ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ
ತಿನಿಸಲೇ ಪ್ರೀತಿಯ ಹೂರಣ ನನ್ನೀ ಕೈಯಿಂದಲೇ
ಮೋಡದ ನಡುವಿನ ಚಂದಿರ ನನ್ನ ಗಾಳಕ್ಕೆ ಬೀಳಬೇಕಿದೆ
ಅದ ತಂದು ನಾ ನಿನ್ನ ಮುನಿಸು ತಣಿಸ ಬೇಕಿದೆ
ನಾ ಕಾಣದ ಬಣ್ಣವ ನೀನೇ ಹುಡುಕ ಬೇಕಿದೆ
ಮಳೆ ಬಿಲ್ಲೊಳು ಆ ಬಣ್ಣವ ಬಳಿಯಲು ನೀ ಬರಬೇಕಿದೆ ||ತೊಡಿಸಲೇ ಮುತ್ತಿನ....||

ಎಂದೂ ನೋಡದ ಕನಸ ಕಾಡುವ ಹಂಬಲ ಕಣ್ಣಿಗೆ
ಅಲ್ಲೂ ನಡೆಯಬೇಕಿದೆ ಬರಿ ನಿನ್ನಯ ನೆನಪ ಮೆರವಣಿಗೆ
ನಾನಾಡದ ಮಾತು ನೀನಿಂದು ಆಲಿಸಬೇಕಿದೆ
ನಿನ್ನ ಮಾತ ನಡುವಿನ ಮೌನದ ವರ್ಣನೆಯೇ ಅಲ್ಲಿರಬೇಕಿದೆ ||ತೊಡಿಸಲೇ ಮುತ್ತಿನ....||
ಅಲ್ಲೂ ನಡೆಯಬೇಕಿದೆ ಬರಿ ನಿನ್ನಯ ನೆನಪ ಮೆರವಣಿಗೆ
ನಾನಾಡದ ಮಾತು ನೀನಿಂದು ಆಲಿಸಬೇಕಿದೆ
ನಿನ್ನ ಮಾತ ನಡುವಿನ ಮೌನದ ವರ್ಣನೆಯೇ ಅಲ್ಲಿರಬೇಕಿದೆ ||ತೊಡಿಸಲೇ ಮುತ್ತಿನ....||
ನನ್ನೋಡಲಿನ ನಿನ್ನ ಹೆಜ್ಜೆಗುರುತು ಮಾಸಬಾರದೆಂಬ ಬಯಕೆ
ತಿರುಗುತ್ತಿರುವ ಸಂಚಾರಿ ಮನಕೆ
ಮನದ ಕಾರ್ಮುಗಿಲಿನ ತುದಿಯೋಳು ನಿನ್ನಗಲಿಕೆಯ ನೋವು
ಕೊರಗುತ್ತಿರುವ ವಿರಹಿ ಮನಕೆ ||ತೊಡಿಸಲೇ ಮುತ್ತಿನ....||
ತಿರುಗುತ್ತಿರುವ ಸಂಚಾರಿ ಮನಕೆ
ಮನದ ಕಾರ್ಮುಗಿಲಿನ ತುದಿಯೋಳು ನಿನ್ನಗಲಿಕೆಯ ನೋವು
ಕೊರಗುತ್ತಿರುವ ವಿರಹಿ ಮನಕೆ ||ತೊಡಿಸಲೇ ಮುತ್ತಿನ....||
No comments:
Post a Comment