Saturday, January 22, 2011

ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು


ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು
ಕಾಲು ಎಟಕದ ಸೈಕಲ್ ಸವಾರಿಯು
ಮಾಮರಕೆ ಕಲ್ಲೆಸೆದ ಸಂಜೆಯು
ನಿದ್ದೆ ಕಣ್ಣಲಿ ನವಿಲುಗರಿ ಹುಡುಕ ಹೊರಟ ಮುಂಜಾನೆಯು
ಗಿಳಿಯ ಬೇಟೆಗೆ ಹೊರಟ ಕಟಾವು ಮುಗಿದ ಗದ್ದೆಯು
ಎಳೆಗರುವಿನೊಡನೆಯ ವಿಹಾರದ ಬಯಲು

ಓದಿನ ಸಂಗಾತಿ ಬಾಲಮಂಗಳ,ಚಂಪಕ,ಚಂದಮಾಮ
ಖುಷಿ ಕೊಡುತಿದ್ದ ಡಿಂಗ ,ಪಕ್ರು , ಶಕ್ತಿಮದ್ದು, ಚೀಕು
ಶನಿವಾರದ ಶಕ್ತಿಮಾನ್, ಮಾಲ್ಗುಡಿ ಡೇಸ್
ರವಿವಾರದ ರಂಗೋಲಿ, ಸುರಭಿ, ಚಿತ್ರಹಾರ್


ಬಯಲಿನ ಗೋಲಿ,ಮರಕೋತಿ, ಲಗೋರಿ
ಮನೆಯೊಳಗಿನ ಕಣ್ಣಾಮುಚ್ಚಾಲೆ, ಚೆನ್ನಮಣೆ,ಹಾವೇಣಿ
ಬಾಯಲ್ಲಿ ನೀರೂರಿಸುವ ಬಾಂಬೆ ಮಿಟಾಯಿ
ಒಂದು ರುಪಾಯಿಯ ಹಾಲ ಕ್ಯಾಂಡಿ

ಆಟದಿ ಗಾಯವಾದ ಮೊಣಕಾಲಗಂಟು
ಹಠದಿ ಪಡೆದು ಒಡೆದು ಹೋದ ಬಲೂನು
ಚಿಮಿಣಿ ದೀಪಕೆ ಬೀಡಿ ಆಗಿ ಹೋಗೆ ಬಿಟ್ಟ ಕಾಗದ
ತುಂತುರು ಮಳೆಗೆ ಕೆಳಗಿಳಿದ ಒದ್ದೆ ಗಾಳಿಪಟ


ಹೊಸ ಹೊಸ್ತಿಲಲ್ಲಿ ಕಾಲಚಕ್ರದ ದಾಸರು
ಹೊಸ ಬಾಳಿಗೆ ಅಸ್ತು ಎನ್ನುವ ವ್ಯಕ್ತಿ ವ್ಯಕ್ತಿತ್ವಗಳು
ನೆನಪಾಗುತಿವೆ ಆ ದಿನಗಳು, ಒತ್ತಡ ತುಂಬಿದ ಈ ದಿನದೊಳು

ಸೈಕಲ್ ಮರೆಸಿದ ಕಿಕ್ಕ್ ಕೊಟ್ಟ ಮೋಟರ್ ಸೈಕಲ್
ಸಿಹಿ ಇರದ ಏ.ಸಿ ಯಲ್ಲಿನ ಹುಳಿಮಾವು
ಕನಸಲ್ಲೇ ಮೂಡುವ ಕಾಮನ ಬಿಲ್ಲು
ಮೊಬೈಲ್ ಚಿಲಿ ಪಿಲಿಯಲ್ಲೇ ಏನೋ ಪಡೆದ ಭಾವವು
ದೇಹ ಸ್ಥಿತಿ ಸುದಾರಣೆಯ ಬೆಳಗ್ಗಿನ ಜೊಗ್ಗಿಂಗ್ ,ಜಿಮ್ಮು

ಅಚ್ಚುಪ್ರತಿಯ ಅಚ್ಚಳಿಸಿದ ಆನ್ಲೈನ್ ಬರಹಗಳು
ಮುದ ನೀಡುವ ಆರ್ಕುಟ್ , ಫೇಸ್ ಬುಕ್ ಸಂದೇಶಗಳು
ಶುಗರ್ ಫ್ರೀ ಆಟಕೆ ಖಾಲಿಯಾದ ಸಕ್ಕರೆ ಡಬ್ಬ
ಕೊಲೆಸ್ಟ್ರೋಲ್ ಕಾಟಕೆ ಬಲಿಯಾದ ಬೆಣ್ಣೆ ,ಮೊಸರು ತುಪ್ಪ

ಬಾಲ್ಯದ ಮಜಾ ಕೊಡದ ಮಕ್ಕಳ ಪಾರ್ಕ್, ಸ್ನೋವ್ ವರ್ಡ್
ಮನೆಯೊಳಗೇ ಸಜ ಕೊಡುವ ಪ್ಲೇ ಸ್ಟೇಶನ್, ಮೊಬೈಲ್ ಗೇಮ್ಸ್
ಪಾಶ್ಚಾತ್ಯ ಜೀವನವೇ ಕೆ.ಎಫ್.ಸಿ,ಪಿಜ್ಜಾ , ಫುಡ್ ಕೋರ್ಟ್
ಸಾವಿರ ರುಪಾಯಿಯ ವೀಕ್ ಎಂಡ್ ಮೋಜು

ಮಾಹಿತಿ ತಂತ್ರಜ್ಞಾನಕ್ಕೆ ಹತ್ತಿರವಾದ ದೂರ ಸಂಬಂಧಿಗಳು
ಸಂಭಾಷಣೆ ಇಲ್ಲದೆ ದೂರವಾದ ನಮ್ಮ ನೆರೆಯವರು
ಚಟ ಎಂದು ಗೊತ್ತಿದ್ದರೂ ಒತ್ತಡ ತಪ್ಪಿಸುವ ನಿಜ ಬೀಡಿ ಸಿಗರೇಟ್ ಗಳು
ಮೈಮುರಿಸಿ ಬೆವರಿಳಿಸುವ ಏ.ಸಿ. ಜಿಮ್ ಗಳು


ಹೊಸ ಹೊಸ್ತಿಲಲ್ಲಿ ಕಾಲಚಕ್ರದ ದಾಸರು
ಹೊಸ ಬಾಳಿಗೆ ಅಸ್ತು ಎನ್ನುವ ವ್ಯಕ್ತಿ ವ್ಯಕ್ತಿತ್ವಗಳು
ಎಲ್ಲಾ ಕಳೆದು ಎಲ್ಲಾ ಪಡಕೊಂಡೆ ಎನ್ನುವ ಮೂಢರು
ಬಾಹ್ಯಖುಷಿಗಾಗಿ ಅಂತರಿಕ ಖುಷಿ ತ್ಯಾಗ ಮಾಡಿದ ದಡ್ಡರು 

No comments:

Post a Comment