Saturday, January 22, 2011

ನಿರೀಕ್ಷೆ

ನಿರೀಕ್ಷೆ




ಬರಿದಾಗಿದೆ ಮನೆಯಂಗಳ
ನಿನ್ನಯ ಆಟದ ದಿನವ ನೆನೆಯುತಲಿದೆ
ಇನ್ನೆಂದೂ ಬಾರದ ದಿನದ ದಾರಿ ನೋಡುತಲಿದೆ
ಬರಿದಾಗಿದೆ ನನ್ನೀ ಮನದಂಗಳ
ನಿನ್ನ ಆ ಮುಗ್ದತೆಯ ನಗುವ ಮೊಗ ಕಾಣುತಿದೆ
ಅಮ್ಮ ನಾ ನೀ ಬರುವ ದಾರಿ ನೋಡುತಲಿರುವೆ

ನನ್ನ ಮೇಲೆ ನೀನಿತ್ತ ಆ ಪುಟ್ಟ ಹೆಜ್ಜೆ
ನಾಲ್ಕನೆ ಹೆಜ್ಜೆಗೆ ಬಿದ್ದಾಗ ಅತ್ತ ಆ ಅಳು
ಮುಂದಿನ ಕೋಟಿ ಹೆಜ್ಜೆಗೆ ಸ್ಪೂರ್ತಿ ನೀಡಿತ್ತಂದು
ಮನೆ ತುಂಬಾ ಗಿಲ್-ಗಿಲ್ ಅನ್ನುತ್ತಿದ್ದ ಆ ಗೆಜ್ಜೆ
ಆರು ತುಂಬಿದರೂ ಹೆಣ್ಣಂತೆ ಅದ ಹಾಕಿ ಸಂಭ್ರಮಿಸುವ ಆ ಲಜ್ಜೆ
ದನಿಯ ಮರೆತು ಮೌನವಾಗಿ ಮೂಲೆ ಪೆಟ್ಟಿಗೆಯಲಿ ಬಿದ್ದಿಹುದು ಇಂದು

ಪಕ್ಕದ ಅಂಗಳದ ಮುದ್ದು ಮಗುವಿನ ತೊದಲ ಮಾತು
೨೦ ವರುಷ ಹಿಂದಿನ ಆ ಸಂಜೆ ಹೊತ್ತು ತಂದಂತೆ
ಆಡಿಹರು ಹಲವರು ಇಲ್ಲಿ ಅದರೂ ನಿನ್ನಾಟ ಮರೆಯಲಾಗದು
ಮಮ್ಮಗಳ ತೊದಲ ಮಾತು ಹೋಲುತಲಿದೆ ನಿನ್ನನ್ನೇ
ಬರೀ ದೂರವಾಣಿಯ ಮಾತಿಗೆ ಹೂಂ ಗುಡುತಿರುವೆ ಸುಮ್ಮನೆ
ನಿನ್ನೊಡನೆಯ ಇಳಿವಯಸಿನ ತಿಳಿಸಂಜೆಯ ಸಂಬಾಷಣೆಗೆ ಕಾಯುತಿರುವೆ

ಬಾ ಈ ಮನೆಯಂಗಳಕೆ,ಮನದಂಗಳಕೆ
ಕಾಯತಲಿರುವರಿಬ್ಬರು ನಿನ್ನ.

No comments:

Post a Comment