Saturday, January 22, 2011

ಭಲೇ ಅದ್ರಷ್ಟ !!!

1


ಹೀಗೆ ಕೂತಿದ್ದೆ ಅದೇ cubical ನಲ್ಲಿ,ಏನೇನೋ ಯೋಚನೆಗಳು ಮಾನಸಪಟದಲ್ಲಿ ತೇಲಿ ಬರುತ್ತಿದ್ದವು, ಜೊತೆಗೆ ನಾಳಿನ ಯೋಜನೆಗಳ ಸರಮಾಲೆಯನ್ನು ಪೋಣಿಸುತ್ತಿದ್ದೆನು.ಇದೇ ಹೊತ್ತಿಗೆ ಸರಿಯಾಗಿ ಯಾವುದೊ ಒಂದು ಅದ್ರಷ್ಟ ದ ಕುರಿತಾದ ತೇಲಿ ಬಂದ ಇ-ಮೇಲ್ ನನ್ನ ಅದ್ರಷ್ಟ ದ ಬಗ್ಗೆ ನನ್ನನ್ನು ಕೆಣಕಲು ಪ್ರೇರೇಪಿಸಿತು.
   ಸಣ್ಣವನಿರುವಾಗ ಎಲ್ಲರು ಹೇಳುತಿದ್ದರು ನೀನು ತುಂಬಾ ಅದ್ರಷ್ಟವಂತ ಕಣಪ್ಪ ನೀನು ಅಂದು ಕೊಂಡಿದ್ದೆಲ್ಲ ನೀನು ಪಡೆದು ಕೊಳ್ಳುತ್ತಿಯಾ ಎಂದು. ನಂಬಿಕೆ ಇರಲ್ಲಿಲ್ಲ ನನಗೆ ಭವಿಷ್ಯ , ದಿನಫಲ ಇತ್ಯಾದಿಯಲ್ಲಿ. ಕೆಲಸ, ಮಾತು ಮತ್ತು ಸತ್ಯದ ನಡೆ ನಾವಗಿಸಿದರೆ ಅದ್ರಷ್ಟ ನಮ್ಮನ್ನು ಹಿಂಬಾಲಿಸುತ್ತದೆ ಎಂಬ ನಂಬಿಕೆ ನನ್ನದಾಗಿತ್ತು. ಇಂಜಿನಿಯರ್ ಆಗಬೇಕು ಎಂದು ನಾನೆಂದೂ ಕನಸು ಕಂಡವನಲ್ಲ ,ಮನೆಯಿಂದ ದೂರವಾಗಬೇಕಲ್ಲ ಎಂಬ ವಿಚಾರದಿಂದಲೇ ನಾನು ಆ ಕನಸು ಕಾಣಲಿಲ್ಲ ಎನ್ನ ಬಹುದೇನೋ, ಆದರೆ ಮನೆಯವರ ಒತ್ತಾಯದ ಮೇರೆಗೆ ಇಂಜಿನಿಯರಿಂಗ್ ಸೇರಿಕೊಂಡೆ, ಮನೆಯವರಂತು ಆಗ ನನಗೆ campusನಲ್ಲಿ ಕೆಲಸ ಸಿಗಬೇಕು, ನನ್ನನ್ನು ಸಾಫ್ಟ್ವೇರ್ ಪೋಷಾಕಿನಲ್ಲಿ ನೋಡಬೇಕು ಎಂದೆಲ್ಲ ಕನಸು ಕಂಡದ್ದೇನೋ ನಿಜ. ಅಂತೆಯೇ ಮೊದಲ ಎರಡು ವರುಷಗಳನ್ನು ಸಲಿಸಾಗಿಯೇ ಮುಗಿಸಿದೆನು . ನಾಲ್ಕನೇ sem ನಂತರದ ರಜೆಯಲ್ಲಿ ಮನೆಗೆ ಬಂದಾಗ ಎಲ್ಲೆಲ್ಲೂ ಇಂಜಿನಿಯರ್ ಗಳೇ ಕಾಣುತ್ತಿದ್ದರು, ಒಬ್ಬರ ನಂತರ ಒಬ್ಬರಂತೆ ನನ್ನನ್ನು campus ಎಂಬ ಯುದ್ದಕ್ಕೆ ಕಳುಹಿಸಿಕೊಡುವ ತವಕದಲ್ಲಿದ್ದರು. ಕೆಲವರಂತೂ "ನೀನು m-tech ಮಾಡು !!" ಎಂಬ ಪುಕ್ಕಟ್ಟೆ ಸಲಹೆ ನೀಡುತ್ತಿದ್ದರು .
   
ಜನವರಿ ೨೦ ೨೦೦೮ ,ಆಗ ತಾನೆ ಜಾತ್ರೆಯ ಅಮಲಲ್ಲಿದ್ದೆ ಮನೆಯವರು ಊರಿಂದ ಕಾಲೇಜ್ ಗೆ ಹೋಗು ಎಂದು ಕಳಿಸಿಕೊಟ್ಟರು ,ಆ ಸಮಯದಲ್ಲಿ ನಾನು ಕಾಲೇಜ್ ಪಕ್ಕದಲ್ಲೇ ರೂಂ ಒಂದನ್ನು ಬಾಡಿಗೆಗೆ ತೆಗೆದು ಅಲ್ಲಿ ಉಳಕೊಳ್ಳುತ್ತಿದ್ದೆ, ಆ ವರುಷವಂತು ನಮ್ಮ ಕಾಂಪೌಂಡ್ ನಲ್ಲಿ 80 % ವಿದ್ಯರ್ಥಿಯರು 3 ನೇ ವರ್ಷದ  ವ್ಯಾಸಂಗ ಮಾಡುತ್ತಿದ್ದರು.ಹಿಂದೆ ಹೇಳಿದಂತೆ ನಾನು ಅವರೊಂದಿಗೆ ಅದೃಷ್ಟ ಪರೀಕ್ಷೆ ಗೆ ಅಣಿಯಾದೆ. ಮನೆಯವರಿಗೊಸ್ಕರ ವಾದರೂ ಒಂದು ಕಂಪನಿ ಯಲ್ಲಿ ಕೆಲಸ ಸಿಗಬೇಕು ಅಂದು ಅಷಿಸಿದ್ದೆ. ಮೊದಲ ದಿನ ಇನ್ಫೋಸಿಸ್ ಬಂದಿತ್ತು ಅದರಲ್ಲಿ ಸೆಲೆಕ್ಟ್ ಅಗುವೇನೋ.... ಆದರೆ ಮಂಗಳೂರಿನಲ್ಲೇ ಇರಬಹುದು ಎಂಬ ಆಸೆಗೆ ನನ್ನ ಅದೃಷ್ಟ ಪರೀಕ್ಷೆ ಮಾಡಲು ನಿಂತೆ , ಇಲ್ಲ ಅದುಷ್ಟ ಕೈ ಕೊಟ್ಟಿತು, ಮಾರನೆದಿನ ಉಡುಪಿಯ ರೋಬೋ ಸಾಫ್ಟ್ ಬಂದಿತ್ತು , ಹುಂ ಅಲ್ಲೂ ಇಲ್ಲ....
ಎಲ್ಲಾ ಆಸೆಗಳು ಕರಗಿಹೋದವು.ಆ ನಂತರ ಬಂದ ಕಂಪನಿ ಎಲ್ಲಾ ಸುಮ್ಮನೆ ನಾಮ್ ಕೆ ವಾಸ್ತೇ ಎಂಬಂತೆ attend ಮಾಡಿದೆ .

ಎರಡು ತಿಂಗಳು ಆಗುತ್ತಿದ್ದಂತೆ ನನ್ನ ಅದೃಷ್ಟ ಏನಿರಬಹುದು ಎಂದು ಪರಿಚಯವಾಗಿತ್ತು ನೋಡಿ !!! ಕೊನೆಗೆ ಮೇ ತಿಂಗಳ ಕೊನೆಯವಾರ ಪುಣೆ ಯಲ್ಲಿನ persistent system ಬಂದಿತ್ತು,ನನ್ನಲ್ಲಿನ ಎಲ್ಲಾ ಉತ್ಸಾಹ ಉಲ್ಲಾಸ ಎಲ್ಲವು ಮಾಯ ವಾಗಿತ್ತು,ಇಲ್ಲಿವರೆಗೆ ಟಿಪ್-ಟಾಪ್ ಆಗಿ ಪಕ್ಕ professional ಆಗಿ ಅಣಿಯಾಗುತ್ತಿದ್ದೆ, ಇಂದು ಅವು ಏನು ಇಲ್ಲ ಬರಿಯ ಪ್ಯಾಂಟ್ ಶರ್ಟ್ , ಮಂಗಳೂರಿನ  ಮಳೆಯಂತು ಜೋರಾಗಿ ಬರುತಿತ್ತು, ಶೂ ಹಾಕುವ ಧೈರ್ಯವೂ ಬರಲಿಲ್ಲ. ಹಾಗೆ ತಿರುಗಾಡಲು ಹೋದವರಂತೆ ಇಂಟರ್ವ್ಯೂ ಗೆ ಹೋಗಿದ್ದೆ.

ಹುಂ ಇವತ್ತು ಅದೃಷ್ಟ ನನ್ನದಾಗಿತ್ತು. ಮೊದಲ ರೌಂಡ್ ,ಎರಡನೇ ರೌಂಡ್ ಮೂರನೇ ರೌಂಡ್ ಎಲ್ಲಾ ಸಲಿಸಾಗಿಯೇ ನಡೆದುಹೋಯಿತು. ಈಗ ಮಹಾ ಸಮರ H -R ರೌಂಡ್ ,ನನ್ನ ಮೇಲೆ ಈಗ ನನಗೆ ನಂಬಿಕೆ  ಹೊರಟುಹೋಗಿತ್ತು.ಈಗ ಬರಿ ಅದೃಷ್ಟದಾಟ ಎಂದು ಸುಮ್ಮನಾಗಿದ್ದೆ.
ನನ್ನ ಬೇಜವಬ್ದಾರಿ ಭಂಗಿ ನೋಡಿದ H -R "ಏನಪ್ಪಾ ಶೂ ಎಲ್ಲಿ ?".
ಮೊದಲು ಸುಮ್ಮನಾದೆ ಆಮೇಲೆ "ಮುಂಗಾರು ಮಳೆ ನೋಡಿ, ಜೊತೆಗೆ ನಾನು ಇಲ್ಲಿವರೆಗೆ ತಲುಪುವೆ ಎಂಬ ನಂಬಿಕೆ ಇರಲ್ಲಿಲ್ಲ ,ಅದ್ದರಿಂದ ಶೂ ಹಾಕಲಿಲ್ಲ !! ವ್ಯವಹರಿಸಲು ಶೂ ಮಾನದಂಡ ಎಂದು ಗೊತ್ತಿರಲಿಲ್ಲ !! "ಎಂಬ ವ್ಯಂಗ್ಯ ನಗು ನನ್ನಲ್ಲಿತ್ತು.
ಬಳಿಕ ಅದ್ಯಾವುದ್ಯಾವುದೋ ತನ್ನ ಭಿತ್ತಳಿಕೆ ಇಂದ ಬಾಣ ಎಸೆದರು ನೋಡಿ ,ಅವುಗಳಿಗೆ ನನ್ನಲ್ಲಿನ  ಸಮಾದನಕರ ಅಸ್ತ್ರದಿಂದ ಎದುರಿಸಿದಾಗ ನನ್ನಲ್ಲಿದ್ದ ಸಣ್ಣ ಆತ್ಮವಿಶ್ವಾಸವೂ ಮಾಯಾವಾಯಿತು.

ಮುಂದೇನು?  .. ಮನೆಗೆ ಕರೆ ಮಾಡಿ "ಮಿಗೆಲೇ ಕಸ್ಸ್ luck ಕಿ... ಕೆದ್ನ ಕಂಯಿ ಜೈನಾ " ಅಂದೆ.
ಎಲ್ಲರ ಪ್ರಶ್ನೋತ್ತರ ಮುಗಿದಾದ ಬಳಿಕ H -R  ಪುನಃ  ನನ್ನನ್ನು ಕರೆದರೂ , ಬಳಿಕ ಮತ್ತೊಮ್ಮೆ ನನ್ನನ್ನು ಇಂಟರ್ವ್ಯೂ ಮಾಡುವುದಾಗಿ ತಿಳಿಸಿದಾಗ ತುಂಬಾ ಖುಷಿಯಾಯಿತು. ಆತ್ಮವಿಶ್ವಾಸವೂ ಜಾಗ್ರತವಾಯಿತು . ತುಂಬು ವಿಶ್ವಾಸದಿಂದ ಎದುರಿಸಿದೆ.

ಕೊನೆಯ ಮಾತು "ನಿನ್ನನ್ನು ಪೂನದಲ್ಲಿ ಬೇಟಿ ಯಾಗುವೆ ,ಅದು ಶೂ ನೊಂದಿಗೆ !!! ಮಳೆ ಇರಲಾರದು ಭೇಟಿ ಆಗಲು ಮನಸಿದೆಯಾ ?"ಅವರನ್ದದ್ದು ೨ ವರುಷ ಕಳೆದುಹೋದರು ಈಗ ಕೇಳಿದಂತೆ ನನ್ನ ಸ್ಮೃತಿಪಟಲದಲ್ಲಿದೆ .
ಮುಂದೇನು ತುಂಬಾ ಅದೃಷ್ಟವಂತ ಎಂಬ ಮಾತು ಕೊನೆಗೂ ನಿಜವಾದಂತೆ ಆಯಿತು.

ಇಲ್ಲಿ ಏನು ಅದೃಷ್ಟದ ಮಾತು ಬಂತು ಎಂದು ಕೊಂಡಿರಾ... ಹುಂ  ಇದೆ ....ಸ್ವಾರಸ್ಯದ ವಿಷಯಗಳು ಹಲವಾರಿದೆ.ನಿಜವಾದ ಅದೃಷ್ಟದ ಅರಿವಾದದ್ದು ಆ ದಿನದ ಬಳಿಕವೇ.


2


ಹೋಯಿತು ಮತ್ತೆ ಆರು ತಿಂಗಳುಗಳು ಡಿಸೆಂಬರ್ ೨೦೦೮ , ಇಡಿ ಪ್ರಪಂಚವೇ ಬೆರಗಾದ ರಿಸೆಶನ್ ಸಮಯವಾಗಿತ್ತು. ಮೇ ಯಲ್ಲಿ ಒಟ್ಟು ೨೫ -೩೦ ಮಂದಿ ಆ ಕಂಪನಿಯಲ್ಲಿ ಸೆಲೆಕ್ಟ್ ಆಗಿದ್ವಿ ಎಲ್ಲರು ಉಲ್ಲಾಸದಲ್ಲಿ ಬೀಗುತ್ತಿದ್ದರು, ಅದೇ ಸಮಾಯಕ್ಕೆ ಸರಿಯಾಗಿ ೨೨ ಮಂದಿಗೆ ರೆಜೆಕ್ಶನ್ ಲೆಟರ್ ಬಂತು :(
ಅದ್ರಷ್ಟ ಕೈ ಕೊಟ್ಟಿತು ಅಂದುಕೊಂಡ್ರಾ ...? ಇಲ್ಲ ..ಅಲ್ಲಿ ಕೈ ಕೊಟ್ಟಿದ್ದಿದ್ರೆ ಮುಂದೆ ಕಥೆನೇ ಬೇರೆಯಾಗಿರುವುದು !!
ಸೆಲೆಕ್ಷನ್ ಆದ ೮ ಮಂದಿಯಲ್ಲಿ ನಾನು ಒಬ್ಬನಿದ್ದೆ :) ಹುಂ ಇದು ಅದೃಷ್ಟ ನೋಡಿ !!!!
ಮುಂದೆ ??

ಮೇ- ಜೂನ್ ನಲ್ಲಿ ಇಂಜಿನಿಯರಿಂಗ್ ನ ಹೊಸ್ತಿಲು ದಾಟುವ ಹೊತ್ತಿನಲ್ಲಿ ರಿಸೆಶನ್ ಇನ್ನೊಮ್ಮೆ  ಜಾಡಿಸಿ ಉಳಿದ ೮ ರಲ್ಲಿ ೬ ಜನರಿಗೆ ಒದ್ದಿತ್ತು.
ಅದ್ರಷ್ಟ ಕೈ ಕೊಟ್ಟಿತು ಅಂದುಕೊಂಡ್ರಾ ...?

ಇಲ್ಲ ..ಅಲ್ಲಿ ಕೈ ಕೊಟ್ಟಿದ್ದಿದ್ರೆ ಮುಂದೆ ಕಥೆನೇ ಬೇರೆಯಾಗಿರುವುದು !!
ಜೋಯ್ನಿಂಗ್ ಲೆಟರ್ ಸಿಕ್ಕ ಇಬ್ಬರಲ್ಲಿ ನಾನೂ ಒಬ್ಬನಿದ್ದೆ ಹುಂ ಇದು ಅದೃಷ್ಟ ನೋಡಿ !!!!

ಉಳಿದ ೨೫-೨೮ ಮಂದಿಯ ವ್ಯಥೆ ನೋಡಿದಾಗ ಬೇಜಾರಾಗುತ್ತಿತ್ತು ..ಒಮ್ಮೆ ಸೆಲೆಕ್ಟ್ ಆದವರಿಗೆ ನಂತರದ ಕಂಪನಿ attend ಮಾಡುವಂತೆ ಇರಲ್ಲಿಲ್ಲ ನಮ್ಮ ಕಾಲೇಜ್ ನಲ್ಲಿ. ಅವರಿಗಂತೂ ಮೂಗಿನ ತುದಿಯ ತುಪ್ಪವಾಯ್ತು ಈ ಕಂಪನಿ .
  ಎಲ್ಲರೂ ಪ್ರಯತ್ನಕಿಂತ ಅದೃಷ್ಟ ನನ್ನ ಕೈ ಹಿಡಿಯಿತು ಎಂಬ ಮಾತು ಆಡಲಾರಂಬಿಸಿದಾಗ ನನಗೆ ನಿಜಕ್ಕೂ ಸಣ್ಣಾಗಿನ  ಮಾತು ನಿಜವಾದಂತೆ ಅನಿಸಲಾರಂಬಿಸಿತು.

ಮುಂದೆ?



ಇಗಲಂತೂ ಸ್ವರ್ಗಕ್ಕೆ ಮೊರೆ ಗೇಣು ಎಂಬಂತೆ ಆಗಿತ್ತು, ಜೂನ್ ನ ಕಡೆಯ ವಾರದಲ್ಲಂತು ಜೋಯ್ನಿಂಗ್ ಡೇಟ್ ಬಂತು.ಮನಸ್ಸಲ್ಲೇ ಎಲ್ಲಾ ಕನಸು ನನಸಾದ ಸಂಭ್ರಮ ಮನೆಮಾಡಿತ್ತು.ಆದರೆ ಈಗ ಒಂದು ಚಿಂತೆ  ಪೋಸ್ಟಿಂಗ್ ಬಂದಿದ್ದು "ನಾಗ್ಪುರ್"ಗೆ :(
ಮನೆಯಿಂದ ದೂರ ಹೋಗುವುದೆಂದರೆ ಅಲರ್ಜಿ ಇತ್ತು ಈಗ ನೋಡಿ ಅದ್ರಷ್ಟ ಮನೆಯಿಂದ ೧೨೦೦ ಕಿ.ಮಿ ಧೂರಕ್ಕೆ ನೂಕಿ ಬಿಟ್ಟಿತು.ನಾಗ್ಪುರ್ ಹೆಸರು ಕೇಳಿದ್ದೇನೋ ನಿಜ ಆದರೆ ಉರಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ,ಸೊ ಇಂಟರ್ನೆಟ್ ನ ಮೊರೆ ಹೋದೆ ,ಮಂಗಳೂರಿನಿಂದ ನಾಗ್ಪುರ್ ಗೆ ಹೇಗೆ ಹೋಗುವುದೆಂದು ಮೇಪ್ ನೋಡಲಾರಂಬಿಸಿದೆ, ಮಂಗಳೂರಿನಿಂದ ಟ್ರೈನ್ ಟೇಬಲ್ ನೋಡಿದಾಗ ವಾರಕ್ಕೆ ಒಂದೇ ಟ್ರೈನ್ ಅದು ಮೈಲಾರ ಸುತ್ತಿ ಕಾಶಿ ತಲುಪಿದೆವು ಅಂತಾರಲ್ಲ ಹಾಗೆ ಸುತ್ತು ಬಳಸಿ ಹಿಡಿ ಕೇರಳ ತಮಿಳುನಾಡು ಆಂದ್ರ ದರ್ಶನ ಮಾಡುವಂಥದ್ದು ,ಒಟ್ಟಿಗೆ ೩೮ ಗಂಟೆಯ ಪ್ರಯಾಣ. ಉರು ಹೊಸದು ಅದಕ್ಕಾಗಿ ಮನೆಯಿಂದ ಮಾಮನ ಜೊತೆಗೆ ಹೋಗುವ ಮಾತಾಯಿತು.ಮಾಮ ಬೆಂಗಳುರಿನಲ್ಲಿದ್ದರು ,ಅದಕ್ಕಾಗಿ ನನ್ನ ಪ್ಲಾನ್ ಅನ್ನು ಬೆಂಗಳೂರ್  ಮಾರ್ಗವಾಗಿ ಮಾಡುವುದು ಅನಿವಾರ್ಯವಾಯಿತು.

ಅಗುಸ್ಟ್ ೨೬ ಕ್ಕೆ ಜೋಯ್ನಿಂಗ್ ಡೇಟ್  ಆಗಿತ್ತು, ನನಗೆ ಆಗಸ್ಟ್ ೨೫ ಕ್ಕೆ ನಾಗ್ಪುರ್ ತಲುಪಲೇ ಬೇಕಿತ್ತು.ಆದುದರಿಂದ ನನಗೆ ಆ ವರ್ಷದ ಗಣೇಶಹಬ್ಬ ತ್ಯಾಗ ಮಾಡಬೇಕಾಯಿತು.ನಾನೂ ೨೨ ರಂದು ಮಂಗಳೂರಿನಿಂದ ಬೆಂಗಳೂರಿಗೆ ೨೪ ಕ್ಕೆ ಬೆಂಗಳೂರಿನಿಂದ ನಾಗ್ಪುರ್ ಗೆ ಹೋಗುವುದು ಎಂದು ನಿಶ್ಚಿತ ಮಾಡಿ ಕೊಂಡೆ.ನನ್ನ ಅದೃಷ್ಟಕ್ಕೆ ಸೆಲೆಕ್ಟ್ ಆದ ನಾವಿಬ್ಬರು ಕುಂಬ್ಳೆಯವರೇ ಆಗಿದ್ದೆವು.ನಾವಿಬ್ಬರು ಕಡೆ ಕ್ಷಣದ ಗೊಂದಲ  ಬೇಡ ಎಂದು ಒಂದು ತಿಂಗಳ ಮುಂಚಿತವಾಗಿಯೇ ಬೆಂಗಳೂರಿಗೆ ೨೨ ರ ರಾತ್ರಿಯ ಟ್ರೈನ್ ,೨೪ ರ ಹಗಲಿನ ಟ್ರೈನ್ನಲ್ಲಿ ಬೆಂಗಳೂರ್ ನಿಂದ   ನಾಗ್ಪುರ್ ಗೆ ಟಿಕೆಟ್ ಕಾಯ್ದಿರಿಸಿದೆವು. ಇಲ್ಲಿವರೆಗೆ ನಮ್ಮಿಬ್ಬರ ಅದೃಷ್ಟ ತುಂಬಾ ಒಳ್ಳೇದಿತ್ತು ನೋಡಿ ಯಾವುದೇ ತೊಂದರೆ ಇಲ್ಲದೆ ಎಲ್ಲಾ ಕೆಲಸ ಮುಗಿದಿದ್ದವು .


3

ಆಗಸ್ಟ್ ೨೨ : ನಾನು ಮನೆಯಿಂದ ಹೊರಡಬೇಕಾದ ದಿನ ಬಂತು ನೋಡಿ, ಅದೃಷ್ಟವೂ ಉಲ್ಟಾ ಹೊಡೆಯಲಾರಂಬಿಸಿತು.ಮಳೆಗಾಲದ ದಿನ ಆದುದರಿಂದ ಮಳೆ ಏನೋ ಜೋರಾಗಿ ಬಿಳುತಿತ್ತು,ಅಲ್ಲಿವರೆಗೆ ಸರಿ ಇದ್ದ ಮನೆಯ ಲ್ಯಾಂಡ್ ಲೈನ್ ಅಂದು ಕಡಿತ ಗೊಂಡಿತು. ಪ್ರತಿಯೊಂದು ವಿಷಯಕ್ಕೆ ಅರವಿಂದ್ ಗೆ  ಕರೆ ಮಾಡುವುದು ಅನಿವಾರ್ಯ, ನಮ್ಮ ಮನೆ ಮಟ್ಟಕ್ಕಿಂತ ಕೆಳಗಿರುವುದರಿಂದ ಮೊಬೈಲ್  ವ್ಯಾಪ್ತಿ ಪ್ರದೇಶದಿಂದ ಹೊರಗಿರುತ್ತದೆ !!
ಬೆಳಗ್ಗೆ ಎದ್ದವನೇ ಈ ಫೋನ್ ಸರಿ ಮಾಡುವ ಕೆಲಸ ನನ್ನದಾಗಿತ್ತು, ನನ್ನ ಪುಣ್ಯಕ್ಕೆ ಫೋನ್ ಆಫೀಸ್ ನಲ್ಲಿನ ನೌಕರ ಬೇಗನೆ ಸರಿ ಮಾಡಿದ ಲೈನ್  ಒಂದು ಮಜಲು ಪಾರದೆ ಅಂದು ಕೊಂಡೆ..
ಕೊನೆಯ ಕ್ಷಣದ ತಯಾರಿ ಎಲ್ಲಾ ಮುಗಿದಿತ್ತು, ಸಂಜೆ ೫ ರ ಸುಮಾರಿಗೆ ಮಂಗಳೂರಿಗೆ ಹೊರಡುವ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದೆವು ,ಅರವಿಂದ್ ಗು ಕಾಲ್ ಮಾಡಿ ಮನೆ ಗೆ ಬರಲು ಹೇಳಿದೆ .
೫ ರ ಸುಮಾರಿಗೆ ಮನೆಯವರ ಆಶಿರ್ವಾದ ದೊಂದಿಗೆ ಮನೆ ದೇವರ ಆಶಿರ್ವಾದನೂ  ಜೊತೆಗೆ ಇಟ್ಟುಕೊಂಡು ನನ್ನ ವ್ರತ್ತಿಯ ಕರೆಎಡೆಗೆ ಪ್ರಯಾಣ ಆರಂಬಿಸಿದೆ.

ಇಲ್ಲಿಯೇ ನನ್ನ ಧುರಾದೃಷ್ಟದ ಸರಮಾಲೆ ಆರಂಭವಾಗುವುದು.
ನನ್ನ ೩ ಬ್ಯಾಗ್ಸ್ ಅರವಿಂದನ ೩ ಬ್ಯಾಗ್ಸ್ ಜೊತೆಯಲ್ಲಿ ನಮ್ಮನ್ನು ಮೆಟ್ಟಿದ  ಧುರಾದೃಷ್ಟದ ಭೂತ ನಮ್ಮಿ ವಿನೋದದ ಪ್ರಯಾಣದ ಭಾಗವಾಯಿತು.

ಆಶ್ಚರ್ಯದ ಮಾತು ಅಂದು ಕೇರಳದಲ್ಲಿ ಯಾವುದೇ ಹರತಾಳ ವಿಲ್ಲದಿರುವುದು ,ಕಾಸರಗೋಡು ಜಿಲ್ಲೆ ಹರತಾಳಕ್ಕೆ ತುಂಬಾ ಹೆಸರುವಾಸಿ ಆಗಿದೆ, ಯಾವುದೇ ನಾಯಕ ಕಿತ್ತಾಡಿ ಸಾಯಲಿ , ಬೆಲೆ ಏರಿಕೆ ಆಗಲಿ , ಪಕ್ಕದ ಮನೆಯ ಬಾಗಿಲು ಯಾರೋ ಅಜ್ನ್ಯಾಥರು ಬಡಿದರೂ ಇಲ್ಲಿ ಹರತಾಳ ವಾಗುತ್ತದೆ. ಅಂದು ನನ್ನ ಅದೃಷ್ಟ ಚೆನ್ನಾಗಿತ್ತು  ಬಸ್ ಗಳು ಏನೋ ಸಂಚರಿಸುತಿದ್ದವು ಕುಂಬ್ಳೆ ಇಂದ ksrtc ಹಿಡಿದು ಕೊಂಡೆವು, ಇದೊಂದೇ ಅಂದು ನನ್ನ ಪರವಾಗಿದ್ದ ಅದೃಷ್ಟ !!!
 ಬಸ್ ತುಂಬಿ ತುಳುಕುತಿತ್ತು, ನಾವಿಬ್ಬರು, ನಮ್ಮಿಬ್ಬರ ತಂದೆಯಂದಿರು , ಜೊತೆಗೆ ನಮ್ಮ ೬ ಬ್ಯಾಗ್ಸ್ ಗಳು ,ಅವನ್ನು ಬ್ಯಾಗ್ಸ್ ಗಿಂತ ಯಕ್ಷಗಾನದ ಜೋಳಿಗೆ ಎನ್ನಬಹುದು , ಅಷ್ಟು ದೊಡ್ಡದಿದ್ದವು.ನಾಲ್ವರಿಗೂ ಬರಿ ನಿಲ್ಲಲು ಸ್ಥಳವಿತ್ತು. ಹೊರಗೆ ಜಡಿ ಮಳೆ , ಪಾಪ ಡ್ರೈವರ್ ಹೊಂಡದ ನಡುವೆ ರಸ್ತೆ ಹುಡುಕುತ್ತಾ ಬಸ್ ಚಲಾಯಿಸುತ್ತಾ ಇದ್ದರೆ ಅಯ್ಯೋ ಪಾಪ ಎಂಬ ಭಾವನೆ ಜಾಗ್ರತ ವಾಗುತಿತ್ತು, ಉಪ್ಪಳದಾಟಿ ಹೊಸಂಗಡಿ ತಲುಪುವ ಹೊತ್ತಿಗೆ ಬಸ್ ನಲ್ಲಿರುವ ಪ್ರಯಾಣಿಕರಿಗೆ ನಿದ್ದೆ ಬಾರದಿದ್ದರೂ ಬಡಪಾಯಿ ಬಸ್ ಮಲಗಿ ಕೊಂಡಿತು. ಪಾಪ ಮೊದಲೇ ದಣಿದಿದ್ದ ಚಾಲಕ ಎಬ್ಬಿಸುವ ಪ್ರಯತ್ನ ಮಾಡಲಿಲ್ಲ. ಪ್ರಯಾಣಿಕರಲ್ಲಿ ಬೇರೆ ಬಸ್ ಹತ್ತಿ ಮಂಗಳೂರು ತಲುಪಿ ಎಂಬ ಪುಕ್ಕಟೆ ಸಲಹೆ ನೀಡುತ್ತಾ ಡಿಪೋಗೆ ಫೋನಯಿಸುತ್ತಾ ಪೊದೆಯ ಮರೆಯಲ್ಲಿ ಮರೆಯಾದ .

ನಾಲ್ಕು ಮಂದಿ ಮತ್ತು ನಮ್ಮ ೬ ಜೋಳಿಗೆ ತುಂಬಾ ನಾಜುಕಿನಲ್ಲಿ ಬಸ್ಸಿಂದ ಇಳಿದು ಹಿಂದಿನ ಬಸ್ಸಿನ ದಾರಿ ಕಾಯುತ್ತ ,ಮಳೆಯಲ್ಲಿ ನೆನೆಯುತ್ತಾ ನಿಂತಿದ್ದೆವು.೫-೧೦ ನಿಮಿಷದಲ್ಲೇ ಇನ್ನೊಂದು ಬಸ್ ಬಂದು ನಮ್ಮನ್ನೆಲ್ಲ ಏರಿಸಿಕೊಂಡು ಮಂಗಳೂರನ್ನು ತಲುಪಿತು.ಸಂಜೆ ೬ :೩೦ ರ ಸಮಯವಾಗಿರಬಹುದು. ಜ್ಯೋತಿ ಸ್ಟಾಪ್ ನಿಂದ ರೈಲ್ವೆ ಸ್ಟೇಷನ್ ಗೆ ೨ ಆಟೋ ಮಾಡಿ ಎಲ್ಲಾ ಸಾಮಾನು ಹಾಕಿ ಕುಳಿತುಕೊಂಡೆವು . ಅದೇ ಸಮಯಕ್ಕೆ ಯಾವುದೊ ಜಾಥ ನಡುವಲ್ಲಿ ಸಿಕ್ಕಿದರಿಂದ ೫ ನಿಮಿಷದ ಪ್ರಯಾಣ ೨೦ ನಿಮಿಷ ತೆಗೆದುಕೊಂಡಿತು. ಅಂತು ಇಂತೂ ನಾವು ಪ್ಲಾಟ್ಫಾರ್ಮ್ ತಲುಪುವಲ್ಲಿಗೆ ಟ್ರೇನು ನಮ್ಮ ಬರುವಿಕೆಗೆ ಕಾಯುತ್ತಿತ್ತು. ಹತ್ತಿ ನಮ್ಮೆಲ್ಲಾ ಸಾಮಾನನ್ನು ಜೋಡಿಸಿದೆವು . ೭:೪೦ ಮಂಗಳೂರಿನಿಂದ ಹೊರಡಬೇಕಿತ್ತು ಆ ಟ್ರೈನ್ , ೮ :೧೦ ಆಯಿತು ಇನ್ನು ಹೊರಡಿರಲಿಲ್ಲ ,ಅರವಿಂದ್ ಕುಂಬ್ಳೆ ಯವನೇ ಆದರೆ ಅಲ್ಲಿಂದ ಒಳಗೆ ಹೋಗ ಬೇಕು ,ಅವನ ತಂದೆಯವರಿಗೆ ಮನೆಗೆ ತಲುಪುವುದು ಹೊತ್ತು ಹೋದಂತೆ ಕಷ್ಟ ವಾಗಬಹುದು ಎಂದು ೭:೪೦ ಕ್ಕೆ ಇಬ್ಬರನ್ನೂ ಬೈ ಬೈ ಮಾಡಿ ಬಿಳ್ಕೊಟ್ಟಿದ್ದೆವು.

4



ಅಮ್ಮ ಮನೆ ಇಂದ ಚಪಾತಿ,ಪದಾರ್ಥ ಮಾಡಿ ರಾತ್ರಿ ತಿನ್ನಲು ಕಟ್ಟಿ ಕೊಟ್ಟಿದ್ದರು ಆ ಪೊಟ್ಟಣ ಬಿಚ್ಚಿ ನಾವಿಬ್ಬರು ತಿನ್ನಲು ಶುರು ಮಾಡುತ್ತಿದ್ದಂತೆ
"ಇಂದಿನ ಮಂಗಳೂರ್-ಬೆಂಗಳೂರ್ ಟ್ರೈನ್ ನ ಪ್ರಯಾಣ ರದ್ಧು ಗೊಳಿಸಲಾಗಿದೆ " ಎಂಬ ಅಶರೀರ ವಾಣಿ ಮೊಳಗುತ್ತಿದ್ದವು.
ತಿಂಡಿ ಇನ್ನು ಸೇರಲಿಲ್ಲ ಕೈಯಲ್ಲಿದನ್ನು ಅಲ್ಲೇ ಇದ್ದ ಬೇಡುವ ಹುಡುಗನ ಕೈಯಲ್ಲಿಟ್ಟು ಅರವಿಂದ್ ನಲ್ಲಿ "ನೀನು ಇಲ್ಲೇ ನಿಂತಿರು ನಾನು ಏನೀ ವಿಚಾರ ಕೆಳಿಬರುತ್ತೇನೆ "ಎಂದು ರೈಲಿನಿಂದ ಇಳಿದೆ , ಆಗ ಗೊತ್ತಾದಂತೆ ಅಂದು ಸಕಲೇಶಪುರ ಘಾಟಿ ಯಲ್ಲಿ ಯಾವುದೊ ಗೂಡ್ಸ್ ಗಾಡಿ ಹಳಿ ತಪ್ಪಿರುವುದರಿಂದ ಪ್ರಯಾಣ ರದ್ದುಗೊಳಿಸಲಾಗಿತ್ತು .
ಅಲ್ಲೇ ಇದ್ದ tc  ಗೆ ಕೇಳಿದಾಗ "ಟಿಕೆಟ್ ಕ್ಯಾನ್ಸಲ್ ಮಾಡಿ ಫುಲ್  ಹಣ ವಾಪಸ್ಸು ಸಿಗುತ್ತದೆ "ಅಂದ.
"ಎಷ್ಟು ದಿನದ ಒಳಗಾಗಿ ಕ್ಯಾನ್ಸಲ್ ಮಾಡಬೇಕು ?"
"ಮುಂದಿನ ೪ ದಿನದಲ್ಲಿ ಮಾಡಬಹುದು."
ಅಲ್ಲಿಂದ ಟಿಕೆಟ್ ಕೌಂಟರ್ ಕಡೆಗೆ ನಡೆದೆ ಬರೋ ಬರಿ ೨೦೦-೩೦೦ ಮಂದಿ ಟಿಕೆಟ್ ಕ್ಯಾನ್ಸಲ್ ಗೆ ಆಗಲೇ ಲೈನ್ ಗೆ ನಿಂತಿದ್ದರು :(
ಪುನಃ ಟ್ರೈನ್ ಹತ್ತಿದೆ ಪಾಪ ಅರವಿಂದ್ ನನಗಾಗಿ ಕಾಯುತಿದ್ದ .
"ಏನಾಯಿತೋ? ಟ್ರೈನ್ ಹೋಗಲ್ವಾ ? ಬೆಂಗಳೂರ್  ಹೇಗೆ ತಲುಪುವುದು?"
"ಏನಿಲ್ಲ ಹೇಳ್ತೇನೆ , ಬಾ ಹೋಗುವ ksrtc ಯ ಯಾವುದಾದರು ಬಸ್ ಸಿಗುತ್ತದ ನೋಡೋಣ... ಟಿಕೆಟ್ ಕ್ಯಾನ್ಸಲ್ ಟೈಮ್ ಸಿಕ್ಕಾಗ ಮಾಡಿದರಾಯಿತು ... ನಡಿ ಬೇಗ ಹೋಗುವ ಇಲ್ಲಾಂದ್ರೆ  ಬಸ್ ಫುಲ್ ಆಗಬಹುದು ..."
ಇಬ್ಬರಿದ್ದೆವು ಹೇಳಿದಂತೆ ೬ ದೊಡ್ಡ ದೊಡ್ಡ ಜೋಳಿಗೆಗಳು ,ಇರುವುದು ನಾಲ್ಕೇ ಕೈ !!! ಹೇಗೋ ಅಡ್ಜಸ್ಟ್ ಮಾಡಿಕೊಂಡು ಎಂಟರೆನ್ಸೆ ಗೆ ಬಂದೆವು . ನೋಡುವಾಗ ಹೊರಗೆ ಧಾರಾಕಾರ ಮಳೆ. ಉಳಿದದಿನ ೨೦-೨೫ ಆಟೋ ಕಾಯುತ್ತ ನಿಂತಿರುತ್ತಿದ್ದವು ಇವತ್ತು ಒಂದು ಇಲ್ಲ :(
ಅರವಿಂದ್ ನಲ್ಲಿ "ನೀನು ಇಲ್ಲೇ ನಿಂತಿರು ನಾನು ಮೇಲೆ ಹಂಪನಕಟ್ಟೆ ಗೆ ಹೋಗಿ ಆಟೋ ತಕೊಂಡು ಬರ್ತೇನೆ "
ಜಡೆ ಮಳೆಯಲ್ಲಿ ಒಂದೂ ಆಟೋ ದ ಪತ್ತೆ ಇಲ್ಲ. ಮೇಲೆ ಸಿಗ್ನಲ್ ಹತ್ತಿರ ಬರುತ್ತಿದ್ದಾಗ ಒಂದೂ ಆಟೋ ಸಿಕ್ಕಿತು ಅವನನ್ನು ಕರಕೊಂಡು ರೈಲ್ವೆ ಸ್ಟೇಷನ್ ಗೆ ಹೋಗಿ ಎಲ್ಲಾ ಲೋಡ್ ಮಾಡ್ಕೊಂಡು ಬಿಜೈ ತಲುಪುವಾಗ ಬರೋ ಬರಿ ೯:೧೫ ದಾಟಿತ್ತು .
ಸಾಮಾನನ್ನು ಅನ್ ಲೋಡ್ ಮಾಡಿ ಅರವಿಂದ್ ಗೆ ಕಾವಲು ನಿಲ್ಲಿಸಿ ksrtc ಟಿಕೆಟ್ ಕೌಂಟರ್ ಗೆ ಹೋದೆ .
"ಬೆಂಗಳೂರಿಗೆ ನೆಕ್ಷ್ಟ್ ಬಸ್ ಎಷ್ಟೊತ್ತಿಗೆ ?"
"ಸರ್ ೧೦:೧೦ ರ ವೋಲ್ವೋ ದಲ್ಲಿ ಒಂದೂ ಸೀಟ್ ಇದೆ ಕೊಡ್ಲಾ?"
"ಬೇಡ ಇಬ್ಬರಿದ್ದೇವೆ ..."
"೧೦:೪೦ ಕ್ಕೆ ಒಂದಿದೆ ರಾಜಹಂಸ ,೧೦:೫೦ ಕ್ಕೆ ಕೊನೆಯ ಬಸ್ ...."
"ಅರೆ ಏನಪ್ಪಾ.. ೯:೩೦ ಇಂದ ೧೦:೪೫ ರ ಮದ್ಯ ಬಸಿಲ್ಲವೇನೋ?"
"ಇಲ್ಲಾ ಸರ್ ಇವತ್ತು  ರಾತ್ರಿಯ ಮಂಗಳೂರಿಂದ ಹೊರಡುವ ೧೦ -ಉಡುಪಿ ಇಂದ ಹೊರಡುವ ೪ ,ಕುಂದಾಪುರದಿಂದ ಹೊರಡುವ ೨ ಬಸ್ ಟ್ರಿಪ್ ಕ್ಯಾನ್ಸಲ್ ಮಾಡಿ ಬೆಂಗಳೂರಿನಿಂದ ಇವತ್ತು ಹೋರಾಡುತ್ತಿದೆ ..."
"ಯಕ್ಕಪ್ಪ ಕ್ಯಾನ್ಸಲ್ ಆಯಿತು ...? ಗೂಡ್ಸ್ ಗೀಡ್ಸ್ ಏನಾದ್ರು ಬಿತ್ತಾ ಶಿರಾಡಿ ಘಾಟಿ ಯಲ್ಲಿ?"
"ಅಲ್ಲ ಸರ್ ... ನಾಳೆ ಹಬ್ಬ ಅಲ್ಲ ... ಬೆಂಗಳೂರಿನಿಂದ ಊರಿಗೆ ಬರುವ ಪ್ರಯಾಣಿಕರು ಜಾಸ್ತಿ ಇರ್ತಾರಂತ ಈ ಟ್ರಿಪ್ ಕ್ಯಾನ್ಸಲ್ ಮಾಡಿದ್ದರಷ್ಟೇ ..."
"ಸರಿ ಬಿಡಪ್ಪ ... ನಮಗೆ ೨ ಟಿಕೆಟ್ ಕೊಟ್ಟುಬಿಡು ೧೦:೪೦ ರಲ್ಲಿ "
"ಸರಿ ಸರ್ "

ಹಾಗೆ ಟಿಕೆಟ್ ಪಡಕೊಂಡು ೨ ಚೈರ್ ಮೇಲೆ ನಾವಿಬ್ಬರು ಕುಳಿತುಕೊಂಡೆವು . ಇನ್ನು ಒಂದೂವರೆ ಗಂಟೆ ಕಾಲಹರಣ ಹೀಗೆ ಮಾಡುವುದಪ್ಪಾ ಎಂದು ಆಲೋಚಿಸುತಿದ್ದೆವು.ಆಗ ಮನೆಗೆ ಕಾಲ್ ಮಾಡುವ ಆದ ಸಮಾಚಾರ ತಿಳಿಸುವ ಎಂದು ಮೊಬೈಲ್ ನಲ್ಲಿ ನಂಬರ್ ಆಯಿಸಿದೆ
"ದಯವಿಟ್ಟು ನಿಮ್ಮ ಅಕೌಂಟ್ ಅನ್ನು ರೀಚಾರ್ಜ್  ಮಾಡಿ ..."ಎಂಬ ಅಸಾಯಕ ವಾಣಿ ಬಂದಾಗಲೇ ಅರಿವಾದದ್ದು ... ಮನೆಯ ಫೋನ್ ಸರಿ ಇಲ್ಲದಿದ್ದಾಗ ನನ್ನ ಮೊಬೈಲ್ ನಲ್ಲಿನ ಎಲ್ಲಾ ಕರೆನ್ಸಿ  ಖಾಲಿ ಆಗಿರುವುದು .....
೯ :೩೦ ಅದೂ ಮಂಗಳೂರಿನ ಮಳೆಯ ರಾತ್ರಿ ಯಲ್ಲಿ ಎಲ್ಲಪ್ಪಾ ಟಾಪ್-ಅಪ್ ಅಂಗಡಿ ಹುಡುಕುವುದು ....
ಅರವಿಂದ್ ನಲ್ಲಿ "ನೀನು ಕಾವಲು ಕಾಯಪ್ಪಾ... ನಾನು ನನ್ನ ಮೊಬೈಲ್ ಗೆ ಟಾಪ್-ಅಪ್ ಸಿಗುತ್ತದಾ ನೋಡಿ ಬರ್ತೇನೆ  "ಎಂದವನೇ ಮಳೆಯಲ್ಲಿ ಅಂಗಡಿ ಹುಡುಕಲು ಆರಂಬಿಸಿದೆ.

ಹೊರಗೆ ಬಂದವನಿಗೆ ಎಲ್ಲಾ ಮುಚ್ಚಿದ ಅಂಗಡಿಗಳೇ ಎದುರಾದವು ... ಎಲ್ಲಿಂದ ಹಾಕಿಸುದಪ್ಪಾ ಟಾಪ್-ಅಪ್ ಎಂಬ ಚಿಂತೆ...
ದೂರದಲ್ಲಿ "IDEA" ದ board ನೇತುಹಾಕಿದ್ದು ಕಣ್ಣಿಗೆ ಬಿತ್ತು . ಅಲ್ಲಿಗೆ ನಡೆದೆ , "ಅಣ್ಣ ಈ ನುಂಬರ್ ಗೆ ಫುಲ್ talktime ಇರೋ ಟಾಪ್ ಅಪ್ ಹಾಕಪ್ಪ .."
"೧೧೧ ಹಕ್ಲಾ?"
"ಬೇಡ ತುಂಬಾ ದೂರ ಹೋಗುವವನಿದ್ದೇನೆ ೩೩೩ ಹಾಕು "
"ಅಣ್ಣಾ ನನ್ನ ಮೊಬೈಲ್ ನಲ್ಲಿ ಬ್ಯಾಲೆನ್ಸ್ ಇಲ್ಲ ಈಗ ೧೧೧ ಹಾಕುತ್ತೇನೆ ನಾಳೆ ಬನ್ನಿ ೩೩೩ ಹಾಕಿ ಕೊಡ್ತೇನೆ "
"ಸರಿಯಪ್ಪಾ ೧೧೧ ಹಾಕು ...."
ಅಂತು ಇಂತು ಮೊಬೈಲ್ ಗೆ ಹಣ ಹಾಕಿಸಿ ಪುನಃ ಬೆಂಚಿ ನೆಡೆಗೆ ಬಂದೆ .
ಕಾವಲು ಕುಳಿತಿದ್ದ ಅರವಿಂದ ತನ್ನ ಬ್ಯಾಗ್ ನೊಂದಿಗೆ ಏನೋ ಸರಹ ಆಡುತಿದ್ದ
"ಏನಾಯ್ತು? "
"ತರಾತುರಿಯಲ್ಲಿ ಜಿಪ್ ಕೈಗೆ ಬಂತು "
"ಅರೆ ನಮ್ಮ ದುರಾದೃಷ್ಟವೇ ...!!!! ಸರಿ ಇನ್ನು ನಮ್ಮಲ್ಲಿ ೪೦ ನಿಮಿಷ ಉಳಿದಿವೆ... ನೋಡುವ ....ಸೂಜಿ ದಾರ ಸಿಗುತ್ತದ ನೋಡಿ ಬಾ.. ಇದ್ದರೆ ಇಲ್ಲೇ ಬ್ಯಾಗ್ ರೆಪೇರಿ ಅಂಗಡಿ ತೆರೆಯುವ !!!  "
ಅವ ಅದೆಲ್ಲಿಂದಲೋ ಸೂಜಿ ದಾರ ತಕೊಂಡು ಬಂದ .ತರಾತುರಿಯಲ್ಲಿ ಬ್ಯಾಗ್ ಹೊಲಿದು ಮುಗಿಸಿದೆವು . ಮನೆಗೆ ಕರೆ ಮಾಡಿ ಎಲ್ಲಾ ವಿಷಯ ತಿಳಿಸುವ ಹೊತ್ತಿಗೆ ೧೦:೪೦ ರ ರಾಜಹಂಸ ಹಂಸನಡಿಗೆ ಯಲ್ಲಿ ನಮ್ಮತ್ತ ಬರುತ್ತಿತ್ತು. ಎಲ್ಲಾ ಜೋಳಿಗೆ ಲಗೇಜ್ ನಲ್ಲಿ ಹಾಕಿ  ನಾವಿಬ್ಬರು ಬಸ್ಸ ಏರಿದೆವು .
"ಅರೆ ಕುಡ್ವ ತು ಕಷಿ ಹಂಗಾ?? "(ಕುಡ್ವಾ ನೀನ್ ಹೇಗೆ ಇಲ್ಲಿ ?)
"ಬೆಂಗಳೂರ್ ವಚ್ಚ ಅಷಿಲೆ ಫೈ ಏಕ ಸೆಮಿನಾರ್ ಅಸ್ಸ "(ಬೆಂಗಳೂರಿಗೆ ಹೋಗಲಿಕ್ಕೆ ಇತ್ತು ನಾಳೆ ಒಂದೂ ಸೆಮಿನಾರ್ ಉಂಟು )
"ಅರೆ ಪರಬ್ ಸೊಣು ತು ಸೆಮಿನಾರ್ ಮೊಣು  ಬೆಂಗಳೂರ್ ಮಂಗಳೂರ್ ಮೊಣು ಬೋವ್ನ್ತಾ ಅಸ್ಸ ...ಜವೆಥ್ ಸೈಭಾ ..."(ಹಬ್ಬ ಬಿಟ್ಟು ಬೆಂಗಳೂರ್  ಮಂಗಳೂರ್ ಸೆಮಿನಾರ್ ಅಂತ ತಿರುಗುತಿದ್ದಿ ಯಲ್ಲ..?)
ಕುಡ್ವಾ ನಮ್ಮ batch ನವನೇ ಕಾಲೇಜ್ ನಲ್ಲಿ ಎಲ್ಲಾ ಇ ಅಂಡ್ ಇ ನ ಅಸಿಸ್ಟೆಂಟ್ ಪ್ರೊಫೆಸರ್ ಅಂತ ಕರಿಯುತ್ತಿದ್ದರು.ಇನ್ಫೋಸಿಸ್ ನಲ್ಲಿ ತನ್ನ ಬುದ್ದಿವಂತಿಗೆ ಮತ್ತು ಮಾತಿನ ಚಾಣಿಕ್ಷತೆ ಇಂದ ಆಯ್ಕೆ ಆಗಿದ್ದ.
"ಸೋಡಿ ತು ಇತ್ತೇ ಬೆಂಗಳೂರ್ ಸಾಂಗ್"(ನೀನ್ಯಾಕೆ ಬೆಂಗಳೂರ್ ಹೇಳು )
"ಕಂಯಿ ನಾ ...ಜಲ್ಲೆ ಅಮ್ಗೆಲೇ ಮಂಗಳೂರ್ ರುಣ್"(ಏನೂ ಇಲ್ಲ ...ನಮ್ಮ ಮಂಗಳೂರ್ ನ ಋಣ ಮುಗಿಯಿತು )
"ಏನಾಯಿತು?"
"ಏನಿಲ್ಲ ಕಂಪನಿ ಜೋಯಿನಿಂಗ್  ಆಗಬೇಕು ನಾಡಿದ್ದು ೨೬ ಕ್ಕೆ "
"ಹೋ ಕಾಂಗ್ರಟ್ಸ್,ನೀನಂತು ಭಲೇ ಅದೃಷ್ಟವಂತ !!! ನಾವು ನೋಡು ಇನ್ನೂ ಕಾಯುತ್ತ ಕುಳಿತುಕೊಂಡಿದ್ದೇವೆ ... ನಮ್ಮ ನಂಬರ್ ಯಾವಾಗ ಬರುವುದೋ..?"
"ಅದೃಷ್ಟವಂತ " !!! ಈ ಮಾತಿನ ಅರ್ಥ ಅವತ್ತು ನಮಗಿಂತ ಅರ್ಥ ಮಾಡಿಕೊಂಡವರು ಬೇರೆ ಯಾರು ಇರಲಿಕ್ಕಿಲ್ಲ

"ಅದೃಷ್ಟವಂತ !!! " ಈ ಶಬ್ದ ಕೇಳುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಪ್ರಶ್ನಾತೀತ ನೋಟ ಪ್ರಾರಂಭವಾಯಿತು."ಅದೃಷ್ಟ"ನನ್ನನ್ನು ಇನ್ನು ಯಾವ ಯಾವ ಶೂಲಕ್ಕೆ ಗುರಿಮಾಡುವುದೋ ?ಯಾವ ವಿನೋದ ಕೊಡುವುದೋ ? ಎಂಬ ಎಲ್ಲ ವಿಚಾರಗಳು ತಲೆಯಲ್ಲಿ ಸವಾರಿ ಮಾಡಲಾರಂಬಿಸಿತು.

5



ನಾನು ಅರವಿಂದ್ ಕುಂಬಳೆಯಲ್ಲಿ ಏಳನೇ ತರಗತಿಯವರೆ ಒಟ್ಟಿಗೆ ಓದಿದ್ದೆವು,ಬಳಿಕ ಬಾಳಿನ ದಾರಿಯ ಎರಡು ಕವಲಾಗಿ ಒಡೆದು ಹೋಗಿದ್ದೆವು, ಅದೇನೋ ಹೇಳ್ತಾರಲ್ಲ ಭೂಮಿ ಗುಂಡಗಿದೆ ,ಇಂದಲ್ಲ ನಾಳೆ  ಸಿಕ್ಕಲೇ ಬೇಕು, ಹಾಗೆ ೮ ವರುಷದ ಬಳಿಕ ನಾನೂ ಅರವಿಂದ್ ಅದೇ campus interview ನಲ್ಲಿ   ಭೇಟಿ  ಆಗಿದ್ವಿ.ಶಾಲಾದಿನಗಳಲ್ಲಿ ತುಂಬಾ ನಿಕಟದ ಗೆಳೆಯ ರಾಗಿದ್ವಿ, ಈಗ ಅದೃಷ್ಟ ನೋಡಿ ಮತ್ತೆ ಪುನಃ ಗೆಳೆಯರಾದ್ವಿ. ನಡುವಿನ ೮ ವರುಷದ ಮಾತುಗಳು ಹಲವಿದ್ದವು. ಹಿಂದಿನ ಸೀಟಿನಲ್ಲಿ ಕುಳಿತು ನಾವಿಬ್ಬರು ಮಾತನಾಡುತ್ತಾ ಕುಳಿತ್ತಿದ್ದರೆ, ಮುಂದಿನ ಸೀಟಿನಲ್ಲಿ ಕುಡ್ವಾ ಮಾರೆನೆ ದಿನದ ಸೆಮಿನಾರ್ ಗೆ ತಯಾರಿ ಮಾಡುತ್ತಿದ್ದ.

೧೨:೩೦ ಆಗುತ್ತಿದ್ದಂತೆ ಕುಡ್ವಾ "ಗುಡ್ ನೈಟ್ , ನಾನು ಮಲಗುತ್ತೇನೆ ... ನಿಮ್ಮ ಮಾತು ಹಿಡಿರಾತ್ರಿ ಮುಂದುವರಿಯುವಂತಿದೆ, ಮುಂದುವರಿಸಿ ..."ಎಂದು ತನ್ನ ಸೀಟ್ ಮೇಲಿನ ಲೈಟ್ ಆಫ್ ಮಾಡಿ ನಿದ್ದೆಗೆ ಜಾರಿದ.ನಮ್ಮ ಮಾತು ಹೀಗೆ ಮುಂದುವರಿಯುತ್ತಲೇ ಇತ್ತು, ಇಬ್ಬರು ಸೇರಿ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಿದ್ದೆವು.

ಇಬ್ಬರ ನಡುವಿನ ಆ ದಿನದ ಓದಿನ ನಡುವಿನ ಸ್ಪರ್ಧೆ, ಸಣ್ಣ ಕಾರಣಕ್ಕೆ ಜಗಳವಾಡಿ ಮಾತು ಮುರಿಸಿಕೊಂಡ ಗಳಿಗೆಗಳು, ಶಾಲೆಯ ಪಕ್ಕದ ಮನೆಯಲ್ಲಿನ ಬೋಗರಿ ಕೊಯ್ಯಲು ಹೋಗಿ ಸಿಕ್ಕಿ ಬಿದ್ದ ಕಥೆ, ಶಾಲೆಯಲ್ಲಿನ sister  ನಮ್ಮ ಬೆಗೆಗಿದ್ದ ಅಪಾರ ನಂಬಿಕೆ,ಎಲ್ಲಾ ನೆನಪಾಗುತ್ತಿದ್ದಂತೆ ಆ ಸಂಜೆ ಪಟ್ಟ ಎಲ್ಲಾ ಕಷ್ಟಗಳೆಲ್ಲವು ಮರೆಯಾಯಿತು.

ಅರವಿಂದ್ "ಬಳಿಕ ಶಾಲೆಗೇ ಹೋಗಿದ್ದಿಯ ?"
"ಹುಂ"
"ಯಾವಾಗ ?"
"ಸೆಕೆಂಡ್ ಯೀರ್ puc ಯಲ್ಲಿ ಇರಬೇಕಾದರೆ cet ಕೌನ್ಸಿಲಿಂಗ್ ಗಾಗಿ ಸ್ಟಡಿ ಸರ್ಟಿಫಿಕೇಟ್ ತಕ್ಕೊಳಲ್ಲಿಕ್ಕೆ ಹೋಗಿದ್ದಪ್ಪಾ ... ಆ ಬಳಿಕ ಹೋಗಿಲ್ಲ..."
"ನಾನು ಅಂದೇ ಲಾಸ್ಟ್ :("
"ಈಗ ಎಲ್ಲಾ ಹೊಸ ಟೀಚೆರ್ಸ್ , ಸಿಸ್ಟರ್ಸ್, ಮೇಷ್ಟ್ರು ... ನಮ್ಮ ಪರಿಚಯದ ಹಳೆ ೫-೬ ಮಂದಿ ಯಷ್ಟೇ ಇದ್ದಾರೆ ..."
"ಹುಂ, ಶಾಲೆಯ ಆ ದಿನದ ಬೇರೆ ಯಾರು ಗೆಳೆಯರು ಇನ್ನೂ ನಿನ್ನ ಕಾಂಟಾಕ್ಟ್ ನಲ್ಲಿ ಇದ್ದಾರ? "
"ಹುಂ, ರಾಘವೇಂದ್ರ ,ಉದಯ್ ನಮ್ಮ ಕಾಲೇಜ್ ನಲ್ಲೇ ಇಂಜಿನಿಯರಿಂಗ್ ಮುಗಿಸಿದರು "
"ಈಗ ಅವರು ಏನ್ ಮಾಡ್ತಾ ಇದ್ದಾರೆ?"
"ಈಗ ಊರಲ್ಲಿ ಇದ್ದಾರೆ, ಬರುವ ತಿಂಗಳು ಬೆಂಗಳೂರ್ ಗೆ ಹೋಗ್ತಾರಂತೆ, ಕೆಲಸ ಹುಡುಕುವ ಕೆಲಸ ಮಾಡಬೇಕಲ್ಲ ಅಂತಿದ್ದ ರಾಘು ನಿನ್ನೆ :( "
"ಇದರಲ್ಲಿ ನಾವು ಅದ್ರುಷ್ಟವಂತರಪ್ಪಾ.... ಕೆಲಸ ಹುಡುಕುವ ಕೆಲಸ ತಪ್ಪಿತು !!!"
ಪುನಃ ಮುಗುಳ್ನಗೆ ಅದೇ ಶಬ್ದ ಕೇಳಿದಾಗ :)


"ಅವರನ್ನು ಬಿಟ್ಟು?"
"ನಿನ್ನಂತವರು ೪-೫ ಮಂದಿ campus ದಿನ , ಮತ್ತೆ ಗೆಳೆಯರಾದರು, ಅಂದಿನಿಂದ ಮೊಬೈಲಿನಲ್ಲಿ ಮೆಸ್ಸೇಜ್ ಮಾಡ್ತಾರೆ...  ",ನಮ್ಮ ಕಾಲೇಜ್ ನಲ್ಲಿ ಪೂಲ್ campus ಆಗ್ತಿತ್ತು, ಅದರಿಂದ ಕಳೆದು ಹೋಗಿದ್ದ ಹಲವು ಫ್ರೆಂಡ್ಸ್ ಮತ್ತೆ ಸಿಗುವ ಅವಕಾಶ ಕಾಲೇಜ್ ಕಲ್ಪಿಸಿ ಕೊಟ್ಟಿತ್ತು.
"ಮತ್ತೆ ಆರ್ಕುಟ್ ನಲ್ಲಿ?"
"ಇದ್ದಾರೆ .. ಆರ್ಕುಟ್ ಗೆ ತುಂಬಾ ಥ್ಯಾಂಕ್ಸ್ ಹೇಳ್ಬೇಕಪ್ಪಾ ... ಅದೆಷ್ಟೋ ಮರೆತು ಹೋದ  ಮುಖಗಳನ್ನು ನೆನಪಿಸಿಕೊಟ್ಟಿದೆ.. "
"ನಾವು ಇಂಜಿನಿಯರಿಂಗ್ ಗೆ ಬಂದು ೪ ವರುಷ ಹಾಳುಮಾಡಿ ಕೊಂಡ್ವಿ... ತುಂಬಾ ಮಂದಿದ್ದು ಕಳೆದ ವರ್ಷವೇ ಓದು ಮುಗಿಸಿ ಕೆಲಸದಲ್ಲಿದ್ದಾರೆ .."
"ಹುಂ , ಕೆಲವರು ಓದು ಮುಗಿಸಿ ಕೆಲಸದಲ್ಲಿದ್ದಾರೆ.. ಹಲವರು ಓದು ನಿಲ್ಲಿಸಿ ಕೆಲಸ ದಲ್ಲಿದ್ದಾರೆ ... "
"ಉರಲ್ಲಿನ ಹೆಚ್ಚಿನ ಹುಡುಗರು ನಿನಗೆ ಇಂದೂ ಸಿಗ್ತಾ ಇರಬಹುದು ...ನಿನದಂತು ಪೇಟೆಯಲ್ಲಿಯೇ ಮನೆ ನೋಡು "
"ಹುಂ ,ತುಂಬಾ ಮಂದಿ ಅಂಗಡಿ ಕೆಲಸಕ್ಕೆ, ಗಾರೆ ಕೆಲಸಕ್ಕೆ ,ಗರೆಜ್ ಸೇರಿಕೊಂಡಿದ್ದಾರೆ .. ಪಾಪ ಹೊಟ್ಟೆ ಪಾಡು ನೋಡು ... ಆದರೆ ಸಿಕ್ಕಾಗ ಮಾತಾಡ್ತಾರೆ .. ಹಿಂದಿನ ದಿನಗಳನ್ನು ಮೆಲುಕು ಹಾಕ್ತಾರೆ ..."

ಹೀಗೆ ನಡೆಯುತ್ತಿತ್ತು ನಮ್ಮ ಮಾತು, ಬಸ್ಸು ಉಪ್ಪಿನಂಗಡಿ ತಲುಪಿತ್ತು.ಡ್ರೈವರ್ ಹೋಗೆ ಆಡಿಸಲು ಬಸ್ಸು ನಿಲ್ಲಿಸಿದ್ದರು, ನಾವಿಬ್ಬರು ಬಸ್ಸಿಂದ ಇಳಿದು ಫ್ರೆಶ್ ಆದೆವು.
ಹೊರಗೆ ಮಳೆನಿಂತ ಪ್ರಶಾಂತ ವಾತಾವರಣ,
ನಾನು "ಇಲ್ಲಿಗೆ ನಮ್ಮೆಲ್ಲಾ ದುರಾದೃಷ್ಟ ಕೊಚ್ಚಿ ಹೋಗಲಿ,ನಮ್ಮಲ್ಲಿ ಅದೃಷ್ಟದ ಕಳೆ ಮುಡಲಿ"
"ಹುಂ. ಇನ್ನು ಏನು ಪರೀಕ್ಷೆ ಬೇಡಪ್ಪ... ಸುಖವಾಗಿ ಬೆಂಗಳೂರು ತಲುಪಿದರೆ ಸಾಕು "
ಮತ್ತೆ ಬಸ್ ಹತ್ತಿ ಕುಳಿತು ಕೊಂಡೆವು, "ಸರಿಯಪ್ಪಾ ಇನ್ನು ಮಲಗುವ ತುಂಬಾ ಹೊತ್ತಾಯ್ತು "
"ಗುಡ್ ನೈಟ್ .. ಒಳ್ಳೆ ಕನಸೇ ಬಿಳ್ಲಿ... "ಅದೃಷ್ಟದ್ದು!!!" "
ಮತ್ತೆ ನಗೆ .

6



ಇಬ್ಬರು ಹಾಗೆ ನಿದ್ದೆಗೆ ಜಾರಿದೆವು, ಅರವಿಂದ್ ಗೆ ನಿದ್ದೆ ಹತ್ತಿತು. ನಾನು ಕನಸು ಕಾಣುತ್ತ ಇದ್ದೆ, ಮತ್ತೆ ೧೦-೨೦ ನಿಮಿಷ ಹೋಗಿರಬಹುದು, ಸರಿ ನಿದ್ದೆ ಬಂದಿರಲ್ಲಿಲ್ಲ,ಬಸ್ ಪುನಃ ಹೈವೇ ಬಿಟ್ಟು  ಬಳಿಯ ಆಲದಮರದ ಕೆಳಗೆ  ಹೋಗಲಾರಂಬಿಸಿತು... ನಾನೂ ಅದೃಷ್ಟ ಮತ್ತೆ ಪಗಡೆ ಎಸೆದಿದೆ ಎಂದು ಅಂದುಕೊಂಡೆ,
ಅನಿಸಿಕೆ ಸರಿಯಾಗಿಯೇ ಇತ್ತು !!!!
ಬಸ್ ಅಲ್ಲೇ ನಿಂತು ಬಿಟ್ಟಿತು :(
ಬ್ರೇಕ್ ಹಾಗುತ್ತಿದ್ದಂತೆ ಅರವಿಂದ್ "ಏನಾಯ್ತೋ? ಮತ್ತೆ ಎನಾದ್ರಾಯ್ತ?"
ಮತ್ತೆ ನಗೆ !!!!
ನಾನು "ನಾನು ನಿಂಗೆ ನಿದ್ದೆ ಬಂದಿದೆ ಅಂದ್ಕೊಂಡಿದ್ದೆ..."
"ಇಲ್ಲ ನಿದ್ದೆ ಆದರು ಹೇಗೆ ಬರುತ್ತೆ ... ನಾವು ಜೀವನದ ಇಂಥ ಮಜುಲಲ್ಲಿ ನಿಂತಿರುವಾಗ? ಅದೇನೇನೋ ಆಲೋಚನೆ ಬರುತಿತ್ತು "
"ನಂದು ಅದೇ ಕಥೆ !!! ಸರಿ ನೋಡಿ ಬಿಡೋಣ ಏನಾಯ್ತಂತ ...."
ಇಬ್ಬರು ಕೆಳಗಿಳಿದೆವು.೫-೬ ಮಂದಿ ಆಗಲೇ ಬಸ್ಸಿಂದ ಇಳಿದಿದ್ದರು . ಅವರಿಗೂ ನಿದ್ದೆ ಹತ್ತಿರಲಿಕ್ಕಿಲ್ಲ ...ಅವರು ನಮ್ಮಂತೆ ಅದೃಷ್ಟದೊಂದಿಗೆ ಆಡಿದವರಿರಬೇಕು !!!!
ಅವರಲ್ಲೊಬ್ಬ "ದಾದ ಅಂಡೆ ??"(ಏನಾಯ್ತು?)
ಡ್ರೈವರ್ "ಬುಸ್ಸದ ಬ್ರೇಕ್ ಆಯಿಲ್ ಲೀಕ್ ಅವೊಂದಿಥಂದ್ ತೊಜೊಡು ಬ್ರೇಕ್ ಥಾಗೊಂದಿಜ್ಜಿ "(ಬುಸ್ಸನ ಬ್ರೇಕ್ ಆಯಿಲ್ ಲೀಕ್ ಆಗ್ತಿತ್ತು ಇರಬೇಕು,ಈಗ ಬ್ರೇಕ್ ತಾಗ್ತಾ ಇಲ್ಲ !!!)
"ಇತ್ತೆ ದಾದಾ ಮಲ್ಪುನು ?"(ಈಗೇನು ಮಾಡುವುದು ?)
"ಘಾಟಿ ಅತ್ತೆ ,,, ರಿಸ್ಕ್ ದಾಯೆ ದೆಪ್ಪುನು ? ಅಂಚ ನಾನಲ ಈ ರೂಟ್ ಡ್  ೪ ಬಸ್ ಬರ್ರೆ ಉಂಡು, ಎಂತು ಅಡ್ಜಸ್ಟ್ ಮಳ್ತ್ಹೊದ್ ಪೋಯಿ ಬೆಂಗಳೂರ್ ಗ್ "
(ಘಾಟಿ ಅಲ್ಲ .. ರಿಸ್ಕ್ ಯಾಕೆ ? ಈ ರೂಟ್ ನಲ್ಲಿ ಇನ್ನು ನಮ್ಮ ೪ ಗಾಡಿ ಬರುವುದಿದೆ, ಹೇಗಾದರು ಅಡ್ಜಸ್ಟ್ ಮಾಡಿ ಬೆಂಗಳೂರ್ ಸೇರಿದರಾಯಿತು  :( )

ಇಬ್ಬರ ಮುಖದಲ್ಲಿ ಮತ್ತೆ ಮರೆಯಾದ ಹುರುಪು ಪುನಃ ಮುಡಲಾರಂಬಿಸಿತು.
ಇಬ್ಬರು ಬಸ್ ಹತ್ತುಕೊಂಡ್ವಿ, ನನ್ನನ್ನು ನೋಡುತಿದ್ದಂತೆ ನಿದ್ದೆಯಿಂದ ಎದ್ದ ಕುಡ್ವಾ "ಕಸ್ಸ್ ಜಲ್ಲೆ?"(ಏನಾಯ್ತು?)
"ಬಸ್ ಚೇಂಜ್ ಕೊರ್ಕ ಕೈ "(ಬಸ್ ಚೇಂಜ್ ಮಾಡಬೇಕಂತೆ )
ಬಸ್ಸಲ್ಲಿದ್ದ ಒಂದು ಕೇರ್ ಬ್ಯಾಗ್ ತಕೊಂಡು ಇಬ್ಬರೂ ಇಳಿದ್ವಿ. ಲುಗ್ಗೆಜ್ ನಲ್ಲಿದ್ದ ೬ ಪೇಟರ ಕೂಡ ಇಳಿಸಿ ಕೊಂಡ್ವಿ :)

ಮತ್ತೆ ಅದೇ ಕೆಲಸ ದಾರಿ ಕಾಯುವುದು!!!
 ಇಗಲಂತೂ ಮಳೆ ನಿಂತ ಪ್ರಶಾಂತ ವಾತಾವರಣ.ಮುವರು ಮಾತಾಡುತ್ತ ನಿಂತೆವು ಜೊತೆಯಲ್ಲಿ ಬಸ್ಸಲ್ಲಿದ್ದ ೩೫ -೪೦  .೧೦ ನಿಮಿಷ ಕಳೆಯುತ್ತಿದ್ದಂತೆ ಒಂದು ksrtc ಬಸ್ ಬಂತು ಅದು ಸಲ್ಪ ದೂರದಲ್ಲಿ ನಿಂತಿತು.ನಾವಿಬ್ಬರು ಅದನ್ನು ಹತ್ತುವ ಪ್ರಯತ್ನಕ್ಕೆ ಹೋಗಲಿಲ್ಲ ಇದ್ದದ್ದು ಅದರಲ್ಲಿ ಕೇವಲ ೬ ಮಂದಿಗೆ ಜಾಗ,ಇಲ್ಲಿ ನಾವಿರುವುದು ೪೫ ಮಂದಿ :(

ಕೈಯಲ್ಲಿ ಬ್ಯಾಗ್ಸ್ ಇಲ್ಲದ ೬ ಅದೃಷ್ಟವಂತರು ಆ ಬಸ್ ಹತ್ತಿದರು, ಅದರಲ್ಲಿ ನಮ್ಮ ಕುಡ್ವಾನೂ ಒಬ್ಬನಾಗಿದ್ದ.ನಮ್ಮಿಬ್ಬರಿಗೆ ಬೈ ಬೈ ಮಾಡುತ್ತ ಮುಂದಿನ ವೃತ್ತಿ ಜೀವನಕ್ಕೆ "ಆಲ್ ದಿ ಬೆಸ್ಟ್ " ಹೇಳಿದ
ನಾನು "ವೃತ್ತಿ ಜೀವನ ಇನ್ನು ಸ್ಟಾರ್ಟ್ ಅಗಿಲ್ಲಪ್ಪಾ.. ಏನಿದ್ದರು ಈ ಪ್ರಯಾಣಕ್ಕೆ  ಶುಭಕೋರು... " ಎಂದೆ.

ನಾವಂತು ನಮ್ಮ ೬ ಜೋಳಿಗೆಯ ಜೋಪಾಸನೆ ಯಲ್ಲಿದ್ದರೆ ಪಾಪ ಇಬ್ಬರಂತು ಬೆಂಗಳೂರಿಗೆ ೨ ಹಾಸಿಗೆಯನ್ನು ಕೊಂಡುಹೋಗುವ ಹುಮ್ಮಸ್ಸು ಮಾಡಿದ್ದರು , ಅದು ಈ ಮಳೆಗಾಲದಲ್ಲಿ :(
ಅವರಲ್ಲೊಬ್ಬ "ಮಳೆ ಬಾರಾ ದಿದ್ದರೆ ಸಾಕು ಇಲ್ಲಾಂದ್ರೆ ಈ ಹಾಸಿಗೆ ನೀರುಕುಡಿದು ಎಮ್ಮೆ ಅಂತೆ ಆಗಬಹುದು"
ಅವನಿಗೆ ಹುಂ ಗುಟ್ಟಿದ ಇನ್ನೊಬ್ಬ .
ಅವರಿಬ್ಬರ ಮಾತು ಕೇಳುತ್ತಿದ್ದಂತೆ ಮುಂದಿನ ಕ್ಷಣದಲ್ಲಿ ನಮ್ಮ ಅದೃಷ್ಟ ದೊಂದಿಗೆ ಏನಾಗುತ್ತದೆ ಎಂದು ತಿಳಿದೇ  ಹೋಗಿತ್ತು.
ಮತ್ತೇನು ಹೇಳುವುದು ಈ ದಿನ ಅಂತ ಪಾಠ ಕಳಿಸಿತ್ತು ನಮ್ಮಿಬ್ಬರಿಗೆ.
ಮುಂದಿನ ೫ ನಿಮಿಷದಲ್ಲಿ ಮತ್ತೊಂದು ಬಸ್ಸು ಬಂತು , ಅದರಲ್ಲಿ ಲುಗ್ಗೆಜ್ ನಮ್ಮಷ್ಟು ತಂದಿರದವರು  ಹತ್ತಿಕೊಂಡರು.

ಈಗ ಬರೇ ೧೫ ಮಂದಿ ಅದರಲ್ಲಿ ಒಂದು ೪ ಮಂದಿಯ ಪರಿವಾರ.ಒಂದು ಸಣ್ಣ ಮಗುವಿನನೊಂದಿಗೆ ಬಂದ ಗಂಡ ಹೆಂಡತಿ, ಹಾಸಿಗೆ ಹೊತ್ತ ೨ ನವಯುವಕರು, ಒಂದು ಇಳಿವಯಸ್ಸಿನ ದಂಪತಿಗಳು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆಗ ತಾನೇ ನಿದ್ದೆಯಿಂದ ಎದ್ದ ೨ ಮಲಯಾಳಿ ಹುಡುಗಿಯರು, ಮತ್ತು ನಾವಿಬ್ಬರು !!! ಎಲ್ಲರು ಕಾಯುತ್ತಿದ್ದದ್ದು ಅದೇ ಕೊನೆಯ ಬಸ್ಸಿಗೆ.

ಈಗ ಬರುವ ಬಸ್ಸಲ್ಲಿ ಸೀಟ್ ಇಲ್ಲದಿದ್ದರೆ ಟಾಪ್ ನಲ್ಲಿ ಮಲಗಿಯಾದರೂ ಬೆಂಗಳೂರು ಸೇರಬೇಕಿತ್ತು .ಎಲ್ಲರು ಕೆಳಗಿದ್ದರು, ಕೇವಲ ರಿಟೈರ್ ಮಹಿಳೆ ಮತ್ತು ಮಗು ಬಸ್ಸಲ್ಲಿ ನಿದ್ರಿಸುತ್ತಿತ್ತು.
ನಾವಿಬ್ಬರು ಅಸಹಾಯಕ ಮುಖ ಹೊತ್ತು ನಿಂತಿದ್ದನ್ನು ನೋಡಿ ಡ್ರೈವರ್ ನಮ್ಮ ಪಕ್ಕಕ್ಕೆ ಬಂದರು.
"ದಾಲ ಪೋಡೋಡ್ಚಿ ಬಸ್ಸು ಬರು ನಾನಾ ೫ ನಿಮಿಷಡು, ಇತ್ತೇ ಕಾಲ್ ಮಲ್ದಿತ್ತೆ, ಅರುಣ್ ಪಂಡೆ ಬರೆ ೧೫ ಜನ ಉಪ್ಪುನು ಐಟ್ "(ಏನು ಹೆದರ ಬೇಡಿ , ಇನ್ನೈದು ನಿಮಿಷದಲ್ಲಿ ಬಸ್ ಬರ್ತದೆ ,ಇಗ್ತಾನೆ ಕಾಲ್ ಮಾಡಿದ್ದೆ, ಬರಿ ೧೫ ಜನರಿದ್ದಾರೆ ಅದರಲ್ಲಿ ಎಂದಿದ್ದ ಅರುಣ್)
ಹಾಸಿಗೆ ಹೊತ್ತವನಲ್ಲೊಬ್ಬ "ಅವ್ವು ಒಲ್ಥ ಬಸ್?"(ಇಲ್ಲಿನ ಬಸ್ ಅದು ?)
"ಕುಂದಾಪುರ ಡ್ಡ"(ಕುಂದಾಪುರ ದಿಂದ)

ಈ ಮಾತು ಕೇಳುತ್ತಿದ್ದಂತೆ ಎಲ್ಲರಿಗೆ ಒಮ್ಮೆಗೆ ಜೀವ ಬಂದಂತಾಯಿತು. ೨-೩ ನಿಮಿಷದಲ್ಲಿ ಇನ್ನೊಂದು ಮಳೆಯಲ್ಲಿ ನೆನೆದ ರಾಜಹಂಸ ನಮ್ಮತ್ತ ಮುಗುಳನಗುತ್ತ ಬರುತ್ತಿದ್ದಾಗ ಎಲ್ಲರು ತಮ್ಮತಮ್ಮ ಜೋಳಿಗೆ ಎತ್ತಿ ಅದರೆಡೆಗೆ ಧಾವಿಸಿದರು, ನಾವು ಅವರ ಹಿಂದೆ ನಡೆದೆವು .
ಕೊನೆಗೂ ಮಳೆ ಬರುವ ಮುಂಚೆ ಅವರ ಹಾಸಿಗೆ ಎಮ್ಮೆ ಆಗುವ ಮುಂಚೆ ಇನ್ನೊಂಧು ಬಸ್ಸ ಹತ್ತಿ ನಮ್ಮ ನಮ್ಮ ಸೀಟನ್ನು ಹುಡುಕಿಕೊಂಡಿದ್ದೆವು.
"ಅಬ್ಬ ನಮ್ಮ ಅದೃಷ್ಟ ಚೆನ್ನಾಗಿತ್ತು, ಮಳೆಬರುವ ಮುಂಚೆ ಎಲ್ಲಾ ಕೆಲಸ ಮುಗಿಸಿದೆವು  "ಎಂದ ನಮ್ಮ ಹಿಂದೆ ಕೊತ ಆ ತರುಣ;

ಬೇರೇನು ಜೋರಾಗಿ ನಕ್ಕು ಬಿಟ್ಟೆವು ಮುಂದಿನ ಸೀಟ್ನಲ್ಲಿ ಕುಳಿತ ನಾನೂ ಅರವಿಂದ್ :)
7


ರಾತ್ರಿಯ ೧ :೩೦  ಆಗಲೇ ಆಗಿತ್ತು. ಮತ್ತು ಬೆಳಗ್ಗಿನಿಂದ ಮಾಡಿದ ಶ್ರಮದಿಂದ ಮನಸಲ್ಲಿ "ದುರಾದೃಷ್ಟ"ದ ಭೂತ ಮನೆ ಮಾಡಿದ್ದರು, ಕಣ್ಣು ನಿದ್ರಾದೇವಿಯ ಗಾನ ಹಾಡಲು ಅಣಿಯಾಗುತ್ತಿತ್ತು.
ಅರವಿಂದ್ ಗೆ "ತುಂಬಾ ದಣಿದೆವು ಕಣೋ,ಒಂದು ದಿನ ಮುಂಚೆನೇ ಹೊರಟದ್ದು ಒಳ್ಳೆದಾಯ್ತು ನೋಡು,ನಾಳೆ ಫುಲ್ ಡೇ ಮಲಗಬೇಕು, ರೆಸ್ಟ್ ತಕೊಬೇಕು !!!"
"ಹೂಂ.. ಎಷ್ಟು ತಯಾರಿ ನಡೆಸಿದರೂ ಕಾಲ ಬಂದಾಗ ಆಗುದೇ ಆಗಿ ಹೋಗ್ತದೆ ಅನ್ನುದ್ದಕ್ಕೆ ನಮ್ಮ ಇಂದಿನ ಅನುಭವವೇ ಸಾಕ್ಷಿ... "
"ಸರಿಯಪ್ಪಾ ಮಲಗುವಾ, ತುಂಬಾ ತಲೆ ಕೆಡಿಸಿ ಕೊಂಡದ್ದಾಯ್ತು. ಇನ್ನಾದ್ರು ವಿಧಿ ಈ ಆಟ ನಿಲ್ಲಿಸಿದರೆ ಸಾಕು :("
"ಹೂಂ ನನಗೂ ಜೋರಾಗಿ ನಿದ್ದೆ ಬರ್ತಾ ಇದೆ "
"ಸರಿ ಗುಡ್ ನೈಟ್ "
"ಸ್ವೀಟ್ ಡ್ರೀಮ್ಸ್ "
"ಬೇಡಪ್ಪ ಯಾವುದೂ ಕನಸು ಬೇಡ, ಕಣ್ಣತುಂಬಾ ನಿದ್ದೆ ಬಂದ್ರೆ ಸಾಕು!!!"

ಹೀಗೆ ಅನ್ನುತ್ತಿದ್ದಂತೆ ಇಬ್ಬರು ನಿದ್ದೆಗೆ ಜಾರಿದೆವು. ಇಬ್ಬರು ದಣಿದ್ದೆದ್ದೆವು ನೋಡಿ ಇಬ್ಬರಿಗೂ ಕ್ಷಣ ಮಾತ್ರದಲ್ಲಿ ನಿದ್ದೆಬಂತು. ಕನಸು ಬಿದ್ದಿರಲಿಲ್ಲ !!!
೩ :೩೦ ದಾಟಿರಬಹುದು ಬಸ್ಸು ನಿಂತ್ತಿರುವಂತೆ ಅನಿಸಿತು ,ಬಹಿರ್ದೆಶೆಗೆ ನಿಲ್ಲಿಸಿರ ಬಹುದು ಅಂದುಕೊಂಡು ಮಗ್ಗುಲು ಬದಲಾಯಿಸಿ ಮಲಕೊಂಡೆ.
೫ ನಿಮಿಷ -೧೦ ನಿಮಿಷ ಆಯಿತು ಇನ್ನು ಹೋಗಲಿಲ್ಲ, ಇಗಾ ಮತ್ತೇನಾದರೂ ಆಗಿರಬಹುದು ಎಂದು ಖಾತ್ರಿ ಆಯಿತು, ಪಕ್ಕದಲ್ಲಿ ನೋಡುವಾಗ ಅರವಿಂದ್ ಇರಲಿಲ್ಲ, ಬಸ್ಸಲ್ಲಿ ಹೆಚ್ಚಿನವರು ನಿದ್ದೆಯಲ್ಲಿದ್ದರು , ಎಚ್ಚರ ಇದ್ದವರು ಕೆಳಗೆ ಇದ್ದರು, ಕಿಟಕಿಯಿಂದ ಕೆಳಗೆ ನೋಡಿದಾಗ ಹಿಂದಿನವರ ಹಾಸಿಗೆಯ ಕಟ್ಟ ರೋಡಿನ ಬದಿಯಲ್ಲಿ ಮಲಗಿಸಿದ್ದರು.
ಏನಾಯ್ತು ನೋಡುವ ಎಂದು ಸೀಟಿಂದ ಎದ್ದು ಕೆಳಗೆ ಇಳಿದೆ.

ಅರವಿಂದ್ ನನ್ನನ್ನು ನೋಡಿದವನೇ "ಎದ್ದಿಯಾ  ಏಳಿಸುದು ಬೇಡ ಅಂತ ಸುಮ್ಮನಿದ್ದೆ "
"ಈಗ ಏನಾಯ್ತು ?"
"ಈಗ ಇನ್ನೊಂದು ತೊಂದರೆ " ಅಂದಾಗ ಹತ್ತಿರದಲ್ಲೇ ಬಿಚ್ಚಿಟ್ಟಿದ್ದ ಮುಂದಿನ ಟೈರ್ ಕಾಣಿಸಿತು.
"ಅಯ್ಯೋ ದೇವರೇ ..... ಏನೆಲ್ಲಾ ಆಗ್ತಿದೆ ... ಎಲ್ಲಾ ಶನಿ ಕಾಟ ಒಂದೇ ದಿನ ಅನುಭವಿಸುತ್ತಿದ್ದೇವೆ ...."ಎಂಬ ಮಾತು ನಾನಾಡಿರಲಿಲ್ಲ ಆದರು ಎಲ್ಲರಿಗೂ ಕೇಳಿಸುವಷ್ಟು ಗಟ್ಟಿಯಾಗಿ ಹೊರ ಬಂದಿತ್ತು .

ಎಚ್ಚರ ಇದ್ದ ಎಲ್ಲರೂ ನನ್ನನ್ನೇ ನೋಡಿದರು. ಮುಜುಗರವಾಯಿತು. ಸರಿ ಎಂದು ಕೆಳಗಿಳಿದೆ. ಪಾಪ ಡ್ರೈವರ್ ಅರುಣ್ ಕುಮಾರ್ ಮತ್ತು ಕಂಡೆಕ್ಟರ್ ಪುನ್ಚರ್ ಆದ ಮುಂದಿನ ಟೈರ್ ತೆಗೆದು ಮಲಗಿಸಿದ್ದರು. ಈಗ ಬಸ್ಸನಲ್ಲಿದ್ದ ಜನರಲ್ಲಿ ಎರಡು ಪಂಗಡ ಆಗಿ ಮಾರ್ಪಾಡಾಗಿತ್ತು. ಮಂಗಳೂರಿನಿಂದ ಬಂದ ಪ್ರಯಾಣಿಕರ ಒಂದು ಪಂಗಡ,ಕುಂದಾಪುರದ ಪ್ರಯಾಣಿಕರ ಒಂದು ಪಂಗಡ. ರಿಟೈರ್ ಮಾಷ್ಟ್ರು ನಮ್ಮಿಬ್ಬರ ಪಕ್ಕದಲ್ಲಿ ನಿಂತಿದ್ದರು. ನಮ್ಮಲ್ಲಿ "ಏನಾಯ್ತು ನೋಡಿ ... ನಾಳೆ ಬೆಂಗಳೂರ್ ತಲುಪಬೇಕಾದರೆ ಬೆಳಗ್ಗಿನ ೧೦ ಗಂಟೆ ಆಗಬಹುದು, ಅಂದು ಕೊಂಡಿದ್ದೆ ಟ್ರೈನ್ ಲೇಟ್ ತಲುಪದೇ ಅಂತ ಈಗ ಅದಕ್ಕಿಂತಲೂ ತಡವಾಗಿ ನಾವು ತಲುಪುತ್ತಿದ್ದೇವೆ "
ಅರವಿಂದ್ "ನೀವೂ ಟ್ರೈನ್ ಗೆ ಟಿಕೆಟ್ ಬುಕ್ ಮಾಡಿದ್ರಾ?"
"ಹೂಂ , ಆದರೆ ಇವತ್ತು ಟ್ರೈನ್ ಕ್ಯಾನ್ಸಲ್ ಆಯಿತಲ್ಲ... ಬಸ್ ನಲ್ಲಿ ಪ್ರಯಾಣಿಸುವುದೆಂದರೆ ಈ ಇಳಿವಯಸ್ಸಿನಲ್ಲಿ ಆಗದ ಮಾತು.ಅವಳಿಗಂತೂ ಕಾಲು ನೋವು..."
" ಮಂಗಳೂರು ಬೆಂಗಳೂರು ಬಸ್ಸಲ್ಲಿ ಹೋದ್ರೆ ಕಾಲು ನೋವು ಇಲ್ಲದವರಿಗೆ ಶುರುವಾಗುತ್ತದೆ ಅಂತದ್ರಲ್ಲಿ ಪಾಪ ಅಮ್ಮನವರು"
ಮೇಷ್ಟ್ರು "ನೀವೇನು ಬೆಂಗಳೂರಿಗೆ ?"
"ಬೆಂಗಳೂರಿಗಲ್ಲ, ನಾಗ್ಪುರ್ ಗೆ  ಹೋಗಬೇಕು ..."
"ಅಂದ್ರೆ ನಾಳೆ ಬೆಂಗಳೂರಿಂದ ಟ್ರೈನಾ ?"
"ಇಲ್ಲ ಸರ್,ಹೀಗೆನಾದ್ರು ಆಗುತ್ತೆ ಅಂತಾನೆ ಒಂದು ದಿನ ಮುಂಚೆ ಹೊರಡಿದ್ದು, ನಾಡಿದ್ದು ಬೆಳಗ್ಗಿನ ಟ್ರೈನ್ "
"ಒಳ್ಳೆದಾಯ್ತು ನೋಡಿ, ಇಲ್ಲಾಂದ್ರೆ ನಾಳೆ ಎಷ್ಟು ಹೊತ್ತಿಗೆ ನಾವು ಬೆಂಗಳೂರ್ ತಲುಪುತ್ತೇವೋ ಗೊತ್ತಿಲ್ಲ ..."
"ನಾಗ್ಪುರ ದಲ್ಲಿ ಓದ್ತಾ ಇದ್ದೀರಾ ?"
"ಇಲ್ಲ, ಕೆಲಸಕ್ಕೆ ಹೋಗ್ತಾಇದ್ದಿವಿ"
"ನಾಗಪುರ ದಲ್ಲಿ ಹೇಗೆ ಕೆಲಸ ಸಿಕ್ಕಿತು , ಅಷ್ಟು ದೂರ ?"
ಇಬ್ಬರೂ"ನಮ್ಮ ಅದೃಷ್ಟ !!!!"
ನಾನು ಮಾತು ಮುಂದುವರಿಸಿದೆ "ಓದಿದ್ದು ಮಂಗಳೂರಲ್ಲೇ,ಪುನಾ ಬೇಸ್ ಕಂಪೆನಿ ನಮ್ಮನ್ನು ಸೆಲೆಕ್ಟ್ ಮಾಡಿ ನಾಗ್ಪುರಿಗೆ ಪೋಸ್ಟಿಂಗ್ ಮಾಡಿದ್ದಾರೆ ನಾಡಿದ್ದು ೨೬ ಕ್ಕೆ ಜೋಯಿನ್  ಆಗಬೇಕು "
"ಹೋ ಹಾಗೋ ?, ಮಂಗಳೂರಿನಿಂದ ಒಂದು ಟ್ರೈನ್ ಇದೆಯಲ್ಲಾ ... ಈಗ ಇದೆಯಾ ಇಲ್ಲ ಹೇಳಿ ಗೊತ್ತಿಲ್ಲಾ... ೧೦ ವರ್ಷದ ಹಿಂದೆ ಇತ್ತು "
"ಹೂಂ ಇದೆ, ಅದು ಭುದವಾರ ಬೆಳಗ್ಗೆ ತಲುಪುತ್ತದೆ,೨೬ ಭುದವಾರ ಸೊ ಜೋಯಿನಿಂಗ್ ದಿನನೇ ತಡವಾಗಿ ಆಫೀಸ್ ತಲುಪುವುದು ಬೇಡ ಹೇಳಿ ಮುಂಚಿನ ದಿನವೇ ತಲುಪಲು ಬೆಂಗಳೂರು ಮಾರ್ಗ ಆಯ್ಕೆ ಮಾಡಿದ್ದು "
"ನಿಮಗೆ ಹೇಗೆ ಗೊತ್ತು ನಾಗ್ಪುರ್ ಬಗ್ಗೆ "ಅಂದ ಅರವಿಂದ್
"ನನ್ನ ಮಗ ಇಂಜಿನಿಯರ್, ಈಗ ಲಂಡನ್ ನಲ್ಲಿದ್ದಾನೆ ಅವನಿಗೆ VREC ನಾಗ್ಪುರ್ ನಲ್ಲಿ ಸೀಟ್ ಸಿಕ್ಕಿತ್ತು, ಅಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ  , ಈಗ ಲಂಡನ್ ಸೇರಿದ್ದಾನೆ "
"ಹುಂ, ನೀವೂ ವ್ರತ್ತಿಯಲ್ಲಿದವರಂತೆ ಕಾಣುತ್ತಿರಾ? ಏನಾಗಿದ್ದಿರಿ?"
"ಮಂಗಳೂರಿನ ಒಂದು ಪ್ರಿಮರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದೆ , ೬ ವರುಷ ಮುಂಚೆ ನಿವ್ರತ್ತಿ ಹೊಂದಿದೆ "
"ಮಂಗಳೂರಿನಲ್ಲಿ ಹಬ್ಬ ಬಿಟ್ಟು ಏನು ಬೆಂಗಳೂರಿಗೆ ?"
"ಮಗಳ ಮನೆಗೆ , ಹಬ್ಬಅಲ್ಲಿ ಮಾಡುವ ಅಂತ ೨ ದಿನದ ಹಿಂದೆ ಏ ಟ್ರೈನ್ ಗೆ  ಹೋಗುವುದಂತ ಇದ್ದ್ವಿ ಟಿಕೆಟ್ ಸಿಕ್ಕಲಿಲ್ಲ ...ಹಾಗೆ ಇವತ್ತಿನ ಟಿಕೆಟ್ ಮಾಡಿದ್ದು.. ಈಗ ನೋಡಿ ಅದೃಷ್ಟ ಬಸ್ಸಲ್ಲೇ ಕಷ್ಟ ಅನುಭವಿಸುವಂತೆ ಮಾಡಿತು ,ನಾವು ಅಂದ್ಕೊಂಡ ಹಾಗೆ ಯಾವಾಗ್ಲೂ ಕಾಲ ಸಾಗುದಿಲ್ಲ ನೋಡಿ ... "
"ಹೌದು ಮಾಷ್ಟ್ರೆ ..."

ಹೀಗೆ ಮುಂದುವರೆದಿತ್ತು ಮಾತಿನ ಭರಾಟೆ , ಶಾಂತ ನಾಗಿದ್ದ ವರುಣರಾಯ ಪುನಃ ನಮ್ಮ ಮೇಲೆ ಅವನ ಪ್ರಭಾವ ತೋರಿಸಲು ಆರಂಬಿಸಿದ
"ಸರಿ ಒಳಗೆ ಕುಳಿತು ಕೊಳ್ಳುವ ಸುಮ್ಮನೆ ನೆನೆಯುವುದೇಕೆ ? ಒಳಗೆ ನಡೀರಿ ಮಕ್ಕಳೇ "
ಸರಿ ಎಂದು ಒಳಗೆ ಬಂದೆವು, ನಮ್ಮ ಬದಿಯ ಸೀಟ್ ನಲ್ಲಿ ಶ್ರೀಮತಿಯವರು ಕುಳಿತ್ತಿದ್ದರು
"ಸರಿ ಹೋಯಿತಾ? "ಅಂದರು
ಕುಳಿತು ಕೊಳ್ಳುತ್ತಾ ಮೇಷ್ಟ್ರು "ಇನ್ನೂ ಇಲ್ಲಾ..೧೦-೧೫  ನಿಮಿಷದಲ್ಲಿ ಸರಿಯಾಗಬಹುದು .. "

ಅಲ್ಲಿಗೆ ಜೋರಾಗಿ ಮಳೆ ಬರಲಾರಂಬಿಸಿತು ಎಲ್ಲರೂ ಒಳಗೆ ಬಂದ್ರು . ಬಸ್ಸ್ ಸರಿಯಾಗುವುದು ಇನ್ನು ತಡವಾಯಿತು. ಹೀಗೆ ಹೊರ ನೋಡುತ್ತಾ ಮಳೆಯ ಹನಿ ಸವೆಯುತ್ತಿದ್ದಾಗ ರೋಡಿನ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಹಾಸಿಗೆ ಕಟ್ಟು ಕಾಣಿಸಿತು.ಪಾಪ ಡ್ರೈವರ್ ಕಂಡೆಕ್ಟರ್ ಗೋಷ್ಠಿ ಮಾಡಿರಲಿಕ್ಕಿಲ್ಲ ಅಂದು ಕೊಂಡು ಹಿಂದಿನ ಸೀಟ್ ನ ನವಯುವಕರನ್ನು ನೋಡಿದೆ. ಇಬ್ಬರೂ ಗಡದ್ದಾಗಿ ನಿದ್ದೆ ಮಾಡುತ್ತಿದ್ದರು, "ಊರು ಕೊಚ್ಚಿ  ಹೋಗುತ್ತಿದ್ದರು ಮಲಗಿದ್ದಾರೆ ನೋಡಿ "ಅಂದುಕೊಂಡೆ

ನಾವಿಬ್ಬರು ಅದನ್ನು ಒಳಗೆ ಹಾಕುವ ಎಂದು ಸೀಟ್ ನಿಂದ ಎದ್ದಾಗ ಮೇಷ್ಟ್ರು "ಮಳೆಯಲ್ಲಿ ನೆನೆಯಬೇಡಿ ... ಜ್ವರ ಗಿರ ಬಂದೀತು ಜಾಗ್ರತೆ "
"ಇಲ್ಲ ಮಾಷ್ಟ್ರೆ ಬೇರೆ ಕೆಲಸ ಇದೆ" ಎಂದು ಆತುರಾತುರವಾಗಿ ಮುಂದೆ ಹೋದೆವು
ನಮ್ಮನ್ನಿಬ್ಬರನ್ನು ನೋಡಿದ ಡ್ರೈವರ್ ಅರುಣ್ ಕುಮಾರ್ "ಏನಾಯ್ತು ?"
"ಏನಿಲ್ಲಾ.. ಹಾಸಿಗೆ ...."
"ಅರೆ ಮರೆತು ಹೋಯಿತು... ಟೂಲ್ ಬಾಕ್ಸ್ ತೆಗಿಬೇಕದ್ರೆ ಹೊರಗೆ ಹಾಕಿದ್ದೆ ... ಮಳೆಯಲ್ಲಿ ನೆನೆಯಿತು ಅಂತ ಕಾಣತ್ತೆ  ...ನಾನು ಬರ್ತೇನೆ ..."
ಮುವರೂ ಇಳಿದೆವು,ಮಳೆಯಲ್ಲಿ ನೆನೆಯುತ್ತಾ ಅದನ್ನು ಲುಗ್ಗೆಜ್ ನಲ್ಲಿ ದೂಡಿದೆವು.
ಡ್ರೈವರ್ "ನೀವು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಹಕ್ಕಿದ್ದು ಒಳ್ಳೆದಾಯ್ತು ನೋಡಿ... ಇಲ್ಲಾಂದ್ರೆ ಈಗ ಫುಲ್ ನೀರು ಕುಡಿಯುತ್ತಿತ್ತು...ಸೋರಿ ಕಣ್ರೀ ನನ್ನ ತಪ್ಪು ..."
"ಅಣ್ಣಾ ಇದು ನಮ್ಮದಲ್ಲಾ .... ನಮ್ಮೊಂದಿಗೆ ನಡುದಾರಿಯಲ್ಲಿ ಈ ಬಸ್ಸಿಗೆ ಹತ್ತಿದರಲ್ಲಿ ಒಬ್ಬರದ್ದು ...."ಅಂದೆ.
"ಹೌದಾ ... ಅವರೆಲ್ಲಿ ?"
"ಮಲಗಿದ್ದಾರೆ. ಉರು ಕೊಳ್ಳೆ ಹೊಡೆದರೂ ರಾಯರು ಮಲಗುತ್ತಿದ್ದಾರೆ !!!!"
ಕೇಳುತ್ತಿದ್ದಂತೆ ಅರುಣ್ ಕುಮಾರ್ ನಕ್ಕರು, ಮತ್ತೆ ಮುವರೂ ಬಸ್ಸ ಹತ್ತಿಕೊಂಡೆವು.ಮೇಷ್ಟ್ರು ನಮ್ಮ ಕೆಲಸವನ್ನು ಕಿಟಿಕಿ ಇಂದಲೇ ನೋಡುತ್ತಿದ್ದರಂತ ಕಾಣುತ್ತೆ ನಾವು ಒಳಗೆ ಬಂದಂತೆ ತಾವು ಹೊದ್ದು ಕೊಂಡಿದ್ದ ಶಾಲು ನನ್ನ ಕೈಯಲ್ಲಿಟ್ಟು"ತಲೆ ಒರೆಸಿಕೊಳ್ಳ್ರಪ್ಪಾ, ಶೀತ ಗೀತ ಬಂದೀತು, ನಾಳೆ ಕೆಲಸಕ್ಕೆ ಸೇರುತ್ತಿದ್ದಿರಾ"
"ಧನ್ಯವಾದಗಳು ಸರ್ "
"ನೀವು ಇಳಿಬೇಕದ್ರೆ ನಿಮಗೆ ಹುಡುಗಾಟ ಅಂದು ಕೊಂಡಿದ್ದೆ ,ಉದ್ದೇಶ ಏನಂತ ಮತ್ತೆ ನಾನು ಇಲ್ಲಿಂದ ನೋಡಿದಾಗ ನಿಜದ ಅರಿವಾಯ್ತು ...ದೇವರು ಒಳ್ಳೇದು ಮಾಡ್ಲಿ ನಿಮ್ಮಿಬ್ಬರಿಗೂ "
"ಇದರಲ್ಲೇನಿದೆ ಸರ್, ಒಬ್ಬರಿಗೆ ಒಬ್ಬರು ಆಗಿ ಬರದಿದ್ದರೆ ಮನುಷ್ಯರಾಗಿ ಹುಟ್ಟಿ ಏನು ಪ್ರಯೋಜನ ?"
"ಹುಂ ... ಆದರೆ ಈಗ ಯಾರಿಗೆ  ಯಾರೂ ಇಲ್ಲ ಕಣಪ್ಪಾ.. "ಎಂದಾಗ ಅವರಲ್ಲಿದ್ದ ನೋವು ಎದ್ದು ಕಾಣುತ್ತಿತ್ತು.

ಮುಂದಿನ ೧೫ ನಿಮಿಷದಲ್ಲಿ ಮಳೆ ಪೂರ್ಣ ಶಾಂತ ಗೊಂಡಿತು. ಡ್ರೈವರ್ ನೊಂದಿಗೆ ನಾವೂ ಮೇಷ್ಟ್ರು ಮತ್ತೆ ಕೆಲವರು ಈಗ ಕೆಳಗಿದ್ದೆವು. ಡ್ರೈವರ್ ಕಂಡೆಕ್ಟರ್ ಅವರ ಕೆಲಸದಲ್ಲಿ ವ್ಯಸ್ತ ರಾಗಿದ್ದರು. ಮೇಷ್ಟ್ರು ನಮ್ಮ ಬಳಿಗೆ ಬಂದು "ನೀವಿಬ್ಬರ ಗುಣ ಮೆಚ್ಚಿದೆ "
"ಇದರಲ್ಲೇನಿದೆ ಸರ್ .. ಯಾಕೆ ಹೀಗೆ ಹೇಳ್ತಾ ಇದ್ದೀರಾ ...?"
"ಇಂದು ಹೆತ್ತ ಮಕ್ಕಳೇ ತಂದೆ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ... ಏನು ಹೇಳುವುದು ಈ ಕಾಲಕ್ಕೆ ..."ಅವರ ಮಾತಿನಲ್ಲಿದ್ದ ಅರ್ಥ ಗಾಂಭಿರ್ಯತೆ ನಮಗೆ ಅರ್ಥ ವಾಗುತ್ತಿತ್ತು.
ಅವರು ಮಾತು ಮುಂದುವರಿಸಿದರು "ಹಿಂದೆ ಹಿರಿಯರನ್ನು ಹೇಗೆ ಕಾಣಬೇಕು ಎಂದೆಲ್ಲಾ ಕಲಿಸಿಕೊಡುತ್ತಿದ್ದೆ ,ಎಷ್ಟು ಮಂದಿ ಅದನ್ನು ಅನುಸರಿಸಿದ್ದಾರೆ ತಿಳಿಯದು ...
ಆದರೆ ವಿಪರ್ಯಾಸ ನೋಡಿ ಕಡೆಯ ಮಟ್ಟಿಗೆ ನನ್ನ ಮಕ್ಕಳು ಅದನ್ನು ಅನುಸರಿಸಿಲ್ಲಾ ..."
ಇಬ್ಬರೂ ಮೌನ, ಅವ್ರು ಮುಂದುವರೆಸಿದರು "ನನಗೆ ಇಬ್ಬರೂ ಮಕ್ಕಳು , ಗಂಡುಮಗ ದೊಡ್ಡವ, ಹುಡುಗಿ ಅವನಿಗಿಂತ ೬ ವರುಷ ಸಣ್ಣವಳು, ಕಲಿಯುವುದರಲ್ಲಿ ಇಬ್ಬರೂ ತುಂಬಾ ಜಾಣರಿದ್ದರು,ನಾನಂತು ಪ್ರಿಮರಿ ಮೇಷ್ಟ್ರು ಬರುವ ಸಂಬಳ ಅಲ್ಲಿಗೆ ಅಲ್ಲಿ ಆಗುತಿತ್ತು ಆದರೆ ನಾಳೆ ನನ್ನ ತಂದೆ ಕಲಿಸಲಿಲ್ಲ ನಮ್ಮನ್ನು ಅಂತ ಮಕ್ಕಳು ಅನ್ನ ಬಾರದೆಂದು ಕಾಸಿಗೆ ಕಾಸು ಸೇರಿಸಿ ಅವರಿಬ್ಬರನ್ನು ಅವರಾಷೆಅಂತೆ ಇಂಜಿನಿಯರ್ ಮಾಡಿದೆ ,ಮಗನನ್ನು ನಾಗ್ಪುರ್ ನಲ್ಲಿ ಮಗಳನ್ನು ಮೈಸೂರ್ ನಲ್ಲಿ ಕಾಲೇಜ್ ಗೆ ಸೇರಿಸಿದೆ . ಮಗನಿಗೆ ಕಲಿಸುವಾಗ ತುಂಬಾ ಕಷ್ಟದ ದಿನವಾಗಿತ್ತು, ಅದರೂ ಮುಂದೆ ಕಷ್ಟ ಬಾರದು ಎಂದು ನಾವಿಬ್ಬರೂ ನಮ್ಮ ಎಲ್ಲಾ ಸುಖ ತ್ಯಾಗ ಮಾಡಿ ಕಲಿಸಿದೆ. ಅವನು ತುಂಬ ಜಾಣನಾದುದರಿಂದ ಓಡುತ್ತಲೇ ಕೆಲಸಸಿಕ್ಕಿತು, ಇನ್ನೇನೋ ನಮ್ಮ ಕಷ್ಟ ತೀರಿತ್ತು .... ಇನ್ನು ಮಗಳ ಜವಬ್ದಾರಿ ಇವ ಹೆಗಲಿಗೆ ತೆಗೆದುಕೊಳ್ಳುತ್ತಾನೆ ಅಂದು ಕೊಂಡಿದ್ವಿ .೨ ವರುಷ ಕೆಲಸ ಮಾಡುತ್ತಿದ್ದಂತೆ ವಿದೇಶದಿಂದ MS  ಗೆ ಆಫರ್ ಬಂತು, ವಿದೇಶಕ್ಕೆ ಕಳಿಸಲು ಇಷ್ಟ ವಿರಲಿಲ್ಲ ... ಅಲ್ಲಿನ ಬಿಳಿಯ ಹೆಂಡತಿ ಕಟ್ಟಿಕೊಂದಾನು ಎಂಬ ಭಯ ಅವನ ಅಮ್ಮನಿಗಿತ್ತು .. ಅದಕ್ಕಾಗಿ ಅವಳು ಅವನಿಗೆ ತನ್ನ ತಮ್ಮನ ಮಗಳೊಂದಿಗೆ ಮದುವೆ ಮಾಡಿಸಿದಳು .. ೨ ತಿಂಗಳಲ್ಲಿ ಅವನು ಹೆಂಡತಿಯೊಂದಿಗೆ  ವಿದೇಶಕ್ಕೆ ಹೋಗಿ ಬಿಟ್ಟ ಅವನು ಸಂಪಾದಿಸಿದ ಕಾಸು ಅವನ ಶಿಕ್ಷಣಕ್ಕೆ ಸೀಮಿತವಾಯ್ತು ...ಮಗಳಿಗಾಗಿ ಮತ್ತೆ ಸಾಲದ ಹೊರೆ ಏರಿಸ ಬೇಕಾಯ್ತು. ಎರಡು ವರ್ಷದ ಹಿಂದೆ ಅವಳದ್ದು M -tech ಮುಗಿಯಿತು.ಇನ್ನೇನಿದ್ದರೂ ಮಗಳ ಮದುವೆ ಮಾಡಿ ನಾವೂ ನಿವ್ರತ್ತಿ ಹೊಂದಿದ್ದೇವೆ ಮಕ್ಕಳೊಂದಿಗೆ ಇರುವ ಅಂದು ಕೊಂಡಿದ್ವಿ.ಮಗಂದು ಓದು ಮುಗಿಸಿ ಲಂಡನ್ ನಲ್ಲಿದ್ದ ಆಗ ಊರಿಗೆ ಕರೆದ್ವಿ "ಬೆಂಗಳೂರ್ ನಲ್ಲಿ ಮನೆ ಮಾಡುವ,ನಾವೂ ಬಂದ್ ಬಿಡ್ತೇವೆ ನಿನ್ನೊಂದಿಗೆ"  ಅಂದ್ವಿ..."
ಅದಕ್ಕೆ ಅವ "ಅಪ್ಪ ಈಗ ರೆಸೆಶನ್  ನಡೆಯುತ್ತಿದೆ ಈಗ ಇಲ್ಲಿನ ಕೆಲಸ ಬಿಟ್ಟರೆ ಭಾರತದಲ್ಲಿ ಕೆಲಸ ಹುಡುಕುವುದು ಕಷ್ಟ  ಸದ್ಯಕ್ಕೆ ಮಂಗಳೂರಿನಲ್ಲೇ ಇರಿ ಇನ್ನೆರಡು ವರುಷ ಕಳೆಯಲಿ "ಅಂದ.
ಸರಿ ಎಂದು ನಾವೂ ಹುಡುಗಿಗೆ ಮದುವೆ ಮಾಡುವ ಅಂತ ವಿಚಾರ ಎತ್ತಿದೆವು ಅದಕ್ಕೂ ಅವ ಹುಂ ಗುಟ್ಟಿದ, ಕಳೆದ ವರ್ಷ ಮಗಳನ್ನು ಮಾಡುವೆ ಮಾಡಿ ಕೊಟ್ಟೆವು. ಮದುವೆಗೂ ರೆಸೆಶನ್ ಹೇಳಿ ಮಗ ಬರಲೇ ಇಲ್ಲ ..."
"ಎರಡು ತಿಂಗಳ ಹಿಂದೆ ಫೋನ್ ಮಾಡಿದ್ದ ... ಬಳಿಕ ಫೋನ್ ಕೂಡ ಇಲ್ಲ.... ಇಬ್ಬರೂ ಮಕ್ಕಳಂತೆ ... ಸಣ್ಣವನು ೬ ತಿಂಗಳ ಮಗು ಇದ್ದಾಗ ಬಂದದ್ದು ಊರಿಗೆ ....ಈಗ ಅವನಿಗೆ ೬ ವರುಷ  "
ನಮ್ಮಿಬ್ಬರಿಗೂ ಈ ಕಥೆ ಕೇಳುತ್ತಿದ್ದಾಗ ಪಾಪ ಎಂದನಿಸಿತು, ಅವರು ಕಥೆ ಮುಂದುವರಿಸುತ್ತಿದ್ದರು "ಅಳಿಯ ಬೆಂಗಳೂರಿನಲ್ಲಿ ಒಳ್ಳೆ ಕೆಲಸದಲ್ಲಿದ್ದಾರೆ ಕಳೆದ ದೀಪಾವಳಿಗೆ ಊರಿಗೆ ಮಗಳೊಂದಿಗೆ ಬಂದಿದ್ದರು ... ತುಂಬಾ ಸಡಗರವಿತ್ತು .... ಬೆಂಗಳೂರಿನಲ್ಲಿ ಅವರು ಸ್ವಂತದ ಮನೆ ತೆಗೆದು ಕೊಂಡಿದ್ದಾರೆ ಇಬ್ಬರೇ ಇರುವುದು ..... ನನ್ನಾಕೆಗೆ ಮಗಳೊಂದಿಗೆ ಇರಲು ಇಷ್ಟ ಆದರೆ ಮಗಳ ಮನೆಯಲ್ಲಿ ಇರಬಾರದು ಎಂಬ ವಾದ ನನ್ನದು ಅದಕ್ಕಾಗಿ ಊರಲ್ಲೇ ಇದ್ದೇವೆ ..."
".... , ಈಗ ಮಗಳು ಬರಲೇ ಬೇಕು ಅಂತ ಇದ್ದಾಳೆ .... ಈಗ ಅವಳಿಗೆ ೬ ತಿಂಗಳಾಯ್ತು ...ನಮ್ಮ ಮೇಲಿನ ಮಮಕಾರಕ್ಕೆ ಅಲ್ಲ ಕರೆಯುತ್ತಿರುವುದು ಮನೆ ನೋಡಿಕೊಳ್ಳಲು ಜನ ಬೇಕಾಗಿದ್ದಾರೆ ಅದಕ್ಕೆ ನನ್ನೊಂದಿಗೆ ಇರಿ ಎಂಬ ನಾಟಕ ಶುರು ಮಾಡಿದ್ದಾಳೆ ಕಳೆದ ೨ ತಿಂಗಳಿಂದ .....ನಮ್ಮ ಮಗಳಿಗೆ ಈ ಸಮಯದಲ್ಲಿ ನಾವಿರದಿದ್ದರೆ ಯಾರೂ ಆಗಿಯಾರು ಅಂತ ಈಗ ಹೊರಟಿರುವುದು ಮಗಳ ಮನೆಗೆ .... ಇನ್ನೇನು ಮುಂದಿನ ೨ ವರುಷ ಅಲ್ಲೇ ಇರ ಬೇಕಾಗುತ್ತದೆ ... ಮಗು ದೊಡ್ಡದಾಗುವ ವರೆಗೆ ... ಬಳಿಕ ನಾವೂ ಪುನಃ ಕಾಲ ಕಸ ... ಆಗ ರೆಸ್ಸೇಶನ್ ಇಲ್ಲ ದಿದ್ರೆ ಮಗ ಊರಿಗೆ ಬಂದ್ರೆ ನೋಡುವ ಇಲ್ಲಾಂದ್ರೆ ನಾನು ಕಟ್ಟಿಸಿದ ಮನೆ ಇದೆ ಕೊನೆ ವರೆಗೆ ಅಲ್ಲೇ ಇರ್ತಿವಿ ....."
ಇಬ್ಬರಿಗೂ ಈ ಕಥೆ ಕೇಳುತ್ತಿದ್ದಂತೆ ತುಂಬ ಬೇಜಾರಾಯಿತು ... ಅರುಣ್ ಕುಮಾರ್  ಜೋರಾಗಿ ಹೊರ್ನ್ ಹೊಡೆಯುತ್ತಿದ್ದ ... ಎಲ್ಲರೂ ಬಸ್ಸ ಹತ್ತಿದೆವು.
ನಮ್ಮಿಬ್ಬರ ಮನಸಲ್ಲಿ ಈಗ ಮೇಷ್ಟ್ರ ಕಥೆನೇ ತಿರುಗುತಿತ್ತು , ಕೈಯಲ್ಲಿದ್ದ ವಾಚ್ ಆಗಲೇ ೪ ಗಂಟೆ ಬಾರಿಸಿತ್ತು


8 ಗಂಟೆ ಆಗುತ್ತಲೇ ಮನೆ ಇಂದ ಬಂದ ಮೊಬೈಲ್ ನ ವಯಿಬ್ರಶನ್ ಗೆ ನಿದ್ದೆ ಬಿಟ್ಟಿತು "ತಲುಪಿದೆಯ ಮಗ ಬೆಂಗಳೂರು ?"
"ಇಲ್ಲಮ್ಮ "
"ಯಾವಾಗ ತಲುಪುವೆ ?"
ಇಷ್ಟೊತ್ತಿಗೆ ರೋಡಿನ ಬದಿಯಲ್ಲಿದ್ದ ಮೈಲಿ ಕಲ್ಲು ೪೯ ಕಿ.ಮಿ ದೂರ ಎಂದು ತೋರಿಸುತ್ತಿತ್ತು "ಇನ್ನೂ ಒಂದೂವರೆ ಇಂದ ಎರಡು ಗಂಟೆ ಹಿಡಿಯ ಬಹುದು "
"ಸರಿ ತಲುಪಿದಮೇಲೆ ಫೋನ್ ಮಾಡು "
"ಆಯಿತಮ್ಮಾ ..."
ಮೊಬೈಲ್ ಗೆ ಎಅರ್ ಫೋನ್ ಹಾಕಿ ಹಾಡು ಹುಡುಕುತ್ತಿದ್ದಾಗ ಅಶ್ವಥ್ ಅವರ "ಬದುಕುಮಾಯೆಯ ಮಾಟ"ಹಾಡು ಸಂದರ್ಬಕ್ಕೆ ಸೂಕ್ತ ಅಂತ ಅನಿಸಿತು, ೪-೫ ಬಾರಿ ಆ ಹಾಡು ಕೇಳಿದೆ.
ಹೀಗೆ ಹಾಡು ಕೇಳುತ್ತಾ ಇರುವಾಗ ಹಿಂದಿನಿಂದ ಒಂದು ದ್ವನಿ "ಥಾಕ್ಸ್ ನಿಮಗೆ , ಮಳೆಯಲ್ಲಿ ನೀವು ನಮ್ಮ ಹಾಸಿಗೆ ಒಳಗೆ ಹಾಕುವಲ್ಲಿ ಸಹಾಯ ಮಾಡಿದರೆಂದು ಡ್ರೈವರ್ ಹೇಳುತ್ತಿದ್ದರು ಈಗ ಟೀ ಗೆ ನಿಂತಾಗ ..."
"ಇರಲಿ ಬಿಡಿ "

ಅರೆ ನಾನ್ಯಾವಾಗ ಕುಂಬಕರ್ಣ ನಾದೆನಾಪ್ಪ ಎಂಬ ಪ್ರಶ್ನೆ ಎದ್ದಿತು.
ಬಸ್ ನಿಂತು ಎಲ್ಲಾ ಟೀ ಕುಡಿದು ಬಂದರು ನಮ್ಮಿಬ್ಬರಿಗೆ ಎಚ್ಚರ ವಾಗಿರಲಿಲ್ಲ ಅಷ್ಟು ಸುಸ್ತಾಗಿದ್ದೆವು ನಾವು ಆ ಪ್ರಯಾಣದಲ್ಲಿ. 
೧೦ :೧೦ ರ ಸುಮಾರಿಗೆ ಬಸ್ ಮೆಜೆಸ್ಟಿಕ್ ಗೆ ಬಂತು.ಬಸ್ಸ ಬರುತ್ತಿದ್ದಂತೆ ಅಲ್ಲೇ ನಿಂತಿದ್ದ "ಹೊಂಡ ಸಿಟಿ" ಇಂದ  ಹೆಣ್ಣುಮಗಳೊಬ್ಬಳು ನಗುತ್ತಾ ಬರುತ್ತಿದ್ದಳು ಅವಳನ್ನು ನೋಡಿದರೆ ಮೇಷ್ಟ್ರ ಮಗಳೆಂದು ಯಾರೂ ಬೇಕಾದರೂ ಹೇಳಬಹುದು ಅಪ್ಪನ ಅಚ್ಚನ್ನೇ ಹೊಲುತ್ತಿದ್ದಳು.ನಾನು ಅರವಿಂದ್ ಅವರ ಚೀಲವನ್ನು ಅವರ ಕಾರ್ ನಲ್ಲಿ ಇರಿಸಿದೆವು,
ಮಗಳು ಅಮ್ಮನಿಗೆ "ಹೇಗಿದ್ದಿಯಮ್ಮ ..? ಊರಿಂದ ಮಗಳಿಗೆ ಏನು ತಂದಿದ್ದಿಯಾ ?"
"ಕೆಸುವಿನ ಎಲೆ ,ಕಣಿಲೆ, ಹಲಸಿನ ಸೂಳೆ,ಉಪ್ಪಿನಕಾಯಿ ಎಲ್ಲಾ ಇದೆ ಆ ನೀಲಿ ಚೀಲದಲ್ಲಿ "
"ಎಷ್ಟು  ಸಮಯವಾಯ್ತು ಅವನ್ನೆಲ್ಲಾ ತಿಂದು ...!!!!"
ಅವಳ ಮಾತಿಂದಲೇ ಅರ್ಥವಾಯ್ತು ಎಷ್ಟು ಬೇಗ ಇವರು ಕಾಲ ಕಸವಾಗಲಿರುವವರೆಂದು.
"ಸರಿ ಮಾಷ್ಟ್ರೆ ಮುಂದೆ ಎಂದಾದರು ಸಿಗುವಾ.."ಎನ್ನುತ್ತಾ ನಾವಿಬ್ಬರೂ ಈಚೆ ತಿರುಗಲು ಅವಳು "ಅಪ್ಪಾ ಅವರು ನಿಮ್ಮ ಸ್ಟುಡೆಂಟಾ..?"
"ಅಲ್ಲ ಕಣಮ್ಮಾ ... ಪ್ರಯಾಣದ ನಡುವೆ ಬೇಟಿ ಆದವರು... "
ಅವಳು ಅದಕ್ಕೆ "ನಿಮಗೆ ಎಷ್ಟು ಬಾರಿ ಹೇಳಬೇಕು ? ಪರಿಚಯವಿಲ್ಲದವರಲ್ಲಿ ಹೆಚ್ಚು ಸಲಿಗೆ ಇಡ ಬೇಡಿ ಅಂತ... ಹೇಳಿದರೆ ನಿಮ್ಮಿಬರಿಗೆ ಗೊತ್ತಾಗುವುದೇ ಇಲ್ಲಾ ಅದಕ್ಕಾಗಿಯೇ ಅಣ್ಣ ಇನ್ನೂ ಲಂಡನ್ ನಲ್ಲಿರುವುದು .... "
ನಮ್ಮಿಬ್ಬರಲ್ಲಿ ಮಕ್ಕಳು ನೋಡಿಕೊಳ್ಳುವ ಬಗೆಯೋ ಇದು ಎಂಬ ಭಾವನೆ...
ಅಷ್ಟರಲ್ಲಿ ನನ್ನ ಮಾಮನ ಕಾರ್ ಅದರ ಹಿಂದೆ ಅರವಿಂದ್ ನ ಮಾಮನ ಕಾರ್ ಬಂತು, ಇಬ್ಬರೂ ತಮ್ಮ ತಮ್ಮ ಜೋಳಿಗೆ ಅದರಲ್ಲಿರಿಸಿ
"ಸರಿ ನಾಳೆ ಸಿಗೋಣ ..."
"ಸರಿ ಬೈ ಬೈ "
ಅರವಿಂದ್ ನ ಕಾರ್ ಬಿಟ್ಟಿತು. ನಾನು ಮಾಮ ಹೋಗಿ ಹಿಂದಿನ ದಿನದ ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡಿದೆವು , ಲುಗ್ಗೆಜ್ ಕ್ಲಾಕ್ ರೂಮಲ್ಲಿ ಇಟ್ಟು ನಿಶ್ಚಿಂತೆಯಲ್ಲಿ ಮನೆ ಸೇರಿದೆವು.


***************************************************************************************************************************************************

No comments:

Post a Comment