Tuesday, August 14, 2012

ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ..??



ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ 
ಸಾರ್ವಭೌಮತ್ವ ದಕ್ಕಿದ್ದು  ಯಾರಿಗೆ 
ನಡುರಾತ್ರಿಯಲಿ ಮೂವತ್ತೈದು ಕೋಟಿ ಜೋಡಿ
ಕಣ್ಣಲಿ ಕನಸು ಬೀಳುವ ಹೊತ್ತಿನಲ್ಲಿ 
ತಡರಾತ್ರಿಯಲಿ ಮೂರು ಗೋಡೆಯ ಒಳಗೆ
ಕಡತದ ಕೆಳಗಿನ ಎರಡು ಸಹಿಗಳ ನಡುವಲಿ
ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ
ಸಾರ್ವಭೌಮತ್ವ ದಕ್ಕಿದ್ದು  ಯಾರಿಗೆ ..??

ಪೆಟ್ಟಿಗೆಯ ಒಳಗಿದ್ದ ತ್ರಿವರ್ಣ ಧ್ವಜಕೆ
ಮೇಲೇರಿ ಅರಳುವ  ಸ್ವಾತಂತ್ರ್ಯ 
ಎರಡು ಶತಮಾನದಿ ಹಾರುತಿದ್ದ ನೀಲಿ ಬಟ್ಟೆಗೆ
ಕೆಳಗಿಳಿಯುತ ಮರೆಯಾಗುವ ಸ್ವಾತಂತ್ರ್ಯ 

ಉಪ್ಪು, ನೀರು, ಆಹಾರ, ಅಧಿಕಾರಕ್ಕಾಗಿ 
ಮಾಡಿದ ಸತ್ಯಾಗ್ರಹಕೆ ಸ್ವಾತಂತ್ರ್ಯ 
ಹಮ್ಮು, ಗತ್ತು, ವಿಚಾರ , ಅಹಂಕಾರಕ್ಕಾಗಿ 
ತೋರಿದ ಸಂಸ್ಕೃತಿ ಪ್ರಹರಕೆ ಸ್ವಾತಂತ್ರ್ಯ 

ಮೌನದಲ್ಲಿದ್ದ ಗಾಂಧಿ ಟೋಪಿಗೆ
ಧೇಶದ ಆಡಳಿತದ ಸ್ವಾತಂತ್ರ್ಯ 
ದರ್ಪದಲ್ಲಿ ಬೀಗಿತಿದ್ದ ಕೆಂಪು ಮೂತಿಗೆ 
ತವರಿಗೆ ಮರಳುವ ಸ್ವಾತಂತ್ರ್ಯ 

ಅಂದು ಹದಿನೈದರ ಮುಂಜಾನೆ ಇಡಿ ದೇಶವೇ ಸ್ವಾತಂತ್ರ್ಯ 
ಇಂದು ಅರವತ್ತೈದರ  ಹೊಸ್ತಿಲಲಿ ನಮ್ಮ ಸ್ವಾತಂತ್ರ್ಯ 
ಅಂದಿನಂತೆ ಇಂದೂ ಮತ್ತೆ ಅದೇ ಪ್ರಶ್ನೆ ಕೇಳುತಿದೆ 
ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ
ಸಾರ್ವಭೌಮತ್ವ ದಕ್ಕಿದ್ದು  ಯಾರಿಗೆ ..??

ಇನ್ನೊಬ್ಬರ ಜೂಥೆ ಪೋಲಿಷ್ ಮಾಡುವ ಕನಸುಕಣ್ಣಿಗೆ ಬೇಕಿದೆ 
ತುತ್ತಿಗಾಗಿ ನಾಲ್ಕು ಅಕ್ಷರ ಕಲಿಯುವ ಸ್ವಾತಂತ್ರ್ಯ 
ಇನ್ನುಬ್ಬಳ ಕಂತೆ ತುಂಬಿಸುವ ಬೆಲೆವೆಣ್ಣಿಗೆ ಬೇಕಿದೆ 
ನೀಯತ್ತಿನ ನಾಲ್ಕು ದಿನವನ್ನು ಕಳೆಯುವ ಸ್ವಾತಂತ್ರ್ಯ 

ನೇಗಿಲ ದೂಡುತ, ಸಾಲದ ನೋಗಗೆ ಹೆಗಲಾದ ದೇಹಕೆ ಬೇಕಿದೆ 
ತನ್ನವರಿಗಾಗಿ ನಾಲ್ಕು ಕಾಳು ಕೂಡಿ ಇಡುವ ಸ್ವಾತಂತ್ರ್ಯ 
ಉಂಡು ತೇಗುತ, ದೇಶದ ಸಾಲಕೆ ಕಾರಣವಾದ ರಾಜಕೀಯಕೆ ಬೇಕಿದೆ 
ದೇಶದ ಏಳಿಗೆಗೆ ನಾಲ್ಕು ಗಳಿಗೆ ಯೋಚಿಸುವ ಸ್ವಾತಂತ್ರ್ಯ 

ವರ್ಷದಲ್ಲಿ ಒಂದೆರಡು ದಿನ ಹಾರಾಡುವ 
ಮೂರು ಪಟ್ಟಿಯ ನಡುವಿನ ನೀಲಿಚಕ್ರಕ್ಕೆ ಸಿಗಬೇಕಿದೆ ಸ್ವಾತಂತ್ರ್ಯ 
ಹರ್ಷದಲಿ ಮಾದರಿ ರಾಷ್ಟ್ರದ ಸಂಕೇತವಾಗಿ 
ಪ್ರಗತಿಯ ನಾಗಾಲೋಟದಲ್ಲಿ ಉರುಳುತ ಸಾಗುವ ಸ್ವಾತಂತ್ರ್ಯ 


ಎಲ್ಲರಿಗೂ ಸ್ವಾತಂತ್ರದಿನದ ಶುಭಾಶಯಗಳು 
ನಿಮ್ಮ
ಕಾಮತ್ ಕುಂಬ್ಳೆ 

No comments:

Post a Comment