ಅಮ್ಮ ಆದಿನ ಇರುಳಲಿ ಈದಿನದ
ಉಗಮಕ್ಕೆ ಊರಲ್ಲಿ ಎಡೆಬಿಡದೆ
ಏಕಾಂಗಿಯಾಗಿ ಐವತ್ತಕ್ಷರ
ಒಂದೊಂದಾಗಿ ಓದಿಸಿದಳು
ಔದಾರ್ಯದಿ ಅಂಗಳದಲಿ
ಕಂದನ ಖುಷಿಯಲಿ ಗಂಡನಿಗೂ ಘಳಿಗೆ ಉಳಿಸಿದಳು
ಚಿರಂತನ ಛಾಯೆಯಾಗಿ ಜೊತೆಯಲಿ ಝೇಂಕರಿಸಿದಳು
ಟೀಕೆ ಟಿಪ್ಪಣಿಗೆ ಡೊಂಕಾಗದೇ, ಢಮರುಗವಾದೆ
ತವರು, ಥಳುಕು, ದ್ರವ್ಯಗಳ ಧಿಕ್ಕರಿಸಿದೆ ನಿನಗಾಗಿ
ಪ್ರಗತಿಯಲಿ ಫಲವ ಬಯಸದೆ ಭವಿಷ್ಯವಾದೆ ಮಗನಿಗೆ
ಯಾವನಿಗಾಗಿ ರಕ್ತವ ಲವಲವಿಕೆಯಲಿ ವ್ಯಯಿಸಿದೆಯೋ
ಶಹರದಿ ಷೋಕಿ ಸರಸದಲಿರಲವನು
ಹತಾಶ ಳಾಗದೆ ಕ್ಷೆಮಾಭಿಲಾಷೆಯಲೇ
ತ್ರಿಕಾಲ ಜ್ನಾಪಿಸುತಲಿಇರುವಳಿವಳು.
ಕಾಮತ್ ಕುಂಬ್ಳೆ
೩೧/೧೦/೨೦೧೨
No comments:
Post a Comment