Saturday, January 22, 2011

ನೀನಿರಲು ಜೊತೆಯಲಿ


ಪ್ರೀತಿಯ ಪರ್ವಕಾಲ ಶುರು ವಾಗಿದೆ ಈಗಲೇ
ಮನಸಲಿ ಮನಸಿನ ಉತ್ಸವ ನಡೆಯುತಿದೆ
ಲೋಕದ ಪರಿವೇ ಇಲ್ಲದೆ ಕನಸಿನ ಮಾರಾಟ ಜೋರಾಗಿದೆ
ಕನಸಿನ ಬೇಡಿಕೆ ಹೆಚ್ಚಾಗಿರಲು ಲೋಕವೇ ಬೇಡವಾಗಿದೆ
ಕೊಂಡು ಕೊಳ್ಳುವ ಹೊಸ ವ್ಯವಹಾರ ನಿಜಕ್ಕೂ ಹಿತ ತಂದಿದೆ
 
ತುಂತುರು ಬೀಳುತಿರಲು
ನಭದಲ್ಲಿ ಸಪ್ತವರ್ಣದ ಭಿಲ್ಲೊಂದು ಮೂಡಿದಂತಿದೆ
ಮುಳುಗುವ ರವಿಗೆ ಮೂಡುವ ಶಶಿಯ ಸ್ವಾಗತ ಕೊರುತಿರಲು
ಮಗುವಾದ ಮನಸ್ಸು ತಾಳ ತಟ್ಟುತಿದೆ
ನಿನ್ನೊಂದಿಗೆ ತೀರದ ಅಲೆಯೇ ಸ್ವರ್ಗದ ಕದವಾಗಿದೆ !!!

No comments:

Post a Comment