕರೆದು ಕೊಂಡು ಹೋಗಬೇಕಾದರೆ, ಮಾತಿನ ನಡುವೆ ನನ್ನಲ್ಲಿ ಅವಳು ನನ್ನ ನಂಬರ್ ಕೇಳಿದ್ದಳಂತೆ, ಎಲ್ಲಿಯೋ ಬರೆದಿಟ್ಟಿದ್ದೆ ಅದು ಇವತ್ತು ಸಿಕ್ಕಿತು ಅಂತ ಹೇಳಿದಳು..."
ನಾನು "ಅರ್ರೆ ನನಗೆ ಕೊಡಿ ಆ ನಂಬರ್!!!" ಅಂದೆ
ಅವರು "999... "ಎಂದು ನಂಬರ್ ಹೇಳಿದರು.

ನಾನು "ನೀವು ನನ್ನ ಬಗ್ಗೆ ಹೇಳಿದಿರೆ..?"ಅಂದೆ
ಅವರು ಅಲ್ಲಿಂದ "ಇಲ್ಲ ಕಣಪ್ಪ .. ನಿನ್ನ ಬಗ್ಗೆ ಹೇಳಿದರೆ ಅವಳೆಲ್ಲಿ ಕೊರಗುವಳೋ ಅಂದು ಹೇಳಲಿಲ್ಲ .. ನೀನೆ ಮಾತಾಡು .."ಅಂದರು
ನಾನು "ನಿಮ್ಮ ಈ ಉಪಕಾರ ಯಾವತ್ತು ಮರೆಯಲ್ಲಾ.. ನನ್ನ ಪ್ರೀತಿಯ ನನಗೆ ದಕ್ಕಿಸಿಕೊಟ್ಟ ದೇವರಾದಿರಿ ..."
"ಈಗ ಅದೆಲ್ಲಾ ಯಾಕಪ್ಪಾ ... ಅವಳನ್ನು ವರಿಸು ... ನೀನು ಈ ಒಂದು ವರ್ಷ ಪಟ್ಟ ಪಾಡು ಯಾವ ಪ್ರೇಮಿಗೂ ಬೇಡ ..."ಅಂದರು
"ಸರಿ , ಅವಳಲ್ಲಿ ಮಾತಾಡಿ ನಿಮಗೆ ಮತ್ತೆ ಫೋನ್ ಮಾಡುತ್ತೇನೆ ... ಮತ್ತೊಮ್ಮೆ ಧನ್ಯವಾದಗಳು "ಎಂದು ಕಾಲ್ ಕಟ್ ಮಾಡಿದೆ .
999 ಒತ್ತುತಿದ್ದಂತೆ ನನ್ನ ಎದೆಯ ಬಡಿತ ಹೆಚ್ಚಾಗ ತೊಡಗಿತು, ಅವಳಿಗೆ ನಾನು ಮೊದಲ ಬಾರಿಗೆ ಪ್ರೊಪೋಸ್ ಮಾಡುವಾಗ ಇಂಥಹ ಯಾವುದೇ ಅನುಭವ ವಾಗಿರಲಿಲ್ಲ, ಆದರೆ ಯಾಕೋ ಇಂದು ಸಂತಸ,ಹೆದರಿಕೆ ಎರಡೂ ಒಟ್ಟಿಗೆ ಆಗುತಿತ್ತು.
"ಯಾರ ಸಂಸಾರಿಕ್ಕುನದ್ ...?" ಅಂದಳವಳು, ಅದೇ ಮೊದಲದಿನದ ಕಂಪು ಇಂದೂ ಇತ್ತು.ಒಂದು ವರುಷದಲ್ಲಿ ಅವಳು ಮಲೆಯಾಳಂ ಕಲಿತಿದ್ದಳು ಎನ್ನುದಕ್ಕೆ ಅವಳ ಮಾತಿನ ಧಾಟಿಯೇ ಉತ್ತರ ನೀಡುತ್ತಿತ್ತು.
ನಾನು ಉತ್ತರಿಸಲಿಲ್ಲ.

ಅವಳು ಪುನಃ "may i know you ..?"ಅಂದಳು
ನನಗೆ ಮಲಯಾಳಂ ನಲ್ಲಿ ಉತ್ತರಿಸಲೇ, ಇಲ್ಲ ಇಂಗ್ಲಿಷ್ನಲ್ಲಿ ಉತ್ತರಿಸಲೇ ...?ಬೇಡ ಕನ್ನಡ ದಲ್ಲಿ ಉತ್ತರಿಸೋಣ...
"ಶ್ರಾವಣಿ ...?"
"ಅದೇ ಯಾರ ಸಂಸಾರಿಕ್ಕುನದ್ ...?"
"ನಾನು ಕನ್ನಡದ ಹುಡುಗ ..."
ಒಂದು ಕ್ಷಣ ಅವಳು ಮೌನ ವಾದಳು, ಅವಳು ನನ್ನ ದನಿಯನ್ನು ಗುರುತಿಸಿದಳು ಎಂದುಕೊಂಡೆ.
ಎರಡನೇ ಕ್ಷಣಕ್ಕೆ ಅವಳು "ನೀವು ...ಯಾರಿಂದ ನಿಮಗೆ ನನ್ನ ನಂಬರ್ ಸಿಕ್ಕಿತು ...? ನನ್ನ ಹೆಸರು ಶ್ರಾವಣಿ ಅಂತ ಹೇಗೆ ಗೊತ್ತಾಯಿತು ..?"
ನಾನು "ಹುಂ .. ನನ್ನ ನಿನ್ನ ಬೇಟಿ ಆಗಲೇ ಬೇಕಿತ್ತು, ಆ ಪ್ರೀತಿ ಬರೆಯ ನೆನಪಲ್ಲಿ ಅಳಿಸಿ ಹೋಗುವಂತದಲ್ಲಾ , ನಾವಿಬ್ಬರು ಸಮನಾಗಿ ಹಂಚಿ ಜೀವನಪೂರ್ತಿ ಅನುಭವಿಸ ಬೇಕಾದದ್ದು ... "
ಅವಳು "ಆದರೆ ನಾನು ನಿಮ್ಮ ಬಿಟ್ಟು ಬದುಕುವ ಕಲೆ ಕರಗತ ಮಾಡಿದ್ದೆ ... ಯಾರ ಸಂಪರ್ಕದಲ್ಲಿರ ಬಾರದು ಎಂದು ಪ್ರಾಣ ಸ್ನೇಹಿತೆ ಸ್ನೇಹಳಿಗೂ ನನ್ನ ನಂಬರ್ ಕೊಟ್ಟಿರಲಿಲ್ಲ,ಆದರೆ ಅದು ನಿಮಗೆ ಹೇಗೆ ಸಿಕ್ಕಿತು ...?"
ನಾನು "ಸಮಯ ಬಂದಾಗ ಹೇಳುತ್ತೇನೆ ಎಲ್ಲಾ ಕಥೆ ...ನೀನು ಹೇಗಿದ್ದೀಯ ..?"
ಅವಳು "ಚೆನ್ನಾಗಿದ್ದೇನೆ ...MSc ಮಾಡಲು ಬಂದ ನನ್ನ ಮನದಲ್ಲಿನ ಬಯಕೆ ನನ್ನ ಮಾಮನಿಗೆ ತಿಳಿಯಿತು. ಅವರು ತಮ್ಮ ಬ್ಯಾಂಕ್ ನಿಂದ ವಿದೇಶಿ ಯುನಿವೆರ್ಸಿಟಿ ಗೆ ಅರ್ಜಿ ಹಾಕಿಸಿ ನನಗೇ ಅಲ್ಲಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟರು. ಎರಡು ವರ್ಷ ಅಲ್ಲಿದ್ದೆ ಕಳೆದ ತಿಂಗಳು ಆ ಕೋರ್ಸ್ ಮುಗೀತು. ಅಲ್ಲಿನ ಯುನಿವೆರ್ಸಿಟಿ ಯಲ್ಲೇ ಬೆಂಗಳೂರಿನ ಒಂದು ಫರ್ಮಾಸಿಟಿ ಕಂಪೆನಿ ಯಲ್ಲಿ ಕೆಲಸವೂ ಸಿಕ್ಕಿತು. ಮುಂದಿನ ವಾರವೇ ಅಮ್ಮನೊಂದಿಗೆ ಬೆಂಗಳೂರು ಸೇರುವೆ. ನನ್ನ ಎಲ್ಲ ಕನಸು ನೆರವೇರಿತು"ಅಂದಳು.

"ನನ್ನ ಕನಸೂ ನೆರವೇರಿದವು" ಅಂದೆ ನಾನು.
"ನೀನೆಲ್ಲಿದ್ದಿಯಾ...?" ಅಂದಳು.
"ನಾನು ಬೆಂಗಳೂರು... ದೂರ ಹೋಗಿ ಹತ್ತಿರ ಆದಿ ನೀನು ... "ಅಂದೆ
"ಹುಂ ..."
"ಬೇಟಿ ಆಗುವ ಮುಂದಿನ ವಾರವೇ ... ನಿನಗೆ ಸ್ವಾಗತ ನಾನು ಕೊರ್ತೇನೆ ಬೆಂಗಳೂರಿನಲ್ಲಿ ...ಯಾವುದರಲ್ಲಿ ಬರುತಿದ್ದಿಯ ಹೇಳು...?"
"ಫ್ಲೈಟ್ .. ಅಮ್ಮನಿಗೆ ಹೆಚ್ಚು ಹೊತ್ತು ಕುಳಿತು ಪ್ರಯಾಣಿಸಲಾಗದು.. "
"ಸರಿ ಹಾಗಾದರೆ ನಾನು ನಿನಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಾಲಿರುವೆ ..."
"ಸರಿ ಹಾಗಾದರೆ ನಾನು ಅದೇ ಹಳೆಯ ಕೆಂಪು ಟಾಪ್ ಮತ್ತು ಕಡು ನೀಲಿಯ ಜೀನ್ಸ್ ನಲ್ಲಿರುತ್ತೇನೆ ... ನನ್ನನ್ನು ಆ ಜನ ಜಂಗುಳಿಯಲ್ಲಿ ಪತ್ತೇ ಹಚ್ಚು...ನೋಡೋಣಾ "ಅಂದಳು
"ಕಳೆದ ನಿನ್ನನ್ನೇ ನಾನು ಹುಡುಕಿರುವಾಗ,ಪಡೆದ ನಿನ್ನನ್ನು ನಾನು ಗುರುತಿಸಲಾರೆನೆ ...?" ಅಂದೆ

ಅವಳು "I LOVE YOU "
ನನ್ನದೊಂದೇ ಉತ್ತರ "ME TOO "
ಅದೇ ಚೆಲುವು ಮತ್ತೆ ನೋಡಲು ನನ್ನ ಬ್ರಹ್ಮಚಾರ್ಯದ ದಿನಗಳಿಗೆ ತೆರೆಯೇಲೆಯುವುದು ಸೂಕ್ತ ಎನಿಸಿತು.
ಎರಡೇ ತಿಂಗಳಲ್ಲಿ ಅವಳು ನನ್ನ ಹಿಂದಿನ ಸೀಟ್ ನಲ್ಲಿ ಕುಳಿತು ಪರ್ಮಾಸಿಟಿ ಕಂಪೆನಿ ಎದುರಿಗೆ ಇಳಿಯುತ್ತಾಳೆ. ಲಾಪ್ಟಾಪ್ ಹಿಡಿದು ನಾನು ಐ.ಟಿ ಪಾರ್ಕ್ ನಲ್ಲಿರುವ ನನ್ನ ಆಫೀಸ್ ತಲುಪಿ ನನ್ನ ಕ್ಯುಬಿಕಲ್ ಗೆ ಬಂದಾಗ ಆ ಮರೂನ್ ಬಣ್ಣದ ಡೈರಿಯ ಮುಖ ಪುಟದಲ್ಲಿ ನನ್ನನ್ನೇ ನೋಡುತ್ತಾ ಮತ್ತೆ ಮುಗುಳ್ನಗುತ್ತಾಳೆ. ಮೊದಲ ನೋಟವನ್ನು ನಾನು ಮೊಬೈಲ್ ನಲ್ಲಿ ಸೆರೆಹಿಡಿದು ಅಚ್ಚೋತಿದ್ದೆ. ಆ ಫೋಟೋ ವನ್ನು ಅವಳ " ಇದು ನನ್ನ ಮನಸ್ಸು, ನೀವು ನನ್ನವ( ಳು/ನು ) ಆದರೆ ಮುಂದೆ ಹೋಗುವ ಮುಂಚೆ ಒಂದು ಕ್ಷಣ ಆಲೋಚಿಸು .... "ಮೇಲೆ ಅಂಟಿಸಿದ್ದೇ. ಅವಳ ಮನಸ್ಸು ಓದುವುದರಲ್ಲಿ ಏನೋ ಹಿತ ಎನಿಸುತಿತ್ತು. ಭಾದಿಸುವ ಆ ಸಾಲುಗಳನ್ನು ಅವಳ ನಗೆಯ ಹಿಂದೆ ಅಡಗಿಸಿ ಇಟ್ಟೆ.
ಕೆಳಗಿನ ನಿನ್ನ ಶ್ರಾವಣಿ ಮಾತ್ರ ಇನ್ನೂ ಹೊರಗೆ ಇದೆ. ನನ್ನ ಶ್ರಾವಣಿ ಅವಳಾದದಕ್ಕೆ ಪ್ರತಿ ಬಾರಿ ಡೈರಿ ನೋಡುವಾಗ ಮನಸ್ಸು ಹಿಗ್ಗುತ್ತದೆ.
*******************************************************************************************
13/11/2010
ಕಾಮತ್ ಕುಂಬ್ಳೆ
Awesome Bro...
ReplyDelete