Wednesday, April 27, 2011

ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ..

ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ..
ಕಾಲು ಮತ್ತೆ ಮತ್ತೆ ಓಡುತಿದೆ ಯಾಕೊ ..
ನನ್ನ ಹಿಂಬಾಲಿಸುವ ಆ ನೀಹಾರಿಕೆಗೆ ||
ಅಲ್ಲಿ ನೀನಿದ್ದಿಯಾ ... ಇಲ್ಲ ಇಲ್ಲಿ ನೀನಿದ್ದಿಯಾ
ಎನ್ನುತ ನನ್ನೊಳು ಹುಡುಕಾಡಿದೆ ಮನವೇಕೊ ...
ಕಣ್ಣಾಮುಚ್ಚಾಲೆಯಾಡುವ ಆ ಚೆಲುವೆಗೆ ||

ಮಳೆಯಲಿ ಮಿಂದೆದ್ದ ಅಂಬರದ ಬಿಲ್ಲೊಂದು
ನವಿರಾದ ಸಾವಿರ ಬಣ್ಣವ ತಳೆದಿದೆ
ಸುಸ್ವರ ಕಂಠದಿ ಮೆರೆದಿಹ ಕೋಗಿಲೆಯೊಂದು
ಎಂಟನೇಯ ಸವಿ ಸ್ವರವ ಹಾಡುತಲಿದೆ

ತೇಲಾಡುತ ಅವಳ ಸೋಕಿ ಓಡಿಹೋದ
ಚುಂಬಕ ಚಳಿ ಗಾಳಿಗೂ ತಲೆ ಸುತ್ತು
ಅಲೆಯುತ ಅವಳ ನೋಡಿ ವಶವಾದ
ಭೂಮಿ ಸುತ್ತುವುದ ಮರೆಯಿತು ಅರೆಹೊತ್ತು

ಪ್ರಭಾಕಾಂತಿಗೆ ಮಬ್ಬುಕವಿಯಿತು
ಈ ಸೂರ್ಯಕಾಂತಿಯ ಸೋಭಗಿಗೆ
ಶಶಿ ರಶ್ಮಿ ಅಂಬರದಿ ಸೇರಿಹೋಯಿತು
ಕಣ್ಣರೆಪ್ಪೆ ಬೀದಿಗೆಚಂದಿರೆಯ ಕಾಂತಿಗೆ

ಕಾಮತ್ ಕುಂಬ್ಳೆ

Wednesday, April 13, 2011

ಮತ್ತೆ ಮತ್ತೆ ನೆನೆಯುತಿದೆ

ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು
ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು

ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ
ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ

ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿರ ದಿಬ್ಬಣ 
ಮನಸು ತುಂಬಿ ತುಳುಕಿ ಬಂದ ಶೋಕಗೀತೆಯ ತಲ್ಲಣ

ಪುಟಿವ ಮನಸ ಉತ್ಸಾಹಕೆ ವಿರಹಿ ನಶೆಯ ಮಾಯೆ 
ತುಡಿವ ಕನಸ ಉತ್ಸವಕೆ ವಿರಾಗಿ ನಿಶೆಯ ಛಾಯೆ



ಕಾಮತ್ ಕುಂಬ್ಳೆ

Friday, April 1, 2011

ನಿನ್ನ ಕನಸು- ನೆನಪು

ನಿನ್ನ ಕನಸು- ನೆನಪು



ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ  
ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ


 
ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ  
ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ  
ಭುವಿ ಬಿಟ್ಟು ಪತಂಗ ನಾನಾದೆ ಇಲ್ಲೇ ಕುಂತಲ್ಲೇ
 
ಉಸಿರಿಗೆ ಉಸಿರಾಗುವ ನಿನ್ನ ಕಣ್ಣಂಚಿನ ಸನ್ನೆಗೆ  
ನೆರಳಿಗೆ ನೆರಾಳಾದ ನಿನ್ನ ಜೊತೆಯ ಹೆಜ್ಜೆಗೆ  
ಕಣಕಣವು ಕರಗುತಲಿ ನೀರಾದೆ ನಾ ನಿಂತಲ್ಲೇ

ಕಂಪಿನ ನವಿರಾದ ನಿನ್ನ ಮಾತಿನ ಮೋಡಿಗೆ
ನನ್ನಲ್ಲೇ ಅವಿತಿರುವ ನಿನ್ನ ನಾ ಹುಡುಕುವ ಧಾಟಿಗೆ
ಕೋಟಿ ಜನರ ನಡುವಲಿ ನನ್ನೇ ನಾ ಕಳಕ್ಕೊಂಡೆ

ನಿಮ್ಮ
ಕಾಮತ್ ಕುಂಬ್ಳೆ