Wednesday, April 13, 2011

ಮತ್ತೆ ಮತ್ತೆ ನೆನೆಯುತಿದೆ

ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು
ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು

ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ
ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ

ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿರ ದಿಬ್ಬಣ 
ಮನಸು ತುಂಬಿ ತುಳುಕಿ ಬಂದ ಶೋಕಗೀತೆಯ ತಲ್ಲಣ

ಪುಟಿವ ಮನಸ ಉತ್ಸಾಹಕೆ ವಿರಹಿ ನಶೆಯ ಮಾಯೆ 
ತುಡಿವ ಕನಸ ಉತ್ಸವಕೆ ವಿರಾಗಿ ನಿಶೆಯ ಛಾಯೆ



ಕಾಮತ್ ಕುಂಬ್ಳೆ

No comments:

Post a Comment