Saturday, January 22, 2011

ಮರೀಚಿಕೆ



ಕೊಳದ ಕೆಂದಾವರೆಯ ಸುಗಂಧದೊಳು ನೀ
ಭ್ರಮರದ ತುಟಿಯಂಚಿನ ಮಕರಂಧದೊಳು ನೀ
ಬೆಳದಿಂಗಳಿಳಿದ ಅಂಗಳದ ಛಾಯೆಯೋಳು ನೀ
ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ

ತೂಗು ತೊಟ್ಟಿಲ ಮುದ್ದುಕಂದನ ಮುಗ್ದತೆಯೋಳು ನೀ
ಮೂಡಲ ಹೊಸ್ತಿಲ ಬಿರಿದ ಬಣ್ಣದ ರಂಗೊಲಿಯೋಳು ನೀ
ಗೂಡಲಿ ತುತ್ತುಣ್ಣುತಾ ಹಸಿದ ಗುಬ್ಬಿಯ ಚಿಲಿಪಿಲಿಯೋಳು ನೀ
ಬಳಿ ಸಾಗಿ ನಾ ನೋಡ ಅದೃಶ್ಯ, ಅಸ್ಪಷ್ಟ ನೀ

ಮನದೊಳ ಹುಟ್ಟ ಹಲಬಗೆ ಗೊಂದಲಕೆ ಕಾರಣ ನೀ
ಕಂಬನಿಗರೆವ ಕಣ್ಣಕೊಳದೊಳಗಣ ಭಿಂಬ ನೀ
ಬಾಡಿದ ಮೊಗದಿ ಮುತ್ತಿಟ್ಟ ಮುಂಗುರುಳ ನವಿರಾದ ಸ್ಪರ್ಶದೊಳು ನೀ
ಈ ಹೆಮ್ಮನಸ್ಸಿನ ಭಾವಗೀತೆಯ ಪಲ್ಲವಿಯೋಳು ನೀ

ಹಿನ್ನುಡಿ : ಹದಿಹರೆಯದ ವಿರಹಿ ಹೆಣ್ಣಿನ ಮನಸ್ಸಿನ ತುಮುಲಗಳು.


No comments:

Post a Comment