Wednesday, April 27, 2011

ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ..

ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ..
ಕಾಲು ಮತ್ತೆ ಮತ್ತೆ ಓಡುತಿದೆ ಯಾಕೊ ..
ನನ್ನ ಹಿಂಬಾಲಿಸುವ ಆ ನೀಹಾರಿಕೆಗೆ ||
ಅಲ್ಲಿ ನೀನಿದ್ದಿಯಾ ... ಇಲ್ಲ ಇಲ್ಲಿ ನೀನಿದ್ದಿಯಾ
ಎನ್ನುತ ನನ್ನೊಳು ಹುಡುಕಾಡಿದೆ ಮನವೇಕೊ ...
ಕಣ್ಣಾಮುಚ್ಚಾಲೆಯಾಡುವ ಆ ಚೆಲುವೆಗೆ ||

ಮಳೆಯಲಿ ಮಿಂದೆದ್ದ ಅಂಬರದ ಬಿಲ್ಲೊಂದು
ನವಿರಾದ ಸಾವಿರ ಬಣ್ಣವ ತಳೆದಿದೆ
ಸುಸ್ವರ ಕಂಠದಿ ಮೆರೆದಿಹ ಕೋಗಿಲೆಯೊಂದು
ಎಂಟನೇಯ ಸವಿ ಸ್ವರವ ಹಾಡುತಲಿದೆ

ತೇಲಾಡುತ ಅವಳ ಸೋಕಿ ಓಡಿಹೋದ
ಚುಂಬಕ ಚಳಿ ಗಾಳಿಗೂ ತಲೆ ಸುತ್ತು
ಅಲೆಯುತ ಅವಳ ನೋಡಿ ವಶವಾದ
ಭೂಮಿ ಸುತ್ತುವುದ ಮರೆಯಿತು ಅರೆಹೊತ್ತು

ಪ್ರಭಾಕಾಂತಿಗೆ ಮಬ್ಬುಕವಿಯಿತು
ಈ ಸೂರ್ಯಕಾಂತಿಯ ಸೋಭಗಿಗೆ
ಶಶಿ ರಶ್ಮಿ ಅಂಬರದಿ ಸೇರಿಹೋಯಿತು
ಕಣ್ಣರೆಪ್ಪೆ ಬೀದಿಗೆಚಂದಿರೆಯ ಕಾಂತಿಗೆ

ಕಾಮತ್ ಕುಂಬ್ಳೆ

No comments:

Post a Comment