Friday, March 2, 2012

ಡೈರಿ : ಪುಟ ೩






ಪುಟ

ಬೆಳಗ್ಗೆ ಆರಕ್ಕೆ ಎಚ್ಚರ ವಾಗಿತ್ತು, ಎದ್ದವನೇ ಮೊದಲಿಗೆ ಸಹನಾಳಿಗೆ  ಫೋನ್ ಆಯಿಸಿದೆ, ಇಗಲೂ ಉತ್ತರವಿರಲಿಲ್ಲ.ತುಂಬಾ ನಿರಾಶೆ ಆಯಿತು. ಅಂದಿನಂತೆ ಪುನಃ ನಾನು
 "
ನಿನ್ನೆ ಇಂದ  ಒಂದು ಮೆಸ್ಸೇಜ್ ನೀನು ಕಳುಹಿಸಲಿಲ್ಲ, ಕಾಲ್ ಮಾಡಿದರು ನಿನ್ನ ನಂಬರ್ ಚಾಲನೆಯಲ್ಲಿಲ್ಲ ಎಂದು ಬರುತಲಿದೆ ... ಆದಕಾರಣ ಈ ಮೆಸ್ಸೇಜ್ ಕಳುಹಿಸುತ್ತಲಿರುವೆ ನಿನಗೆ ಮೆಸ್ಸೇಜ್ ತಲುಪಿದೊಡನೆ ಪ್ರತಿಕ್ರಿಯಿಸು ... ನಿನ್ನ ಪ್ರತಿಕ್ರಿಯೆ ಗಾಗಿ ಕಾಯುತ್ತಲಿರುವ
ಈ ನಿನ್ನ ಪ್ರಿಯಕರ" ಹಿಂದೆ ಬಿಟ್ಟ ಪದವನ್ನು ಇವತ್ತು ನಾನು ಸೇರಿಸಿದ್ದೆ. ಹೌದು ಈಗ ನಾನು ಅವಳನ್ನು ಪ್ರೀತಿಸುತಿದ್ದೆ, ಅವಳನ್ನು ಮಿಸ್ ಮಾಡ್ಕೊಳ್ತಾ ಇದ್ದೆ.
         
ಮೆಸ್ಸೇಜ್ ಕಳುಹಿಸಿ ದಾಮೋದರ್ ಅವರಿಗೆ ಫೋನ್ ಮಾಡಿ ಆ ಹುಡುಗಿಯ ಬಗ್ಗೆ ಇನ್ನೂ ಬೇರೆ ವಿಚಾರ ಕೇಳೋಣ ಎಂದು ಫೋನ್ ಅಯಿಸಿದೆ. ದಾಮೋದರ್ ಅವರಿಗೆ ನನ್ನ ಹೊಸ ದ್ವನಿ ಕೇಳಿ ಗುರುತು ಹಚ್ಚಲು ಕಷ್ಟವಾಯಿತು,
ನಾನು "ಅಣ್ಣಾ ನಿಮ್ಮಿಂದ ನಿನ್ನೆ ಒಂದು ಡೈರಿ ಪಡಕೊಂಡೆನಲ್ಲಾ ಆ ಹುಡುಗ, " ಅಂದಾಕ್ಷಣ
ಅವರು "ಹೇಳಪ್ಪಾ , ಏನು ಇಷ್ಟು ಬೆಳಗ್ಗೆ ಬೆಳಗ್ಗೆ ನನ್ನನ್ನು ಜ್ಯಾಪಿಸಿದ್ದು ..?"
ನಾನು "ಆ ಹುಡುಗಿಯ ಬಗ್ಗೆ ಇನ್ನೂ ಕೆಲವು ಮಾಹಿತಿ ಬೇಕಿತ್ತು ಅದಕ್ಕಾಗಿಯೇ ಈ ಪ್ರಯತ್ನ " ಅಂದೆ.
ಅವರು "ನನಗೆ ಗೊತಿದಷ್ಟು ವಿಚಾರ ನಿಮಗೆ ಹೇಳಿದೆನಲ್ಲಾ... ಬೇರೆ ವಿಚಾರ ಗೊತ್ತಿಲ್ಲ ..." ಅಂದರು.

ನನಗೆ ನನ್ನ ಸಹನಾ ಹೇಗೆ ಇದ್ದಾಳೆಂದು ಇಲ್ಲಿ ವರೆಗೆ ಗೊತ್ತಿರಲಿಲ್ಲ ಇವರಲ್ಲಿ ಆ ಹುಡುಗಿ ಗುಂಗುರು ಕೂದಲಿನವಳೇ ...?, ಉಂಗುರ ಮೂಗುತಿ ಮೂಗಿಗೆ ಹಾಕುವವಳೇ ..?ತಿಳಿಬಣ್ಣದ ಹಾಲ್ನಗೆಯ ಮುಖದವಳೇ ...? ಎಂದೆಲ್ಲಾ ಕೇಳಿದರೆ ಅವಳ ಬಗ್ಗೆ ಒಂದು ಚಿತ್ರಣ ಬರುವುದು ಅಂದುಕೊಂಡೆ, ಆದರೆ ಡೈರಿ ಬಿಟ್ಟ ಹುಡುಗಿ"ಶ್ರಾವಣಿ "ಯನ್ನು ನನ್ನ "ಸಹನಾ " ನೊಂದಿಗೆ ಹೇಗೆ ಹೊಲಿಸಲಿ ...?


ನನಗೆ ಸಹನಾಳ ಮುಕಚರ್ಯೇ ಯ ಬಗ್ಗೆ ಒಂದುಚೂರು ಮಾಹಿತಿ ಇರಲಿಲ್ಲ, ಅವಳ ಬಿಂಬ ನನ್ನ ಮನದಲ್ಲಿತ್ತೆ ವಿನಃ ನನ್ನ ಕಣ್ಣ ಮುಂದೆ ಅವಳು ಬಂದರೆ ಇವಳೇ ನನ್ನ ಸಹನಾ ಎಂದು ಹೇಳಲು ನನಗೆ ಸಾದ್ಯವಿರಲಿಲ್ಲ. ಹೇಗೆ ಹೊಲಿಸಲಿ ಎನ್ನುವಾಗ ಅವಳು ನಿನ್ನೆ ಬೆಳೆಗ್ಗೆ ಕಳುಹಿಸಿದ ಮೆಸ್ಸೇಜ್ ನೆನಪಿಗೆ ಬಂತು.

ನಾನು "ಅಣ್ಣಾ ಆ ಹುಡುಗಿ ಯಾವ ಬಣ್ಣದ ಡ್ರೆಸ್ ಹಾಕಿದ್ದಳು ಎಂದು ತಿಳಿಸಿದರೆ, ನನಗೆ ನೀವು ಒಂದು ಚೂರು ಸಹಾಯ ಮಾಡಿದಂತಾಗುತ್ತದೆ "ಅಂದೆ
ಅವರು "ಕೆಂಪು ಬಣ್ಣದ ಒಂದು ಟಾಪ್ ಜೀನ್ಸ್ ಮೇಲೆ ತೊಟ್ಟಿದ್ದಳು, ಅಂತ ಕಾಣುತ್ತೆ , ಆದರೆ ಆ ಜೀನ್ಸ್ ಮಳೆಯಲ್ಲಿ ನೆನೆದು ನೀಲಿಯೋ ಇಲ್ಲ ಕಪ್ಪಾಗಿತ್ತು ಎಂದು ಗೋಷ್ಠಿಗೆ  ತೆಗೆಯಲಿಲ್ಲ...ಅದಿರಲಿ ಅವಳ ಬಟ್ಟೆ ಇಂದ ನಿನಗೇನೂ ಸಹಾಯ ಆಗುತ್ತದೆ "ಅಂದರು.
ನಾನು "ಅಣ್ಣಾ ನಿಮ್ಮಿಂದ ದೊಡ್ಡ ದೊಂದು ಉಪಕಾರ ವಾಯಿತು, ಸೋಮವಾರ ನಿಮಗೆ ಸಿಗುತ್ತೇನೆ "ಎನ್ನುತ್ತಾ ಆ ಕರೆ ಕಟ್ ಮಾಡಿದೆ

ಮೊಬೈಲ್ ತೆಗೆದು ಪುನಃ ಆ ಮೆಸ್ಸೇಜ್ ಓದಿದೆ , "ನಾನು ಎರಡು ಗಂಟೆಯ ಸುಮಾರಿಗೆ ಭಾರತ್ ಮಾಲ್ ಪಕ್ಕದಲ್ಲಿರುವ ಸಿಟಿ ಬಸ್ಸ ಸ್ಟಾಪ್ ನಲ್ಲಿ ನಿಮ್ಮನ್ನು ಕಾಯುತ್ತ ಇರುತ್ತೇನೆ, ನಿಮ್ಮನ್ನು ಒಮ್ಮೆ ನೋಡಿದ ನನಗೆ ನಿಮ್ಮನ್ನು ಗುರುತಿಸುವುದು ಕಷ್ಟವಾಗದು, ಪ್ರೇಮದ ಸಂಕೇತವಾದ ಕೆಂಪು ಬಣ್ಣದ ಟಾಪ್ ಮತ್ತು ಕಡು ನೀಲಿ ಬಣ್ಣದ ಜೀನ್ಸ್ ನಲ್ಲಿರುತ್ತೇನೆ. ನನ್ನಲ್ಲಿ ಪ್ರೀತಿ ಇದ್ದದ್ದೇ ಆದರೆ ನಾನು ಅಲ್ಲಿರುವಾಗ ನೀವು ಅಲ್ಲಿ ಬರುತ್ತಿರಿ ಎಂದು ನಂಬಿದ್ದೇನೆ, ಇನ್ನಾದರು ನಮ್ಮ ನಡುವಿನ ಕಣ್ಣ ಮುಚ್ಚಾಲೆಗೆ ನಾವು ಇತಿಶ್ರೀ  ಹಾಡುವ ..."

ಹೌದು ಆ ಶ್ರಾವಣಿ ನನ್ನ ಸಹನಾ ಆಗಿರುವಳು ನನಗರಿವಿಲ್ಲದಂತೆ ನಾನು ನನ್ನ ಸಹನಾಳನ್ನು  ಕಳಕೊಂಡೆನೇನೋ  ಎಂಬ ಚಿಂತೆ ಕಾಡಲಾರಂಬಿಸಿತು.

*********


ದಾಮೋದರ್ ಅವರಿಂದ ವಿಷಯ ತಿಳಿದ ನಂತರ ಅವಳೇ ನನ್ನ ಸಹನಾ ಅಂತ ಸಲ್ಪ ಮಟ್ಟಿಗೆ ಖಾತ್ರಿ ಆಯಿತು, ಮುಂದೆ ಅವಳ ಅಂತರಾಳದ ಮಾತು ತಿಳಿಯುವ ಕುತೂಹಲ ಇನ್ನೂ ಹೆಚ್ಚಾಯಿತು, ಮಡಚಿಟ್ಟ ಡೈರಿ ಪುನಃ ಕೈಗೆತ್ತಿಕೊಂಡೆ, ಜನವರಿ 29ರ ನಂತರ ನನಗೆ ಮುಂದಿನ ಕೆಲವು ದಿನ ಕೆಂಪು  ಮಾರ್ಕ್ ಕಾಣಲಿಲ್ಲ. ಆದರೆ ಅವಳು ಪೂರ್ಣವಾಗಿ ಸಹನಾ ಳಾ ಇಲ್ಲ ಶ್ರಾವಣಿ ಯಾ ಎಂದು ಖಾತ್ರಿ ಆಗಿರಲಿಲ್ಲ.
ನಾನು ಇವಳಿಗೆ ಬರೇ ಒಂದೇ ದಿನದಲ್ಲಿ ಪ್ರೀತಿ ಕಮ್ಮಿ ಆಯಿತೇ ಅಂದು ಕೊಂಡೆ. ನನ್ನಲ್ಲೇ ನಾನು ಪ್ರಶ್ನಿಸಿದೆ ನಾನು ಆ ಫೆಬ್ರವರಿಯ ಮೊದಲ ವಾರ ಯಾಕೆ ಅವಳನ್ನು ಸಂಪರ್ಕಿಸಲಿಲ್ಲ..?
ಆಗ ನನಗೆ ಇಂಟರ್ನಲ್ಸ್ ಇತ್ತು. ನಾನು ನನ್ನ ಓದಿನಲ್ಲಿ ಬ್ಯುಸಿ ಇದ್ದಾಗ ಇವಳ್ಯಾಕೆ ನನ್ನ ಬಗ್ಗೆ ಬೆರೆಯಲಿಲ್ಲ, ನಾನು ಇವಳನ್ನು ನೆನಪಿಸಿದ ದಿನವಷ್ಟೇ ಇವಳು ನನ್ನ ಆಲೋಚನೆ ಮಾಡುತ್ತಾಳೆಯೇ..?

ನನ್ನನ್ನು ಒಮ್ಮೆ ಭೇಟಿ ಯಾಗಿದ್ದೆ ಅಂದಿದ್ದಾಳೆ, ಎಲ್ಲಿ ಬೇಟಿ ಯಾಗಿರಬಹುದು? ಕಾಲೇಜ್ ಹುಡುಗಿ ಅಲ್ಲ ಅಂತ ಅವಳ ಆ ಮೆಸ್ಸೇಜ್ ನಿಂದ ತಿಳಿದ ಹಾಗೆಆಯಿತು, ಆದರೆ ನನ್ನ ಮತ್ತು ಅವಳ ಮೊದಲ ಬೆಟಿಯಲ್ಲೇ ಅವಳು ನನಗೆ ಮನಸ್ಸು ಕೊಟ್ಟಳೇ, ನಾನೂ ಆ ಬೇಟಿಯಲ್ಲಿ ಅವಳರೂಪ ರೇಖೆಗೆ ಮಾರಿಹೋಗಿದ್ದರೂ ಇರಬಹುದು, ಆದರೆ ಆ ಬೇಟಿ ಎಲ್ಲಿ ಆಗಿರಬಹುದು..? ಅವಳು ತನ್ನ ಗೆಳತಿ ಸ್ನೇಹಾ ಅಂತಿದ್ದಾಳೆ, ಆ ಸ್ನೇಹಾ ಯಾರಿರಬಹುದು..?
ನನ್ನ ಅತ್ತೆ ಮಗಳಿರಬಹುದೇ ..? ಅವಳಾಗಿರಲು ಸಾಧ್ಯವಿಲ್ಲ, ಏಕೆಂದರೆ ನಾನೂ ತುಂಬಾ ಹಿಂದೇನೆ ಅವಳನ್ನು ನಿರಾಕರಿಸಿದ್ದೆ. ಕಾಲೇಜ್ ನಲ್ಲಿ ನಮ್ಮ  ಜೂನಿಯರ್ ಆಗಿರಬಹುದೇ ...? ಇಲ್ಲ ಇದು ಆ  ಸ್ನೇಹಾ ಆಗಿದ್ದರೆ ಅವಳು ನನ್ನನ್ನು ದಿನ ನೋಡುತಿದ್ದಳು, ಹೀಗೆ ಒಂದು ಬೇಟಿಗಾಗಿ ಮಂಗಳೂರಿನ ಬಸ್ ಸ್ಟಾಪ್ ನಲ್ಲಿ ನನ್ನನ್ನು ಕಾಯುತಿರಲಿಲ್ಲ.ಮತ್ತೆ ಕೆಲವು ತಿಂಗಳಿಂದ ನನ್ನ ಫೇಸ್ ಬುಕ್ ನಲ್ಲಿ ಗೆಳತಿಯಾದ ದಿನಕ್ಕೆ ೧ ಗಂಟೆ online chat ಮಾಡುವ ಮೈಸೂರಿನ ಸ್ನೇಹಾ ನಾ...? ಅಲ್ಲಾ ಅವಳೂ ಅಲ್ಲ ಮೈಸೂರಿನ ಸ್ನೇಹಾ ಆಗಿದ್ದರೆ ಮೈಸೂರು ಸುತ್ತಲು ಯಾಕೆ ಹೋಗುತಿದ್ದಳು...

ಯಾರಿರಬಹುದು ನನ್ನ ಸಹನಾ ..? ಅವಳ ಗೆಳತಿ ಆ ಸ್ನೇಹಾ   ..? ನನ್ನನ್ನು ಕಳಕೊಳ್ಳುತ್ತೇನೆ ಎನ್ನುವ ಭಯ ಅವಳಲ್ಲಿ ಮೂಡಿದ್ದಾದರು ಯಾಕೆ ..?ನನಗರಿವಿಲ್ಲದಂತೆ ನನ್ನನ್ನು ಪ್ರಿತಿಸುತ್ತಿರುವ ಸ್ನೇಹಾಳಾದರು ಯಾರು ...?ಎಂಬೆಲ್ಲಾ ಪ್ರಶ್ನೆ ನನ್ನಲ್ಲಿ ಕಾಡಲಾರಂಬಿಸಿದವು. ಅವಳ ಬಗೆಗಿನ ಕಾತುರ ಇನ್ನೂ ಹೆಚ್ಚ ತೊಡಗಿತು, ಅವಳ ದೈನಂದಿನ ದಿನಚರಿ ಓದಲು ಈಗ ಮನಸಿರಲಿಲ್ಲ, ಮುಂದಿನ ಕೆಂಪು ಮಾರ್ಕ್ ಮಾಡಿರುವ ಪುಟಕ್ಕಾಗಿ ನಾನೂ ಪುಟ ತಿರುವುತಲಿದ್ದೆ. ನಡುವಲ್ಲಿ ಪ್ರತಿದಿನದ ಕೆಳಗೆ ಅವಳು "ನೀನು ನನ್ನಿಂದ ದೂರವಾಗುತ್ತ ಇದ್ದಿಯಾ ...?" ಎಂದು ಕೆಂಪಿನ ಶಾಯಿಯಲ್ಲಿ ಬರೆದಿದ್ದಳು,ಕೆಂಪು ಬಣ್ಣದಲ್ಲಿ ಇದ್ದುದರಿಂದ ನನಗೇ ಆ ಮಾತು ಅಂದಂತಿತ್ತು , ನನಗೂ ಅವಳಿಂದ ನಿಜವಾಗಲು ದೂರವಾದಂತಾಯಿತು. ಕೊನೆಗೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಿರುವ ದಿನ ಕಣ್ಣಿಗೆ ಬಿತ್ತು.


***********



ಫೆಬ್ರವರಿ 13

ಗೆಳತಿ ಸ್ನೇಹಾ ಳ ಹುಟ್ಟಿದ ಹಬ್ಬ, ತುಂಬಾ ಖುಷಿಯಲ್ಲಿದ್ದಳು, ಬೆಳಗ್ಗಿನಿಂದ ಒಬ್ಬರ ಹಿಂದೆ ಒಬ್ಬರು ಅವಳಿಗೆ ಕರೆ ಮಾಡುತಿದ್ದರು, ಅರ್ಧ ನಗೆಯಲ್ಲೇ ಅವರೆಲ್ಲರಿಗೂ ಉತ್ತರಿಸುತಿದ್ದಳು, ಪ್ರತಿ ಬಾರಿಯು ಕರೆ ಬಂದಾಗ ಹೆಸರು ನೋಡಿ ನಿರಾಶೆ ಪಡುತಿದ್ದಳು, ಅವಳೂ ತನ್ನ ಮಾವನ ಮಗನಾದ ನನ್ನ ಪ್ರಿಯಕರ ನಿಂದ ಮೊದಲ ಶುಭಾಷಯ ಪಡೆಯಬೇಕು ಎಂದು ಕೊಂಡಿದ್ದಳು, ಆದರೆ ಅವ ನನ್ನದೇ ಆಲೋಚನೆಯಲ್ಲಿ ತುಂಬಿರುವಂತೆ ಕಾಣುತಿತ್ತು.
ಮದ್ಯಾಹ್ನ ಕಾಲೇಜ್ ನಲ್ಲಿ ಕೂತು ಕೊಳ್ಳಲು ಅವಳಿಗೆ ಮನಸಿರಲಿಲ್ಲ, ರೂಂ ಗೆ ಬಂದಿದ್ದಳು.
ನಾನೂ ನನ್ನ ಪ್ರಕ್ಟಿಕಾಲ್ ಮುಗಿಸಿ ರೂಂಗೆ ಬಂದಾಗ, ಜನ್ಮ ದಿನದ ಸಡಗರ ಬಿಟ್ಟು ಮನಸ್ಸಿನ್ನಲ್ಲೇ ಬಿಕ್ಕಿ ಬಿಕ್ಕಿ ಅಳುತಿದ್ದಳು, ಅವಳ ಈ ಪರಿ ನೋಡಿ ನನಗೆ ನಾನೂ ಮಾಡಿದ್ದು ತಪ್ಪು, ಯಾಕಾದರೂ ನಾನೂ ಅವನಿಗೆ ಮೆಸ್ಸೇಜ್  ಮಾಡಿದೆ, ಒಂದು ಕ್ಷಣ ಅಂದು ನನ್ನ ಮನಸ್ಸು ಹಿಡಿತಲ್ಲಿದ್ದರೆ ನಾನೂ ಸ್ನೇಹಾಳ  ಇಂದಿನ ಈ ಅವತಾರಕ್ಕೆ ಕಾರಣ ನಾಗಿರುತಿರಲಿಲ್ಲ ಎಂದು ನನಗೆ ನನ್ನಲ್ಲೇ ದ್ವೇಷ ಹುಟ್ಟಲಾರಂಬಿಸಿತು.

ಅವನ ಬಗ್ಗೆ ಚಿಂತಿಸಬೇಡ ಎಂದು ಬಾರಿ ಬಾರಿ ನಾನೂ ಮನಸ್ಸಿಗೆ ಹೇಳುತಿದ್ದರೂ ಈಗ ನನ್ನನ್ನು ಅವನ ಬಗ್ಗೆ ಚಿಂತಿಸದೆ ಇರದವುದು ಕಷ್ಟ ಎನ್ನುವಷ್ಟು ಅವ ನನಗೆ, ನನ್ನ ಮನಸ್ಸಿಗೆ ಹತ್ತಿರವಾಗಿದ್ದ, ಹೇಗೆ ಅವನಿಂದ ನಾ ದೂರವಾಗುವುದು...? ಅವನೂ ನನ್ನನ್ನು ಪ್ರಿತಿಸುತಿದ್ದಾನೆ, ಆದರೆ ಇಲ್ಲಿ ಗೆಳತಿ ಸ್ನೇಹಾ ಅವನನ್ನು ತನ್ನ ಜೀವ ಕಿಂತ ಹೆಚ್ಚಾಗಿ ಪ್ರಿತಿಸುತಿದ್ದಾಳೆ.

ಹಾಗೆ ಸರಿಯಿಲ್ಲದ ಮನಸ್ಸಿನೊಂದಿಗೆ ಮೊಬೈಲ್ ನಲ್ಲಿ ವಿರಹ ಗೀತೆ ಕೇಳುತ್ತಲೇ ಇದ್ದೆ, ಅವನೂ ತುಂಬಾ ದಿನದ ಬಳಿಕ ಇಂದು ಮೆಸ್ಸೇಜ್ ಗಳ ಹಿಂದೆ ಮೆಸ್ಸೇಜ್ ಕಳುಹಿಸುತ್ತಲೇ ಇದ್ದ, ಮನಸನ್ನು ಹಿಡಿತಲ್ಲಿ ಇಟ್ಟು ಕೊಂಡೆ. ಉತ್ತರಿಸಲು ಮನಸಾಗಲಿಲ್ಲ, ಅವನಿಂದ ಅವನಿಗರಿವಾಗದಂತೆ ದೂರ ಆಗುವ ಅಂದುಕೊಂಡೆ.

ಇಲ್ಲಿ ಸ್ನೇಹಾ
"
ಶ್ರಾವಣಿ ಯಾಕೋ ಕಣೇ, ಇಂದು ನನಗೆ ತುಂಬಾ ದುಖಃ ಅಗ್ತಾ ಇದೆ, ಮನಸ್ಸು ಬಿಚ್ಚಿ ಅಳ ಬೇಕನಿಸುತ್ತಾ ಇದೆ. ಅವನಿಗೆ ನಾನೂ ಇಷ್ಟ ಇಲ್ಲ ಕಣೇ, ಅವ ನನ್ನನ್ನು ಸಂಪೂರ್ಣವಾಗಿಯೇ ಮರೆತಿದ್ದಾನೆ, ಯಾರ್ಯಾರಿಗೋ ಅವರ ಜನ್ಮ ದಿನದಂದು ರಾತ್ರಿಯ ೧೨ ಕ್ಕೆ ಕರೆ ಮಾಡುವ ಅವನು ಇನ್ನೂ ನನಗೆ ಕರೆ ಮಾಡಲಿಲ್ಲ, ಕಳೆದ ೨ ತಿಂಗಳಿಂದ ಮೆಸ್ಸೇಜ್ ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾನೆ. ಅವನಿಲ್ಲದೆ ನಾನೂ ನನ್ನ ಜೀವನ ಕಲ್ಪಿಸುವುದೇ ಅಸಾದ್ಯ ನನಗೆ.... ಎರಡು ವರುಷದ ಹಿಂದೆ ನಾನೂ ಅವನಿಗೆ ನನ್ನ ಪ್ರೀತಿಯ ಕುರಿತು ಹೇಳಿದಾಗ ನನ್ನ ನಿರಾಕರಿಸಿದ್ದ.
ಆದರೆ ಅನಂತರ ದಿನ ಕಳೆದಂತೆ ನಡ ನಡುವಲ್ಲಿ ಕಾಲ್ ಮಾಡುತಿದ್ದ, ದಿನಾ ನಾ ಕಳಿಹಿಸಿದ ಮೆಸ್ಸೇಜ್ ಗೆ ಉತ್ತರಿಸುತಿದ್ದ ... ಇದರಿಂದ ನಾನೂ ಅವ ನನಗೆ ಹತ್ತಿರವಾಗುತಿದ್ದಾನೆ ಎಂದು ಕೊಂಡಿದ್ದೆ, ಆದರೆ ೨ ತಿಂಗಳಿಂದ ಪುನಃ ನನ್ನ ಬಗ್ಗೆ ಅವನಿಗೆ ಅದ್ಯಾಕೋ ಆಲಸ್ಯ ಹೆಚ್ಚಾಯಿತೋ ನಾ ಕಾಣೆ ... ಒಬ್ಬ ವ್ಯಕ್ತಿಯನ್ನು ನಾವು ಪ್ರಿತಿಸಿದರೆ ಅವ ನಮ್ಮನ್ನು ಪ್ರಿತಿಸಿದರೆ ಅದೇ ನಿಜವಾದ ಸ್ವರ್ಗ ... ಆದರೆ ಇಲ್ಲಿ ಅವನಿಗೆ ನನ್ನ ಬಗ್ಗೆ ಅಂತಹ ಭಾವ ಹುಟ್ಟಲಿಲ್ಲ ಅಂತ ಕಾಣುತ್ತೆ ... ಅವನಿಗೆ ನನ್ನಲ್ಲಿ ಪ್ರೀತಿ ಬಲವಂತದಲ್ಲಿ ಹುಟ್ಟಿಸುವುದಾದರು ಹೇಗೆ ...? ನನಗಾಗಿ ಅವನು ಬೇರೆಯವರನ್ನು ಪ್ರೀತಿಸ ಬಾರದು ಎನ್ನುವ ಸ್ವಾರ್ಥ ನನ್ನಲ್ಲಿ ಯಾಕೋ ..."ಅಂದು ಗೊಳ್ಳನೆ ಅತ್ತಳು.

ನನಗೆ ಇದ ಕೇಳುತಿದ್ದಂತೆ, ನಾನೂ  ಅವನಿಂದ ದೂರ ಹೋಗುವುದೇ ಸೂಕ್ತ , ಎಂದೆನಿಸಿತು.
ನಾನೂ ಅವನಿಗೆ ಪ್ರತಿಕ್ರಿಯಿಸದೇ ಇದ್ದದ್ದು ಅವನಿಗೆ ಹಳೆ ಪ್ರೇಯಸಿಯ ಜನ್ಮ ದಿನ ನೆನಪಿಗೆ ಬಂತು. ಸ್ನೇಹಾಳ ಮೊಬೈಲ್ ಗೆ ಅವ ಕರೆ ಕೊಟ್ಟಿದ್ದ, ಸ್ನೇಹಾ ಸ್ವರ್ಗವೇ ತನ್ನ ಪಾಲಿಗೆ ಬಂದಂತೆ ಸಂಭ್ರಮಿಸುತ್ತಿದ್ದಳು.
ನನಗೂ ಅವನ ಸ್ವರ ಕೇಳಬೇಕು ಎಂದೆನಿಸಿತು. ನಾನೂ ಸ್ನೇಹಾಳಿಗೆ ಮೊಬೈಲ್ ಲೌಡ್ ಸ್ಪೀಕರ್ ಮೋಡ್ ಗೆ ಹಾಕು ಎಂದು ಸನ್ನೆ ಮಾಡಿದೆ, ಅವಳೂ ನನ್ನಲ್ಲಿ ಎಲ್ಲ ವಿಚಾರ ಹೇಳಿರುವುದರಿಂದ ಯಾವುದೇ ಮುಚ್ಚು ಮರೆ ಇಲ್ಲದೆ ಅದನ್ನು ಲೌಡ್ ಸ್ಪೀಕರ್ ಗೆ ತಿರುಗಿಸಿದಳು. 
"ಸ್ನೇಹಾ ... ನಾನೂ ನನ್ನ ಇಂಟರ್ನಲ್ಸ್ ನಲ್ಲಿ ಬ್ಯುಸಿ ಆಗಿದ್ದೆ ಕಣೇ... ನಿನ್ನ ಬರ್ತ್ಡೇ ಮರ್ತು ಬಿಟ್ಟಿದ್ದೆ ... ಸಾರೀ ಕಣೇ ... many many happy returns of the day "ಅಂದ, ಸ್ನೇಹಾ ಮುಗುಳ್ನಗೆ ಬಿಟ್ಟಳು, ಅವಳೂ ಇಷ್ಟು ಸಂತಸವಾಗಿರುವುದು ಕಳೆದ ಒಂದೂವರೆ ವರುಷದಲ್ಲಿ ನಾನೂ ನೋಡಿಯೇ ಇರಲಿಲ್ಲ, ಅವಳ ಈ ಸಂತಸ ನನ್ನ ಸ್ವಾರ್ಥಕ್ಕಾಗಿ ವಶ ಪಡಿಸಿದ್ದೇನೋ ಅನಿಸಿತು.
ಅವಳೂ"thanks ಕಣೋ ... ಬೇಜಾರಿಲ್ಲ .. ಕೊನೆಗೂ ನನ್ನ ನೆನಪು ನಿನ್ನಲ್ಲಿದೆಯಲ್ಲಾ ಅಷ್ಟು ಸಾಕು ನನಗೆ ,,,, ನೀನೂ ಮಂಗಳೂರಿನಲ್ಲಿ ಇದ್ದಿಯ, ನಾಳೆ  ಪಬ್ಬಾಸ್ ಗೆ ಬಾ.. ಸಣ್ಣದೊಂದು ಪಾರ್ಟಿ ಕೊಡುತ್ತೇನೆ , ತಪ್ಪಿಸಿ ಕೊಂಡು ಮತ್ತು ಸಬೂಬು ನೀಡಬೇಡ... "ಅಂದಳು.

ಅವನು"sure ಕಣೇ , ನಾಳೆ ಬರುತ್ತೇನೆ, ನಿನ್ನಲ್ಲಿ ನಾನೂ ಒಂದು ವಿಚಾರ ಹೇಳಬೇಕು ... ಶುಭರಾತ್ರಿ "ಎಂದು ಫೋನ್ ಕಟ್ ಮಾಡಿದ.

ನಾನೂ ಸ್ನೇಹಳಲ್ಲಿ"ಏನೆ ಅವನಿಗೊಬ್ಬನಿಗೆ ಸ್ಪೆಷಲ್ ಪಾರ್ಟಿ, ನನಗೆ ಕೊಡಲ್ವಾ ...?" ಅಂದೆ, ನನಗೆ ಅವರಿಬ್ಬರ ನಡುವೆ ಬರಲು ಇಷ್ಟ ವಿರಲಿಲ್ಲ, ಆದರೂ ಒಮ್ಮೆ ಅವನನ್ನು ನೋಡಬೇಕು ಎಂಬ ಹಂಬಲದಿಂದಲೇ ಆ ಮಾತು ಹೇಳಿದ್ದು. ನಾಳೆ ಅವರಿಬ್ಬರ ಮದ್ಯ ನಾನು "ಸಹನಾ" ಪ್ರವೇಶಿಸಬಾರದು, ಬರಿಯ ಶ್ರಾವಣಿ ಯಾಗಿರಬೇಕು.

ಶುಭರಾತ್ರಿ
ಶ್ರಾವಣಿ

*************

ಮುಂದುವರಿಯುವುದು ..... 


No comments:

Post a Comment