Thursday, December 1, 2011

ಕಲೆಯೂ ಮಾಸದು ಗಾಯವೂ ಮಾಗದು

ಮಿಡಿಯುವ ಹೃದಯದಲಿ
ಎರಡು ಹೆಜ್ಜೆಯ ಗುರುತಿಗೆ ಹಂಬಲಿಸುತಿದ್ದೆ  ನಾ 
ಬೇಡಿಕೆಯ ಇಡೇರಿಸಲು
ಹೃದಯದಲಿ ಪ್ರೀತಿ ಗಾಯದ ಕಲೆ ಚಿತ್ರಿಸಿದೆ ನೀ


ಕಲೆಯೂ ಮಾಸದು ಗಾಯವೂ ಮಾಗದು 
ತಲೆಯ ಮೂಲೆಯಲಿ ಮತ್ತೆ ಮೆಲುಕಾಗಿ ಕಾಡುವುದು 
ಕಲೆಯ ಬೆಲೆಯು ತಿಳಿಯುವುದು ಗಾಯದ ನೋವ ನೆನಪಿಸಿದರೆ 
ನಲಿವಿನ ಮನದಲಿ ನರಳುವ ಮನಸಿನ ತುಡಿತದ ಅರಿವಾಗುವುದು


ಮಾಸ ಬಾರದೇ ಕಲೆಯು ಹೃದಯದಿ
ವಿಕಸಿಸುವ ಹೊಸ ಬಾಳಿಗೆ ಸ್ಫೂರ್ತಿ ಯಾಗುವುದು ಕಲೆ ರಹಿತ ಹೃದಯವು
ಮಾಗ ಬಾರದೇ ಗಾಯವು ಹೃದಯದಿ
ಪ್ರಸವಿಸುವ ಹೊಸ ಜೀವಕೆ ದ್ಯೋತಿ ಯಾಗುವುದು ಕೊಳೆತ ಹೃದಯವು

ನೀಡದೆ ಕಾರಣ ಉಳಿದಿದೆ
ಗಾಯವೊಂದು ಕಲೆಯಾಗಿ ಹೃದಯದಿ 

ಕಲೆಯೂ ಮಾಸದು ಗಾಯವೂ ಮಾಗದು 
ತಲೆಯ ಮೂಲೆಯಲಿ ಮತ್ತೆ ಮೆಲುಕಾಗಿ ಕಾಡುವುದು

Tuesday, October 25, 2011

ನೆನಪಿನ ಬುತ್ತಿ :ದೀಪಾವಳಿ



ನೆನಪಿನ ಬುತ್ತಿ :ದೀಪಾವಳಿ







ಎಲ್ಲಾ ಓದುಗರಿಗೆ ದೀಪಾವಳಿಯ ಹಾರ್ಧಿಕ ಶುಭಾಷಯಗಳು

ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ, ಈ ಹಬ್ಬಕ್ಕೆ ಮಾನವ, ಪ್ರಾಣಿ, ಗಿಡ-ಮರ,ನಿರ್ಜೀವ ವಸ್ತುಗಳು ಅಂತಿಲ್ಲ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ಹಬ್ಬ. ೩ ದಿನದ ಈ ಸಡಗರ ದಲ್ಲಿ ಎಲ್ಲವೂ ಭಾಗಿ ಆಗುತ್ತವೆ ಮತ್ತು ಸಂಭ್ರಮಿಸುತ್ತವೆ ,ನಂತರ ಬರುವ ವರುಷದ ನಿರೀಕ್ಷೆ ಶುರು ಮಾಡುತ್ತಾರೆ.ನಮ್ಮ ದೈನಂದಿನ ಕಾರ್ಯಗಳಲ್ಲಿ ನಮಗೆ ನೆರವಾಗುವ ಬಹುತೇಕ ಎಲ್ಲಾ ವಸ್ತುಗಳು ಪಾಲ್ಗೊಳ್ಳುತ್ತವೆ. ಮೊದಲ ದಿನದ ಹಂಡೆಗೆ ನೀರು ತುಂಬಿಸುವಾಗ ಹಚ್ಚಿದ ಪಟಾಕಿ ಸದ್ದು ಮುಂದಿನ ಕಾರ್ತಿಕ ಹುಣ್ಣಿಮೆ ವರೆಗೆ ಪ್ರತಿಧ್ವನಿಸುತ್ತಲೇ ಇರುವುದು..ಈ ಹಬ್ಬದಲ್ಲಿ ಅದೆಷ್ಟೋ ನೆನಪುಗಳಿವೆ, ಹಂಚಿ ಸಂಭ್ರಮಿಸೋಣ.




ಇಂದು ಅಂದರೆ ನರಕಚತುರ್ದಶಿಯ ಹಿಂದಿನ ದಿನ ಧನತ್ರಯೋದಶಿ' ದಿನ ಬಚ್ಚಲು ಮನೆಯನ್ನು ಶುಚಿ ಗೊಳಿಸುವುದರಿಂದ ನನ್ನ ಮತ್ತು ನನ್ನ ಅಕ್ಕನ ಬಾಲ್ಯದ ದೀಪಾವಳಿ ಶುರುವಾಗುತ್ತಿತ್ತು .ಅತ್ತೆ ಯವರಿಗೆ ಮದುವೆ ಆದ ನಂತರ ಅಕ್ಕ ಮತ್ತು ನಾನು ಈ ಜವಾಬ್ದಾರಿ ಕೈಗೆತ್ತಿಕೊಂಡಿದ್ದೆವು, ಉಳಿದ ದಿನದಲ್ಲಿ ಅಮ್ಮನೇ ಬಚ್ಚಲು ಮನೆಕೆಲಸ ನೋಡುವುದು ಆದರೆ ಇವತ್ತು ಇಲ್ಲಿ ಅವರು ಬರುವುದಿಲ್ಲ, ಬೆಳಗ್ಗೆ ಕೊನೆಯ ಸ್ನಾನ ಮಾಡಿ ಹಂಡೆ ಖಾಲಿ ಮಾಡುವ ಕೆಲಸ ವಷ್ಟೇ ಅವರಿಗೆ..ಶಾಲೆಯಿಂದ ಬರಬೇಕಾದರೆ ೨ ರುಪಾಯಿಯ ಬಣ್ಣದ ಚೋಕ್,೪ ರುಪಾಯಿಯ ಬಿಳಿಯ ಚೋಕ್ ತರುವುದು.ಮನೆಗೆ ಬಂದ ಇಬ್ಬರೂ ಬಟ್ಟೆ ಕಳಚಿ ಬಚ್ಚಲು ಮನೆಗೆ ಎಂಟ್ರಿ ಹೊಡೆಯುತಿದ್ದೆವು ,..


ಇಲ್ಲಿ ಅಕ್ಕ ತಂದೆಯವರು ತಂದ ಗೊಂಡಿಗೆ ಹೂವಿನಿಂದ ಮಾಲೆ ಹೆಣೆಯುತ್ತಾಳೆ;.ಬಾವಿಯ ಪಕ್ಕದಲ್ಲಿ ಅಮ್ಮ ಮೀನಿನ ರಾಶಿ ಕೊಚ್ಚುತ್ತಾ ಇರುತ್ತಾರೆ.ಹಬ್ಬದಂದು ಮೀನೇ ಎಂದು ಆಶ್ಚರ್ಯವೇ ..? ಹುಂ ಮೀನು, ಇಂದು ಮೀನು ತಿನ್ನಲೇ ಬೇಕಾದದ್ದು  ಮಂಗಳೂರು ಪರಿಸರದಲ್ಲಿ ಅದರಲ್ಲೂ ಮೀನು ತಿನ್ನುವ GSB ಮನೆಗಳಲ್ಲಿ ಅಂದು ಮೀನಿನ ಭಕ್ಷ್ಯ ಸೇವಿಸುವುದು ಇನ್ನೊಂದು ವಾಡಿಕೆ .೨- ೩ ಬಗೆಯ ಮೀನಿನವಿದಗಳಿರುವುದು, ೩-೪ ಗೆಯ ಸಾಂಬಾರು ತಯಾರಾಗುತ್ತದೆ ನೆಚ್ಚಿ ತಿನ್ನಲು ಕರಿದ ಮೀನೂ ಸಾಥ್ ಕೊಡುವಂತದ್ದು, ಹುಂ ಈಗ ನೆನೆಸಿದರೆ ಬಾಯಲ್ಲಿ ನೀರೂರುತ್ತಿದೆ.


ಅಕ್ಕನಿಗೆ ಬಚ್ಚಲು ಮನೆಯ ಬಾಗಿಲು ತೊಳೆದು ಶ್ರಂಗಾರಿಸುವ ಪಾಲು ,ನನ್ನ ಪಾಲಿಗೆ ಒಳಗಿನ ಎರಡು ಹಂಡೆ,.ಒಂದು ಹಿತ್ತಾಳೆಯ ಹಂಡೆ, ಹುಳಿ ಹಾಕಿ ಕಾಲು ಗಂಟೆ ತಿಕ್ಕಲು ಚಿನ್ನದಂತೆ ಹೊಳೆಯುತಿದ್ದರೆ ಬದಿಯಲ್ಲೇ ಇದ್ದ ತಾಮ್ರದ ಇನ್ನೊಂದು ಹಂಡೆ ಗಂಡನ ಸೌಂದರ್ಯ ನೋಡಿ ಇನ್ನೂ ಕೆಂಪಾಗಿ ತಾನು ನೂರು ವರುಷ ದಾಟಿದ ಮುದಿ ವಧು ಎಂಬುದನ್ನು ಮರೆತು ನಾಚುತಿತ್ತು .ಬಳಿಕ  ಅದರ ಮೇಲೆ ಬಣ್ಣದ ಚೋಕ್ ನಿಂದ ಬಗೆ ಬಗೆಯ ಚಿತ್ತಾರ ಮಾಡಿ ಹೊರಬರಲು,ಬಾಗಿಲಲ್ಲಿ ಅಕ್ಕ ಬಿಡಿಸಿದ ಸಾಲು ಸಾಲು ಹಣತೆಗಳು ಬೆಳಗುತಿದ್ದವು.


ಅಲ್ಲಿಂದ ನಾನು ನಮ್ಮ ಗದ್ದೆಯ ಕಡೆಗೆ ಹೋಗಿ ಅದ್ಯಾವುದೋ ಬಳ್ಳಿ ತರುವುದು ವಾಡಿಕೆ, ಅದಕ್ಕೆ ಏನೆನ್ನುತ್ತಾರೆ ಎಂದು ಮರೆತೋಗಿದೆ, ಸಣ್ಣ ಇರುವಾಗ ತಂದೆ ಅದನ್ನು ಹಂಡೆಗೆ ಸುತ್ತಿಸುವುದು ವಾಡಿಕೆ ಅಂತ ಹೇಳಿದ್ದರು, ಆ ವಾಡಿಕೆ ನಾನು ಮುಂದುವರಿಸಿದ್ದೆ ಹೊರತು ಅದರ ಹಿಂದಿನ ಕಾರಣ ಗೊತ್ತಿರಲಿಲ್ಲ.




ಕೈಕಾಲು ಹೊರಗೆ ತೊಳೆದು ಬಂದು ಕಾಫೀ ಕುಡಿದು ಕುಳಿತು ಕೊಳ್ಳುತಿದ್ದಂತೆ ಗೋಧೋಳಿ ಮುಹೂರ್ತ ಶುರುವಾಗುವುದು.ಸುತ್ತಲಿನ ಮನೆಯವರು ನೀರು ಸೇದಲು ಜಾಗಟೆ ಬಾರಿಸುತ್ತಿದ್ದಂತೆ, ನಮ್ಮಲ್ಲಿ ಪಟಾಕಿ ಸಿಡಿಯಲಾರಂಬಿಸುತಿತ್ತು, ಅಮ್ಮ ರಾಟೆಗೆ ಎಣ್ಣೆ ಬಿಟ್ಟು ಬಾವಿಗೆ ಕುಂಕುಮ,ಸಿಂಧೂರ,ಕಾಡಿಗೆ ಹಚ್ಚಿ ಸಣ್ಣ ದೊಂದು ಹೂ ಮಾಲೆ ಹಾಕಿ ಆರತಿ ಬೆಳಗುತಿದ್ದರು.ಅಂದು ಎಲ್ಲಾ ಕೊಡಪಾನ, ಹಂಡೆ,ತಪ್ಪಲಿಗೆ ಎಲ್ಲದರಲ್ಲೂ ನನ್ನ ಮತ್ತು ಅಕ್ಕನ ಚಿತ್ತಾರ ಮೂಡುತಿದ್ದವು, ಎಲ್ಲದರ ಕತ್ತಲ್ಲು ಹಳದಿ,ಕೇಸರಿ ಗೊಂಡಿಗೆಯ ಮಾಲೆಯು ಅವುಗಳ ಸ್ವೌಂದರ್ಯ ಹೆಚ್ಚಿಸುತಿದ್ದವು.ಅಟ್ಟದ ಮೇಲೆ ಇರುವ ನನ್ನ ಅಜ್ಜಿಗೆ ಮದುವೆಯಲ್ಲಿ ಉರುಗೊರೆ ಸಿಕ್ಕಿದ ತಾಮ್ರದ ಕೊಡಕ್ಕೆ ಈ ಸಂಜೆ ಬಾವಿಯಲ್ಲಿ ಮುಳುಗುವ ಸಂಭ್ರಮ, ಅಮ್ಮ ಮೊದಲಿಗೆ ಆ ಕೊಡದಿಂದ ಮುಹೂರ್ತದ ನೀರನ್ನು ಹಂಡೆಗೆ ತುಂಬಿಸುತಿದ್ದರು, ಮತ್ತೆ ಇನ್ನೊಂದು ಕೊಡ ನೀರು ಸೇದಿ ಪಾನಕಕ್ಕೆ ಒಯ್ಯುತಿದ್ದರು. ಮತ್ತೆ ಅಮ್ಮ ಮನೆಯ ಒಳಗಿನ ಕೆಲಸಕ್ಕೆ ಇಳಿದರೆ ನಾನು ಅಕ್ಕ ತಾಮ್ರದ ಕೊಡ ಹೊರಲಾಗದೆ ಅಲುಮಿನಿಯಂ ಕೊಡದಿಂದಲೇ ೨ ಹಂಡೆ ತುಂಬಿಸುತಿದ್ದೆವು. ಉಳಿದ ದಿನದಲ್ಲಿ ನಳ್ಳಿಯಿಂದಲೇ ಈ ಕೆಲಸ ಆಗುತ್ತವೆ ಆದರೆ ಇಂದು ಹಬ್ಬ, ಇಂದು ಕೈಯಾರೆ ಸೇದಿ ಹಾಕಲು ಒಂದು ಚೂರು ಅಯಾಸವಾಗದು. ಬಳಿಕ ಒಲೆಯ ಬಳಿಗೆ ಹೋಗಿ ಅಪ್ಪ ಹೊಡೆದಿಟ್ಟಿರುವ ಸೌಧೆ ಇಂದ ನಾನು ಅಕ್ಕ ನೀರು ಕಾಯಿಸಲು ಶುರು ಮಾಡುತಿದ್ದೆವು. ಈ ಎಲ್ಲಾ ಕಾರ್ಯದಲ್ಲಿ ಅಪ್ಪನಿಗೆ ಚೂರು ಕೂಡ ಪ್ರವೇಶಿಸಲು ಆಸ್ಪದ ನೀಡುತಿರಲಿಲ್ಲ.




ಅಮ್ಮನ ಮನೆಯ ಒಳಗಿನ ಕೆಲಸ ಮುಗಿಯುತಿದ್ದಂತೆ ಹಿತ್ತಾಳೆಯ ಒಂದು ಬಿಂದಿಗೆಯಲ್ಲಿ ಕೊಬ್ಬರಿ ಎಣ್ಣೆ ಯೊಂದಿಗೆ ಜಗಲಿಯಲ್ಲಿ ಬಂದು ಕುಳಿತು ಕೊಳ್ಳುತಿದ್ದರು, ಮೊದಲಿಗೆ ನನ್ನ ಸರದಿ ಅಂಗಿ ಬಿಚ್ಚಿ ಮೈಯೆಲ್ಲಾ ಎಣ್ಣೆ ಸವರುತ್ತಿದ್ದರು, ಏನೋ ಆನಂದ ಆದರೆ ಯಾವಾಗ ಅಮ್ಮ ಕಿವಿಗೆ ಎಣ್ಣೆ ಬಿಡುತ್ತಾರೋ, ಬೇಡ ಎಂಬ ಒತ್ತಾಯ , ಎಲ್ಲಿ ಪಟಾಕಿಯ ಸ್ವರ ಕಮ್ಮಿ ಕೆಳಿಸಿಯತೋ ಎಂಬ ಚಿಂತೆ ಮನದಲ್ಲಿ. ಬಳಿಕ ಅಕ್ಕನಿಗೂ ಎಣ್ಣೆ ಹಾಕುತಿದ್ದರು. ಹೀಗೆ ಮೈಯೆಲ್ಲಾ ಎಣ್ಣೆ ಮಾಡಿ ಅಮ್ಮ ಬೆಳಗ್ಗೆ ತೊಳೆದು ಇಟ್ಟಿರುವ ಹಣತೆಯನ್ನು ಮನೆಯ ಎದುರು ಕಂಪೌಂಡ್ ಮೇಲೆ ಸಾಲಾಗಿ ಇಡುವುದು, ಬತ್ತಿ ಇಟ್ಟು ಎಣ್ಣೆಹಾಕಿ ಹಚ್ಚಿ ಆನಂದ ಪಡುವುದು.ಜೊತೆಗೆ ಕೊಟ್ಟಿಗೆಯಲ್ಲಿ ಒಂದು ಹಣತೆ, ಬಚ್ಚಲು, ಬಾವಿ, ಭೂದಿ ಹಾಕುವ ಕೋಣೆ ಎಲ್ಲದರಲ್ಲೂ ಒಂದೊಂದು ಹಣತೆ.




ಈಗ ದೀಪಾವಳಿಯ ಸಡಗರ ಹೆಚ್ಚಿಸುವಂತ ಪಟಾಕಿಯ ಸರದಿ. ಎಲ್ಲರ ಮನೆಯಲ್ಲಿ ಈ ಹಬ್ಬ ಇರುವುದರಿಂದ ನೆಂಟರಿಷ್ಟರು ಬರುವುದು ಕಡಿಮೆ ದೀಪಾವಳಿಗೆ, ಮನೆ ಇಂದ ಮದುವೆ ಆಗಿಹೋದ ಹೆಣ್ಣು ಮಕ್ಕಳು , ಇಲ್ಲ ಮಮ್ಮಕ್ಕಳು ಮೊದಲ ದೀಪಾವಳಿ ಆಚರಣೆಗೆ ಬಂದಾಗ ಮಾತ್ರ ಮನೆ ತುಂಬಿರುತಿತ್ತು ವಿನಃ ಬಹುತೇಕ ದೀಪಾವಳಿ ನಾವು ಮನೆಯವರೇ ಆಚರಿಸುತಿದ್ದೆವು, ಚಿಕ್ಕಪ್ಪಂದಿರಿಗೆ ಇನ್ನೂ ಮದುವೆ ಆಗಿರಲಿಲ್ಲ,ಮನೆಯಲ್ಲಿ ಇಬ್ಬರೇ ಮಕ್ಕಳು ಎಲ್ಲರ ಮುದ್ದು ನಮ್ಮಿಬ್ಬರಿಗೆ ಸಿಗುತಿತ್ತು.ಅಕ್ಕನು ದೊಡ್ಡ ದೊಡ್ಡ ಪಟಾಕಿ ಹಚ್ಚುತಿರಲಿಲ್ಲ, ಆದುದರಿಂದ ಎಲ್ಲದರಲ್ಲೂ ನನ್ನದೇ ಸಿಂಹಪಾಲು.ದೀಪಾವಳಿಗೆ ಕಮ್ಮಿಯೇ ಪಾಟಕಿ ಹಚ್ಚುತಿದ್ದೆವು. ನಮ್ಮಲ್ಲಿ ತುಳಸಿ ಪೂಜೆಗೆ ಹೆಚ್ಚಿನ ಪಟಾಕಿ ಹಚ್ಚುತಿದ್ದೆವು. ತಂದೆಯವರು ದೀಪಾವಳಿಗೆ ಸ್ವಲ್ಪಾನೆ ಪಟಾಕಿ ತರುತಿದ್ದರು,ತುಳಸಿ ಪೂಜೆಗೆ ಮತ್ತೆ ತರುತಿದ್ದರು, ಒಮ್ಮೆಲೇ ತಂದರೆ ತಂದ ದಿನವೇ  ನಾವು ಮುಗಿಸುತ್ತೇವೆ ಎಂದು ಅವರಿಗೆ ಗೊತ್ತಿತ್ತು.


ಒಂದು ವರುಷ ಅವರು ತಮ್ಮ ಅಂಗಡಿಯ ಗಡಿಬಿಡಿಯಲ್ಲಿ ದೀಪಾವಳಿಯ ಹಿಂದಿನ ದಿನ ಪಾಟಕಿ ತರುವುದು ಮರೆತಿದ್ದರು, ಇಲ್ಲಿ ನನ್ನ ಮೌನ ಪ್ರತಿಭಟನೆ ಶುರುವಾಗಿತ್ತು. ಅವರೊಂದಿಗೆ ಮಾತು ಮುರಿಸಿ ಕೊಂಡೆ, ಅಮ್ಮ ಎಷ್ಟು ಸಮಾಧಾನ ಪಡೆದರು ಅಳುತಲಿದ್ದೆ, ಅವರಿಗೆ ನನ್ನ ಬೇಡಿಕೆ ಹೇಳಬೇಕಿತ್ತು ಆದರೆ ನೀವು ಪಟಾಕಿ ತರುವ ವರೆಗೆ ನಿಮ್ಮಲ್ಲಿ ಮಾತಾಡುದಿಲ್ಲ ಎಂದು ಹೇಳಿದ್ದೆ, ಕೊನೆಗೆ ನನ್ನ ಬೇಡಿಕೆ ಅವರಿಗೆ ಹೇಗೆ ಹೇಳುವುದು ಎಂದು ತಿಳಿಯದೆ ಅವರು ಕುಳಿತುಕೊಳ್ಳುವ ಮೇಜಿನ ಮೇಲೆ ಶಾಲೆ ಇಂದ ತಂದಿದ್ದ ಚೋಕ್ ನಲ್ಲಿ "ಒಂದು ಪ್ಯಾಕ್ ಸುರ್ ಸುರ್ ಕಡ್ಡಿ, ಒಂದು ಪ್ಯಾಕ್ ದುರುಸು, ಒಂದು ಪ್ಯಾಕ್ ದುರುಸು, ಒಂದು ಪ್ಯಾಕ್ ನೆಲಚಕ್ರ , ಒಂದು ಪ್ಯಾಕ್ ಹಾವಿನ ಮಿಟಾಯಿ ..... "ಹೀಗೆ ನನ್ನ ಸಣ್ಣ ಮಟ್ಟಿನ ಲಿಸ್ಟ್ ಬರೆದಿಟ್ಟಿದ್ದೆ, ನಾನಾಗಿನ್ನು ೨- ೩ ನೆ ಕ್ಲಾಸ್ ಇದ್ದ ಕಾರಣ ಅದರಲ್ಲಿ ದೊಡ್ಡ ಪಟಾಕಿಯ ಹೆಸರಿರಲಿಲ್ಲ.ಮನೆಗೆ ಬಂದವರೇ, ತಂದೆ ಈ ಹೊಸ ಪ್ರತಿಭಟನೆ ನೋಡಿ ಮುಗುಳ ನಕ್ಕರು, ತನ್ನ ಚೀಲದಲ್ಲಿದ್ದ ಪಟಾಕಿಯ ಗಂಟನ್ನು ನನ್ನ ಮತ್ತು ಅಕ್ಕನ ಕೈಗೆ ಇಟ್ಟರು ಅಂದು ಪಟಾಕಿ ಹೊಡೆಸಿದಕಿಂತ ಹೆಚ್ಚು ಕುಶಿ ಕೊಟ್ಟಿತ್ತು.




ಹೀಗೆ ಪಟಾಕಿ ಹೊತ್ತಿಸಿ, ಬಳಿಕ ಕೈಯನ್ನು ಪುನಃ ತೊಳೆದು ನಾನು ಅಕ್ಕ ಉಟಕ್ಕೆ ಕುಳಿತುಕೊಳ್ಳುವುದು,ಬಗೆಬಗೆಯ ಭಕ್ಷ್ಯ ಸವೆದು ಮುಂದಿನ ಮಹಾ ಮಜ್ಜನಕ್ಕೆ ಇಬ್ಬರೂ ಅಣಿಯಾಗುತಿದ್ದೆವು.
ಇಲ್ಲೂ ಮನೆಯ ಸಣ್ಣ ಸದಸ್ಯನಾದ ನನ್ನಿಂದಲೇ ಸಮಾರಂಭ ಉದ್ಘಾಟನೆ, ಕುದಿಯುತ್ತಿರುವ ಹಂಡೆಯಿಂದ ಅಮ್ಮ ಒಂದು ಬಾಲ್ದಿಯಲ್ಲಿ ನೀರನ್ನು ಯಾವಾಗಿನಕಿಂತ ೧೦ ಡಿಗ್ರೀ ಹೆಚ್ಚು ಬಿಸಿಗೆ ನೀರನ್ನು ಹದಮಾಡಿ ತಲೆಮೇಲೆ ಸುರಿಯುತಿದ್ದರು.ಇಲ್ಲಿ ಅಕ್ಕ ಒಲೆಗೆ ಇನ್ನೂ ಕಟ್ಟಿಗೆ ಇಡುತ್ತಾ ಇರುತಿದ್ದಳು. ಬಾಲ್ದಿ ಗಟ್ಟಲೆ ನೀರು, ಸೋಪ್ ಇಲ್ಲಿ ನಮ್ಮ ಮೈಯ ಎಣ್ಣೆ ತೆಗೆಯುತ್ತ ,ಬದಿಯ ತೂತಿನಿಂದ ಹೊರ ಹರಿಯುತಿತ್ತು. ಇನ್ನೊಂದು ವಿಶೇಷ ಎಂದರೆ ಇಂದು ಸಾಬೂನಿನೊಂದಿಗೆ ಕಡ್ಲೆ ಹಿಟ್ಟು ಜಿಡ್ಡು ತೆಗೆಯಲು ಬಳಸುವುದು.


ಹೀಗೆ ಸ್ನಾನ ಮಾಡುತಿರಬೇಕಾದರೆ ಒಂದು ವರ್ಷ ನನಗೂ ಅಕ್ಕನಿಗೂ  ಒಂದು ಸಣ್ಣ ಜಗಳವಾಗಿ ಅವಳು ದೂಡಿದ ಪೆಟ್ಟಿಗೆ ನಾನು ಆ ಕುದಿಯುವ ಹಂಡೆಯ ಮೇಲೆ ಬಿದ್ದು ಮೈ ಸುಟ್ಟುಕೊಂಡ ನೆನಪು ಇಂದೂ ಹಸಿಯಾಗಿದೆ.

ಸ್ನಾನ ಮಾಡಿ ಮುಗಿದಿದ್ದರೂ ಮೈಯಿಂದ ಹಬೆ ಇನ್ನೂ ಬರುತ್ತಾ ಇರುತ್ತದೆ ಅಷ್ಟು ಬಿಸಿ ನೀರು ಅಮ್ಮ ಮೈಮೇಲೆ ಹಾಕುತಿದ್ದರು, ಮತ್ತೆ ಅಮ್ಮ ಅಂದು ತಲೆಗೆ ಮುಂಡಾಸು ಕಟ್ಟುತಿದ್ದರು, ಬಳಿಕ ಇನ್ನೊಂದು ಶಾಲು ನನಗೆ ಹೊದೆಸಿ ಮನೆ ಒಳ ಕಳಿಸಿ ಅಕ್ಕನ ಮಹಾ ಮಜನಕ್ಕೆ ಮುಂದಾಗುತಿದ್ದರು.ನಾನು ಒಳ ಬಂದವನೇ ಒಲೆಯ ಮೇಲಿರುವ ಕಷಾಯ ಕುಡಿದು ನಡು ಕೋಣೆಯಲ್ಲಿ ಮಲಗುತಿದ್ದೆ, ಕೆಳಗೆ ಹಾಸಿದ್ದ ಚಾಪೆ ಬಂದ ಬೆವರಿಗೆ ಒದ್ದೆಯಾಗಿ ನಿದ್ದೆ ಇಂದ ಎಚ್ಚರವಾಗುತಿದ್ದೆ , ಬಳಿಕ ಪುನಃ ಅಂಗಿ ತೊಟ್ಟು ಅಂಗಡಿಯಿಂದ ಆಗತಾನೆ ಬಂದಿದ್ದ ಅಪ್ಪ ಮತ್ತು ಚಿಕ್ಕಪ್ಪಂದಿರಿಗೆ ಎಣ್ಣೆ ಸವರುವ ಕಾರ್ಯಕ್ರಮ,ಅವರಿಗೆ ಎಣ್ಣೆ ಹಚ್ಚುತ್ತ ಪುನಃ ಮೈ ಎಣ್ಣೆ ಆಗುವುದು.


ಅಮ್ಮ ಅಪ್ಪನಿಗೂ ಮಜ್ಜನ ಮಾಡಿಸಿದಾಗಿರುತ್ತದೆ.ಬಳಿಕ  ಚಿಕ್ಕಪ್ಪಂದಿರು ಬೆನ್ನು ತಿಕ್ಕಲು ಯಾರು ಇಲ್ಲದ ಕಾರಣ ನನ್ನ ಕರೆಯುತಿದ್ದರು,ಅವರಿಗೆ ಸ್ನಾನ ಮಾಡಿಸುತ್ತ ಮತ್ತೆ ನನಗೆ ಸಣ್ಣ ಮಜ್ಜನ.ನಾಳಿನ ಪಟಾಕಿ ಹೊಟ್ಟಿಸುವ ಕನಸಲ್ಲೇ ನಿದ್ದೆಗೆ.

ದೀಪಾವಳಿ ದಿನ ಪಾಯಸದ ಊಟ, ಸಂಜೆ ಮತ್ತೆ ಹಣತೆ ಮತ್ತು ಪಟಾಕಿಗಳೊಂದಿಗಿನ ಆಟ, ಕೈಯಲ್ಲಿ ಅಂದು ಇದ್ದ ಕೋಡೆಕ್ ಕ್ಯಾಮೆರಾದಲ್ಲಿ ಪಟಾಕಿ ಸಿಡಿಯುವ ಚಿತ್ತಾರ ಸೆರೆಹಿಡಿಯುವ ತವಕ,ಫೋಟೋ ಡೆವೆಲೋಪ್ ಅದ ಬಳಿಕ ಹಿಂದಿನ ವರುಷದ ಫೋಟೋ ಒಡನೆ ಈ ವರುಷದ ಫೋಟೋ ಹೋಲಿಸುವುದು.

ಎರಡನೇ ದಿನ ಅಂಗಡಿಪೂಜೆ, ಅಗಂಡಿಪೂಜೆ ಯಲ್ಲಿ ಸಿಕ್ಕ ಸ್ವೀಟ್ಸ್ ತಿನ್ನಲು ನನ್ನಲ್ಲಿ ಮತ್ತು ಅಕ್ಕನಲ್ಲಿ ಪೈಪೋಟಿ.ಅಪ್ಪ ನಮ್ಮಿಬ್ಬರಿಗೂ ಒಂದೊಂದು ಬಾಕ್ಸ್ ಸ್ವೀಟ್ಸ್ ಕೊಡುತಿದ್ದರು, ಎರಡು ದಿನ ಅವ್ವೆ ನಮ್ಮ ಸರ್ವಸ್ವ ಅವಳು ಮಲಗಿರುವಾಗ ಅವಳ ಬಾಕ್ಸ್ ನಿಂದ ಗೊತ್ತಾಗದಂತೆ ಕದ್ದು ತಿಂದಿದ್ದು ಉಂಟು, ಅವಳೂ ನನ್ನಿಂದ ತಿಂದಿದ್ದು ಉಂಟು !!!


ಮಾರನೆ ದಿನ ಗೋ ಪೂಜೆ, ಈಗ ಕೊಟ್ಟಿಗೆ ಶ್ರಂಗರಿಸುವ ಕೆಲಸ, ಮಾವಿನ ತೋರಣ ಕಟ್ಟುವುದು, ತಂದೆಯವರು ಹಸುವಿಗೆ ಮೀಯಿಸಲು ಕರುವಿಗೆ ನನ್ನ ಸ್ನಾನ, ಬಳಿಕ ಅವುಗಳ ಶರೀರದಮೇಲೆ ಶೇಡಿ ಕರಗಿಸಿ ಬ್ರುಶ್ ಮೂಲಕ ಚಿತ್ತಾರ ಮೂಡಿಸುವುದು. ಅವುಗಳಿಗೂ ಗೊಂಡಿಗೆಮಾಲೆ ಅರ್ಪಿಸುವುದು. ಅಮ್ಮ ಒಳ ಮನೆಯಲ್ಲಿ ಗೋವಿಗೆ ಪಂಚಕಜ್ಜಾಯ, ಹಾಗು ಇತರ ತಯಾರಿಯಲ್ಲಿ ಬ್ಯುಸಿ ಆಗಿರುತಿದ್ದರು.


ಮೊದಲು ಗೋವಿನ ತಲೆಗೆ ಎಣ್ಣೆ ಸವರುವುದರಿಂದ ಗೋವುಪೂಜೆ  ಆರಂಭ. ಅಮ್ಮ ಗೋವಿಗೆ ಕುಂಕುಮದಿಂದ ಚಂದದೊಂದು ಚಂದಿರನ ಬೊಟ್ಟು ಇಡುತಿದ್ದರು.ಬಳಿಕ ಒಂದು ಹರಿವಾಣ ತುಂಬಾ ಭತ್ತ, ಬಾಳೆಹಣ್ಣು ,ಮತ್ತು ಮಾಡಿದ ಪಂಚಕಜ್ಜಾಯ ದ ನೈವಿದ್ಯ ಗೋವಿಗೆಮತ್ತು ಕರುವಿಗೆ.ಅಪ್ಪ ಆರತಿ ತೋರಿಸುತಿದ್ದರೆ ಅಕ್ಕನ ಜಗಾಟೆಗೆ ನನ್ನ ಮಾಲೆ ಪಟಾಕಿ,ಬೀಡಿ ಪಟಾಕಿಗಳ ಹಿಮ್ಮೇಳ.


ಕೊಟ್ಟಿಗೆಯಲ್ಲಿ ಗೋವು ಮತ್ತು ಕರುವಿಗೆ ಸಂಭ್ರಮ ಪಡುತಿದ್ದರೆ ನೀಯತ್ತಿನ ನಾಯಿಗೆ ಮನಸಲ್ಲೇ ಅಸೂಯೆ ಮೂಡುತ್ತಿತ್ತು, ಜೊತೆಗೆ ನಮ್ಮ ಪಟಾಕಿ ಸದ್ದಿಗೆ ಒಂದುವಾರ ಪೇಟೆಯಲ್ಲೇ ಇರುತಿತ್ತು :(  






ವರುಷ ಕಳೆಯುತಿದ್ದಂತೆ ಏಲ್ಲವೂ ಬದಲಾಯಿತು,ಚಿಕ್ಕಪ್ಪಂದಿರಿಗೆ ಮದುವೆ ಆಗಿ ಮನೆ ಬೇರೆಯಾದವು, ಜಗಳವಾಡುತಿದ್ದ ಬಾಲ್ಯ ಮುಗಿದೇ ಹೋಯಿತು.ತಂದೆಯವರಿಗೆ ಕಾಲು ನೋವು ಬಂದಾಗಿಂದ ಕೊಟ್ಟಿಗೆ ಕಟ್ಟಿಗೆ ತುಂಬುವ ಕೋಣೆ ಆಯಿತು. ಅಕ್ಕನಿಗೂ ಮದುವೆ ಆಯಿತು, ಅಮ್ಮನಿಗೆ ಈಗ ಆ ತಾಮ್ರದ ಕೊಡದಲ್ಲಿ ಮುಹೂರ್ತ ಮಾಡಲಾಗುದಿಲ್ಲ ಈಗ ಸಣ್ಣ ಗಾತ್ರದ ತಾಮ್ರದ ಬಿಂದಿಗೆಯಲ್ಲೇ ಕರ್ತವ್ಯ ಮುಗಿಸುತ್ತಾರೆ.ನೀರನ್ನು ಸೇದಿ ಹಾಕುವ ಪುರೋಸೋತ್ತಿಲ್ಲ ಯಾರಿಗೂ , ನಳ್ಳಿಯೇ  ಗಂಗೆ ಎಂಬ ಭಾವ ಬಂದಾಯ್ತು.


ಕಳೆದ ಎರಡು ವರುಷದಿಂದ ಅಂತು ಇವೆಲ್ಲ ನನ್ನ ಮನದಲ್ಲಿದೆ ಹೊರತು ಅನುಭವಿಸುವ ಯೋಗವಿಲ್ಲ.೨೦೦೯ ನೇ ದೀಪಾವಳಿಯ ರಾತ್ರಿಯಂದೇ ನಾಗ್ಪುರ್ ದಿಂದ ಹೈದರಾಬಾದ್ ಗೆ ಬರಬೇಕಾಗಿತ್ತು, ರಜೆ ಕೇಳಿದರೂ ಕೊಟ್ಟಿರಲಿಲ್ಲ. ಒಂದು ದಿನದ ರಜೆ ಅಲ್ಲಿ ಊರಿಗೆ ಹೋಗಿ ಅಲ್ಲಿಂದ ಪುನಃ ಹೈದರಾಬಾದ್ ತಲುಪುವುದು ಕಷ್ಟವೇ ಸರಿ ಎಂದು, ನಾನು ಸೇರಿದಂತೆ ನಾಲ್ಕು ಮಂದಿ ಟ್ರೈನ್ ನಲ್ಲೆ ದೀಪಾವಳಿ ಸಿಹಿ ತಿಂದಿದ್ದೆವು :(
ಕಳೆದ ವರ್ಷ ಕೆಲಸದ ಅತಿ ಒತ್ತಡ ದಿಂದ ದೀಪಾವಳಿಯ ಮೂರು ದಿನವೂ ಆಫೀಸ್ ನಲ್ಲಿ ಉಳಿಯ ಬೇಕಾಗಿತ್ತು. ಮಾಲ್ ನ  ದೀಪಾವಳಿಯನ್ನು ಆಚರಿಸುವ ಹೈದರಾಬಾದ್ ಜನರನ್ನು ನೋಡಿ ಮತ್ತೆ ಹಳೆ ನೆನಪನ್ನು ಗುನುಗಿಸುವ ಯೋಗ ನನ್ನದಾಗಿತ್ತು.
ಇಂದು  ಪುನಃ ಅದೇ ರಾಗ, ಬರೇ ಫೇಸ್ಬುಕ್  ನಲ್ಲಿ ಮೆಸ್ಸೇಜ್ ಹಾಕಿ ದೀಪಾವಳಿ ಆಚರಿಸುತಿದ್ದೇನೆ. ನೂರಕ್ಕೂ ಮೀರಿ ಇರುವ ಗೆಳೆಯರ ಬಳಗದಲ್ಲಿ ಯಾರಿಗೆ ಎಸ್ಸೆಮ್ಮೆಸ್ಸು ಕಳಿಸುವುದು ಯಾರನ್ನು ಬಿಡುವುದು ತಿಳಿಯುತ್ತಿಲ್ಲ.TRAI ನ ಹೊಸ ನಿಯಮ ಕಳಿಸುವ ಎಸ್ಸೇಮೆಸ್ಸಿನ ಮೇಲೂ ನಿರ್ಭಂದ ವಿಟ್ಟಿದೆ.


ಎಲ್ಲರೂ ಸಿಹಿ ತಿನುತ್ತಾ, ಹಬ್ಬ ಆಚರಿಸುತ್ತಾ ನನ್ನ ನೆನಪಿಸಿದರೆ ನಿಮ್ಮ ಮನೆಯಲ್ಲೇ ನನ್ನ ಈ ವರುಷದ ದೀಪಾವಳಿ ಆಚರಿಸುವೆನು.
ಕಾಮತ್ ಕುಂಬ್ಳೆ


Friday, October 7, 2011

ಬೆಂಚೇಶ್ವರ......

ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....



ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ,
ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ

ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡರ್
ಬೆಂಚ್ ಬೇಕು ಬೇಕು ಬೇಕು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಆ ಮ್ಯಾನೇಜರ್
ಕೋಡ್ ಮಾಡು ಮಾಡು ಮಾಡು ಅಂತಾನೆ
ರೆಸ್ಟ್ ಬೇಡ ಅನ್ನೋರ್ಉಂಟೆ ಬೆಂಚೇಶ್ವರ, ಕೋಡ್ ಮಾಡಿ ಏನ್ಮಾಡ್ಲಿ ಒಂದೇ ಸಲ ...?

ತನ ಡೂನ ಡೂನ ಡೂನ ಡೂ ಡೂನ

ಸಿ ಪ್ಲುಸ್ಸ್ ಪ್ಲುಸ್ಸು, ಜಾವ, ಡಾಟ್ ನೆಟ್ಟು... ಬಾಯ್ ಹಾರ್ಟು ಮಾಡು
ಓ ಮೈ ಗೋಡ್ಜಿಲ್ಲಾ .. ವಾಟ್ ಅ  ಮೆಮೊರೈಸಶನ್ ....
ಹೈಯೆಷ್ಟು ಲೈನು ಕುಟ್ಟೊನೇ ವೇಷ್ಟು, ಅರ್ದಕ್ಕೆ ನಿಲ್ಸಿ ಒಪ್ಪ್ಸಿದೋನೇ ಬೋಸು...
ಕೀ ಬೋರ್ಡೆ ಸರಿ ಇಲ್ಲ ಬೆಂಚೇಶ್ವರ, ಇನ್ನೆಷ್ಟು ಕುಟ್ಟೋದು ಬಡಗಿ ತರಾ ....
ಟ್ರೈ ಮಾಡು ಏನಾದ್ರೂ ಹೊಸ ತಾರಾ.. ತಲೆಯಲ್ಲೇ ಓಡ್ಸು ಕೊಡಿನ್ ಸರಾ ...

ಹೇ ಅಮ್ಮಾ ಹತ್ತಾದ್ರೂ ಇಲ್ಲೇ ಬಾಕಿ..
ಹೇ ರಾಮ ಹನ್ನೆರಡಕ್ಕೆ ಮುಂದಿನ ಟ್ಯಾಕ್ಸಿ ....

ಕಾಂಫಾರೆನ್ಸು ಹಾಲಲ್ಲಿ ನನ್ನ ಡ್ಯಾಮೆಜರ್
ಮಾರ್ನಿಂಗ್ ಶಿಫ್ಟ್ ಗೆ ಬಾ ಕಂದ ಅಂತಾನೆ ...
ಆಫೀಸಿನಲ್ಲಿ ನಾನೇ ಒಬ್ನೇ ಒಳ್ಳೆ  ಪುಣ್ಯಾತ್ಮ
ಎರಡೂ ಶಿಫ್ಟು ಕುಬಿಕಲ್ ನಲ್ಲೇ ಕೊಳಿತೇನೆ.....
ಆಫೀಸೇ ಸರಿಯಿಲ್ಲ ಬೆಂಚೇಶ್ವರ...
ಕೆಲಸಾನೂ ಇರಬಾರ್ದ ಪ್ರಯ್ಮರಿ ತರಾ ....

ತನ ಡೂನ ಡೂನ ಡೂನ ಡೂ ಡೂನ


ಕುಟ್ಕೊಂಡು ಕುಟ್ಕೊಂಡು ಕುಟ್ಕೊಂಡಿರು, ಡೌಟ್ ಇದ್ರೆ ಗೂಗಲ್ ನ ಕೇಳು ಗುರೂ ...
ಜುನಿಯರ್ಸ್ ಹೋಗ್ತಾರೆ ಯುಎಸ್ಸು ಫಾರಿನ್ ಗುರು, ಬಾಯ್ ಮಾಡ್ತಾ ನೀನು ಇಲ್ಲೇ ಕುಂತಿರು..
ಒಂಸೈಟು ಅನ್ನೋದೊಂದು ಬಣ್ಣದ ಟೋಪಿ ..
ಇಲ್ಲಿಂದ ಬಿಡ್ಸ್ಕೊಂದು ಹೋಗ್ಲಾದೊನೆ ಪಾಪಿ ...
ಏಳಕ್ಕೆ ಫೈಲ್ ಅದ ಶೇಕ್ಸ್ ಸ್ಪಿಯರ್  ಪುಣ್ಯಾತ್ಮ
ಇಂಗ್ಲಿಷ್ ನಲ್ಲಿ  ಸಾಮ್ರಾಜ್ಯ ಕಟ್ಟಲಿಲ್ವೇ...
ಅನಿಸೋದನ್ನೇ ಮಾಡೋನೇ ಪುಣ್ಯಾತ್ಮ ...
ಮಾಡೋಕೆ ನಮಗೆ ಪುರೋಸೋತ್ತು ಸಿಕ್ಕಲ್ವೆ....!!!!!
ಸಿಸ್ಟಮ್ಮೆ ಸರಿ ಇಲ್ಲ ಬೆಂಚೇಶ್ವರಾ ....
ಸಿ.ಇ.ಓ  ಆಗಿ ಬಿಡಲೇ ಒಂದೇ ಸಲಾ ...

 ಕ್ಯುಬಿಕಲ್ ಗೋಳು ಶಾಶ್ವತ....!!!



  ಕಾಮತ್ ಕುಂಬ್ಳೆ

Friday, September 23, 2011

ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ

ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ
ಅನುಮೋದಿಸಿದೆ ನನ್ನನ್ಯಾಕೋ ನಿನ್ನ ಹಾಜರಿಯಲಿ
ನೇವರಿಸಿದೆ ನೀನ್ಯಾಕೆ ನನ್ನ ನೆನಪಿನ ಸಂಚಿಯ
ಅಳವಡಿಸಿದೆ ನಿನ್ನನ್ಯಾಕೋ ನನ್ನ ದಿನಚರಿಯಲಿ

ಉಸುರಿದೆ ನೀನ್ಯಾಕೆ ನಸುಕಲಿ ಮನಸಿನ ಸಂದಿಯಲಿ
ಅನುಸರಿಸಿದೆ ಅದನ್ಯಾಕೋ ನನ್ನ ಕವನದಲಿ
ಪಸರಿದೆ ನೀನ್ಯಾಕೆ ಮುಸುಕಲಿ ಕನಸಿನ ಕಂತೆಯಲಿ
ಅನುನಯಿಸಿದೆ ದಿಂಬನ್ಯಾಕೋ ನಿನ್ನ ಕನವರಿಕೆಯಲಿ

ಆಕರ್ಶಿಸಿದೆ ನೀನ್ಯಾಕೆ ಜಾರುವ ರವಿಯನು ನಿನ್ನಲ್ಲಿ 
ವಿಶ್ಲೇಷಿಸಿದೆ ನಾನ್ಯಾಕೋ ನಿನ್ನ ಮೂಡುವ ಶಶಿಯಲಿ
ಸಂರಕ್ಷಿಸಿದೆ ನೀನ್ಯಾಕೆ ನನ್ನ ಮನದಾಳದ ಭಾವನೆಯಲಿ
ಅನ್ವೆಷಿಸಿದೆ ನನ್ಯಾಕೋ ಅದ ತಿಳಿಯದೆ  ಜನ ಸಂತೆಯಲಿ

ಆಜ್ಞಾಪಿಸಿದೆ ನೀನ್ಯಾಕೆ ಅವಿರತ ಭಾವದ ಚಿಲುಮೆಗೆ
ಆಸ್ವಾದಿಸಿದೆ ನಾನ್ಯಾಕೋ ಸಿಹಿ ಸುಖವ ವಿರಹದಲಿ  
ಆಹ್ವಾನಿಸಿದೆ ನೀನ್ಯಾಕೆ ನೂರು ಬಯಕೆಯ ಗೊಂದಲವನು
ಅಹ್ಲಾದಿಸಿದೆ ನಾನ್ಯಾಕೋ ಸೋಲನು ನಿನ್ನ ಗೆಲುವಲಿ 

ನಿಮ್ಮ
ಕಾಮತ್ ಕುಂಬ್ಳೆ

Thursday, September 15, 2011

ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ...ನನ್ಮೇಲೆ ಚೂರು ಪಾರು ಕರುಣೆ ಪರುಣೆ ತೋರಿಸ್ರಿ..

ಹಂಗೇ ಇನ್ನೊಂದು ಕವನ ಯೋಗರಾಜ್ ಭಟ್ ಸ್ಟೈಲ್ ನಲ್ಲಿ ...


ನಿಮಗಾಗಿ ನೂರು ಸುಳ್ಳ ಸಾಲು ರೆಡಿ ಮಾಡಿರುವೆ
ಕೇಳೋಕೆ ನಿಮಗೆ ಪುರಸೊತ್ತು ಇಲ್ಲ್ವೇನ್ರಿ ...?
ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ
ನನ್ಮೇಲೆ ಚೂರು ಪಾರು ಕರುಣೆ ಪರುಣೆ ತೋರಿಸ್ರಿ

ಎದ್ದು ಸ್ನಾನ ಮಾಡದೇ ಸುರಿದ ಪರ್ಫ್ಯುಂ ಆರಿ ಹೋಗ್ತಿದೆ
ಬ್ರಾಂಡ್ ಹೆಸರು ಕೆಳಲಾದರು ಬಂದು ಮಾತಾಡಬಾರ್ದೆ
ಲವ್ ಮೂಡಲು ಕಾರಣ ಬೇರೆ ಬೇಕಿದೆಯೇನ್ರಿ ...?
ಹೊಟ್ಟೆ ಖಾಲಿಯಿದ್ದರೇನು ಪೆಟ್ರೋಲ್ ಟ್ಯಾಂಕ್ ಫುಲ್ಲಿದೆ
ಬಸ್ ನ ರಶ್ ನ ನಡುವೆ ಬೆವರುತ್ತ ನಿಂತು ಹೋಗ್ತೀರಿ
ಹಿಂಬದಿಯ ಖಾಲಿ ಸೀಟ್ ಗೆ ಇನ್ವಿಟೇಶನ್ ಕಳಿಸಲೇನ್ರಿ ...?

ಕಂಜುಸಿ ಬುದ್ದಿ ಬಿಟ್ಟು ಒಂದು ನಗೆ ಉದಿರಿಸಿದರೆ ಏನನ್ನ ಕಳಕೊಳ್ತ್ರೀ..?
ಬದಲಿಗೆ ಫೆಸ್ ಬುಕ್ ನ ಗೋಡೆ ಬರೆದು ಕೊಡುವೆ  ..
ಅವಳು ಅಲ್ಲಿ ಫ್ರೆಂಡ್ ಆದ್ರೆ ಬೇರೆ ಫ್ರೆಂಡ್ಸ್ ಗಳ ಸ್ಟೇಟಸ್ ಓದಿ ಮಾಡುವುದೆನಿದೆರ್ರಿ!!!
ಮೊಬೈಲ್ ನಂಬರ್ ಎಸೆದರೂ ಸಾಕು ನನ್ನೆದುರಿಗೆ
ನಾನೇ ಎಸ್ಸೆಮ್ಮೆಸ್ಸು, ಕರೆ ಮಾಡುವೆ  ನಿಮ್ಮ ಮೊಬೈಲ್ಗೆ
ಹುಡುಗೀರ ಫ್ರೀ ಸರ್ವಿಸ್ ಮಿಸ್ ಕಾಲ್ ಅನ್ನೋದನ್ನ ಮತ್ತೆ ಜ್ಯಾಪಿಸ್ತೀನ್ರಿ ...!!!

ನಾಳೆ ನನಗಿಂತ  ಒಳ್ಳೆ ಹುಡುಗಿ ನಿಂಗೆ ಸಿಕ್ತಾಳೆ
ಅಂತ ಆಶೀರ್ವಾದ ಮಾಡಿ ಹೋದರು ಪರವಾಗಿಲ್ಲ
ಇವತ್ತು ಒಬ್ಬಳು ಕನಸಲಿ ಬಂದು ಹೋದ್ರೆ ಸಾಕ್ರಿ
ಪ್ರೀತಿ ಮಧುರ ತ್ಯಾಗ ಅಮರ ಅಂತ ಹೇಳ್ಲಿಲ್ವಾ ಬಟ್ರು
ಹಂಗು ಹಿಂಗೂ ಒಬ್ಬಳ ಕನಸ ಮರೆತು, ಈ ಹಾಡ ಹಾಡುತ್ತಾ
ನಾಳೆನೂ ಹಾಸಿಗೆ ಹಾಸುವೆ ಇನ್ನೊಬ್ಬಳ ತ್ಯಾಗಕ್ಕೆ  ....!!!

ಕಾಮತ್ ಕುಂಬ್ಳೆ

Monday, August 15, 2011

ಕಿಚ್ಚು :: ಹೊತ್ತಿ ಉರಿದ ಮೇಲಿನ ಆಶಾಕಿರಣ ...(ಕೊನೆಯ ಭಾಗ)




೨೪


ಯಾವುದೇ ಚಿಂತೆ ಇರದ ಮಡದಿ ಮತ್ತು ೩ ವರುಷದ ಒಂದು ಮಗುವಿನೊಂದಿಗೆ ಸುಖದ ಜೀವನ ನಡೆಸುತ್ತಿದ್ದೆ. ಸ್ವರ್ಗವೇ ನಮ್ಮ ಮನೆಯಲ್ಲಿ ನಲಿಯುತ್ತಿತ್ತು.ಹೀಗಿರಲು ಒಂದು ದಿನ ನನ್ನ ರಮ್ಯ ಕಡಲಿನಲ್ಲಿ ಬ್ರಹತ್ ಅಲೆಯೇ ಅಪ್ಪಳಿಸಿತು. ಒಂದೇ ವೇಗದಲ್ಲಿ ಸಾಗುತ್ತಿದ್ದಪುಟ್ಟ ಬಾಳನೌಕೆ ಸುಂಟರಗಾಳಿಗೆ ಸಿಕ್ಕಿ ತತ್ತರಿಸಿ ಹೋಯಿತು.


ಜೀವಾವದಿ ಶಿಕ್ಷೆಗೆ ಒಳಗಾಗಿದ್ದ ನನ್ನ ಅಮ್ಮ ಜೀವನದಲ್ಲಿ ನೊಂದು ತನ್ನ ಬಂಧಿಕೋಣೆಯಲ್ಲೇ ಕೊನೆ ಉಸಿರು ಎಳೆದರು ಎಂಬ ವಾರ್ತೆಯನ್ನು ಗಣೇಶಣ್ಣ ಫೋನ್ ಮಾಡಿ ತಿಳಿಸಿದ್ದರು.ಇಲ್ಲಿವರೆಗೆ ನನ್ನ ಪೂರ್ವಾಪರ ತಿಳಿದಿರದ ನನ್ನ ಪತ್ನಿ ಸ್ವರ್ಣಲತಾಳಿಗೆ ಈಗ ನನ್ನ ಹಿನ್ನಲೆ ತಿಳಿಸುವುದು ಅನಿವಾರ್ಯವಾಗಿತ್ತು.

ಊರಿನಲ್ಲಿ ಸೂರಿರದೆ ನಾನು ರಾಮುನೊಂದಿಗೆ ಅವನ ಕೋಣೆಯಲ್ಲೇ ೨ ವಾರ ಕಳೆದೆ. ವಸುಗಾಗಿ ಆ ಎರಡು ವಾರದಲ್ಲಿ ಹುಡುಕದ ಸ್ಥಳವಿರಲಿಲ್ಲಆದರೆ ಅವಳು ನನಗೆ ಸಿಗಲೇ ಇಲ್ಲ. ಅದೇ ಸಮಯದಲ್ಲಿ ನಾನು ಹುಟ್ಟಿ ಬೆಳೆದ ಮನೆಗೆ ಒಂದು ಬಾರಿ ಭೇಟಿ ನೀಡಿ ಅವರ ದಿನಚರಿಯನ್ನು ದೂರದಿಂದಲೇ ನೋಡಿದೆವಸಂತನು ೫  ನೇ ತರಗತಿಯಲ್ಲಿ ಓದುತ್ತಿದ್ದನುನನ್ನ ಹಿರಿ ತಂಗಿ ಧನು ೬ ಕ್ಕೆ ಶಾಲೆ ನಿಲ್ಲಿಸಿ ಅಕ್ಕ ಪಕ್ಕದವರ ಮನೆಗೆಲಸಕ್ಕೆ ಹೋಗಿ ಉಳಿದ ೭ ಮಂದಿಯ ಹೊಟ್ಟೆಯ ಭಾರ ಹೊತ್ತಿದ್ದಳುನಾನು ಅವಳ ಮುಂದೆ ಹೋದಾಗ ನನ್ನ ಸಂಭಂದವನ್ನೇ ನಿರಾಕರಿಸಿದಳು.ನನ್ನೆವರೆಂದು ಇದ್ದ ಎಲ್ಲರೂ ನನ್ನಿಂದ ದೂರವಾದ ಮೇಲೆ ಊರಿನಲ್ಲಿ ಇರಲು ಮನಸಿರಲಿಲ್ಲಉರು ಬಿಟ್ಟು ಮತ್ತೆ ಮುಂಬೈ ಸೇರಿದೆ.

ರಾಮರಾಯರ ಮೇಲೆ ಅಂದು ಅವರು ನನಗೆ ಊರಿಗೆ ಹೋಗಲು ಬಿಡದ ಕಾರಣ ಇಲ್ಲದ ಧ್ವೆಶವಿತ್ತುಅದೇ ಕಾರಣಕ್ಕಾಗಿ ಅವರ ಹೋಟೆಲಿನ ಕೆಲಸ ಬಿಟ್ಟಿದ್ದೆ. ಮುಂಬೈನ ಜೀವನಕ್ಕೆ ಹೊಂದಿಕೊಂಡಿದ್ದ ನನಗೆ ಹೊಸ ಕೆಲಸ ಹುಡುಕುವುದು ಕಷ್ಟವಾಗಲಿಲ್ಲಅವರ ಬೆಂಗಳೂರಿನ ಪ್ರತಿಸ್ಪರ್ಧಿ ಪ್ರಭಾತ್ ಹೋಟೆಲ್ ನವರು ಆಗತಾನೆ ಮುಂಬೈನಲ್ಲಿ ಹೊಸ ಹೋಟೆಲ್ ಶುರು ಮಾಡಿರುವ ವಿಚಾರ ತಿಳಿಯಿತು. ಪ್ರಭಾತ್ ಹೋಟೆಲ್ ನ ಮಾಲೀಕ ಪ್ರಭಾಕರ್ ರಾಮರಾಯರ ದಾಯಾದಿ. ಅವರ ಹೋಟೆಲ್ ನಲ್ಲಿ ಕೆಲಸ ಗಿಟ್ಟಿಸಿಕ್ಕೊಂಡೆ.

ಅರ್ಥವಿರದ ಸಂಪಾದನೆ ನನ್ನದಾಗಿತ್ತು,ಎಲ್ಲಾ ಖರ್ಚು ಹೋಟೆಲ್ನಲ್ಲಿ ಸಾಗುತಿತ್ತು. ಹಣದ ಮೋಹ ಕಮ್ಮಿ ಯಾಗಿತ್ತುಸಂಪಾದಿಸಿದ ಹಣ ಮನೆಯವರು ಸ್ವೀಕರಿಸಲು ಒಲ್ಲೆ ಅಂದ ಮೇಲೆ ಯಾರಿಗಾಗಿ ಸಂಪಾದಿಸಲಿ ಎಂಬ ಭಾವವು ಹುಟ್ಟಿತು,ಅದೇ ಸಮಯದಲ್ಲಿ ಮುಂಬೈನ ಒಂದು ಅನಾಥಾಶ್ರಮದ ಸಂಪರ್ಕ ಬೆಳೆಯಿತು. ನನ್ನ ಸಂಪಾದನೆಯನ್ನು ಆ ಅನಾಥರ ಬಾಳಿಗೆ ಕೊಡಲು ಶುರು ಮಾಡಿಕ್ಕೊಂಡೆ.

ಆ ಅನಾಥಾಶ್ರಮದಲ್ಲಿ ಅದೆಷ್ಟೋ ನತದೃಷ್ಟರಿದ್ದರುಅಂಥವರಲ್ಲಿ ಸ್ವರ್ಣಲತಾ ಒಬ್ಬಳು. ಕನ್ನಡದ ಹುಡುಗಿ. ಅವಳೂ ಹುಚ್ಚು ಪ್ರೀತಿಯ ಮಾಯಾ ಬಲೆಗೆ ಸಿಕ್ಕಿ ಮುಂಬೈ ಸೇರಿದವಳು. ಪ್ರೀತಿಯ ನಾಟಕ ಆಡಿ ಯಾವನೋ ಮಹಾನುಭಾವ ಅವಳನ್ನು ದೇಹಮಾರಾಟದ ಧಂದೆಗೆ ಮಾರಿದ್ದಅಲ್ಲಿಂದ ಹೇಗೋ ತಪ್ಪಿಸಿಕ್ಕೊಂಡು ಬಂದ ಆ ಹುಡುಗಿ ಈ ಆಶ್ರಮ ಸೇರಿದ್ದಳು. ಎಲ್ಲಾ ಅನಾಥರಲ್ಲಿ ತೋರಿಸುತ್ತಿದ್ದ ಪ್ರೀತಿಯನ್ನು ಅವಳಲ್ಲಿಯೂ ತೋರಿಸಿದ್ದೆ ಆದರೆ ದಿನ ಕಳೆದಂತೆ ಒಬ್ಬೊರಿಗೊಬ್ಬರು ಅನ್ಯೋನ್ಯರಾಗುತ್ತ ಹೋದೆವುಜವಾಬ್ಧಾರಿ ಹೊತ್ತ ಪ್ರಭುದ್ದ ಮನಸ್ಸು ಪ್ರಭುದ್ದ ಪ್ರೀತಿ,ಅದರ ಗಾಂಭೀರ್ಯಮತ್ತು ಅಘಾದತೆ ಅರ್ಥ ಮಾಡಿಕ್ಕೊಂಡಿತ್ತು.

ವಸುಂದರ ಮತ್ತು ನನ್ನಲ್ಲಿನ ಹದಿಹರೆಯದ ಹುಚ್ಚು ಪ್ರೀತಿ ಅದಾಗಿರಲಿಲ್ಲಒಬ್ಬರನ್ನೊಬ್ಬರು ಅಗಲಿ ಇರಲಾರದ ಪ್ರೌಡ ಪ್ರೀತಿ ಅದಾಗಿತ್ತು. ಇಲ್ಲಿ ನಮ್ಮ ಪ್ರೀತಿಗೆ ಶತ್ರುಗಳ ಕಾಟವು ಇರಲಿಲ್ಲ.
ಮುಂದಿನ ೨ ವರ್ಷದಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡಾದ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದೆವುಅನಾಥಾಶ್ರಮದವರ ಮಧ್ಯಸ್ತಿಕೆಯಲ್ಲಿ ಮದುವೆಯೂ ಆಯಿತು.

ಸುಖಸಂಸಾರವನ್ನು ಶುರುಮಾಡಿದೆವು.ಪುಟ್ಟ ಜೀವನ್ ನ ಆಗಮನವೂ ಆಯಿತು,ಇವೆಲ್ಲದರ ನಡುವೆ ನನ್ನ ಹಿಂದಿನ ದಿನಗಳು ಮೆಲ್ಲನೇ ಮರೆಯಾದವು.



ಇಲ್ಲಿವರೆಗೆ ನನ್ನ ಹಿನ್ನಲೆಯನ್ನು ನಾನು ಅವಳಲ್ಲಿ ಹೇಳಿರಲಿಲ್ಲ ಆದರೆ ಇವತ್ತು ಬಂದ ಗಣೇಶಣ್ಣನ ಕರೆ ಸ್ವರ್ಣಲತಾಳಿಗೆ ನನ್ನ ಪೂರ್ವಾಪರ ಹೇಳಲೇ ಬೇಕಾಯಿತುಅವಳಲ್ಲಿ ನನ್ನ ಹದಿಹರೆಯದಲ್ಲಿ ನಡೆದ ಎಲ್ಲಾ ಕಥೆನನ್ನ ವಸುಂದರನ ಪ್ರೀತಿಮನೆಯವರ ವಿರೋಧಇದೇ ವಿಚಾರಕ್ಕಾಗಿ ನಡೆದ ಅಪ್ಪನ ಕೊಲೆ ಅಮ್ಮನ ಸೆರೆವಾಸಮುಂಬೈ ಜೀವನವಸುಂದರನ ಅಗಲಿಕೆಅವಳ ಹೆತ್ತವರ ಅವಸಾನ ಎಲ್ಲವನ್ನು ಹೇಳಿದೆ.

ಸ್ವರ್ಣಲತಾಳ ಪಾಲಿಗೆ ಈಗ ನಾನುಅವಳನ್ನು ೮ ವರ್ಷ ಹಿಂದೆ ಮೋಸಮಾಡಿದ ಆ ಮಹಾನುಭಾವ ಇಬ್ಬರೂ ಒಬ್ಬರಂತೆ ಕಂಡೆವು ,ನನ್ನಲ್ಲಿ  ಅವಿತಿದ್ದ ರಾಕ್ಷಸ ಅವಳ ಕಣ್ಣಿಗೆ ಬಿದ್ದ ರಾಕ್ಷಸ ಮತ್ತೆ ನಮ್ಮ ಸುಖಸಂಸಾರದ ಬಾಳನೌಕೆಯನ್ನು ಮುಳುಗಿಸಿ ಬಿಟ್ಟ. ೫ ವರುಷದ ಗಂಡ ಹೆಂಡತಿ ಎಂಬ ಮತ್ತೊಂದುಕ್ಕೊಂಡಿ ನನ್ನ ಜೀವನ ಸರಪಳಿಯಿಂದ ಕಳಚಿಕ್ಕೊಂಡಿತು೩ ವರುಷದ ಜೀವನ್ ನೊಂದಿಗೆ ನನ್ನಿಂದ ದೂರ ಹೋದಳು.


೨೫ 



ನನ್ನ ಈ ೨೫ ವರುಷದಲ್ಲಿ ಹದಿಯರೆಯದಲ್ಲಿ ವಸುಂದರ ಹಚ್ಚಿದ ಪ್ರೇಮಜ್ಯೋತಿ ಜೀವನವನ್ನೇ ಸುಟ್ಟು ಹಾಕಿತ್ತುನಾನು ಯಾವ ಹೆಜ್ಜೆ ಇಟ್ಟರು ಅದು ಅಲ್ಲಿ ತನ್ನ ಅಸ್ತಿತ್ವ ತೋರಿಸುತಿತ್ತುಇಬ್ಬರ ಮನೆಯವರನ್ನೂ ಅವರ ಜೀವನವನ್ನೂ ಅದು ಬಲಿ ತೆಗೆದುಕ್ಕೊಂಡಿತ್ತು,ನನ್ನಿಬ್ಬರ ಆ ಹುಚ್ಚು ಕೋತಿ ಮನಸ್ಸಿನ ಹದಿಹರೆಯ ಇಡಿ ಜೀವನ ಸುಡುವ ಕಿಚ್ಚಾಯಿತು ಸ್ವರ್ಣಲತಾ ನನ್ನನ್ನು ಬಿಟ್ಟು ಹೋದ ಬಳಿಕ ಪ್ರೀತಿ-ಪ್ರೇಮದಲ್ಲಿ ನಂಬಿಕೆ ಹೊರಟು ಹೋಯಿತು. ಜೀವನ ಬೇರೆಯವರ ಸೇವೆಗೆ ಮೀಸಲಿಟ್ಟೆಬೇರೆಯವರ ನಗುವಲ್ಲಿ ನನ್ನ ನಗುವನ್ನುಕಾಣಲು ಆರಂಭಿಸಿದೆ.ಹೋಟೆಲ್ ನಲ್ಲಿ ಮಾಣಿಯಾಗಿ ದುಡಿಯುವುದನ್ನು ಬಿಟ್ಟೆನನ್ನದೇ ಆದ ಅನ್ನಪೂರ್ಣ ಕೆಟೆರರ್ಸ್ ಶುರು ಮಾಡಿಕ್ಕೊಂಡೆ.


ಮದುವೆ ಮುಂಜಿಯಲ್ಲಿ ಬರುತ್ತಿದ್ದ ಲಾಭವನ್ನು ಮುಂಬೈನ ಅದೆಷ್ಟೋ ಹಸಿದ ಅನಾಥ ಹೊಟ್ಟೆ ತುಂಬಿಸುವಲ್ಲಿ ವಿನಿಯೋಗಿಸಲುಆರಂಭಿಸಿದೆ. ನನ್ನ ಜೀವನದಲ್ಲಿ ಸಹಾಯಹಸ್ತದ ಸಾರ್ಥಕತೆ ನೋಡಲು ಆರಂಭಿಸಿದೆ.

ಪ್ರತಿ ಹೆಜ್ಜೆಯಲ್ಲೂ ಆ ಹದಿಹರೆಯದ ಹುಚ್ಚು ಪ್ರೀತಿ ನೆನಪಾಗುತಿತ್ತುಅಂದು ನಾವು ಆ ಹುಚ್ಚು ನಿರ್ಧಾರ ತೆಗೆಯದೆ ಇದ್ದರೆ ನಾನು - ವಸು ಸುಖ ಜೀವನ ನಡೆಸುತ್ತಿದ್ದೆವು ಎಂದು ಪ್ರತಿ ಕ್ಷಣ ಮನ ಕೊರಗುತ್ತಿತ್ತುಆ ಹುಚ್ಚು ಪ್ರೀತಿಯೇ ಸರ್ವಸ್ವ ಎಂಬ ವಾದ ಎಲ್ಲಾಸಂಭಂದವನ್ನು ಸುಟ್ಟು ಹಾಕಿತ್ತುನನ್ನವರು ಎನಿಸಿದವರು ನನ್ನಿಂದ ದೂರವಾದರು. ನಮ್ಮ ಜೀವನದ ಕನಸು ಕಾಣುವ ವಯಸ್ಸಲ್ಲಿ ಜೀವನವೇ ಇದು ಎಂದು ನಿರ್ಧಾರ ತೆಗೆದುಕ್ಕೊಂಡಿದ್ದೆವುಅದೇ ನಿರ್ಧಾರ ನಮ್ಮಿಬ್ಬರ ಜೀವನಕ್ಕೆ ಮುಳ್ಳಾಯಿತು. ಮನಸ್ಸು ಶರೀರ ಜವಾಬ್ಧಾರಿ ತೆಗೆದು ಕೊಳ್ಳುವಷ್ಟು ಪಕ್ವ ವಾಗಿರಲಿಲ್ಲ ಆ ವಯಸ್ಸಿನ್ನಲ್ಲಿ ಜವಾಬ್ಧಾರಿಯನ್ನು ವಿನಾಕಾರಣ ನಮ್ಮ ಮೈಮೇಲೆ ಎಳೆದು ಕೊಂಡಿದ್ದೆವು  ಆ ಭಾರ ಹೊರಲಾಗದೆ ಇಬ್ಬರೂ ಕುಸಿದು ಬಿದ್ದೆವು.

ಇಬ್ಬರ ನಡುವೆ ಏನಾದರು ವೈಮನಸ್ಯ ಬಂದಾಗ ಸಮಾಧಾನಿಸಲು ಮತ್ತು ಆ ವೈಮನಸ್ಯ ಬಗೆಹರಿಸಲು ಯಾರು ನಮ್ಮಿಬ್ಬರ ನಡುವೆ ಇರದೇ ಹೋದರುಗಾಳಿ ಬರುವ ದಿಕ್ಕಿಗೆ ಬಾಗುವ ಜ್ಯೋತಿಯಂತಹ  ಪುಟ್ಟ ಮನಸ್ಸುಬದುಕ ಪರೀಕ್ಷೆ ಎದುರಿಸಲಾಗದೆ ನಂದಿ ಹೋಯಿತುಹಿರಿಯರು ನಮ್ಮಿಬ್ಬರ ಪ್ರೀತಿಗೆ ಕಾವಲಿದ್ದರೆ ಆ ದೀಪವನ್ನು ನಂದದಂತೆ ನೋಡಿಕ್ಕೊಳ್ಳುತ್ತಿದ್ದರು. ನಂದುವ ದೀಪಕ್ಕೆ ಆಸರೆ ನೀಡುವ ದೂರವಾದ ಸಂಭಂದದ ಕೈಗಳು ಕೊನೆಗೂ ಬಾರದೆ ಹೋಯಿತು.ಮುಳುಗುವ ಜೀವನ ನೌಕೆ ಅದರಷ್ಟಕ್ಕೆ ಮುಳುಗಿತೇ ವಿನಃ ಮತ್ತೆ ಸುಳಿ ದಾಟಲು ಸಾಧ್ಯವಾಗಲಿಲ್ಲ.

ಜವಾಬ್ಧಾರಿ ಹೊರಬೇಕಾದ ಮಗನ ಬೇಜವಾಬ್ಧಾರಿ ನಿರ್ಧಾರಕ್ಕೆ ವಿನಾಕಾರಣ ಅಪ್ಪ ಅಮ್ಮ ನ ಜಗಳ ನಡೆದು ಹೋಯಿತುಪ್ರೀತಿಗೆ ಮನೆಯಜಮಾನ ಬಲಿಯಾದರೆ ಜವಾಬ್ಧಾರಿ ಹೊತ್ತ ಹೆತ್ತಮ್ಮ ಖೈದಿ ಯಾದಳುತಂಗಿ ತಮ್ಮಂದಿರ ಬಾಳು ಬೀದಿಗೆ ಬಂತು.

ಮಗಳ ನಿರ್ಧಾರದಿಂದ ಅಮ್ಮ ಹುಚ್ಚಿ ಆದರೆ ಅಪ್ಪ ತನ್ನ ದೇಹಕ್ಕೆ ತಾನೆ ಶಿಕ್ಷಿಸಿಕ್ಕೊಂಡಮಗಳಿಗಾಗಿ ಸಂಪಾದಿಸಿದ ಸರ್ವಸ್ವ ತಮ್ಮನ ಪಾಲಾಯಿತು. ಸುಖದ ಸುಪ್ಪತ್ತಿನಲ್ಲಿದ್ದ ಮಗಳು ಕಾಲ ಕೆಳಗಿನ ಕಸವಾದಳು.

ಸಹಾಯಕ್ಕೆ ಬಂದ ಯಶೋದಮ್ಮ ನಮ್ಮಿಬ್ಬರ ಹುಚ್ಚು ಪ್ರೀತಿಗೆ ವಿನಾಕಾರಣ ಮನಸ್ಸಿನ ಗೊಂದಲದ ಸುಳಿಯ ಮೀನಾದರು,ರಾಮರಾಯರು ಸಂಧರ್ಭ ಕೊಟ್ಟ ಶಿಕ್ಷೆಗೆ ಮಗನಂತಹ ನನ್ನ-ಅವರ  ಸಂಭಂದಕ್ಕೆ ತೆರೆ ಎಳೆಸಿಕ್ಕೊಂಡರು.

ನನ್ನನ್ನು ನಂಬಿ ಹೆಂಡತಿಯಾಗಿ ಬಂದ ಸ್ವರ್ಣಲತಾ ನನ್ನ ನಿಜ ಅಸ್ತಿತ್ವ ತಿಳಿದ ಬಳಿಕ ಶತ್ರುವಾಗಿ ನನ್ನಿಂದ ದೂರವಾದಳು.

ಒಂದು ಪುಟ್ಟ ಜ್ಯೋತಿ ಇಬ್ಬರ ಜೀವನವನ್ನೇ ಸುಟ್ಟು ಬಿಟ್ಟ ಕಿಚ್ಚಾಯಿತು.

ನನ್ನ ಬಿಟ್ಟು ಹೋದ ವಸುಂದರ ತನ್ನ ಓದನ್ನು ಮುಂದುವರಿಸಿದಳುಬೆಳಗ್ಗಿನ ಹೊತ್ತಲ್ಲಿ ಕೆಲಸಕ್ಕೆ ಹೋಗಿ ಸಂಜೆ ತರಗತಿಯಲ್ಲಿ ಕಾಲೇಜ್ ಮುಗಿಸಿದಳು, IAS  ಅನ್ನು ಪಾಸ್ ಮಾಡಿದಳುತನ್ನ ಬಾಲ್ಯದ ಕನಸನ್ನು ನನಸು ಮಾಡಿದಳು.


೨೬ 



ಇಬ್ಬರೂ  ಜೊತೆಯಾಗಿ ಬೇರೆಯಾಗಿ ಕಳೆದ ಆ ೨೫ ವರ್ಷಗಳು ಹಾಗೆಯೇ ತೆಲಿಹೊದಂತೆ ಆಯಿತುಈಗ ಒಬ್ಬರು ಇನ್ನೊಬ್ಬರಿಗೆ ಅಪರಿಚಿತರಾಗಿ ನಿಂತಿದ್ದೆವು. ನಡುವಿನಲ್ಲಿ ಪ್ರೇಮಿ - ಪ್ರಿಯತಮೆಯ ಸಂಭಂದವಿರಲಿಲ್ಲ,ಆ ಸಂಭಂದ ಈ ೨೫ ವರ್ಷದಲ್ಲಿ ಕೊನೆಯಾಗಿತ್ತು. ಮನಸ್ಸಲ್ಲಿರುವ ವಸುಂದರನ ಪ್ರೀತಿಯು ಮನಸ್ಸಲ್ಲಿದ್ದರೆಯೇ ಸೂಕ್ತವ್ಯಕ್ತ ಪಡಿಸಿದರೆ ಎಲ್ಲಿ ಪುನಃ ಅದು ಆಹುತಿತೆಗೆದು ಕೊಂಡಿತೋ ಎಂಬ ಭಯವಿತ್ತು ಮನದಲ್ಲಿ.

ಅವಳೂ ನನ್ನನ್ನು ಅವಳ ಮನಸ್ಸಿನಲ್ಲಿಡಲು ಬಯಸಿದ್ದಳುಅವಳಲ್ಲಿಯೂ ನನ್ನದೇ ಭಯ ಮನೆಮಾಡಿತ್ತು. ಇಬ್ಬರಿಗೂ ಒಬ್ಬರೊಬ್ಬರ ಭೂತದ ೨೫ ವರ್ಷದ ಬಗ್ಗೆ ಮಾತಾಡಲು ಮನಸಿರಲಿಲ್ಲ,ಇಬ್ಬರೂ ವರ್ತಮಾನನದ ಜೀವನದಲ್ಲಿ ಸುಖ ಕಾಣುತ್ತಿದ್ದೆವುಇಬ್ಬರಲ್ಲೂ ಎಲ್ಲಿ ಭೂತದ ಬೂತ ಭವಿಷ್ಯದ ಭವಿಷ್ಯವನ್ನು ನುಂಗಿ ಹಾಕೀತೋ ಎಂಬ ಪ್ರಶ್ನೆ ಪೀಡಿಸುತ್ತಿತ್ತು.

ನಾನು ಹೋಗಿರುವ ಕೆಲಸ ಅಂದರೆ ಹಣ ಪಾವತಿ ಬಗ್ಗೆ ಕೇಳುವ ಮೊದಲೇ ಅವಳೂ ಚೆಕ್ ಹರಿದು ನನ್ನ ಕೈಯಲ್ಲಿಟ್ಟಳು. ನಾನು ಧನ್ಯವಾದ ಒಪ್ಪಿಸಲು ಅವಳ ಆ ಕೋಣೆಯಲ್ಲಿ ನೇತು ಹಾಕಿದ್ದ ಯಶೋದಮ್ಮನ ನಗು ಮತ್ತೆ ಶೋಭಿಸಿತು.

ಚೆಕ್ ನಲ್ಲಿ ಆವಳು ವಸುಂದರ ರಾಜಾರಾಂ ಎಂದು ಸಹಿ ಹಾಕಿದ್ದಳು.


ಆವಳು ಮದುವೆ ಆಗಿದ್ದಾಳೆ ಅಂದುಕೊಂಡಿರಾ ..ಇಲ್ಲ ರಾಜಾರಾಂ ಎಂದರೆ ಅವಳ ತಂದೆಯ ಹೆಸರು.ಸಂಭಂದ ಕಳಚಿದ ಆತಂದೆಯನ್ನು ತನ್ನ ಹೆಸರಲ್ಲಿ ಜೋಡಿಸಿದ್ದಳು ಆ ಮಹಾನಾಯಕಿ. ಸಂಭಂದ ಬೆಸೆಯಲು ಬಂದ ಹೆಸರಿಗೆ ಹೆಸರಾಗ ಬೇಕಿದ್ದ ಜನಾರ್ಧನ್ ಯಾರಲ್ಲೂ ಜೋಡಿ ಯಾಗದೆ ಹೋದ.

ಚೆಕ್ ನೊಂದಿಗೆ ಹೊರಬರಲು ೮೦ ರ ಆ ಫಿಯೆಟ್ ೨೫ ವರ್ಷದ ಕೊಳೆ ತೊಳೆದು ಶುಭ್ರವಾಗಿ ನಿಂತಿತ್ತು. ಅರುವತ್ತರ ಆ ವ್ಯಕ್ತಿಯ ಮುಖದಲ್ಲಿ ಏನನ್ನೋ ಸಾಧಿಸಿದ ಕಳೆ ಕಾಣುತಿತ್ತು.


**************************************    
ಮುಕ್ತಾಯ *********************************************************


ನಿಮ್ಮ 
ಕಾಮತ್ ಕುಂಬ್ಳೆ 

Saturday, August 13, 2011

ಕಿಚ್ಚು :: ಹೊತ್ತಿ ಉರಿಯುವ ಮುನ್ನ ... (ಭಾಗ -೯)



೨೧


ಇಲ್ಲಿಯೂ ಅದೃಷ್ಟ ನನ್ನ ಪ್ರೇಮಗೀತೆಯನ್ನು ಜಾಡಿಸಿ ಒದ್ದಿತ್ತು, ಹತ್ತಿದ ಲೋರಿಯು ರಾಜಸ್ತಾನದಿಂದ ಗ್ರಾನೈಟ್ ಅನ್ನು ಕೊಚ್ಚಿನ್ ಗೆ ಒಯ್ಯುತಿತ್ತು. ಲಾರಿ ಒಳಗಿದ್ದ ಡ್ರೈವರ್ ಆಗಲೇ ಕುಡಿದ ಯಾವುದೊ ಲೋಕಲ್ ಮಾಲಿನ ವಾಸನೆಯಿಂದ ನಾರುತ್ತಿದ್ದ. ಕ್ಲೀನರ್ ನಿದ್ದೆಗೆ ಜಾರಿದ್ದ. ನಾನು ಪ್ರಾಣ ಕೈಯಲ್ಲಿ ಹಿಡಿದು ಕಣ್ಣು ಬಿಟ್ಟೆ ವಸುಂದರನ ಕನಸು ಕಾಣುತ್ತಿದ್ದೆ, ಅರ್ದ ಗಂಟೆಯಲ್ಲೇ ಲಾರಿ ರೋಡಿನಿಂದ ಜಾರಿ ಪಕ್ಕದ ದೊಡ್ಡದೊಂದು ಆಲದಮರಕ್ಕೆ ಡಿಕ್ಕಿ ಹೊಡೆಯಿತು.
 
ಕಣ್ಣು ಬಿಟ್ಟು ನೋಡಿದಾಗ ಆರೈಕೆ ಮಾಡುವ ದಾದಿಯರು ಮತ್ತು ನೇತು ಹಾಕಿರುವ ನನ್ನ ಬಲಗಾಲ ದರ್ಶನವಾಯಿತು,ಲಾರಿ ಹೊಡೆದ ರಬಸಕ್ಕೆ ನನ್ನ ಬೋಧ ಹೊರಟು ಹೋಗಿತ್ತೇ ವಿನಹ ನನ್ನ ಪ್ರಾಣ ಹೊರಟು ಹೋಗಿರಲಿಲ್ಲ. ಆಕ್ಸಿಡೆಂಟ್ ಆಗಿ ಆಗಲೇ ೨೬ ಗಂಟೆ ಕಳೆದಿತ್ತು ,ಯಾರೋ ನನ್ನ ಕಿಸೆಯಲ್ಲಿನ ನಮ್ಮ  ಹೋಟೆಲ್ ನ ಬಿಲ್ ನೋಡಿ ರಾಮರಾಯರಿಗೆ ವಿಷಯ ತಿಳಿಸಿದ್ದರು. ಅವರು ಮುಂಬೈನ ಹೋಟೆಲ್ ನಲ್ಲಿನ ಅಕೌಂಟೆಂಟ್ ಬಳಿಯಲ್ಲಿ ಹೇಳಿ ನನ್ನ ಆರೈಕೆಯ ಎಲ್ಲಾ ವ್ಯವಸ್ತೆಮಾಡಿಸಿದ್ದರು, ಆದರೆ ನಾನು ನಡೆಯುವಂತಿರಲಿಲ್ಲ, ದಾದಿಯಲ್ಲಿ ಕೇಳುವಾಗ ಅವರು ಕನಿಷ್ಠ ೩ ತಿಂಗಳು ನಡೆಯಬಾರದು ಎಂದು ನಿರ್ಭಂದ ಬೇರೆ ಹಾಕಿದರು. ಇನ್ನು ಮಂಗಳೂರು ಸೇರುವುದು ಬರಿಯ ಕನಸಾಗಿಯೇ ಉಳಿಯಿತು.
 
೩ ತಿಂಗಳ ಎಲ್ಲ ಖರ್ಚನ್ನು ರಾಯರು ನೋಡಿಕ್ಕೊಂಡಿದ್ದರು ಜೊತೆಗೆ ನನ್ನ ಖರ್ಚಿಗಾಗಿ ಬೇರೆ ೧೦೦೦ ಸಾವಿರ ರುಪಾಯಿ ಕೂಡ ಕಳುಹಿಸಿದ್ದರು.ಗಡ್ಡದರಿಸಿ ಆಗಲೇ ಸನ್ಯಾಸಿ ಆಗಿ ಹೋಗಿದ್ದೆ. ಆಸ್ಪತ್ರೆಯಿಂದ ಸೀದಾ ಇನ್ನೊಂದು ಲಾರಿ ಹತ್ತಿ ಮಂಗಳೂರು ತಲುಪಿದೆ.ಈಗ ಊರ ಬಸ್ಸಲ್ಲಿ ಯಾರು ನನ್ನನ್ನು ಗುರುತಿಸಲಾರರಾದರು, ನನಗೆ ಹೆಚ್ಚಿನವರು ಪರಿಚಯದವರೇ ಆದರೆ ನಾನಾಗಿ ಯಾರಲ್ಲಿಯೂ ಮಾತನಾಡಲು ಹೋಗಲಿಲ್ಲ. ಬಸ್ಸಿಂದ ಇಳಿದು ಯಶೋದಮ್ಮನ ಮನೇನೂ ಸೇರಿದ್ದಾಯಿತು.

 
ಒಂದು ವರುಷದಲ್ಲಿ ಅಮೂಲಾಗ್ರ ಬದಲಾವಣೆಯಾಗಿತ್ತು ಆ ಮನೆಯಲ್ಲಿ, ಹೊರಗಿನ ಬೀಗ ಜಡಿದಿತ್ತು. ಬೀಗ ನೋಡಿ ಮನೆಯಲ್ಲಿ ಯಾರು ವಾಸವಿಲ್ಲದ ಕುರುಹು ಸಿಕ್ಕಿತು,ಆದರೆ ಗುಡಿಸಿದ ಅಂಗಳದಿಂದ ಇಲ್ಲಿ ಮನೆ - ತೋಟ ನೋಡಲು ಯಾರೋ ಇದ್ದಾರೆ ಎಂಬುವುದು ಖಾತ್ರಿಯಾಯಿತು, ಯಾರಿರಬಹುದು ಎಂದು ನಾನು ಹಿತ್ತಲು ಸುತ್ತ ತೊಡಗಿದೆ.ಯಶೋದಮ್ಮ ನಮಗಾಗಿ ಕೊಟ್ಟ ಪುಟ್ಟ ಪಂಪ್ ರೂಂ ಬಳಿಗೆ ಬಂದೆ, ಅರ್ದ ತೆರೆದಿರುವ ಬಾಗಿಲು ಮತ್ತು ಒಳಗಿನಿಂದ ಒಲೆಯಲ್ಲಿ ಹಚ್ಚಿರುವ ಒಗ್ಗರಣೆಯ ಪರಿಮಳ ನನ್ನನ್ನು ಅತ್ತ ಸೆಳೆಯಿತು.
 
ನನ್ನ ವಸುಂದರ ಅಲ್ಲಿ ಇದ್ದಾಳಾ? ಎಂಬ ಪ್ರಶ್ನೆ ಕಾಡ ತೊಡಗಿತು , ಮೇಲಾನೆ ಆ ಬಾಗಿಲನ್ನು ಸರಿಸಿದೆ.
ಅಲ್ಲ , ವಸುಂದರಳಾಗಿರಲಿಲ್ಲ, ೧೬-೧೮ ವರುಷದ ಯಾವುದೊ ಒಬ್ಬ ತರುಣ ಆ ಕೋಣೆಯಲ್ಲಿ ವಾಸಿಸುತ್ತಿದ್ದ.
ಅವನಲ್ಲಿ ನಾನು "ಯಾರು ನೀನು ? ಯಶೋದಮ್ಮ ಎಲ್ಲಿ ?" ಎಂದು ಕೇಳಿದೆ .
ಅವನು "ರಾಮು ಅಂತ, ಕಳೆದ ೬ ತಿಂಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಯಜಮಾನ್ರು ಮತ್ತು ಯಶೋದಮ್ಮ ಈಗ ಮಗನ್ನೊಂದಿಗೆ ಫೋರಿನ್ ಹೋಗಿದ್ದಾರೆ ...ನೀವ್ಯಾರು ?" ಅಂದ.
ನಾನು "ವಸುಂದರ ..?"
ಅವನು ವಸುಂದರ ಎಂದು ಕೇಳುತ್ತಲೇ "ಜನಾರ್ಧನ್ ಅವರಾ ? ವಸುಂದರಮ್ಮನೋರ ಯಜಮಾನ್ರು ?"ಅಂದ
ನಾನು ಕತ್ತು ಅಲ್ಲಾಡಿಸುತ್ತ "ಹುಂ ವಸುಂದರ ಎಲ್ಲಿ ?"ಅವನು "ಎಲ್ಲಿದ್ದಳೋ ಗೊತ್ತಿಲ್ಲ, ಎಲ್ಲ ಮುಗಿದ ನಂತರ ಬಂದಿದ್ದಿರಾ..."
ನಾನು"ಎಲ್ಲಾ ಮುಗಿದ ನಂತರ ಅಂದರೆ ಏನು ರಾಮು ಸರಿಯಾಗಿ ಬಿಡಿಸಿ ಹೇಳು ..."
 
ಅವನು ಮುಂದುವರಿಸಿದ "ವಸುಂದರಮ್ಮ ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದಳು, ನೀವು ಉರ್ರಾಚೆ ಇದ್ದರೂ ನಿಮ್ಮನ್ನು ಅವಳ ಉಸಿರಲ್ಲಿ ಕಂಡುಕ್ಕೊಂಡಿದ್ದಳು, ನಿಮ್ಮ ಕುಡಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ತಿಳಿದಾಕ್ಷಣ ಸಂಭ್ರಮಿಸಿದ್ದಳು, ವಿಷಯ ತಿಳಿದಾಕ್ಷಣ ಯಶೋದಮ್ಮ ನನ್ನನ್ನು ಮನೆಕೆಲಸಕ್ಕೆ ಇಟ್ಟುಕೊಂಡರು, ಯಶೋದಮ್ಮ ಮತ್ತು ಯಜಮಾನ್ರು ಅವಳನ್ನು ತಮ್ಮ ಹೆತ್ತ ಮಗಳಿಗಿಂತ ಹೆಚ್ಚು ಪ್ರಿತಿಸುತ್ತಿದ್ದರು, ಅವಳಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದರು, ನಿಮ್ಮ ವಿರಹದ ವಿನಃ ಅವಳಿಗೂ ಯಾವುದರ ಕೊರತೆ ಇರಲಿಲ್ಲ .
 
ಪ್ರತಿ ಸೋಮವಾರದಂದು ನಿಮಗಾಗಿ ಪತ್ರ ಬರೆಯುತ್ತಿದ್ದರು, ನಿಮ್ಮ ಪ್ರತಿ ಪತ್ರಕ್ಕೆ ಕಾಯುತ್ತಿದ್ದಳು, ನಿಮ್ಮ ಪತ್ರ ಬಂದ ದಿನ ಅದನ್ನು ನೂರು ಬಾರಿ ಓದುತ್ತಿದ್ದಳು, ನಮ್ಮೆಲ್ಲರಿಗೂ ಓದಿ ಹೇಳುತ್ತಿದ್ದಳು , ನೀವು ಸೀರೆ ಕಳುಹಿಸಿದ ದಿನ ಅದನ್ನುಟ್ಟು ತುಂಬಾನೆ ಸಂಭ್ರಮಿಸಿದ್ದಳು, ಯಶೋದಮ್ಮನವರು ಅವಳ ಬಸರಿ ಬಯಕೆಗೆ ಎಲ್ಲಾ ವ್ಯವಸ್ತೆಯು ಮಾಡಿ ಆಗಿತ್ತು, ಆದರೆ ಎರಡು ದಿನ ಮೊದಲೇ ಆ ಸಂಭ್ರಮ ಮಾಸಿ ಹೋಯಿತು, ವಿಷಯ ತಿಳಿದ ವಸುಂದರಮ್ಮ ತುಂಬಾನೆ ದುಃಖಿಸಿದಳು.
 
ಆಸ್ಪತ್ರೆಯಿಂದ ಬಂದಾಗಿಂದ ವಸುಂದರಮ್ಮ  ತುಂಬಾನೆ ಖಿನ್ನಳಾಗಿದ್ದಳು, ಯಾವುದರಲ್ಲೂ ಆಸಕ್ತಿ ಇರಲಿಲ್ಲ, ನಿಮಗೆ ವಿಷಯದ ಕುರಿತು ಬರೆದ ಪತ್ರದ ಬಗ್ಗೆ ಯಶೋದಮ್ಮ ತಿಳಿಸಿದ ನಂತರ ನೀವು ಬಂದೆ ಬರುತ್ತೀರಾ ಅವಳ ಕಣ್ಣೀರಿಗೆ ಆಸರೆಯಾಗಿ ನಿಲ್ಲುತ್ತೀರಾ ಎಂದು ಕನಸು ಕಾಣುತ್ತಿದ್ದಳು.
 
ತಿಂಗಳಾಯಿತು ಆಗಲು ನೀವು ಬರಲೇ ಇಲ್ಲ ಅವಳ ಪ್ರೀತಿಯ ಘಾಡತೆ ನಿಮಗೆ ತಿಳಿಯದೆ ಹೋಯಿತು, ದಿನಗಳು ಉರುಳುತ್ತಲೇ ಅವಳ ಆಶಾಕಿರಣ ಮೇಲಾನೆ ತನ್ನ ಉಜ್ವಲತೆ ಕಮ್ಮಿಗೊಳಿಸಿತು, ಕೊನೆಗೆ ಒಂದು ದಿನ ಪತ್ರ ಬರೆದು ಯಾರಿಗೂ ಸಿಗದಂತೆ ಮಾಯವಾದಳು..."

"
ಪತ್ರ...?"
"
ಹುಂ ...ಮನೆಯಲ್ಲಿದೆ ಆ ಪತ್ರ ...ಬನ್ನಿ ಕೊಡುವೆ."
 



೨೨


ಯಶೋದಮ್ಮನ ಮನೆಯಲ್ಲಿ ಯಶೋದಮ್ಮ ವಸುಗೆ ಒಂದು ಕೋಣೆಯನ್ನು ಕೊಟ್ಟಿದ್ದರು , ಅದರಲ್ಲಿ ಪುಟ್ಟದೊಂದು ಮಂಚ, ಮಂಚದ ಮೂರು ಬದಿಯಲ್ಲಿ ಮುದ್ದು ಮುದ್ದು ಮಗುವಿನ ಫೋಟೋ, ಬಳಿಯಲ್ಲೇ ಒಂದು ಖಾಲಿ ಫ್ರೇಮ್ ಅದರ ಕೆಳಗೆ ಒಂದು ಕಪಾಟಿನಲ್ಲಿ ಜೋಡಿಸಿಟ್ಟ ವಸುಂದರನಿಗೆ ಯಶೋದಮ್ಮ ಕೊಡಿಸಿದ ಬಟ್ಟೆಗಳು,ಅವುಗಳ ಮೇಲೆ ಒಂದು ಪತ್ರ.
ತೆರೆದು ಅದ ಓದ ತೊಡಗಿದೆ


"ಅಪ್ಪಾಜಿ ಮತ್ತು ಅಮ್ಮನಲ್ಲಿ
 
ಯಾವುದೇ ಪರಿಚಯ , ಸಂಭಂದವಿಲ್ಲದ ಈ ಪರದೇಶಿಗೆ ನಿಮ್ಮ ಮಗಳಂತೆ ನೋಡಿಕೊಂದದಕ್ಕೆ ಮೊದಲಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
 
ಹೆತ್ತ ತಂದೆತಾಯಿಯರಿಗೆ ಮಾಡಿದ ಮೋಸಕ್ಕೆ ನನಗೆ ತಕ್ಕುದಾದ ಶಿಕ್ಷೆಯಾಗಿದೆ, ಅವರನ್ನು ಬಿಟ್ಟು ನನ್ನ ಜೀವನದಲ್ಲಿ ಬಂದ ಹೊಸವ್ಯಕ್ತಿಯೇ ಸರ್ವಸ್ವ ಎಂದು ನನ್ನ ಸರ್ವಸ್ವ ಅವನಿಗೆ ಒಪ್ಪಿಸಿದೆ, ಮಾತು ಮಾತಿನಲ್ಲೇ ಮೋಡಿಮಾಡಿ, ಮದುವೆ ಎಂಬ ನಾಟಕ ಆಡಿ ನನಗೆ ಒಂದು ಉಡುಗೊರೆಯನ್ನು ನೀಡಿ, ದೂರದೂರಿನ ಕೆಲಸದ ನಾಟಕವಾಡಿ ನನ್ನಿಂದ ದೂರವಾದ. ಅವನ ಸುಳ್ಳು ಪ್ರೀತಿಯನ್ನು ನಾನು ನಿಜವಾದ ಪ್ರೀತಿ ಎಂದು ತಿಳಿದು ನಾನು ಬರೆದ ೨೬ ಪತ್ರದ ಬದಲಿಗೆ ಅವ ಬರೆದದ್ದು ಕೇವಲ ೫ , ಒಂದು ಸೀರೆಯನ್ನು ಕೊಡಿಸಿದ, ನಾನು ಅವನು ಪ್ರೀತಿಸುತ್ತಾನೆ ಎಂದು ನಂಬಿದ್ದೆ, ನನ್ನ ಕಂಬನಿಗೆ ಆಸರೆ ಆಗಿ ನಿಲ್ಲುತ್ತಾನೆ ಎಂದು ಕೊಂಡಿದ್ದೆ, ಆದರೆ ನಿಮ್ಮ ಹೊರತು ಯಾರು ನನ್ನ ಕಣ್ಣೇರು ಒರಸಲಿಲ್ಲ, ನಿಮ್ಮ ಈ ಋಣಕ್ಕೆ ನಾನು ಎಂದೆಂದಿಗೂ ಋಣಿ ಯಾಗಿರುವೆ.
 
ನಾನು ಮಾಡಿದ ಮೋಸಕ್ಕೆ ನನಗೆ ಮೋಸವೇ ಪ್ರತಿಫಲ ಸಿಕ್ಕಿದೆ, ಅದನ್ನು ನಾನು ಸ್ವೀಕರಿಸುತ್ತೇನೆ, ನಿಮಗೆ ಇನ್ನಷ್ಟು ತೊಂದರೆ ಕೊಡಲು ನಾನು ಬಯಸುವುದಿಲ್ಲ ಆದಕಾರಣ ನಿಮ್ಮನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದೇನೆ, ನಾನು ನನ್ನ ಸೂರನ್ನು ಹುಡುಕಿಕೊಳ್ಳುತ್ತೇನೆ, ನನ್ನ ಬಗ್ಗೆ ಚಿಂತಿಸಬೇಡಿ, ನನ್ನನ್ನು ಹುಡುಕುವ ಪ್ರಯತ್ನವನ್ನೂ ಮಾಡಬೇಡಿ.
 
ನಿಮ್ಮ ನೆನಪು ಹೊರತುಪಡಿಸಿ ಹಿಂದಿನ ಯಾವುದೇ ನೆನಪು ಸುಳಿಯದಂತೆ ನಾನು ನನ್ನನ್ನು ಸನ್ನದ್ಧ ಮಾಡಿಕೊಳ್ಳುವೆ,ಇಂದಿನಿಂದ ಹೊಸ ವಸುಂದರಳಾಗಿ ಹೊಸ ಜೀವನ ನಡೆಸುವೆ.
 
ಕೊನೆಯದಾಗಿ ಒಂದು ಸಹಾಯ ಬೇಡುವೆ, ಅದೇನೆಂದರೆ ಅರ್ಥವಿಲ್ಲದ ಮದುವೆ ಎಂಬ ನಾಟಕದ ಏಕೈಕ ಸಾಕ್ಷಿ ಆಗಿರುವ ಈ  ಹರಸಿನ ಕೊಂಬನ್ನು ಇಲ್ಲಿ ಬಿಟ್ಟು ಹೋಗಿರುತ್ತೇನೆ, ಒಂದು ವೇಳೆ ಆ ಮಹಾನುಭಾವ ನನ್ನರಸಿ ಬಂದರೆ ಅದನ್ನು ಅವನಿಗೆ ಹಿಂತಿರುಗಿಸಿ, ಅರ್ಥವಿಲ್ಲದ ಸಂಭಂದ ಮುಂದುವರಿಸುವಲ್ಲಿ ನನಗೆ ಯಾವುದೇ ವಿಶ್ವಾಸವಿಲ್ಲ.
 
ನಿಮ್ಮ ನೆನಪಿಗಾಗಿ ನಿಮ್ಮ ಫೋಟೋ ನಾನು ಒಯ್ಯುತ್ತಿದ್ದೇನೆ
 
ನಿಮ್ಮ
ಸಾಕು ಮಗಳು
 

 "




೨೩

 
ಪತ್ರ ಓದಿ ಮುಗಿಸುತ್ತಲೇ ಕಣ್ಣೆಲ್ಲ ಮಂಜಾದವು, ಯಾವ ಪ್ರೀತಿಯನ್ನು ಪಡೆಯಬೇಕೆಂದು ನಾನು ಸರ್ವಸ್ವವನ್ನು ತ್ಯಾಗ ಮಾಡಿದ್ದೇನೋ ಅದು ನನ್ನನ್ನು ಬಿಟ್ಟು ಆಗಲೇ ದೂರವಾಗಿತ್ತು, ಮನೆಯವರ ದ್ವೇಷ ಕಟ್ಟಿ ಕ್ಕೊಂಡಿದ್ದಕ್ಕೆ ತಕ್ಕ ಶಾಸ್ತಿಯಾಯಿತು.
 


ನಾನು ರಾಮುನಲ್ಲಿ "ನೀವು ಹುಡುಕುವ ಪ್ರಯತ್ನ ಮಾಡಲಿಲ್ಲವೇ ?"ಅವನು "ಹುಡುಕಿದೆವು ಅಣ್ಣ, ಆದರೆ ಎಲ್ಲೂ ಸಿಗಲಿಲ್ಲ, ಯಜಮಾನರಿಗೆ ಮತ್ತು ಅಮ್ಮನವರಿಗೆ ಇದೆ ಚಿಂತೆ ಆಗಿತ್ತು, ಹೀಗಿರಲು ರಾಹುಲ್ ಕಳೆದ ತಿಂಗಳು ಬಂದಾಗ ಇಲ್ಲಿದ್ದರೆ ಇವರು ತಲೆ ಕೆಡಿಸಿಕೊಳ್ಳುತ್ತಾರೆ ಎಂದು ತನ್ನೊಂದಿಗೆ ಅವರನ್ನು ಅಮೆರಿಕಕ್ಕೆ ಕರಕ್ಕೊಂಡು ಹೋದರು, ಮನೆಯ ಜವಾಬ್ದಾರಿ ನನ್ನ ಮೇಲೆ ಬಿಟ್ಟು ಹೋಗಿದ್ದಾರೆ. ವಸುಂದರಮ್ಮನಿಗೆ ಮುಂದೆ ಏನಾಯಿತು ಗೊತ್ತಿಲ್ಲ ..."ಅಂದ.
 

ವಸುಂದರ ಎಲ್ಲಿ ಹೋಗಿರಬಹುದು ? ತನ್ನವರನ್ನು ಬಿಟ್ಟು ಬಂದದ್ದಾಗಿದೆ, ಈ ಊರಲ್ಲಿ ಪರಿಚಯದವರ್ಯಾರು ಇಲ್ಲ, ಎಲ್ಲಿ ಹೋಗಿರಬಹುದು ಎಂಬ ಪ್ರಶ್ನೆ ಕಾಡಲಾರಂಭಿಸಿತು.ಹುಡುಗಿಯರ ಬಗ್ಗೆ ಹೇಳಲು ಸಾದ್ಯವಿಲ್ಲ ಪುನಃ ತನ್ನ ಹೆತ್ತವರ ಬಳಿಗೆ ಹೋಗಿರಬಹುದು ಎಂದುಕ್ಕೊಂಡೆ.
 
ಮಂಗಳೂರು ಬಸ್ ಹತ್ತಿ ಅವರ ಮನೆ ತಲುಪಿದೆ.ಇಲ್ಲಿಯೂ ಒಂದು ವರ್ಷದಲ್ಲಿ ತುಂಬಾನೆ ಬದಲಾವಣೆ ಬಂದಿತ್ತು. ಯಾರು ನನ್ನನ್ನು ಗುರುತು ಹಚ್ಚಲಿಲ್ಲ, ಅಲ್ಲಿಯವರೂ ನನಗೆ ಹೊಸ ಮುಖವಾಗಿತ್ತು, ಮನೆ ಪ್ರವೇಶಿಸಿದಾಗ ಕೆಲಸದವನು ಸ್ವಾಗತಿಸಿ ಹೊರಗಿನ ಮಂಚದ ಮೇಲೆ ನನ್ನನ್ನು ಕುಳ್ಳಿರಿಸಿ ಕುಡಿಯಲು ತಣ್ಣೀರು ತಂದು ಕೊಟ್ಟ. ಸುತ್ತಲೂ ಕಣ್ಣು ಹಾಯಿಸಿದಾಗ ಗೋಡೆಯಲ್ಲಿ ನೇತುಹಾಕಿದ ವಸುನ ತಂದೆಯ ಫೋಟೋ ಕಾಣಿಸಿತು.
 
ನಾನು ಆ ಆಳಿನಲ್ಲಿ"ರಾಯರು ..?" ಎಂದು ಕೇಳಿದಾಗ
ಅವನು "ವಸುಂದರಮ್ಮ ಹೋದ ಬಳಿಕ ರಾಯರು ಮತ್ತು ಅಮ್ಮನೋರು ತುಂಬಾನೆ ನೊಂದುಕ್ಕೊಂಡಿದ್ದರು, ಗಂಡೆದೆ ರಾಯರು ತನ್ನ ದುಃಖವನ್ನು ಅಡಗಿಸುವಲ್ಲಿ ಪ್ರಯತ್ನ ಪಡುತ್ತಿದ್ದರೆ ಅಮ್ಮನವರು ಅದೇ ಕೊರಗಿನಲ್ಲಿ ತನ್ನ ಮಾನಸಿಕ ಹಿಡಿತವನ್ನೇ ಕಳಕ್ಕೊಂಡರು, ೬ ತಿಂಗಳ ಹಿಂದೆ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಲಾಗಿದೆ, ರಾಯರು ಇದನೆಲ್ಲ ಕಂಡು ಆತ್ಮಹತ್ಯೆಗೆ ಶರಣಾದರು,ಈಗ ಅವರ ವ್ಯಾಪಾರವನ್ನು ಅವರ ತಮ್ಮ ನೋಡಿಕ್ಕೊಳುತ್ತಿದ್ದಾರೆ..."
 
ನಾನು ಮದ್ಯದಲ್ಲಿ ತಡೆದು ನಿಲ್ಲಿಸಿ "ವಸುಂದರ ಎಲ್ಲಿದ್ದಾಳೆ ಈಗ ?"
ಅವನು "ಯಾವುದೊ ಹುಡುಗನೊಂದಿಗೆ ಮದುವೆ ಆಗಿದ್ದಾಳಂತೆ , ಎಲ್ಲಿದ್ದಳೋ ಗೊತ್ತಿಲ್ಲ, ಒಂದು ವರುಷದ ಮೇಲಾಯ್ತು ಅವಳ ಮುಖ ನೋಡಿ, ವಿಶಾಖ ಪಟ್ಟಣಂ ಗೆ ಹೋಗುವಾಗ ನನ್ನ ತಬ್ಬಿ ಅಲ್ಲಿಗೆ ಹೋಗುವುದಿಲ್ಲ ಎಂದು ಅತ್ತಿದ್ದಳು. ಆ ಬಳಿಕ ನಾನು ನೋಡಲಿಲ್ಲ , ಒಂದು ವರುಷದ ಮಗುವಾಗಿನಿಂದ ನಾನು ಅವಳನ್ನು ನೋಡಿದ್ದೇನೆ ಅವಳು ಮೊದಲಬಾರಿಗೆ ಕಣ್ಣೀರು ಇಟ್ಟ ದಿನವಾಗಿತ್ತು ಅದು, ನನ್ನ ಮಗಳಂತೆ ಇತ್ತು ಆ ಮಗು, ಹೋದದ್ದೇ ಹೋದದ್ದು ಈ ಮನೆಯ ಎಲ್ಲಾ ಉತ್ಸಾಹ ನಿಂತು ಹೋಯಿತು." ಎನ್ನುತ್ತಾ ತನ್ನ ನೆರಿಗೆಯಲ್ಲಿ ಜಾರುತ್ತಿರುವ ಕಣ್ಣೀರು ಒರಸುತ್ತಾ "ನೀವ್ಯಾರು ? "ಅಂದ.
 
ನಾನು ನಿಜ ವಿಚಾರ ಹೇಳುವುದು ಬೇಡ ಎಂದು "ರಾಯರ ಒಬ್ಬ ಗೆಳೆಯನ ಮಗ, ಮಂಗಳೂರಿನಲ್ಲಿ ಕೆಲಸ ಇತ್ತು ಹಾಗೆ ಅವರನ್ನು ಭೇಟಿ ಮಾಡಿ ಹೋಗುವ ಎಂದು ಬಂದಿದ್ದೆ, ವಿಷಯ ತಿಳಿದು ಬೇಜಾರಾಯಿತು, ಮತ್ತೆ ಇನ್ನು ಯಾವಾಗಲಾದರು ಬರುವೆ" ಎನ್ನುತ್ತಾ ಆ ಶೋಕದಿಂದ ಹೊರ ಬಂದೆ. 


ಕೊನೆಯ ಭಾಗ .