Friday, September 23, 2011

ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ

ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ
ಅನುಮೋದಿಸಿದೆ ನನ್ನನ್ಯಾಕೋ ನಿನ್ನ ಹಾಜರಿಯಲಿ
ನೇವರಿಸಿದೆ ನೀನ್ಯಾಕೆ ನನ್ನ ನೆನಪಿನ ಸಂಚಿಯ
ಅಳವಡಿಸಿದೆ ನಿನ್ನನ್ಯಾಕೋ ನನ್ನ ದಿನಚರಿಯಲಿ

ಉಸುರಿದೆ ನೀನ್ಯಾಕೆ ನಸುಕಲಿ ಮನಸಿನ ಸಂದಿಯಲಿ
ಅನುಸರಿಸಿದೆ ಅದನ್ಯಾಕೋ ನನ್ನ ಕವನದಲಿ
ಪಸರಿದೆ ನೀನ್ಯಾಕೆ ಮುಸುಕಲಿ ಕನಸಿನ ಕಂತೆಯಲಿ
ಅನುನಯಿಸಿದೆ ದಿಂಬನ್ಯಾಕೋ ನಿನ್ನ ಕನವರಿಕೆಯಲಿ

ಆಕರ್ಶಿಸಿದೆ ನೀನ್ಯಾಕೆ ಜಾರುವ ರವಿಯನು ನಿನ್ನಲ್ಲಿ 
ವಿಶ್ಲೇಷಿಸಿದೆ ನಾನ್ಯಾಕೋ ನಿನ್ನ ಮೂಡುವ ಶಶಿಯಲಿ
ಸಂರಕ್ಷಿಸಿದೆ ನೀನ್ಯಾಕೆ ನನ್ನ ಮನದಾಳದ ಭಾವನೆಯಲಿ
ಅನ್ವೆಷಿಸಿದೆ ನನ್ಯಾಕೋ ಅದ ತಿಳಿಯದೆ  ಜನ ಸಂತೆಯಲಿ

ಆಜ್ಞಾಪಿಸಿದೆ ನೀನ್ಯಾಕೆ ಅವಿರತ ಭಾವದ ಚಿಲುಮೆಗೆ
ಆಸ್ವಾದಿಸಿದೆ ನಾನ್ಯಾಕೋ ಸಿಹಿ ಸುಖವ ವಿರಹದಲಿ  
ಆಹ್ವಾನಿಸಿದೆ ನೀನ್ಯಾಕೆ ನೂರು ಬಯಕೆಯ ಗೊಂದಲವನು
ಅಹ್ಲಾದಿಸಿದೆ ನಾನ್ಯಾಕೋ ಸೋಲನು ನಿನ್ನ ಗೆಲುವಲಿ 

ನಿಮ್ಮ
ಕಾಮತ್ ಕುಂಬ್ಳೆ

1 comment:

  1. ಪ್ರಿಯ ನಲ್ಲೆಯನ್ನೇ ಜೀವನದ ದಿನಚರಿಗಳಲ್ಲಿ ಹಾಸುಹೊಕ್ಕಾಗಿಸಿಕೊಂಡ ಹುಡುಗನ ಮನದಾಳದ ಭಾವಗಳು ಪಡಿ ಮೂಡಿರುವ ಬಗೆ ಚೆಂದವಾದುದು.. ಒಂದು ಮಧುರ ಅನುಭೂತಿ ನೀಡುವ ಕವಿತೆ.. ನಿಮ್ಮಿಂದ ಅಸ್ವಾದನೆಗೆ ಸಿಕ್ಕ ಮೊದಲ ಕವಿತೆ ಇದು.. ಚೆನ್ನಾಗಿದೆ, ಹಿಡಿಸಿತು..:)))

    ReplyDelete