Monday, March 25, 2013

ಗ್ರಹ ಪ್ರವೇಶ 1


ಗ್ರಹ ಪ್ರವೇಶ 

"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು "  ಸಿ ಹವೆಯನ್ನು ತೂರಿಕೊಂಡು ಹದವಾಗಿ ಕೇಳುತಿತ್ತುಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ ದಾರಿಯೂ ಅವನಿಗೆ ಹೊಸದಾಗಿರಲಿಲ್ಲಆದರೆ ಇಂದು ಅವನ ಮನಸಲ್ಲಿ ಏನೋ ಒಂದು ಬಗೆಯ ತಾಜಾತನ ಇತ್ತುಜೀವನದ ಹೊಸ ತಿರುವಿನಲ್ಲಿ ಅವನು ನಿಂತಿದ್ದಹೊಸ ನಿರ್ಧಾರಕ್ಕೆ ಅಣಿಯಾಗಿದ್ದಮುರಳಿಯ "ಬೇರೆ ಊರಿನಲ್ಲಿ ಬೆವರ್ಸಿಯಾಗಿ ವಿದ್ಯುಥ್ಗಾರದಲ್ಲಿ ದೇಹವನ್ನು ಭೂಮಿಗೆ ಮರಳಿಸುವ ಬದಲುತಾನು ಹುಟ್ಟಿ ಬೆಳೆದ ಊರಿನಲ್ಲಿಬಾಲ್ಯದಲ್ಲಿ ಉಯ್ಯಾಲೆ ಕಟ್ಟಿ ಆಡಿದ ಮಾವಿನ ಮರದ ಕಟ್ಟಿಗೆಯ ಜೊತೆಗೆ ಸುಟ್ಟು ಹೋಗಲು ಇಷ್ಟ ಪಡುತ್ತೇನೆಎಂಬ ಮಾತು ಇವನ ಮನಸ್ಸಿನಲ್ಲಿ ಹಲವು ಬಾರಿ ಮಂಥನ ನಡೆಸಿದ್ದರೂಇವತ್ತು ಕಡೆದ ಮೊಸರಿನ ಮೇಲೆ ನಿಂತ ಬೆಣ್ಣೆಯಂತೆ ಎಲ್ಲಾ ವಿಚಾರಗಳಿಂದ ನಿರ್ಲಿಪ್ತವಾಗಿ ಎಲ್ಲದವುಗಳಿಗಿಂತ ಮೇಲೆ ಎದ್ದು ನಿಂತಿತ್ತು.

"ಸರ್ ಏಸಿ  ಹೆಚ್ಚು ಮಾಡಬೇಕಾ ...?" ಅಂದ ಡ್ರೈವರ್ಕನ್ನಡಿಯನ್ನು ಕೆಳಗೆ ಮಾಡುತಿದ್ದ ಮೋಹನನನ್ನು ನೋಡುತ್ತಾ.
"ಇಲ್ಲಬೇಡ ಅದನ್ನು ಆರಿಸಿ ಬಿಡುಮಳೆಗಾಲದ ಬಳಿಕ ಸಮುದ್ರಕ್ಕಿಳಿದ ಹಡಗು ಮರಳಿ ಲಂಗಾರು ಹಾಕಿದಾಗ ಅದರಲ್ಲಿನ ತಾಜಾ ಮೀನನ್ನು ತಿನ್ನುವುದನ್ನು ಬಿಟ್ಟು ಯಾರಾದರು ಪೇಟೆಗೆ ಹೋಗಿ ಒಣ ಮೀನು ಖರೀದಿಸುತ್ತಾರಾ ..?" ಅಂದ
ಇವನ  ಮಾತುಗಳು ಬಿಳಿ ಧರಿಸಿನಲ್ಲಿದ್ದ ಚಾಲಕನಿಗೆ ಅರ್ಥವಾಗಲಿಲ್ಲಅವನು ಮೋಹನನ ಅಣತಿಯಂತೆ ಏಸಿಯನ್ನು ಆರಿಸಿದ.  ಮೇಲಿನ ಕನ್ನಡಿಯನ್ನು ಹಿಂದಿನ ಸೀಟ್ ನಲ್ಲಿ ಕೂತ ಮೋಹನ್  ಭಿಂಬ ಬೀಳುವಂತೆ ಹೊಂದಿಸಿದಮೋಹನ ಮುಖವನ್ನು ಕಿಟಕಿಯ ಹೊರಹಾಕಿಮೊದಲ ಬಾರಿಗೆ ಜಗತ್ತನ್ನು ನೋಡುವ ಮಗುವಿನ ಮುಗ್ದತೆಯಲ್ಲಿ ಹೊರಗಿನ ಪ್ರಪಾತವನ್ನು ನೋಡುತಿದ್ದಕಾಣುವ ಅರ್ಧ ಮುಖದಲ್ಲಿ ಅವನನ್ನು ವಿಮರ್ಶಿಸುವುದು ಮುಂದಿನ ಸೀಟ್ ನಲ್ಲಿ ಕುಳಿತ ಡ್ರೈವರ್ ಗೆ ಏಕೋ ಕಷ್ಟವೆನಿಸಿತು.  ಕಿವಿಯ ಎಡೆಯಲ್ಲಿ ಬಣ್ಣ ಕಳೆದುಕೊಳ್ಳುತ್ತಿರುವ ಕೂದಲಿನಿಂದ ಅವನು ಚೂರು ಮುದುಕನಂತೆ ಕಂಡರೂ ಕಣ್ಣಲ್ಲಿನ ಕಾಂತಿ ಅವನಿಗೆ ನಲವತ್ತು ದಾಟಲಿಲ್ಲ ಎಂದು ಸಾರಿ ಹೇಳುತಿತ್ತು.
ಹೊರಗೆ ನೋಡುತ್ತಾ ಮೋಹನ್ "ತಾಜಾ ಗಾಳಿ ಇರುವಾಗಕೋಣೆಯೊಳಗಿನ ಗಾಳಿಗೆ ನೀರು ಚಿಮುಕಿಸಿ ಅದನ್ನೇ ಸುಖ ಅಂತಾರಲ್ಲ ಜನಅಂದ ಹತಾಶ ಭಾವದಲ್ಲಿ.

ಬಿಳಿ ಧರಿಸಿಗೆ ಇಂತಹ ಅನುಭವ ಮೊದಲ ಬಾರಿಗೆ ಆಗುತಿತ್ತುವಿಮಾನದಿಂದ ಇಳಿದು ತನ್ನ ಕಾರಿನಲ್ಲಿ ಬಂದು ಕುಳ್ಳುವ ಯಾತ್ರಿಗಳು ಹಿಂದೆಂದೂ ಅದಕ್ಕೆ  ರೀತಿ ಅನಿಸಿರಲಿಲ್ಲಎಲ್ಲರೂ ಬೇರೆ ಯಾವುದೊ ಗ್ರಹದಿಂದ ಭೂಮಿಯಲ್ಲಿ ಇಳಿದವರಂತೆ ವರ್ತಿಸುತಿದ್ದರುವೃತ್ತಿ ಶುರು ಮಾಡಿದ ಹೊಸದರಲ್ಲಿ ಹೀಗೆ ಬಂದ ಯಾತ್ರಿ ಒಬ್ಬರಿಗೆ ಮಡಿಕೇರಿಗೆ ಕರೆದು ಹೋಗಿ ಬಿಟ್ಟ ಬಳಿಕ ಅವರು ಕೊಟ್ಟ ಪ್ಲಾಸ್ಟಿಕ್ ಕಾರ್ಡ್ ಇವನಿಗೆ ಹೊಸದಾಗಿ ಕಂಡಿತ್ತುಕಾಗದ ಲೋಹದ ರುಪಾಯಿಯ ಬದಲು ಪ್ಲಾಸ್ಟಿಕ್ ಕಾರ್ಡ್ ಎಂಬ ಹಣವೂ  ಲೋಕದಲ್ಲಿ ಚಾಲನೆಯಲ್ಲಿದೆ ಎಂದು ತಿಳಿದಿದ್ದನಂತರ ಗೊತಿಲ್ಲದ ಇಂಗ್ಲಿಷ್ ನಲ್ಲಿ ಕಷ್ಟ ಪಟ್ಟು ಅವರಿಂದ ತಾನು ಹಣ ಎಂದು ಕರೆಯುವ ಹಸಿರು ಹಳದಿ ಕಾಗದವನ್ನು ಸಂಪಾದಿಸಿದ್ದ.ಆದರೆ ಇವತ್ತು ಹಿಂದೆ ಕುಳಿತ ವ್ಯಕ್ತಿ ಅವನಿಗೆ ಬೇರೆಯವನು ಎಂದು ಕಾಣಲಿಲ್ಲ ಸಲುಗೆ ಸಾಕಿತ್ತು ಅವನಿಗೆ ಕಳೆದ ಹಲವು ವರ್ಷಗಳಿಂದ ಮೌನದಲ್ಲಿ ಬೀಗ ಜಡಿದಿದ್ದ ಅವನ ಬಾಯಿ ತೆರೆಸಲು.

"ಸರ್ ಅಲ್ಲಿ ಗುಡ್ಡ ಕಾಣ್ತಾ ಇದೆಯಾ.. ಅದರ ಹಿಂದೆಯೇ ನಿಮ್ಮ ದುಬಾಯಿ ವಿಮಾನ ವರ್ಷದ ಹಿಂದೆ ಉರಿದು ಬಿದ್ದದ್ದುಅಂದವಿಮಾನ ಅಪಘಾತ ಅವನಿಗೆ ಯಾವುದೋ ಒಂದು ಬಗೆಯ ಹಳೆಯ ನೋವನ್ನು ಕೊಟ್ಟ ಅನುಭವ ಅವನ ಮಾತಿನಲ್ಲಿ ಕಾಣುತಿತ್ತು.
"ಎಷ್ಟೋ ಹಕ್ಕಿಗಳು ಗೂಡು ಸೇರಲಿದ್ದವೂಎಷ್ಟು ಮನೆಯ ಸಂಭ್ರಮ ಅಲ್ಲಿ ಇದ್ದವೋ .. ಎಷ್ಟು ಕನಸುಗಳು ಅಲ್ಲಿದ್ದವೋ.. ಎಲ್ಲವೂ ಕೆಲವೇ ನಿಮಿಷಗಳಲ್ಲಿ ಕರಕಲಾದವು." ಅಂದ ಅವನೂ  ಗುಡ್ಡವನ್ನು ನೋಡುತ್ತಾ.
"ಹೌದುಯಾರದೋ ದೇಹ ಯಾರದೋ ಕಾಲು ಮತ್ಯಾರದೋ ಬೆರಳಲ್ಲಿನ ಉಂಗುರದ ಗುರುತಿನೊಂದಿಗೆ ಯಾರದೋ ಚಿತೆ ಏರಿದವುಆತ್ಮ ಗಳಿಗೆ ಮುಕ್ತಿ ಸಿಕ್ಕಿದೆಯೋ ಇಲ್ಲವೋ ಭೂಮಿಯಿಂದ ಅವರ ಆಕೃತಿಗಂತೂ ಮುಕ್ತಿ ಸಿಕ್ಕಿತುಅಂದ ಗೇರ್ ಬದಲಾಯಿಸುತ್ತಾ.
ಯಾರ ಹೆಣಕ್ಕೆ ಯಾರು ಕೊಳ್ಳಿ ಇಡ್ತಾರೋಯಾರ  ಸಮಾದಿಗೆ ಯಾರು ಹೊಂಡ ತೊಡ್ತಾರೂಯಾರಿಗೂ ಗೊತ್ತಿರಲ್ಲ.    ಋಣಾನುಬಂಧತಂದೆಯ ಹೆಣ  ಮಗ ಏರಿಸುವುದು ವಾಡಿಕೆಆದರೆ ಕೆಲವೊಮ್ಮೆ ತಂದೆಯೇ ಮಗನ ಹೆಣ ಹೊರುತ್ತಾನೆಇನ್ನು ಕೆಲವೊಮ್ಮೆ ಮತ್ಯಾರೋ ಹೆಣಕ್ಕೆ ತರ್ಪಣ ಕೊಡುತ್ತಾರೆ" ಅವನ ಮುಖ ಇನ್ನೂ ಹೊರಗೆ ನೋಡುತ್ತಿತ್ತು  ಬಿಳಿ ಸಫಾರಿಗೆ ಇದು ಹೊಸದಾಗಿತ್ತುಮಂಗಳೂರ ಆವರಣ ಭೇದಿಸಿ ಕಾರ್ ಹೊರ ತಲುಪಿದರೂ ಕಾರಿನಲ್ಲಿ ಆವರಿಸಿದ ಮೌನ ಬೇಧಿಸಿರಲಿಲ್ಲ .

ಇಲ್ಲಿಯ ವರೆಗೆ ಮುಖ ಹೊರಗೆ ಹಾಕಿ ಶುದ್ಧ ಗಾಳಿ ಅನುಭವಿಸುತ್ತಿದ್ದ ಮೋಹನನ ಮುಖದ ಮೇಲೆ ಚತುಷ್ಪಥ ಕಾಮಗಾರಿಯ ಟಿಪ್ಪರ್ ಸುರಿದ ಕೆಂಪು ಮಣ್ಣಿನ ಕಣಗಳು ಚಿಮ್ಮಿದವುಬೇರೆಯವರಿಗೆ ತನ್ನ ಕೂಲಿ ಮಾಡುತಿದ್ದ ಟಿಪ್ಪರ್  ಸಾರಥಿಗೆ ಬೈಯಲು ಮನಸ್ಸಾಗದೆ ತನ್ನ ಮುಖವನ್ನು ಒಳಗೆ ಮಾಡಿ ಗಾಜನ್ನು ಮೇಲೆ ಮಾಡಿದ.
"ನಿನ್ನ ಹೆಸರೇನು ..?" ಎಂದು ಕೇಳಿದ.
ಅವನು "ಯಶವಂತಅನ್ನುತ್ತಾ ತನ್ನ ಕನ್ನಡಿಯನ್ನೂ ಮೇಲೆ ಮಾಡಿ ಏಸಿಯನ್ನು ಚಾಲೂ ಮಾಡಿದ.

ಎರಡು ವರ್ಷದ ಹಿಂದೆ ಭಾರತಕ್ಕೆ ಬಂದಾಗ ಅವನು ತುಂಬಾ ವರ್ಷದ ಬಳಿಕ ಕುಂದಾಪುರಕ್ಕೆ ಹೋಗಿದ್ದ.  ಆದರೆ ಅವತ್ತು ಅವನಿಗೆ  ರಸ್ತೆನಡುವಲ್ಲಿ ಬರುವ ಸುರತ್ಕಲ್ಮುಲ್ಕಿ ಪಡುಬಿದ್ರೆ  ಹೊಸತೆನಿಸಿರಲಿಲ್ಲಎಲ್ಲವೂ ಎಂಬತರ ದಶಕದಲ್ಲಿ ಸಿ.ಪಿ.ಸಿ ಬಸ್ಸನಲ್ಲಿ ನೋಡಿದ ನೋಟವೇ ಕಾಣುತಿತ್ತುಹಸಿರು ಭತ್ತದ ಗದ್ದೆನಡ ನಡುವೆ ತನ್ನ ಪಾಡಿಗೆ ಹರಿಯುತ್ತಿರುವ ನದಿಗಳುಪ್ರತಿ ಐದು ಕಿ.ಮಿ ಗಳ ಅವಧಿಗೆ ಒಂದರಂತೆ ಬರುವ ಸಣ್ಣ ಸಣ್ಣ ಊರುಗಳು ಊರಿನಲ್ಲಿನ ರಾಷ್ಟ್ರೀಕ್ರತ ಬ್ಯಾಂಕುಗಳ ಬ್ರಾಂಚ್ ಆಫೀಸ್ ಗಳುಅವ್ವೆ ಹಳೆಯ ಅಂಗಡಿಗಳುಮೀನಿನ ಊಟದ ಹೋಟೆಲ್ ಗಳುಕರಾವಳಿಯ ಮಳೆಗೆ ಹೋಂಡ ಬಿದ್ದ ರೋಡುಗಳುಒಂದು ಸರ್ಕಾರ ಬಿದ್ದು ಮತ್ತೊಂದು ಸರ್ಕಾರ ಬಂದರೂ ನಿಲ್ಲದ ಟೆಂಡರ್ ಗಳುಕರಿ ಹೊಗೆಯ ನಡುವೆ ರೋಡ್ ಜೊತೆಗೆ ದೇಹಕ್ಕೂ ಟಾರ್ ಮೆತ್ತಿಕ್ಕೊಂಡು ಬಾಲ್ಡಿ ಯಲ್ಲಿ ಬಿಸಿ ಟಾರ್  ಅನ್ನು ಸುರಿಯುತ್ತಿರುವ ಉತ್ತರ ಕರ್ನಾಟಕದ ಮಂದಿರೋಡಿನ ಪಕ್ಕದಲ್ಲಿ ಮಣ್ಣಿನಲ್ಲಿ ಆಡುತ್ತಿರುವ ಮಕ್ಕಳ ಚಿತ್ರಣ ಹಾಗೆಯೇ ಇತ್ತು.

ಇವತ್ತು  ಚಿತ್ರಣ ಬದಲಾಗಿತ್ತು ಹಳದಿ ಬಣ್ಣದ ಕ್ರೇನ್ಅಷ್ಟಗಲ ರೋಡನ್ನು ಒಂದೇ ಬಾರಿಗೆ ಟಾರ್  ಹಾಕುವ ಹನ್ನೆರಡು ಚಕ್ರದ  ಬದಿಯಲ್ಲಿ ಲಾರಿ ಎನ್ನಲು ಆಗದ  ಬದಿಯಲ್ಲಿ ರೋಡ್ ರೋಲರ್ ಅನ್ನಲಾಗದ ಘನ ವಾಹನ ಅಲ್ಲಲ್ಲಿ ಕಾರ್ಯ ನಿರ್ವಹಿಸುತಿತ್ತುಹಿಂದಿನಂತೆ ಉತ್ತರ ಕನ್ನಡದ ಮಂದಿಯ ಬದಲಾಗಿ ಆಂದ್ರಬಿಹಾರ, ಒರಿಸ್ಸಾಗಳ ಹುಡುಗರು ವಲಸೆಗೊಂಡಿದ್ದರುಟೆಂಡರ್ ಕಂಪೆನಿಯ ಹೆಸರು ಅಚ್ಚೊತ್ತಿದ ಟೋಪಿಯನ್ನು ಮುಂಡಾಸಿನ ಬದಲಾಗಿ ಧರಿಸಿ ಯುದ್ಧಕ್ಕೆ ಹೋರಾಟ ಸೇನಾನಿಗಳಂತೆ ಕೆಲಸದಲ್ಲಿ ತೊಡಗಿದ್ದರುರೋಡಿನ ಇಕ್ಕೆಲ ಗಳಲ್ಲಿ ಕ್ರೇನ್  ದಾಳಿಯಲ್ಲಿ ಅಸ್ತಿತ್ವ ಕಳಕ್ಕೊಂಡ ಹಲವು ಸಂಸಾರಗಳುಸ್ತಾನ ಪಲ್ಲಟ ಗೊಂಡ ಧೈವಸ್ಥಾನದೇವಸ್ಥಾನಗಳುದೂಳು ಮೆತ್ತಿರುವ ಭತ್ತದ ಗದ್ದೆಗಳುಬ್ರಿಟೀಷರ ಕಾಮಗಾರಿಗೆ ಸವಾಲೆಸೆಯುತ್ತಾ ಹಳೆಯ ಸೇತುವೆಯ ಸಮಾನಾಂತರ ವಾಗಿ ಮೇಲೆಳುತ್ತಿರುವ ಸೇತುವೆಗಳು.

"ಏನ್ ಎಚ್ 17 ಗೆ ಬಣ್ಣ ಹಚ್ತಾ ಇದ್ದಾರೆಭಾರತ ಉದ್ಧಾರ ಆಗ್ತಿದೆಅಂದ ಮೋಹನ ಒಮ್ಮೆ ಕಾರ್ ನಯವಾದ ರೋಡಿನಲ್ಲಿ ಬರಲು.
"ಈಗ ಇದು ಏನ್ ಎಚ್ 66 ಆಗಿದೆಅಂತಾಷ್ಟ್ರೀಯ ಮಟ್ಟಕ್ಕೆ ಏರಿಸುತ್ತಾರಂತೆಇನ್ನೊಮ್ಮೆ ನೀವು ಬರುವಾಗ ನಿಮಗೆ ನಮ್ಮ ಭಾರತ ಯಾವುದುನಿಮ್ಮ ದುಬೈ ಯಾವುದು ಎಂದು ತಿಳಿಯದೆ ಹೋದ್ರೆ ತಪ್ಪೇನಿಲ್ಲ ಬಿಡಿಅಂದ ಯಶವಂತ.
ಅವನ ಮಾತಿನಲ್ಲಿ ಮೋಹನನಿಗೆ ಏನೂ ವಿಪರ್ಯಾಸ ಕಾಣಲಿಲ್ಲಕಳೆದ ಬಾರಿ ಊರಿಗೆ ಬಂದಾಗ ಮಂಗಳೂರಿನ ಪ್ರಗತಿ ಕಂಡು ಅವನು ದಂಗಾಗಿ ಹೋಗಿದ್ದಧೂರದ ದುಬೈ ಇಲ್ಲೇ ಅನುಭವಿಸಿದ್ದ ಅವನುಆದರೆ ಯಶವಂತ ಹೇಳಿದ 'ಇನ್ನೊಮ್ಮೆ ನೀವು ಬರುವಾಗಅವನಿಗೆ ಸರಿ ಕಾಣಲಿಲ್ಲಕಾರಣ ಅವನು ಮರಳಿ ಭಾರತಕ್ಕೆ ಬರುವ ನಿರ್ಧಾರ ಮಾಡಿದ್ದಮೊದಲಿಗೆ ಇದು ಇಲ್ಲಿನ ಇಂದಿನ ಪ್ರಗತಿಯನ್ನು ಕಂಡು ತೆಗೆದ ನಿರ್ಧಾರ ಅಂದುಕೊಂಡರೂ  ನಿರ್ಧಾರದ ನಿಜವಾದ ಕಾರಣ ಮುರಳಿಯ ಸ್ಪೂರ್ತಿ ಆಗಿತ್ತು.

ಬ್ಯಾಂಕ್ ಉಧ್ಯೋಗಿಯ ಮಗನಾದ ಮೋಹನನಿಗೆ ನಮ್ಮವರುತಮ್ಮವರುಸಂಭಂಧಅನುಭಂಧ ಎಂಬ ಪದಗಳನ್ನು ಪರಿಚಯಿಸಿದವನು ಮುರಳಿ. 1980 ದಶಕದಲ್ಲಿ ತಂದೆಯವರಿಗೆ ವರ್ಗ ಆಗಿ ಮಂಗಳೂರಿಗೆ ಬಂದಾಗ ಎಸ್ಸೆಸೆಲ್ಸಿ ಮುಗಿಸಿದ್ದಮಗನ ಭವಿಷ್ಯ ಮತ್ತು ತಮ್ಮ ಭವಿಷ್ಯದ ದಿನಗಳಿಗಾಗಿ ತಂದೆಯವರು ಮೋಹನನನ್ನು ಅಳಿಕೆಯಲ್ಲಿ ಪಿಯುಸಿ ಗೆ ಸೇರಿಸಿದ ಬಳಿಕ ವಷ್ಟೇ ಅವನಿಗೆ ಜೀವನದ ನಿಜ ತಿರುಳಿನ ಅರಿವಾದದ್ದುಹಾಜರಿ ಪುಸ್ತಕದಲ್ಲಿ ತನ್ನ ಬಳಿಕ ಇದ್ದ ಮುರಳಿಯನ್ನುತನ್ನ ಹಾಸ್ಟೆಲ್ ರೂಮ್ ಮೇಟ್ ಮತ್ತು ಬೆಂಚ್ ಮೇಟ್ ಮಾಡಿದ ಬಳಿಕವೇ.

ಉಧ್ಯೋಗದಲ್ಲಿರ ಬೇಕಾದರೆ ಊರು ಊರು ಸುತ್ತುತಿದ್ದ ತಂದೆಯವರಿಗೆ ಊರು ದೂರವಾಯಿತುಜೊತೆಯಲ್ಲಿ ಇದ್ದ ಉತ್ತರ ಭಾರತಿ ಇವನ ಅಮ್ಮ ಆದ ಬಳಿಕ ಇಲ್ಲಿನ ಎಲ್ಲ ಸಂಭಂಧ ತೊರೆಯ ಬೇಕಾಯಿತುಸಂಭಂದಿಕರು ಎಂದರೆ ಅಮ್ಮ ಅಪ್ಪ ಎಂಬಷ್ಟೇ ಪದ ತಿಳಿದಿದ್ದ ಇವನಿಗೆ ಅತ್ತ ಸಂಪೂರ್ಣವಾಗಿ ಹಿಂದಿಯವನಾಗದೆ ಇತ್ತ ಪೂರ್ತಿ ಕನ್ನಡದವನಾಗದೆ ಅಂತರ್ಪಿಶಾಶಿ ಆದಮುರಳಿ ಮೊದಲ ರಾತ್ರಿ ನಿನ್ನ ಊರು ಯಾವುದೆಂದು ಕೇಳಲು ಇವನಿಗೆ ಲಾಲ್ ಗಂಜ್ ಹೇಳಬೇಕೋ ಕನಕಪುರ ಹೇಳಬೇಕೋ ತಿಳಿಯಲಿಲ್ಲ ದಿನವೇ ಅವನಿಗೆ ಮನುಷ್ಯನಿಗೆ ಹುಟ್ಟಿದ ಊರಿನ ಜೊತೆಗೆ ಅವನ ಹೆತ್ತವರ ಊರಿನ ನಂಟೂ ಇರಬೇಕು ಎಂದು ತಿಳಿದದ್ದುನಿನ್ನ ಊರು ಯಾವುದೆಂದು ಕೇಳಲು ಮೊದಲು ಕೋಟ ಎಂದ ಮುರಳಿ ಬಳಿಕಕುಂದಾಪುರ ಕೇಳಿದ್ದೀಯ ಅದರ ಹತ್ತಿರ ಬರುತ್ತದೆ ಅಂದಿದ್ದಎರಡು ವರ್ಷದಲ್ಲಿ ತನ್ನ ಇಲ್ಲಿ ವರೆಗೆ ಕಲಿಯಲಾಗದಶಾಲಾ ಪುಸ್ತಕದಲ್ಲಿ ಕಲಿಸಲಾಗದ ಅದೆಷ್ಟೂ ವಿಚಾರಗಳನ್ನು ಮೋಹನ ಮುರಳಿಯಿಂದ ಕಲಿತಿದ್ದಅವನ ಕೋಟಕ್ಕೂ ಒಮ್ಮೆ ಭೇಟಿ ಕೊಟ್ಟಿದ್ದಮನೆಯವರ ಅಕ್ಕರೆ ಮತ್ತು ಸೆಳೆತವನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದಮುಂದೆ ಉತ್ತರ ಭಾರತಿಯ ಒತ್ತಾಯದ ಮೇರೆಗೆ ತಂದೆಯವರು ಮರಳಿ ಡೆಲ್ಲಿಗೆ ವರ್ಗ ತೆಗೆದ ಬಳಿಕ ಬರೇ ಪತ್ರ ವ್ಯವಹಾರಕ್ಕೆ ಸೀಮಿತ್ತವಿದ್ದ  ಗೆಳೆತನ ಮುಂದಿನೆರಡು ವರ್ಷಗಳಲ್ಲಿ ಕೊನೆಯಾಯಿತುಮುರಳಿಯ ಶಾಶ್ವತ ವಿಳಾಸ ಮೋಹನನ ನೆನಪಿನಿಂದ ಮಾಸದಿದ್ದರೂ ಪತ್ರ ಬರೆಯುವ ಸಮಯ ಸಿಕ್ಕದೆ ಸುತ್ತುವ ಮೋಹನನ ವಿಳಾಸ ಮುರಳಿಗೆ ದಕ್ಕದೇ ಹೋಯಿತು.

ಓದು ಮುಗಿಸಿ ಉಧ್ಯೋಗ ಗಿಟ್ಟಿಸಿ ಸಪೂರ್ಣ ಉತ್ತರ ಭಾರತೀಯನಾದ ಮೋಹನನಿಗೆ ತನ್ನ ಮದುವೆಯ ಸಂಧರ್ಭದಲ್ಲಿ ಮುರಳಿಯ ನೆನಪಾಗಿ ಅವನ ಹಳೆಯ 'ಕೋಟವಿಳಾಸಕ್ಕೆ ಮದುವೆಯ ಆಮಂತ್ರಣವನ್ನು ಯಾವುದೇ ನಿರೀಕ್ಷೆಗಳಿಲ್ಲದೆ ಕಳುಹಿಸಿದ್ದ ಮೂರು ವರ್ಷದ ಹಿಂದೆಕಾಲದ ಹೊಡೆತಕ್ಕೆ ಸಿಕ್ಕ ಗೆಳೆಯ ತನ್ನನ್ನು ಮರೆತಿರಬಹುದು ಅಂದುಕೊಂಡಿದ್ದಜೊತೆಗೆ ಊರು ಬಿಟ್ಟಿರಬಹುದೂ ಅಂದೆನಿಸಿದರೂಜೀವನದ ತಿರುಳನ್ನು ತಿಳಿಸಿಕೊಟ್ಟ ಗೆಳೆಯನಿಗೆ ಆಮಂತ್ರಣ ಕಳಿಸುವುದು ಅನಿವಾರ್ಯವೆಣಿಸಿ ಟಪ್ಪಾಲು ಹಾಕಿದ್ದ.

ಗಜ್ಹಿಯಾಬಾದ್ ನಲ್ಲಿ ಗೊತ್ತಿಲ್ಲದ ಒಂದು ಸಂಪ್ರದಾಯಕ್ಕೆ ಮಣೆಹಾಕಿಕೆಂಪು ಮುಂಡಾಸು ಕಟ್ಟಿ ಕನಕಪುರವನ್ನು ಮರೆತು ಸ್ವಾಗತ ಕೊರುತಿದ್ದ ತಂದೆಯವರಿಗೆ ಮಗನ ವಯಸ್ಸಿನ ವ್ಯಕ್ತಿ ಕನ್ನಡದಲ್ಲಿ ಮಾತನ್ನಾಡಿ ಮರೆತ ಕನ್ನಡವನ್ನು ನೆನಪಿಸಿದ್ದಮಂಟಪಕ್ಕೆ ಅವನನ್ನು ಕರೆತಂದಾಗ ಸಾವಿರದ ನೋಟಿನ ಮಾಲೆಯು ಮೋಹನನ ಕೊರಳಲ್ಲಿ ನಗುತಲಿತ್ತುಮೂರು ಕಿ.ಮಿ ಇವನನ್ನು ಹೊತ್ತು ಬಂದ ಬಿಳಿ ಕುದುರೆ ತನ್ನ ಬಾಡಿಗೆಗಾಗಿ ಕಾಯುತ್ತಿತ್ತುಮೀಸೆ ಮೂಡಿದ ಗಲ್ಲದ ಉಬ್ಬುಗಳಲ್ಲಿ ತುಳುಕುವ ವಿಶ್ವಾಸ ಮತ್ತೆ ಅಳಕೆಯ ದಿನಗಳನ್ನು ನೆನಪಿಸಲು ಮೋಹನನಿಗೆ ಹೆಚ್ಚು ಸಮಯ ಹಿಡಿಯಲಿಲ್ಲತಂದೆಯವರಲ್ಲಿ "ಮುರಳಿ ಅಪ್ಪಾಕೋಟಾದವಕುಂದಾಪುರ - ಕೋಟಾಎಂದು ಪರಿಚಯಿಸಿದ.
ಮಗನ ಬಾಯಲ್ಲಿ "ಅಪ್ಪಾಎಂಬ ಪದದ ಅಹ್ವಾಹನೆ ಏನೂ ತಂಪೆರಚಿದಂತೆ ಇತ್ತುಸಂಭಂದಗಳನ್ನು ಮರೆತರೂ ದೇಹದಲ್ಲಿ ಬೆರೆತ ಮಾತೃಭಾಷೆ ಇಪ್ಪತ್ತು ವರುಷಗಳ ಬಳಿಕ ನಿಜ ಅರ್ಥ ಪಡೆದು ನಗುತಿತ್ತು.ಹಿಂದಿಯ ಗಜ ಗಿಜಿಯಲ್ಲಿ ಇಬ್ಬರ ನಡುವೆ ಮಾತು ಕಥೆ ಅಷ್ಟೇನೂ ನಡೆಯದಿದ್ದರೂ ಇಬ್ಬರೂ ತಮ್ಮ ತಮ್ಮ ಮೊಬೈಲ್ ನಂಬರ್ ಗಳನ್ನು ಇಮೇಲ್  ಡಿ ವಿನಿಮಯ ಮಾಡಿಕೊಂಡರು.

ಮದುವೆಯ ನಂತರ ಮೋಹನ ಮತ್ತೆ ದುಬೈಗೆ ಮರಳಿ ಅಲೆಮಾರಿಯಾದಾಗ ಮತ್ತೆ ಗೆಳೆಯನ ನೆನಪು ಹುಟ್ಟಿತುಅವನು ಕೊಟ್ಟ ಇಮೇಲ್ ವಿಳಾಸಕ್ಕೆ ಮೇಲ್ ಕಳುಹಿಸಿದಶಾಲಾದಿನಗಳ ಬಳಿಕದ ಇಲ್ಲಿನ ವರೆಗಿನ ಎಲ್ಲ ಆಗು ಹೋಗುಗಳನ್ನು ಸವಿವರವಾಗಿ ಬರೆಯುತಿದ್ದಾಗ ಬಳಿಗೆ ಬಂದ ಜೂನಿಯರ್ ಉತ್ತರ ಭಾರತಿ ಕಂಪ್ಯೂಟರ್ ನಲ್ಲಿ ಮೂಡುತಿದ್ದ ಗುಂಡು ಗುಂಡಗಿನ ಅಕ್ಷರಗಳನ್ನೂ ನೋಡಿ ಅಚ್ಚರಿ ಪಟ್ಟು ಮೋಹನನಲ್ಲಿ ಕೇಳಿದಾಗ ತನ್ನ ತಾಯಿ ಬೇರು ಕನ್ನಡದ್ದು ಎಂದಾಗ ಅವಳ ಮನದಾಳದಲ್ಲಿ ಒಂದು ಅಲೆ ಎದ್ದು ಇವನ ಈಗಿನ ಐಶಾರಾಮಿ ಜೀವನ ಮತ್ತು ವಿದೇಶ ಕೆಲಸಗಳ ಅರಿವು ಹುಟ್ಟಿ ಮೌನದಲ್ಲಿ ಲೀನವಾಯಿತುವಾರದ ಬಳಿಕ ಬಂದ ಮುರಳಿಯ ಪ್ರತಿಕ್ರಿಯೆ ಇವನನ್ನು ಇನ್ನೂ ಉಬ್ಬುವಂತೆ ಮಾಡಿತ್ತುಅವನು ತನ್ನ ಕನಸನ್ನು ಅಕ್ಷರಷಹ ನಿಜ ಮಾಡಿದ್ದ ತನ್ನ ಮೊವತ್ತ ಮೂರನೇ ವಯಸ್ಸಿನಲ್ಲೇ ವಿದೇಶಿ ಕಂಪೆನಿ ಒಂದರ ಪಾಟ್ನರ್ ಆಗಿದ್ದ.

ವಿದೇಶಗಳಅಲ್ಲಿನ ಜನ ಜೀವನಗಳ ವಿಚಾರಗಳು ಶಾಲೆಯಲ್ಲಿ ಬಂದಾಗ ಅದನ್ನೆಲ್ಲಾ ನೋಡಿದ ಮೋಹನನಿಗೆ ಅದರಲ್ಲಿ ಆಸಕ್ತಿ ಇರುತ್ತಿರಲಿಲ್ಲಆದರೆ ಮುರಳಿ ಅವ್ವುಗಳಿಗೆ ಮನ ಸೋತಿದ್ದಜೀವನ ಎಂದರೆ ಅದುವೇ ಎಂಬ ಕಲ್ಪನೆಯಲ್ಲೇ ತನ್ನ ಕನಸು ಹೆಣೆಯುತಿದ್ದಆದರೆ ಮೋಹನ ಕೋಟದಲ್ಲಿ ಮುರಳಿಯ ಮನೆ ಮತ್ತು ಅಲ್ಲಿನ ವಾತಾವರಣ ಭಾಂಧವ್ಯ ನೋಡಿ ತನ್ನ ತಾಯಿ ಬೇರಿನ ಮೂಲ ಹುಡುಕಲು ಕಾತರ ನಾಗಿದ್ದದೇಶದಲ್ಲಿದ್ದೆ ಸಾಧನೆ ಮಾಡಬೇಕು ಎನ್ನುತಿದ್ದಆದರೆ ಕೊನೆಗೆ ಉತ್ತರ ಭಾರತಿಯ ಮಾತು ಮೀರುವಂತೆ ಇರಲಿಲ್ಲಪರಿಣಾಮವಾಗಿ ದುಬೈಯ ನೌಕರಿಗೆ ಸೇರಿಕೊಂಡಿದ್ದ.

ಕಾಪು ತಲುಪುತಿದ್ದಂತೆ ಮತ್ತೆ ಆಚೆಗೆ ಹೊಸ ಹೆದ್ದಾರಿ ಆಗದಈಚೆಗೆ ಟಾರ್ ಕಿತ್ತ ಹಳೇ ಮಾರ್ಗದಲ್ಲಿ ದೂಳೆಬ್ಬಿಸುತ್ತಾ ಕಾರ್ ಉಬ್ಬಸ ಬಿಡುತ್ತಿದ್ದಾಗ ಮೋಹನ ಮತ್ತೆ ವಾಸ್ತವಕ್ಕೆ ಬಂದಕೈಯಲ್ಲಿ ಶಂಕರಪುರ ಮಲ್ಲಿಗೆಯ ಅಟ್ಟೆ ಹಿಡಿದು ನಿಂತ ಸಣ್ಣ ಹುಡುಗರ ಹಿಂಡು ವೇಗ ಇಳಿದ ಕಾರ್ ಗಳ ಗಾಜಿಗೆ ಅಂಟಿದ್ದ ದೂಳು ಒರೆಸುತ್ತಾ ವ್ಯಾಪಾರ ನಡೆಸುತಿದ್ದರುಒಬ್ಬ ಹುಡುಗ ಇವರ ಕಾರನ್ನೂ ಸಮೀಪಿಸಿದಯಶವಂತನಿಗೆ ಕಾರ್ ನಿಲ್ಲಿಸಲು ಕಾರಣವಿರಲಿಲ್ಲ ಹಾಗಾಗಿ ಅವನು ಅವನ ಪಾಡಿಗೆ ಮುಂದುವರಿಸುತಿದ್ದಮೋಹನ್ ಅವನ ಭುಜವನ್ನು ತಟ್ಟುತ್ತಾ ಕಾರ್ ನಿಲ್ಲಿಸಲು ಹೇಳಿದಕೆಳಗಿಳಿದು ಒಂದು ಅಟ್ಟೆ ಮಲ್ಲಿಗೆ ಕೊಂಡುಕೊಂಡು ಬಳಿಯಲ್ಲೇ ಇದ್ದ ಬೊಂಡ ಕುಡಿದು ಅವನಿಗೂ ಒಂದು ಬೊಂಡ ಕೊಟ್ಟು ಕಾರ್ ಬಾಗಿಲು ಹಾಕಿದ.

"ಸರ್ ಹೆಂಡತಿ ಊರಲ್ಲೇ ಇರುವುದಾ ...?" ಅಂದ ಯಶವಂತ್.
ಇವನಿಗೆ ಏನು ಹೇಳ ಬೇಕೋ ತಿಳಿಯಲಿಲ್ಲತಲೆಗೆ ಒಂದು ದಿನವೂ ಎಣ್ಣೆ ಇಡದ ಹೂ ಮುಡಿಯದ ಜೂನಿಯರ್ ಉತ್ತರ ಭಾರತಿಗೆ  ಶಂಕರಪುರ ಮಲ್ಲಿಗೆಯ ಪರಿಮಳದ ಮತ್ತು ಅದನ್ನು ಮುಡಿಯುವ ಮಹತ್ವ ಹೇಗೆ ಗೊತ್ತಾಗಬೇಕು ಎಂದು ಸುಮ್ಮನಾದ.
"ಎಷ್ಟು ಮಕ್ಕಳು ಸರ್ " ಎಂದ ಇವನಿಂದ ಉತ್ತರ ಹೊರ ಬರದನ್ನು ನೋಡಿ.
"ಇಲ್ಲ ಮಕ್ಕಳಿಲ್ಲಅಂದ ಅವನು.
"ಅದೂ ಹೌದು ಅನ್ನಿ ನೀವಲ್ಲಿ ಅವರಿಲ್ಲಿ ... ಮಕ್ಕಳು ಹೇಗೆ ಆಗ್ತಾರೆ... ಮೊದಲು ಹಣ ಮಾಡಿಮಕ್ಕಳನ್ನು ಆರಾಮಾಗಿ ಮಾಡುವಿರಂತೆಅಂದ ಕೊಟ್ಟ ಸ್ವಾತಂತ್ರ್ಯ ಜಾಸ್ತಿಯಾಗಿ.
ದೇಹ ಜೊತೆಗಿದ್ದರೆ ಸಾಕ ಮನಸ್ಸು ಜೊತೆಯಾಗುವುದು ಬೇಡವಾ ಎಂದನಿಸಿತು ಮೋಹನನಿಗೆಅವನು  "ಇಲ್ಲಹೆಂಡತಿ ನನ್ನ ಜೋಥೆಗಿದ್ದಾಳೆಸದ್ಯಕ್ಕೆ ಬೇಡ ಹೇಳಿ ಮಗುವೂ ನಮ್ಮಂತೆ ಅಬ್ಬೇಪಾರಿ ಆಗುವುದು ಬೇಡ ಹೇಳಿ ಸಧ್ಯಕ್ಕೆ ಮುಂದೆ ಹಾಕಿದ್ದೇವೆಅಂದ.
"ಮತ್ತೆ ..? ಹೂ ಅಮ್ಮನಿಗಾ ...? ತಂದೆಯವರು ಏನು ಮಾಡುತ್ತಾರೆ ?" ಎಂದು ಮರು ಪ್ರಶ್ನೆ ಇಟ್ಟ.
'ಇಬ್ಬರೂ ಪರದೇಶಿಗಳು ..' ಎಂದು ಮೌನದಲ್ಲೇ ಹೇಳಿ ಅವನಿಗೆ ಕೇಳುವಂತೆ "ಅವರೀಗ ಡೆಲ್ಲಿಯಲ್ಲಿ ಇದ್ದಾರೆಈಗ ನಾನು ಗೆಳೆಯನ ಮನೆಗೆ ಹೋಗ್ತಾ ಇದ್ದೇನೆಅಂದ.
"ಏನು ವಿಶೇಷ ಸರ್ ..?"
"ವಿಶೇಷ ಏನೂ ಇಲ್ಲ ಅವನು ಮನೆ ಕಟ್ಟಿದ್ದಾನೆಗ್ರಹಪ್ರವೇಶಕ್ಕೆ ಕರೆ ಮಾಡಿದ್ದಬರಲಾಗಲಿಲ್ಲಹಾಗೆ ಈಗ ನೋಡಿ ಹೋಗೋಣ ಹೇಳಿ ಬಂದದ್ದು."
"ಹೌದಾ.. ಏನು ಮಾಡಿಕೊಂಡಿದ್ದಾನೆ ನಿಮ್ಮ ಫ್ರೆಂಡು..?"
"ಗದ್ದೆತೋಟ ಮತ್ತಿನ್ನೇನೂ .. ಅವನನ್ನು ಕಂಡ್ರೆ ಹೆಮ್ಮೆ ಆಗ್ತಿದೆಅಂದ ಮೋಹನ ಹೆಮ್ಮೆಯಲ್ಲಿ ಹುಬ್ಬೇರಿಸುತ್ತಾ.
ಅವರು ಕನ್ನಡಿಯನ್ನು ಮತ್ತೆ ಸರಿ ಮಾಡಿ ಇವನನ್ನು ಸರಿಯಾಗಿ ನೋಡಿದರುಮೋಹನನ ಕಣ್ಣಲ್ಲಿ ಏನೂ ಒಂದು ಬಗೆಯ ಸಂಭ್ರಮ ಇತ್ತು.
"ಬಾಲ್ಯದ ಗೆಳೆಯ ಅಂದುಕೊಳ್ಳುತ್ತೇನೆನೀವೂ ಕುಂದಾಪುರದವರಾ ...?" ಅಂದ.
"ಹೌದುಬಾಲ್ಯದ ಗೆಳೆಯ"
"ಯಾವುದು ನಿಮ್ಮ ಊರು ...?"
ಮೋಹನನಿಗೆ ಮತ್ತೆ ಮುರಳಿ ಅದೇ ಪ್ರಶ್ನೆ ಕೇಳಿದಂತಾಗಿ ಒಮ್ಮೆಗೆ ಲಾಲ್ ಗಂಜ್ ಎನ್ನುವ ಅಂತಾಗಿ ಮರುಕ್ಷಣವೇ ಕನಕಪುರ ಎನ್ನಲು ಮನಸ್ಸಾಯಿತುಆದರೆ ಕನಕ ಪುರ ಎಂದರೆ ಅಲ್ಲಿ ನಿಮ್ಮ ಯಾರಿದ್ದಾರೆ ಕೇಳಿದರೆ  ಪ್ರಶ್ನೆಗೆ ಉತ್ತರ ಹೊಳೆಯದೆ ಕೋಟಾ  ಅಂದ.
"ಒಂದೇ ಊರಿನವರು  ಅಂದರೆ  ಸೆಳೆತ ಇರುತ್ತದೆನೀವೆಷ್ಟೇ ಧೂರ ಇದ್ದರೂಎಷ್ಟೇ ಸಿರಿವಂತರಾದರು ಎಲ್ಲಾದರೊಂದು ಒಡೆದ ಮಡಕೆಮಾವಿನ ಮರದಲ್ಲಿ ತುಗುವ ಉಯ್ಯಾಲೆ ಕಂಡರೆ ನೆನಪಾಗುತ್ತದೆ ಮತ್ತೆ ಅದೇ ಬೀದಿಅದೇ ಜನಗಳುಅಂದ.
"ಹೌದುಏನೂ ಒಂದು ಸೆಳೆತ ಊರು ಮತ್ತು ಅಲ್ಲಿನ ಜನ ಅಂದ್ರೆಅಂದ ಮೋಹನ ಮತ್ತಷ್ಟು ಹುರುಪಿನಲ್ಲಿ.
"ನೀವ್ಯಾವಾಗ ಮನೆ ಕಟ್ಟುತ್ತೀರ ಸರ್ " ಎಂದು ಮರುಕ್ಷಣವೇ ಯಶವಂತ್.
"ಸಧ್ಯದಲ್ಲೇ .. ಇಲ್ಲೇ ಕೋಟದಲ್ಲಿಅಂದ ಮೋಹನ.....
ಮುಂದುವರಿಯುವುದು .... 

ಗೃಹ ಪ್ರವೇಶ -೨

1 comment:

  1. ಗಜ್ಹಿಯಾಬಾದ್ ಮತ್ತು ಬೆಂಗಳೂರನ್ನು ಸಮರ್ಥವಾಗಿ ಮೇಳೈಸಿದ್ದೀರಾ. ಒಳ್ಳೆಯ ಬ್ಲಾಗ್....

    http://badari-poems.blogspot.in/

    ReplyDelete