ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ ಇಲ್ಲೇ
ಕನಸಿಗೆ ಕನಸು ತೋರಿಸುತ ನಾ ಪುನಃ ಜನಿಸಿದೆ ನಲ್ಲೇ
ಕನಸಿನ ಕೊಳದಿ ಕಾಗದದ ದೋಣಿಯಲಿ ಹುಟ್ಟಿಡುತ
ಕಾಣದ ತೀರದಿ ನಿನ್ನ ನಾ ವಿಚಾರಿಸಿದೆ
ಉಸಿರಿನ ಆಳದಿ ಮನದ ಓಣಿಯಲಿ ಹುಂಗುಟ್ಟುತ
ಕಾರಣ ಹೇಳದೆ ನನ್ನ ನೀ ನೇವರಿಸಿದೆ ||ಉಸಿರಿಗೆ ಉಸಿರು ||
ಯಾರಿರದ ಚಂದಿರನೂರಿನ ಕಡಲತಡಿಯಲಿ ಅಲೆಯುತ
ನನ್ನನು ನಾ ಯಾರೆಂದು ಕೇಳಿದೆ
ಯಾರರಿಯದೆ ಒಂದೊಂದಾಗಿ ಕಾಲಡಿಯಲಿ ಮುತ್ತಿಡುತ
ಅಲೆಯು ನಾ ನೀನಾಗಿರುವೆ ಎಂದಿದೆ ||ಉಸಿರಿಗೆ ಉಸಿರು ||
ನೆನಪಿನ ಜಾತ್ರೆಯ ಮೆರವಣಿಗೆಯಲಿ ನಿನ್ನ ಅರಸುತ
ವಿರಹಿ ಭಾವದಿ ನನ್ನೇ ನಾ ಕಳಕ್ಕೊಂಡೆ
ಜೀವನ ಯಾತ್ರೆಯ ಮನಮಳಿಗೆಯ ಕದ ಬಡಿಯುತ
ನಿಂತಿಹ ನಿನ್ನಲಿ ನನ್ನೇ ನಾ ಕಂಡುಕ್ಕೊಂಡೆ ||ಉಸಿರಿಗೆ ಉಸಿರು ||
ನಿಮ್ಮ
ಕಾಮತ್ ಕುಂಬ್ಳೆ
ಕನಸಿಗೆ ಕನಸು ತೋರಿಸುತ ನಾ ಪುನಃ ಜನಿಸಿದೆ ನಲ್ಲೇ
ಕನಸಿನ ಕೊಳದಿ ಕಾಗದದ ದೋಣಿಯಲಿ ಹುಟ್ಟಿಡುತ
ಕಾಣದ ತೀರದಿ ನಿನ್ನ ನಾ ವಿಚಾರಿಸಿದೆ
ಉಸಿರಿನ ಆಳದಿ ಮನದ ಓಣಿಯಲಿ ಹುಂಗುಟ್ಟುತ
ಕಾರಣ ಹೇಳದೆ ನನ್ನ ನೀ ನೇವರಿಸಿದೆ ||ಉಸಿರಿಗೆ ಉಸಿರು ||
ಯಾರಿರದ ಚಂದಿರನೂರಿನ ಕಡಲತಡಿಯಲಿ ಅಲೆಯುತ
ನನ್ನನು ನಾ ಯಾರೆಂದು ಕೇಳಿದೆ
ಯಾರರಿಯದೆ ಒಂದೊಂದಾಗಿ ಕಾಲಡಿಯಲಿ ಮುತ್ತಿಡುತ
ಅಲೆಯು ನಾ ನೀನಾಗಿರುವೆ ಎಂದಿದೆ ||ಉಸಿರಿಗೆ ಉಸಿರು ||
ನೆನಪಿನ ಜಾತ್ರೆಯ ಮೆರವಣಿಗೆಯಲಿ ನಿನ್ನ ಅರಸುತ
ವಿರಹಿ ಭಾವದಿ ನನ್ನೇ ನಾ ಕಳಕ್ಕೊಂಡೆ
ಜೀವನ ಯಾತ್ರೆಯ ಮನಮಳಿಗೆಯ ಕದ ಬಡಿಯುತ
ನಿಂತಿಹ ನಿನ್ನಲಿ ನನ್ನೇ ನಾ ಕಂಡುಕ್ಕೊಂಡೆ ||ಉಸಿರಿಗೆ ಉಸಿರು ||
ನಿಮ್ಮ
ಕಾಮತ್ ಕುಂಬ್ಳೆ
ಕಾಮತರೆ, ನಿಮ್ಮ ಈ ಕವನ, ಅದೇಕೋ ಗೊತ್ತಿಲ್ಲ, ಸ್ವಲ್ಪ ವಿಶೇಷವಾಗಿದೆ ಅ೦ತ ಅನ್ನಿಸಿತು. ಭಾವನೆಗಳ ಮಹಾಪೂರವೇ ಅಕ್ಷರಗಳಲ್ಲಿ ಹೊರ ಹೊಮ್ಮಿದೆ.
ReplyDeleteಮಂಜಣ್ಣ ನಿಮ್ಮ ಪ್ರೋತ್ಸಾಹದ ನುಡಿಗಳು ನನ್ನನ್ನು ಹೆಚ್ಚು ಹೆಚ್ಚು ಬರೆಯುವಂತೆ ಪ್ರೇರೇಪಿಸುತ್ತಿದೆ.
ReplyDeleteಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು
ನಿಮ್ಮ
ಕಾಮತ್ ಕುಂಬ್ಳೆ