Saturday, January 22, 2011

ಬಾ ಸಖಿ ನನ್ನೀ ಮನಕೆ


ಕೋಟಿ ಕೋಟಿ ಭಾವಕೆ
ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !!
ಮೋಹನ ಮುರಳಿಯ ಇಂಪಾದ ದನಿಗೆ
ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !!

ಸರಿಗಮಕೆ ಪದನಿ ಆಗು ಬಾರೆ
ಉಸಿರ ಸ್ವರಕೆ ರಾಗವಾಗಿ ಬಾರೆ
ಸ್ಪರ್ಶದ ಅನುಭವ ವಾಗಿ ಬಾರೆ..
ಸಿಹಿಯಾದ ವೇದನೆಯಾಗಿ  ಬಾ !!

ಅಲೆಗಾಗಿ ಕಾದಿರುವ ಕಡಲಾದೆ ನಾ
ಮೋಡದ ನಿರೀಕ್ಷೆಯ ನವಿಲಾದೆ
ಸ್ವರದ ದಾಹದ ಕೊಳಲಾದೆ
ಬಳಲಿದ ಮನಕೆ ಆಸರೆಯ ಒಡಲಾಗಲು ಬಾ!!

No comments:

Post a Comment