ನಿ-ವೇದನೆ
ಆಮಂತ್ರಣ ವಿರದ ಹೃದಯದ ಸಡಗರದ ಆಚರಣೆಗೆ ನೀಬರಬೇಕಿದೆ
ಯಾರು ಕೊಡದ ಪ್ರಿತಿಯುಡುಗೊರೆ ನೀನೀಡಬೇಕಿದೆ
ವಸಂತದಿ ಕೋಗಿಲೆ ಬಂದು ಮಾಮರ ಸೇರಿದಂತೆ
ಮರೆತೋದ ಇಂಪಾದದನಿ ಮತ್ತೆ ಕೇಳಿಸಿದಂತೆ
ಯಾರು ಬಂದಿದರದ ಈ ಮನಸಲಿ ನಿನ್ನ ಆಗಮನ ವಾಗಲಿ
ಬರೇ ಪುಳಕ ತುಂಬಿರಲಿ ಮಾತು ಹೊರಡದ ಬಾಯಲಿ
ತೋಳಲಿ ನೀನಿರಲು ಸಂಭ್ರಮದ ಕಂಬನಿ ಜಾರುತಿರಲಿ ಕಣ್ಣಲಿ
ನಿದಿರೆ ಬಾರದ ಕಣ್ಣಿಗೆ ನೀ ಬಾರೆ ಹಗಲು ಕನಸಾಗಿ
ಪ್ರೀತಿಯ ವಿನಿಮಯದ ವ್ಯವಹಾರ ಎಗ್ಗಿಲ್ಲದೆ ನಡೆಯಲಿ
ಯಾರಿರದ ಒಂಟಿ ಗ್ರಾಹಕ-ಧಾರಕ ಸಂತೆಯೋಳು
ಬೆಚ್ಚನೆಯ ಗೂಡಲಿ ಬಚ್ಚಿ ಇಟ್ಟ ಪ್ರೀತಿ ಗುಬ್ಬಿ
ನಿನ್ನ ಹೃದಯ ಗೂಡಿಗೆ ರೆಕ್ಕೆ ಬಿಚ್ಚಿ ಹಾರಲಿ
ನಿಮ್ಮ
ಕಾಮತ್ ಕುಂಬ್ಳೆ
ಯಾರು ಕೊಡದ ಪ್ರಿತಿಯುಡುಗೊರೆ ನೀನೀಡಬೇಕಿದೆ
ವಸಂತದಿ ಕೋಗಿಲೆ ಬಂದು ಮಾಮರ ಸೇರಿದಂತೆ
ಮರೆತೋದ ಇಂಪಾದದನಿ ಮತ್ತೆ ಕೇಳಿಸಿದಂತೆ
ಯಾರು ಬಂದಿದರದ ಈ ಮನಸಲಿ ನಿನ್ನ ಆಗಮನ ವಾಗಲಿ
ಬರೇ ಪುಳಕ ತುಂಬಿರಲಿ ಮಾತು ಹೊರಡದ ಬಾಯಲಿ
ತೋಳಲಿ ನೀನಿರಲು ಸಂಭ್ರಮದ ಕಂಬನಿ ಜಾರುತಿರಲಿ ಕಣ್ಣಲಿ
ನಿದಿರೆ ಬಾರದ ಕಣ್ಣಿಗೆ ನೀ ಬಾರೆ ಹಗಲು ಕನಸಾಗಿ
ಪ್ರೀತಿಯ ವಿನಿಮಯದ ವ್ಯವಹಾರ ಎಗ್ಗಿಲ್ಲದೆ ನಡೆಯಲಿ
ಯಾರಿರದ ಒಂಟಿ ಗ್ರಾಹಕ-ಧಾರಕ ಸಂತೆಯೋಳು
ಬೆಚ್ಚನೆಯ ಗೂಡಲಿ ಬಚ್ಚಿ ಇಟ್ಟ ಪ್ರೀತಿ ಗುಬ್ಬಿ
ನಿನ್ನ ಹೃದಯ ಗೂಡಿಗೆ ರೆಕ್ಕೆ ಬಿಚ್ಚಿ ಹಾರಲಿ
ನಿಮ್ಮ
ಕಾಮತ್ ಕುಂಬ್ಳೆ
No comments:
Post a Comment