Sunday, August 7, 2011

ಕಿಚ್ಚು ಭಾಗ - ೨


ಕಿಚ್ಚು ಭಾಗ -೨



ಕಿಚ್ಚು ಭಾಗ - ೧


"ವಸುಂದರ" ಎಂದಾಂಗ ೧೬ ವರ್ಷದ ಈ ತರುಣನಲ್ಲಿ ಏನೋ ಒಂದು ತರಹದ ಸಂಚಲನ, ತನ್ನ ವಯಸ್ಸು ಮತ್ತು ತನ್ನ ಭವಿಷ್ಯವನ್ನೇ ಮರೆತು ನಾನು ಮತ್ತು ಅವಳು ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದೆವು. ನಮ್ಮಿಬ್ಬರ ನಡುವೆ ಜಾತಿ , ಅಂತಸ್ತು , ಬಣ್ಣ ಹೀಗೆ ಎಲ್ಲ ಬಗೆಯ ಅಂತರಗಳಿದ್ದವು, ಆದರೆ ಇವ್ವು ಯಾವುದರ ಪರಿವಿಲ್ಲದೆ ನಾವು ಒಬ್ಬರನೊಬ್ಬರು ಇಷ್ಟ ಪಡುತ್ತಿದ್ದೆವು, ಅದು ನಾನು ಪ್ರಥಮ ಪಿ.ಯು. ಓದುವ ಸಮಯದ ಮಾತು.

ಮಂಗಳೂರಿನ ಹೊರವಲಯದ ಒಂದು ಹಳ್ಳಿಯಲ್ಲಿ ಕನ್ನಡ ಮೀಡಿಯಂ ಅನ್ನು ಭಾರಿ ಕಷ್ಟದಲ್ಲಿ ಮುಗಿಸಿ, ನಾನು ಮುಂದಿನ ಕಾಲೇಜ್ ಶಿಕ್ಷಣಕ್ಕೆ ಮಂಗಳೂರಿನ ಕಾಲೇಜ್ ಒಂದರಲ್ಲಿ ಭರ್ತಿ ಪಡಕೊಂಡೆ. ಅದು ನನ್ನ ಕಾಲೇಜ್ ನ ಮೊದಲ ದಿನ, ನಗರ ಜೀವನದ ಮೊದಲ ದಿನ. ಹೊಸ ಕಾಲೇಜ್, ಹೊಸ ಊರು ಎಂಬ ಸಂಭ್ರಮ ಮನಸಲ್ಲಿ ಇತ್ತು ವಿನಹ ನನ್ನ ಉಡುಗೆ ತೊಡುಗೆಯಲ್ಲಿ ಬದಲಾವಣೆ ಬಂದಿರಲಿಲ್ಲ, ಅಂದೂ ಅದೇ ೮ ಕ್ಲಾಸ್ ನಲ್ಲಿ ಯಾರೋ ತೆಗಿಸಿ ಕೊಟ್ಟ ಶಾಲಾ ಬ್ಯಾಗ್ ಬೆನ್ನಲ್ಲಿದ್ದರೆ ಕಾಲಲ್ಲಿ ಹರಿದು ಹೋಗಿರುವ ಹವಾಯಿ ಚಪ್ಪಲಿ.ಇದಕ್ಕೆ ನನ್ನ ಮನೆಯಲ್ಲಿದ್ದ ಅರ್ಥಿಕ ಪರಿಸ್ಥಿತಿಯೇ ಕಾರಣ ವಾಗಿತ್ತು.

ಕಾಲೇಜ್ ನ ಮೇನ್ ಗೇಟ್ ನಲ್ಲಿ ಒಳಗೆ ಪ್ರವೆಶಿಸುತಿದ್ದಂತೆ ನನ್ನೊಂದಿಗೆ ಅವಳೂ ಇದ್ದಳು, ಅವಳು ಕಾರಿನಲ್ಲಿ ತನ್ನ ಮನೆಯವರೊಂದಿಗಿದ್ದರೆ ನಾನು ಅರ್ದ ಕಾಲು ನೆಲಕ್ಕೆ ಸ್ಪರ್ಶಿತ್ತಿರುವ ಒಂಟಿ ನೆರಳಿನೊಂದಿಗೆ ಒಳ ಬರುತ್ತಿದ್ದೆ .ಕಾರ್ ನಿಂತಿತು, ನಾನು ಅದನ್ನೇ ನೋಡುತ್ತಿದ್ದೆ ಅದರಿಂದ ಅಯತಾನೆ ಖರೀದಿಸಿ ತೊಟ್ಟಿರುವ ಗೆಜ್ಜೆ ಮಿರಮಿರನೆ ಹೊಳೆಯುವ ಕಾಲು ಮೆಲ್ಲನೆ ಕೆಳಗೆ ಹಾಸಿದ ಹುಲ್ಲಿನ ಮೇಲೆ ಇಟ್ಟಿತು, ನನ್ನ ದ್ರಷ್ಟಿ ಇನ್ನು ಅಲ್ಲೇ ನೆಟ್ಟಿತ್ತು. ೧೬ ಕ್ಕೆ ಕಾಲಿಟ್ಟ ಹುಡುಗಿಯ ವರ್ಣನೆ ಇಲ್ಲಿವರೆಗೆ ಕಾದಂಬರಿಯಲ್ಲಿ ಓದಿದ್ದೆ ,ತನ್ನ ಹಣೆಯಲ್ಲಿ ಮೆಲ್ಲನೆ ಜಾರಿದ ಕೂದಲನ್ನು ಅವಳು ಎತ್ತಿ ಕಿವಿಯ ಹಿಂದೆ ಇಟ್ಟಾಗ ನಾ ಕಂಡ ಅವಳ ಕಣ್ಣ ಕಾಂತಿ ೧೬ ರ ವರ್ಣನೆಗೆ ಇನ್ನು ಹೆಚ್ಚು ರಂಗು ಕಟ್ಟಿತು, ಇವಳ ಅಂದಕ್ಕೆ ಇಲ್ಲಿ ವರೆಗೆ ಓದಿದ ಎಲ್ಲಾ  ವರ್ಣನೆ ನನಗೆ ತ್ರಣ  ಸಮಾನ ಎನಿಸಿತು. ಮೊದಲ ನೋಟಕ್ಕೆ ನಾ ನನ್ನ ಮನಸ ಹಿಡಿತ ಕಳಕೊಂಡೆ, ಲವ್ ಅಟ್  ಫಸ್ಟ್ ಸೈಟ್ ನ ಅನುಭವ ವಾಯಿತು.

ಹಳ್ಳಿಯ ಕನ್ನಡ ಮೀಡಿಯಂ ಹುಡುಗ ನಾನಾದರೆ ಅವಳು ನಗರದ ಇಂಗ್ಲಿಷ್ ಕಾನ್ವೆಂಟ್ ನ ಮಗಳು, ಹರಿದ ೩ ಜೊತೆ ಬಟ್ಟೆಯೇ ನನ್ನ ಸರ್ವಸ್ವ, ದಿನಕ್ಕೆ ಮೂರು ಜೊತೆ ಬಟ್ಟೆ ಉಡುವ ಚೆಲುವೆ ಅವಳು, ತಂದೆಯವರು  ಕುಡಿದು ಹಣ ಉಳಿಸಿದರೆ ಮಾತ್ರ ನಮ್ಮ ಮನೆಯ ರಾತ್ರಿ ಓಲೆ ಉರಿಯುತ್ತಿತ್ತು ಅಲ್ಲಿನ ಗಂಜಿ ಉಪ್ಪು ನನ್ನ ಹಸಿದ ಹೊಟ್ಟೆಗೆ ಮೃಷ್ಟಾನ ವಾದರೆ, ಮೂರು ಹೊತ್ತಿನ ಬೆಳ್ಳಿ ತಟ್ಟೆಯಲ್ಲಿನ ತುತ್ತು ಅವಳ ಹಸಿವಿರದ ಹೊಟ್ಟೆಗೆ, ಅವಳ ಸೇವೆಗೆ  ಕೈಗೊಂದು ಕಾಲ್ಗೊಂದು ಆಳು, ನಾನು ಮನೆಯ ಆರ್ಥಿಕ ಹೊಂದಾಣಿಕೆಗೆ ಸಂಜೆ ಯ ಪಾರ್ಟ್ ಟೈಮ್ ಕೂಲಿಯಾಳು. ಇವ್ವೆಲ್ಲ ವಾಸ್ತವ ತಿಳಿದು ಸೂತ್ರ ತುಂಡಾದ ಗಾಳಿಪಟ ಮನಸನ್ನು ಸಹಬದ್ದಿಗೆ ತಂದುಕೊಂಡೆ. ಅವಳನ್ನು ನೋಡಿ ನೋಡದಂತೆ ವರ್ತಿಸಿದೆ.ಅವಳ ಅಂದಕ್ಕೆ ಮತ್ತು ಅಂತಸ್ತಿಗೆ ಮಾರು ಹೋದ ಎಲ್ಲರೂ  ಅವಳ ಗೆಳೆತನಕ್ಕೆ ಹಪಹಪಿಸುತ್ತಿದ್ದರೆ,  ಬೇರೆಯವರಂತೆ ಟಸ್ ಪುಸ್ ಬಿಡಲು ಗೊತ್ತಿರದ ನಾನು ತರಗತಿ ಕೊನೆಯ ಬೆಂಚ್ ನ ಒಂದು ಮೂಲೆ ಸೇರಿಕೊಂಡೆ.

ಎಷ್ಟು ಬಾರಿ ಮನಸ್ಸನ್ನು ಅವಳಿಂದ ಹಿಡಿತಲ್ಲಿರಿಸಿದರು ನೋಡುವ ಕಣ್ಣು ಬಾರಿ ಬಾರಿ  ಅವಳೆಡೆಗೆ ವಾಲುತಿತ್ತು.ಮನದಲ್ಲೇ ಪ್ರೇಮ ಚಿಗುರೊಡೆಯಿತು. ಆದರೆ ಅವಳನ್ನು ಪಡೆಯುವ ಸ್ವಾರ್ಥ ವಿರಲಿಲ್ಲ, ಒಂದು ವೇಳೆ ಅಂತ ಭಾವ ಮೂಡಿದರು, ಮರುಕ್ಷಣಕ್ಕೆ ಅದು ಸಾಧ್ಯವಿಲ್ಲ ಎಂದು ತಿಳಿದು ಕುಸಿದು ಬೀಳುತ್ತಿತ್ತು. ಮುಂದಿನ ೪ ತಿಂಗಳಾಗುತಿದ್ದಂತೆ ನನ್ನ ಮನಸ ಮಾತು ಅವಳಿಗೆ ತಿಳಿಯಿತು.

ಸ್ವಲ್ಪದರಲ್ಲೇ ಅವಳೂ ಪ್ರೇಮನಿವೇದನೆ ನನ್ನಲ್ಲಿ ಮಂಡಿಸಿದ್ದು ಆಯಿತು, ಹುಡುಗರೊಂದಿಗೆ ಸಂಕೋಚ ಸ್ವಭಾವ ತೋರಿಸುವ ನಾನು ಅವಳಲ್ಲಿ ಹೇಗೆ ಇಂತ ವಿಷಯ ಪ್ರಸ್ತಾಪಿಸಲಿ...?ಅವಳಾಗಿಯೇ ಈ ವಿಚಾರ ನನ್ನಲ್ಲಿ ಕೇಳಿದಾಗ ಅಂಥದ್ಯಾವುದೇ ಭಾವ ನನ್ನಲ್ಲಿ ಇಲ್ಲವೆಂದೆ.ಅವಳೂ ಸುಮ್ಮನಾದಳು.

ದಿನಗಳು ಉರುಳಿದವು ಒಂದು ವರುಷ ಕಳೆದೆ ಹೋಯಿತು, ಬೇಸಗೆ ರಜೆಯಲ್ಲಿ ಅವಳ ವಿರಹ ಏನೋ ಒಂದು ತರಹದ ಸುಖ ನೀಡುತ್ತಿತ್ತು.ಮನಸ್ಸು ಅವಳ ಒಂದು ನೋಟಕ್ಕೆ ಪರಿತಪಿಸುತಿತ್ತು,ಆದರೆ ಅವಳ ವಿಳಾಸ ದ ಯಾವುದೇ ಕುರುಹು ನನ್ನಲ್ಲಿರಲಿಲ್ಲ,ಜೊತೆಗೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಇನ್ನು ಹದ ಗೆಟ್ಟ ಕಾರಣಕ್ಕೆ ನಾನು ಎರಡು ತಿಂಗಳಲ್ಲಿ ನನ್ನ ಮುಂದಿನ ಒಂದು ವರ್ಷ ವಿದ್ಯಾಭ್ಯಾಸಕ್ಕೆ ಬೇಕಾದ ಹಣ ಸಂಪಾದಿಸುವ ಅಗತ್ಯವಿತ್ತು, ಪುಟ್ಟದೊಂದು ಕೆಲಸಕ್ಕೂ ಸೇರಿದ್ದಾಯಿತು.ಇದರಿಂದ ಸಲ್ಪ ದಿನ ಅವಳ ಲೋಕದಿಂದ ಹೊರಬಂದೆ.



ಎರಡನೇ ವರುಷದ ಮೊದಲ ದಿನ, ೮ ಗಂಟೆಗೆ ಅವಳನ್ನು ನೋಡುವ ಉದ್ದೇಶದಿಂದ ಕಾಲೇಜ್ ಸೇರಿ ಕೊಂಡೆ, ಅಂದು ನಾನು ಹೋಗುವಾಗಲೇ ಆ ಫೀಟ್ ಕಾರ್ ಕಾಲೇಜ್ ಕ್ಯಾಂಪಸ್ ತಲುಪಿತ್ತು, ಅವಳೂ ನನಗಾಗಿಯೇ ಕಾದಂತಿತ್ತು. ನನ್ನನ್ನು ನೋಡುತಿದ್ದಂತೆ ಮನೆಯವರನ್ನು ಕಳಿಸಿ ಕೊಟ್ಟ ಆವಳು ನಾನಿದ್ದಲಿಗೆ ಬಂದು ಮನಸಿನ ಮಾತನ್ನಾಡಲು ನಿಂತಳು.
"ಹಾಯ್, ಹೇಗಾಯ್ತು ಬೇಸಗೆ ರಜೆ ...?ಎಲ್ಲಿಯಾದರೂ ಹೋಗಿದ್ದಿರಾ?"
ಹಣವಂತರಿಗೆ ಹಣ ಹೇಗೆ ಖರ್ಚುಮಾಡುವುದು ಎಂಬ ಚಿಂತೆ ಯಾದರೆ ನನ್ನಂತ ಹಣದ ಮೌಲ್ಯ ಗೊತ್ತಿರುವವರಿಗೆ ಹಣ ಹೇಗೆ ಸಂಪಾದಿಸುವುದು ಎಂಬ ಚಿಂತೆ, ಹಣ ಸಂಪಾದಿಸಲು ಹೋಗಿದ್ದೆ ಅಂತ ಹೇಳೋಣ ಅಂದು ಕೊಂಡೆ , ಬೇಡ ಸರಿಯಲ್ಲ ಎಂದು
"ಹಾಗೇನಿಲ್ಲ, ಮನೆಯಲ್ಲೇ ಇದ್ದೆ "ಅಂದೆ, ಆವಳು
"ಹಾಗೋ ..? ನಾನಂತು ತುಂಬಾ ಎಂಜಾಯ್ ಮಾಡಿದೆ."ಹೇಳುತ್ತಾ ಮುಗುಳ್ನಕ್ಕಳು.ಅವಳ ಆ ರೂಪಲಾವಣ್ಯ ಇನ್ನೊಮ್ಮೆ ನನ್ನನ್ನು ಅವಳಲ್ಲಿ ಲೀನ ಮಾಡಿತು, ನಾನು ಮಂದಹಾಸ ವಿಟ್ಟೆ.
ಆವಳು ಮುಂದುವರಿಸಿದಳು "ಆದರೆ,ಯಾರಿದ್ದಿರೆನು ..? ನನ್ನವರು ಎಂದೆನಿಸಿ ಕೊಂಡವರು ನನ್ನೊಂದಿಗಿರದ ಪ್ರತಿ ಘಳಿಗೆ ವಿಷ ಘಳಿಗೆ ಆಗಿತ್ತು ... "
ನನಗೆ ಮಾತಿನ ಅರ್ಥ ತಿಳಿಯದೆ ನಾನು "ಅರ್ಥ ವಾಗಿಲ್ಲ , ನಾನು ಸೆಕೆಂಡ್ ಕ್ಲಾಸ್ ಸ್ಟುಡೆಂಟ್ "ಅಂದೆ.
ಆವಳು "ಎರಡು ತಿಂಗಳಲ್ಲಿ ನನ್ನವರ್ಯಾರು ಎಂಬುದನ್ನು ನಾನು ಅರಿತು ಕೊಂಡೆ, ಅವರಿಂದ ದೂರ ಇರುವಾಗ ಅವರ ಅರಿವಿನ ಮಹತ್ವ ಗೊತ್ತಾಯಿತು"ಅಂದಳು.
ನಾನು "ಯಾರಿಂದ ನೀವು ಎರಡು ತಿಂಗಳು ದೂರರಿದ್ದಿರಿ ? "
ಆವಳು "ನನ್ನ ಹೃದಯಕ್ಕೆ ಕಳೆದ ಒಂದು ವರ್ಷದಲ್ಲಿ ತುಂಬಾ ಹತ್ತಿರವಾದ ವ್ಯಕ್ತಿ ಒಬ್ಬರಿಂದ"
ಇವಳ ಮನಸಲ್ಲಿ ಪ್ರೇಮ ಅಂಕುರದಲ್ಲಿ ಭಂದಿಯಾಗಿದೆ ಎನ್ನುವುದು ಅವಳ ಹಾವ ಭಾವ ದಿಂದಲೇ ತಿಳಿಯುತ್ತಿತ್ತು.
ನಾನು  "ಯಾರೆಂದು ಹೇಳಿ"
ಆವಳು "ನೀವೇ ..."ಅನ್ನುತ್ತ ನೆಲ ನೋಡುತ್ತಾ ನಿಂತಳು.
ವಾಸ್ತವತೆಯ ಅರಿವಿದ್ದ ನಾನು "ಏನು ಹೇಳುತ್ತಾ ಇದ್ದೀರಿ ಇದೆಲ್ಲ ಸಾದ್ಯವಾಗದ ಮಾತು, ನೀವೆಲ್ಲಿ..? ನಾನೆಲ್ಲಿ... ?ಕ್ಷಮಿಸಿ "ಅಂದೆ
ಆವಳು ಇದನ್ನು ಒಪ್ಪಲು ತಯಾರಿರಲಿಲ್ಲ, ಹದಿನಾರರ ಹುಚ್ಚು ಮನಸ್ಸು ಆಗಲೇ ನನ್ನೆಡೆಗೆ ವಾಲಿತ್ತು , ಅದು ಯಾರ ಮಾತು ಕೇಳುವ ಗೋಜಿಗೆ ಹೋಗಲು ತಯಾರಿರರಿಲ್ಲ.
ನಾನು "ನನಗೂ, ನಿಮಗೂ ಯಾವುದೇ ವಿಷಯದಲ್ಲಿ ಹೋಲಿಕೆ ಸಂಭವಿಸದು, ಹುಚ್ಚು ಮನಸ್ಸಿನ ಮಾತು ಕೇಳಬೇಡಿ, ನಿಮಗಾಗಿ ಯಾವುದೋ ಸುಂದರ ರಾಜಕುಮಾರ ಕಾಯುತ್ತಿರುವ, ನನ್ನ ಮರೆತು ಬಿಡಿ" ಅನ್ನುತ್ತ ಅವಳಿಂದ ದೂರ ನಡೆದೆ.


ಅವಳ ನಡುವಿನ ಸೆಳೆತ ಇನ್ನೂ ಹೆಚ್ಚಾಯಿತು. ಒಂದೇ ವಾರದಲ್ಲಿ ವಾಸ್ತವತೆಯ ಅರಿವು ನಿಧಾನವಾಗಿ ಮಾಸ ತೊಡಗಿತು. ಅವಳ ಒಂದೊಂದೇ ಅದ್ಯಾಯ ನನ್ನ ಮನಸ ಪುಟದಲ್ಲಿ ಅಚ್ಚಾಗುತ್ತಿದ್ದವು.ಮೆಲ್ಲನೆ ನಾನು ಅವಳಲ್ಲಿ ಈ ಕುರಿತಾದ ಮಾತನ್ನಾಡಲು ಉತ್ಸುಕನಾಗುತ್ತ ಹೋದೆ. ರಾತ್ರಿಯ ನಿದ್ದೆ ದೂರದ ಮಾತಾಯಿತು, ಬಡ ಹೊಟ್ಟೆಗೆ ಹಸಿವಿನ ಅರಿವಿರದೆ ಅವಳ ಪ್ರೇಮ ಪಾನದ ದಾಹ ಹೆಚ್ಚುತ್ತಾ ಹೋಯಿತು.ಶುಕ್ರವಾರ ಬರುತಿದ್ದಂತೆ ಅವಳಿಂದ ೨ ದಿನ ದೂರವಾಗಬೇಕಲ್ಲ ಎಂಬಾ ಚಿಂತೆ, ಸೋಮವಾರ ಬಂದರೆ ಅವಳಿಗೆ ಉಡುಗೊರೆ ನೀಡಬೇಕು ಆದರೆ ಕೈಯಲ್ಲಿ ಬಿಡಿಗಾಸು ಇಲ್ಲ ಎಂಬ ಚಿಂತೆ.

ಅವಳ ಖರ್ಚು ಸರಿದೂಗಿಸಲು ನನಗೆ ಪ್ರತಿದಿನ ಸಂಜೆ ಹೆಚ್ಚು ಕೆಲಸ ಮಾಡ ಬೇಕಾಯಿತು, ಅವಳೊಂದಿಗಿರದ ಹೊತ್ತು ನನಗೆ ಸಂಪಾದನೆ ಮಾಡಲು ಪ್ರೇರೇಪಿಸಿತು, ಹಣದ ಮೌಲ್ಯ ಕಲಿಸಿ ಕೊಟ್ಟಿತು. ಆದರೆ ನನ್ನಲ್ಲಿನ ಬಡತನವನ್ನು ಎಂದಿಗೂ ನಾನು ಅವಳಿಗೆ ತೋರಿಸಿ ಕೊಟ್ಟಿದ್ದಿರಲಿಲ್ಲ.ದಿನ ಸರಿದಂತೆ ಪ್ರೇಮ ಇನ್ನೂ ಬಲವಾಗುತ್ತ ಹೋಯಿತು, ಈಗ ನಾನು ಯಾವುದೇ ವಿಷಯ ಇವಳಿಂದ ಮುಚ್ಚಿಡಲು ಬಯಸುತ್ತಿರಲಿಲ್ಲ, ಎಲ್ಲಾ ವಿಚಾರವನ್ನು ಅವಳಲ್ಲಿ ಹೇಳುವ ಉದ್ದೇಶದಿಂದ ಇಬ್ಬರು ಕಾಲೇಜ್ ಗೆ ಚ್ಚಕ್ಕರ್ ಹಾಕಿ ಬೇಕಲ್ ಕೋಟೆ ತಲುಪಿದ್ದು ಆಯಿತು.

ಸುತ್ತಲು ಪ್ರಶಾಂತ ಕಡಲು, ಪಕ್ಕದಲ್ಲೇ ಮಳೆ ಮತ್ತು ಅಲೆಯ ಹೊಡೆತಕ್ಕೆ ಸಿಕ್ಕಿ ಚೂರು ಕದಲದೆ ನಿಂತ ಆ ಭವ್ಯ ಕೋಟೆ, ಕಡಲ ಅಲೆಯೊಂದಿಗೆ ನನ್ನ ಪ್ರೇಮದಲೆ ಅವಳ ಹೃದಯ ತಟ್ಟುತ್ತಿದ್ದರೆ , ಅವಳ ಅಲೆ ನನ್ನೆದೆ ತಟ್ಟುತಿತ್ತು.ನಾನು ನನ್ನಲ್ಲಿನ ಎಲ್ಲಾ ವಿಚಾರ ಅವಳಲ್ಲಿ ಮಂಡಿಸಲು ಶುರು ಮಾಡಿದೆ.

"ನಾನು ನಿನ್ನಿಂದ ತುಂಬಾ ವಿಚಾರ ಇದುವರೆ ಮುಚ್ಚಿಟ್ಟಿದ್ದೆ, ನೀನು ನನ್ನ ಬಿಟ್ಟು ಹೋಗ ಬಹುದು ಎಂಬ ಭಯ ನನ್ನಲ್ಲಿತ್ತು, ಆದರೆ ಇನ್ನೂ ಅವನ್ನು ನಿನ್ನಿಂದ ಅಡಗಿಸಡಿದುವುದು ಸಮಂಜಸವಲ್ಲ ಎಂದು ಎಲ್ಲಾ ವಿಚಾರ ಹೇಳ ಬಯಸಿದ್ದೇನೆ, ಎಲ್ಲಾ ಮಾತು ಕೇಳಿ ಅದೊಡನೆ ನಿನ್ನ ಅಭಿಪ್ರಾಯ ತಿಳಿಸು, ನಿನ್ನ ಉತ್ತರ ಏನಿದ್ದರು ನಾನು ಸ್ವೀಕರಿಸುತ್ತೇನೆ, ನಾನು ನಿನಗೆ ಅನರ್ಹ ನೆನೆಸಿದರೆ ಅದನ್ನು ಹಿಂಜರಿಕೆ ಇಲ್ಲದೆ ತಿಳಿಸಿಬಿಡು."

ಆವಳು ಮೌನವಾಗಿಯೇ ನನ್ನ ಮಾತು ಆಲಿಸುತ್ತಿದ್ದಳು ,ಆವಳು ಕೋಟೆಯ ಕಲ್ಲಿನ ಮೇಲೆ ಕುಳಿತು ಕಿನಾರೆಗೆ ಮುತ್ತಿಕ್ಕುವ ಹಾಲಿನ ಕೆನೆಯಂಥ ಅಲೆಯನ್ನು ನೋಡುತ್ತಾ ಕುಳಿತ್ತಿದ್ದರೆ, ಅವಳ ಕೂದಲು ಗಾಳಿಯಲ್ಲಿ ಹಾರಾಡುತ್ತಾ ಆಗೊಮ್ಮೆ ಈಗೊಮ್ಮೆ ಕೆನ್ನೆಗೆ ಮುತ್ತಿಡುತ್ತಿತ್ತು.

ನಾನು ಮುಂದುವರಿಸಿದೆ "ಮೊದಲಿಗೆ ನಾನು ನಿಮ್ಮ ಜಾತಿಯವನಲ್ಲ, ಯಾವುದೊ ಕೀಳು ಪಂಗಡಕ್ಕೆ ಸೇರಿದವನು,ನಿನ್ನ ಮನೆಯವರಂತೆ ನನ್ನ ಮನೆಯವರು ಸುಸಂಸ್ಕೃತರಲ್ಲ, ತಂದೆಯವರು ಯಾವುದೊ ಕೂಲಿ ಕೆಲಸ ಮಾಡುತ್ತಾರೆ, ಆದರೆ ಅವರ ಕೂಲಿ ಅವರ ಕುಡಿತಕ್ಕೆ ಸಾಲದು, ಅಮ್ಮ ಬೇರೆಯವರ ಮನೆ ಮುಸರೆ ತಿಕ್ಕಿ ಮನೆ ನೋಡಿಕೊಳ್ಳುತ್ತಾರೆ, ಮನೆಯಲ್ಲಿರುವ ಆಸ್ತಿ ಎಂದರೆ ತಂದೆ ಅಮ್ಮನಿಗೆ ಉಡುಗೊರೆ ನೀಡಿದ ೯ ಮಂದಿ ಮಕ್ಕಳು, ನಾನು ಅವರಲ್ಲಿ ಹಿರಿಯವನು,ಹಿಂದೆ ಮುಂಬೈ ನಲ್ಲಿ ಕೆಲಸದಲ್ಲಿದ್ದುದರಿಂದ ನನ್ನ ಮತ್ತು ನನ್ನ ಹಿಂದಿನ ತಂಗಿಯ ನಡುವೆ ೬  ವರುಷದ ಅಂತರ. ನಂತರ ಅವರು ಊರಲ್ಲೇ ಇದ್ದುದರಿಂದ ಈ ಬಡವನ ಮನೆಗೆ ಪ್ರತಿ ದೀಪಾವಳಿಗೆ ಹೊಸ ಅತಿಥಿ ಯ ಪ್ರವೇಶ ವಾಗುತ್ತ ಹೋಯಿತು, ನಾನು ನಿನ್ನಂತೆ ಬುದ್ಧಿವಂತನಲ್ಲ, ಸುಂದರನಲ್ಲ, ಲೋಕಜ್ಞಾನ ವು ಇಲ್ಲ,ಸದ್ಯಕ್ಕೆ ಓದುವ ಖರ್ಚು ಮತ್ತು ನಿನ್ನೊಡನೆ ವ್ಯಯಿಸುವ ಖರ್ಚು ಎಲ್ಲಾ ನಾನು ಸಂಜೆ ಮತ್ತು ವಾರಾಂತ್ಯದಲ್ಲಿ ಸಂಪಾದಿಸುವಂತದ್ದು.

ನಿನಗೆ ಪುಕ್ಕಟೆ ಹುಟ್ಟುವ ಪ್ರೀತಿ ಕೊಡಲು ನಾ ಸಿದ್ದ, ಆದರೆ ನನ್ನ ಮಿತಿ ತಿಳಿಯದೆ ನೀನು ನನ್ನಲ್ಲಿ ಕಾರು,ಒಡವೆ ಬೇಡಿದರೆ ತರಲು ಸಾಧ್ಯವಾಗದ ಬಡವ, ಒಂದು ಒಳ್ಳೆ ಕೆಲಸ ಸಿಕ್ಕುವ ಭರವಸೆಯು ನನಗಿಲ್ಲ, ಕಾಲ ಕೂಡಿ ಬಂದರೆ ನಮ್ಮಿಬ್ಬರ ಕನಸು ನನಸಾಗಬಹುದು. ನನ್ನಿಂದ ದೂರ ಹೋಗುವುದು ಸೂಕ್ತ ವೆನಿಸಿದರೆ ನನ್ನಿಂದ ದೂರ ಹೋಗು,ಸುಖವಾಗಿ ಬಾಳು, ನಾನು ಮರೆಯಲು ಪ್ರಯತ್ನಿಸುವೆ...

ದೂಳು ತಾಗದ ಹಾಸಿಗೆಯಲ್ಲಿ ಮಲಗಿದ ನಿನ್ನ ಕಲ್ಲಹಾಸಲ್ಲಿ, ಅರ್ದ ಹಸಿದ ಹೊಟ್ಟೆಯಲ್ಲಿ ನಾ ಕಲ್ಪಿಸಲಾರೆ, ನನಗಾಗಿ ನೀ ಕಷ್ಟ ಪಡುವ ಅಗತ್ಯವಿಲ್ಲ, ನೀನು ಸುಖವಾಗಿ ಬಾಳು, ವಯಸ್ಸಿನ ಆಟಕ್ಕೆ ನಾವು ಮನಸ್ಸನ್ನು ವಿನಿಮಯ ಮಾಡಿಕೊಂಡಿದ್ದೇವೆ, ಆದರೆ ಮುಂದೊಂದು ದಿನ ಇದು ನಮಗೆ ಹಾಸ್ಯಾಸ್ಪದ ವೆನಿಸಬಹುದು, ಬಳಿಕ ವ್ಯಥೆ ಪಟ್ಟರೆ ಕಾಲ ತಿರುಗಿ ಬರದು, ನೀನು ನನ್ನ ಬಿಟ್ಟು ಹೋಗು, ಸುಖವಾಗಿ ಬಾಳು."

ಅವಳ ನಿಶ್ಚಲ ಮನಸಲ್ಲಿ ದೊಡ್ಡದೊಂದು ಅಲೆ ಎದ್ದಂತ್ತಾಯಿತು. ನನ್ನನ್ನು ತಬ್ಬಿ "ಇದನ್ನೆಲ್ಲಾ ಮನಸಲ್ಲಿ ಇತ್ತು ನಿನ್ನ ಪ್ರಿತಿಸಲಿಲ್ಲ, ಬದಲಾಗಿ ನಿನ್ನಲ್ಲಿನ ಮುಗ್ದತೆಗೆ ನಾ ಮರುಳಾದದ್ದು , ಮನಸ್ಸು ನಿರ್ಧಾರ ಮಾಡಿ ಬಿಟ್ಟಿದೆ , ಮುಳ್ಳಿರಲಿ ಹೂವಿರಲಿ ನಾನು ನಿನ್ನೊಂದಿಗೆ ಈ ಬಾಳನ್ನು ಬಾಳ ಬೇಕಾಗಿದೆ, ನಿನ್ನ ವಿನಃ ಯಾವುದೇ ಕಲ್ಪನೆ ನನಗೆ ಹುಟ್ಟುತ್ತಿಲ್ಲ, ಎಲ್ಲಾ ವಿಚಾರದಲ್ಲೂ ನೀನಿರುತ್ತಿಯಾ, ಮನಸ್ಸು ನಿನ್ನನ್ನೇ ನನ್ನ ಸಂಗಾತಿ ಎಂದು ಹೇಳಿ ಆಗಿದೆ , ಯಾವುದೇ ತಡೆ ಬಂದರು ನಾ ದೂರ ಹೋಗೆನು, ನಾನೆಂದೂ ನಿನ್ನವಳು"ಎನ್ನುತ್ತಾ ಬಿಕ್ಕಿ ಅತ್ತಳು.


ತಲೆಯ ಮೇಲೆ ಸುಡು ಬಿಸಿಲು ಸುಡುತಿದ್ದರು ಅವಳ ನಿರ್ಧಾರ ಕೇಳಿದ ಮನ ತಣಿಯಿತು,ನನಗೆ ಬದುಕ ಹೋರಾಟ ಮಾಡುವ ಸ್ಪೂರ್ತಿ ಸಿಕ್ಕಂತಾಯಿತು,ಎದೆಯ ಒಳಗೆ ಇಷ್ಟು ದಿನ ಆವಳು ನನ್ನನ್ನು ಬಿಟ್ಟು ಹೋಗುತ್ತಾಳೆ ಎಂಬ ಸಂಶಯದ ಕಿಡಿ ಮಾಯಾವಾಯಿತು, ಕಿಡಿಯ ಬದಲಿಗೆ ಬದುಕ ಹೋರಾಟದ ಕಿಚ್ಚು ಹೊತ್ತಲಾರಂಬಿಸಿತು.ಒಂದು  ಬದಿಯಲ್ಲಿ ಅಲೆಯ ಸೆಳೆತ ಕಡಿಮೆ ಆದರೆ ನನ್ನ ಅವಳ ನಡುವಿನ ಪ್ರೇಮದಲೆ ಜೋರಾಗಿಯೇ ಸಪ್ಪಳವಿಡುತಿತ್ತು.ಕೋಟೆ ಎಲ್ಲದಕ್ಕೆ ಮೌನವಾಗಿಯೇ ಸಾಕ್ಷಿ ಆಯಿತು.

No comments:

Post a Comment