Sunday, August 19, 2012

ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ


ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ



ಪ್ರತಿ ಬೆಳಗ್ಗೆ ೯ಕ್ಕೆ ಶುರುವಾಗುವ ಚೈತ್ರಯಾತ್ರೆಯಲ್ಲಿ ನಾವು ಹಣ ಸಂಪಾದಿಸಿದ್ದೆವೋ ಇಲ್ಲವು ಎನ್ನುವುದು ಸೆಕೆಂಡರಿ ಆದರೆ ರಾತ್ರಿ ಮತ್ತೆ ಮನೆ ತಲುಪಿದಾಗ ನಮ್ಮ ಮೂಗಿನ ಹೊಳ್ಳೆಗಳಲ್ಲಿ ಕೋಟಿ ಕಾರ್ಬನ್ ಕಣಗಳು ಸಂಪಾದನೆಯಂತೂ ಖಂಡಿತವಾಗಿ ಆಗಿರುತ್ತದೆ. ಜಂಜಾಟದ ನಗರ ಜೀವನ, ಎಂದೂ ನಾರ್ಮಲ್ ಗಿಂತ ಮೇಲೆ ಇಲ್ಲ ಕೆಳಕ್ಕೆ ಇರುವ ರಕ್ತದೊತ್ತಡ ವನ್ನು ಮತ್ತೆ ನಾರ್ಮಲ್ ಗೆ ತರಲು, ಶಾಶ್ವತವಾಗಿ ಅಲ್ಲದಿದ್ದರೂ ಒಂದು ವಾರಾಂತ್ಯದ ಮಟ್ಟಿಗೆ ಮುಕ್ತಿ ಬಯಸುತ್ತೇವೆ.

ಮುಂಗಾರು ಮಳೆ ಬೀಳುತಿದ್ದಂತೆ ಅಣಬೆ, ಜೀರುಂಡೆಗಳು ಜೀವತಳೆಯುತ್ತದೆ ಅದರ ಜೊತೆಗೆ ಜೀವ ತಳೆಯುವ ಇನ್ನೊಂದು ನಿರ್ಜೀವ ಸಂಗತಿ ಎಂದರೆ ಪ್ರಕೃತಿ ಚಾರಣದ ಹುಚ್ಚು. ಮುಂಗಾರುಮಳೆ ಪ್ರತಿ ಹನಿಯ ಅಮಲನ್ನು ಅನುಭವಿಸಬೇಕು ಎಂದಾದಾಗ ನೆನಪಾಗುವ ಮೊದಲ ಸ್ಥಳ ಮಡಿಕೇರಿ. ಈಗಿನ ಜನರ ಬಾಯಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಕೂರ್ಗ್ ಎಂದು ಕರೆಸಿಕೊಳ್ಳುವ ಕೊಡಗು ಒಂದು ವಿಶಿಷ್ಟವಾದ ಸಂಸ್ಕೃತಿಯನ್ನು ತನ್ನಲ್ಲಿ ಹುದುಗಿಸಿ ಇಟ್ಟುಕ್ಕೊಂಡಿದೆ.ಹಳೆಯ ಆಚಾರ ಗಳೊಂದಿಗೆ ಹೊಸ ವಿಚಾರಗಳೂ ಇಲ್ಲಿ ಸಮ್ಮೇಳಿಸಿವೆ. ತಲೆಮಾರುಗಳಿಂದ ಸಾಗಿ ಬರುತ್ತಿರುವ ಎಸ್ಟೇಟ್ ಗಳಲ್ಲಿ ಈಚೆಗೆ ಹೋಂ-ಸ್ಟೆಯ್ಸ್ ಬೋರ್ಡ್ ಗಳು ನೇತಾಡುತ್ತಿವೆ; ಇಂತಹ ಬೋರ್ಡ್ ಗಳು ಹೊಸದಾಗಿದ್ದರೂ ಅಲ್ಲಿ ಸಿಗುವ ಸಾತ್ಕಾರ, ಸಂಭ್ರಮಗಳು ಹಿಂದಿನ ದಿನಗಳನ್ನು ನೆನಪಿಸಿತ್ತವೆ. ಕೆಲವೊಮ್ಮೆ ಇವ್ವು ನಾವು ಕೊಡುವ ದುಬಾರಿ ಬಾಡಿಗೆಗೆ ಸಂದ ಪುರಷ್ಕಾರ ಎಂದು ಅನಿಸುತ್ತದ್ದಾದರೂ ಪ್ರವಾಸ ಮುಗಿಸಿ ಹಿಂತಿರುಗುವಾಗ ಎಲ್ಲರ ಮುಗದಲ್ಲಿ ಬರುವ ಮಳೆಗಾಲದಲ್ಲಿ ಮರಳಿ ಇಲ್ಲಿಗೆ ಬರುವ ಮಾತಿರುತ್ತದೆ.

ಇಲ್ಲಿ ವರೆಗೆ ಡಿಸ್ಕವರಿ, ಎನ್.ಜಿ.ಸಿ ಗಳಲ್ಲಿ ನೋಡಿದ ರಿವರ್ ರಾಫ್ಟಿಂಗ್ ನಮ್ಮ ಕರ್ನಾಟಕದಲ್ಲಿ ಇದೆ ಎಂದು ಕೇಳಿದಾಗ ಅದನ್ನು ಮಾಡುವ ಮನಸ್ಸಾಯಿತು. ಈಜು ಬಾರದಿದ್ದರೂ ಆಲೆಯ ಮೇಲೆ ತೇಲುವ ಮನಸ್ಸಾಯಿತು!!

ರಿವರ್ ರಾಫ್ಟಿಂಗ್ ಅಂದ್ರೆ ...?
ನದಿಯು ನೈಸರ್ಗಿಗವಾಗಿ ಕಾಡುಮೇಡುಗಳ ನಡುವೆ ದಾರಿ ಮಾಡಿಕೊಂಡು ಹರಿಯುತ್ತಿರುತ್ತದೆ. ದಾರಿಗಳು ಕೆಲವೆಡೆ ತುಂಬಾ ಅಗಲವೂ ಕೆಲವೆಡೆಗಳಲ್ಲಿ ತುಂಬಾ ಕಿರಿದಾಗಿಯೂ ಇರುತ್ತದೆ, ಇವುಗಳ ನಡುವೆ ಬಂಡೆಗಳು ಕಲ್ಲುಗಳನ್ನು  ಕೊರೆದು ದಾರಿ ಮಾಡಿರುತ್ತವೆ, ಕೆಲವೊಂದು ಕಡೆಗಳಲ್ಲಿ ಬಂಡೆಗಳು, ಕಂದಕಗಳೂ ನಿರ್ಮಾಣ ವಾಗಿರುತ್ತವೆ. ರೀತಿಯ ಸಮತಟ್ಟು ಅಲ್ಲದ ಪ್ರದೇಶದಲ್ಲಿ ದೋಣಿ ಗಳು ಹಾದು ಹೋಗುವಾಗ ಅದು ನಾವಿಕನ ನಿರ್ದೇಶನಕ್ಕೆ ಬದಲಾಗಿ ನೀರಿನ ಸೆಳೆತಕ್ಕೆ ಅನುಗುಣವಾಗಿ ಸಾಗಲು ಶುರುಮಾಡುತ್ತದೆ ಹಿಡಿತ ತಪ್ಪಿದ ದೋಣಿಯನ್ನು ಮತ್ತೆ ಹಿಡಿತಕ್ಕೆ ತರುವುದು ಒಂದು ರೋಮಾಂಚಕ ಅನುಭವ.

ಎಲ್ಲಿ ..?
ಮಡಿಕೇರಿಯಿಂದ ಕುಶಾಲನಗರಕ್ಕೆ ಸಾಗುವ ದಾರಿಯಲ್ಲಿ ಕುಶಾಲ್ ನಗರ ತಲುಪುವ ಮೊದಲೇ ದುಬಾರೆ ಆನೆ ಉಧ್ಯಾನ ಗ್ಗೆ ಹೋಗುವ ತಿರುವು ಸಿಗುತ್ತದೆ. ಅಲ್ಲಿಂದ ಕೆಲವೇ ಮೈಲಿನಂತರದಲ್ಲಿ ಕಾವೇರಿ ತಟದಲ್ಲಿ ಹಲವಾರು ರಿವೆರ್ ರಾಫ್ಟಿಂಗ್ ಕ್ಯಾಂಪ್ ನವರನ್ನು ನೀವು ಕಾಣಬಹುದು.

ಪೂರ್ವ ತಯಾರಿ ..?
ಆಭರಣಗಳು, ಮೊಬೈಲ್ ಮತ್ತಿತರ ವಸ್ತುಗಳನ್ನು ಬೋಟ್ ಏರುವ ಮೊದಲೇ ತೆಗೆದಿಡಿ. ರಾಫ್ಟಿಂಗ್ ಕ್ಯಾಂಪ್ ನವರು ಕೊಟ್ಟ ಲೈಫ್ ಜಾಕೆಟ್, ಹೆಲ್ಮೆಟ್ ಅನ್ನು ಅವರ ಮೇಲ್ವಿಚಾರಣೆಯಲ್ಲಿ ಧರಿಸಿ. ರೋಮಾಂಚಕ ರೈಡ್ ಅನ್ನು ಚಿತ್ರೀಕರಿಸಲು ಬಯಸುವುದಾದರೆ ಕೆಮರಾ ಇಟ್ಟುಕೊಳ್ಳಿ, ಬಗ್ಗೆ ಮೊದಲೇ ನಿಮ್ಮ ಬೋಟ್ ಮೇಲ್ವಿಚಾರಕರಿಗೆ ಹೇಳಿ, ಅವರು ರಾಫ್ಟ್ ಸಮೀಪಿಸುತಿದ್ದಂತೆ ನಿಮ್ಮ ಕೆಮಾರದ ಸುರಕ್ಷತೆ ಬಗ್ಗೆ ನೋಡಿಕೊಳ್ಳುತ್ತಾರೆ.

ರಾಫ್ಟಿಂಗ್ ಪ್ಯಾಕೇಜ್ ನಲ್ಲೆ ಏನೇನು ಬರುತ್ತದೆ ..?
ಒಂದು ಲೈಫ್ ಜಾಕೆಟ್, ಹೆಲ್ಮೆಟ್ ಮತ್ತು ಒಂದು ಹುಟ್ಟು. , , ಮಂದಿಗೆ ಒಂದರಂತೆ ಟ್ಯೂಬ್ ಬೋಟ್, ಪ್ರತಿಯೊಂದು ಬೋಟ್ ಗೆ ಒಬ್ಬ ಗೈಡ್, ಪ್ರತಿಯೊಂದು ಬೋಟ್ ಗೆ ಒಂದು ವಾಟರ್ ರೇಸಿಸ್ಟೆಂಟ್ ಬ್ಯಾಗ್ (ನಿಮ್ಮ ಮೊಬೈಲ್, ಕೆಮೆರ ಇಡಲು

ಒಟ್ಟು ಎಷ್ಟು ರಾಫ್ಟ್ ಗಳಿರುತ್ತವೆ...?
ಮೂರರಿಂದ ಐದು ನೀರಿನ ಒಳಹರಿವಿನ ಮೇಲೆ ಅವಲಂಬಿಸಿರುತ್ತದೆ.

ರಾಫ್ಟ್ ಯಾರೆಲ್ಲ ಮಾಡಬಹುದು ..?
ಹದಿನೈದರಿಂದ ಅರುವತ್ತು ವಯಸ್ಸಿನ ನಡುವಿನ ಎಲ್ಲರೂ ಮಾಡಬಹುದು.ಈಜಲು ಬರುವವರೂ ಬಾರದವರೂ , ನೀರಿನ ಭಯ ಇರುವವರೂ ನಿರ್ಭೀತರಾಗಿ ಮಾಡಬಹುದು.

ಒಟ್ಟು ಉದ್ದ ..?
ಕಿ.ಮಿ

ರಾಫ್ಟ್ ತೆಗೆದುಕೊಳ್ಳುವ ಸಮಯ ..?
ಘಂಟೆ ಇಂದ ಘಂಟೆ, ಇದು ನೀರಿನ ಹರಿವು ಮತ್ತು ಬೋಟ್ ಚಲಾಯಿಸುತ್ತಿರುವವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ.

ರಾಫ್ಟಿಂಗ್ ಗೆ ಪ್ರಶಕ್ತ ಸಮಯ...?
ಜೂನ್ ನಿಂದ ಆಗಸ್ಟ್

ನೀವು ರಾಫ್ಟ್ ಮಾಡುವ ಮುಂಚೆ ಕೆಲವೊಂದು ಸಲಹೆಗಳು:
ಇಲ್ಲ ಮಂದಿಯ ಪಯಣ ಹೆಚ್ಚು ಮುದ ಕೊಡುತ್ತದೆ.
ನಿಮ್ಮ ಬೋಟ್ ನಲ್ಲಿ ಎಲ್ಲ ನಿಮ್ಮ ವಯೋಮಿತಿ ಮತ್ತು ಮನಸ್ತಿತಿಯವರೇ ಇರುವಂತೆ ಮುತುವರ್ಜಿ ವಹಿಸಿ ಇದು ನಿಮಗೆ ಇನ್ನಷ್ಟು ಥ್ರಿಲ್ ಒದಗಿಸುತ್ತದೆ.
ನಿಮ್ಮ ಜೊತೆಯಲ್ಲಿ ಬರುವ ಗೈಡ್ ಮಾರ್ಗದರ್ಶನದಂತೆ ಹುಟ್ಟನ್ನು ಚಲಾಯಿಸಿ.
ಕೆಲವೊಂದು ಸಲ ದೋಣಿ ಮುಳುಗುವ ಸಂಭವವಿರುತ್ತದೆ. ನಿರ್ಭೀತರಾಗಿ ನೀರಲ್ಲಿ ಮುಳುಗಿ. ಲೈಫ್ ಜಾಕೆಟ್ ನಿಮ್ಮನ್ನು ಮೇಲೆ ತಳ್ಳುತ್ತದೆ.
ನೀವು ಎಷ್ಟು ಥ್ರಿಲ್ಲಿಂಗ್ ಆಗಿ ಇರ್ತೀರಿ ಅಷ್ಟು ಥ್ರಿಲ್ಸ್  ನಿಮ್ಮ ಗೈಡ್ ನಿಮಗೆ ಕೊಡುತ್ತಾನೆ, ಆದ್ದರಿಂದ ಭಯ ಮುಜುಗರ ಬಿಟ್ಟು ರೈಡ್ ಅನ್ನು ಸಂಪೂರ್ಣವಾಗಿ ಆಸ್ವಾದಿಸಿ.
ರಾಫ್ಟ್ ಮುಗಿದ ಬಳಿಕ ನಿಮ್ಮನ್ನು ಮೊದಲ ಸ್ಥಳಕ್ಕೆ ಜೀಪಿನಲ್ಲಿ ತಂದು ಬಿಡುತ್ತಾರೆ.

ಬಾರಿ ಹೊಸತನ್ನೆನನ್ನೋ ಸಾಧಿಸುವ ಛಲದಿಂದಲೇ ನಾವು ನಮ್ಮ ಬ್ಯಾಗ್ ಅನ್ನು ಕಟ್ಟಿಕೊಂಡಿದ್ದೆವು. ಮಡಿಕೇರಿಯಲ್ಲಿ ಹೊಸತೇನಿದೆ..? ಕಣ್ಣು ಬಿಟ್ಟರೆ ಕಾಣುವುದು ದೂರ ದೂರಕ್ಕೆ ಹಬ್ಬಿರುವ ಮಂಜು, ಮಂಜು ಮಾಯವಾದರೆ ಅಲ್ಲಿ ಕಾಣುವ ಕಾಫಿ ಎಸ್ಟೇಟ್ ಗಳು, ಕೆಲವೊಂದು ಜಲಪಾತಗಳು, ಟಿಬೀಟಿಯನ್ನರ ಪುನರ್ವಸತಿ ಕೇಂದ್ರ, ಮತ್ತು ಎಲ್ಲದರ ನಡುವೆ ಹುಟ್ಟಿ ತನ್ನಪಾಡಿಗೆ ಹರಿವ ಕಾವೇರಿ. ಇವಲ್ಲಿ ಹೊಸತನ ಏನಿದೆ ಅಂದುಕೊಂಡಿದ್ದೆ. ಆದರೆ ಪ್ರವಾಸ ಮುಗಿದಾಗ ಎಲ್ಲವು ಹೊಸತಾಗಿತ್ತು. ನೀವೂ ಹೋಗಿ ಬನ್ನಿ ಹೊಸ ಅನುಭವದೊಂದಿಗೆ ಹೊಸ ಅನುಭೂತಿಯೊಂದಿಗೆ ಮತ್ತೆ ಕೆಲಸದಲ್ಲಿ ನಿಮ್ಮ ದೈನಂದಿನ ಕಾರ್ಯದಲ್ಲಿ ತೊಡಗಲು ನೆರವಾಗುವುದು.

ನಿಮ್ಮ
ಕಾಮತ್ ಕುಂಬ್ಳೆ
ಚೂರು ಈ ಲೇಖನ ನಿನ್ನೆಯ ಕನ್ನಡಪ್ರಭದ ಪ್ರವಾಸಪ್ರಭ ವಿಭಾಗದಲ್ಲಿ ಪ್ರಕಟ ಗೊಂಡಿದೆ. ಓದಲು ಸಂಚಿಕೆಯ ೧೭ ನೇ ಪುಟಕ್ಕೆ ಕ್ಲಿಕ್ಕಿಸಿ.  Kannada prabha
  

Tuesday, August 14, 2012

ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ..??



ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ 
ಸಾರ್ವಭೌಮತ್ವ ದಕ್ಕಿದ್ದು  ಯಾರಿಗೆ 
ನಡುರಾತ್ರಿಯಲಿ ಮೂವತ್ತೈದು ಕೋಟಿ ಜೋಡಿ
ಕಣ್ಣಲಿ ಕನಸು ಬೀಳುವ ಹೊತ್ತಿನಲ್ಲಿ 
ತಡರಾತ್ರಿಯಲಿ ಮೂರು ಗೋಡೆಯ ಒಳಗೆ
ಕಡತದ ಕೆಳಗಿನ ಎರಡು ಸಹಿಗಳ ನಡುವಲಿ
ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ
ಸಾರ್ವಭೌಮತ್ವ ದಕ್ಕಿದ್ದು  ಯಾರಿಗೆ ..??

ಪೆಟ್ಟಿಗೆಯ ಒಳಗಿದ್ದ ತ್ರಿವರ್ಣ ಧ್ವಜಕೆ
ಮೇಲೇರಿ ಅರಳುವ  ಸ್ವಾತಂತ್ರ್ಯ 
ಎರಡು ಶತಮಾನದಿ ಹಾರುತಿದ್ದ ನೀಲಿ ಬಟ್ಟೆಗೆ
ಕೆಳಗಿಳಿಯುತ ಮರೆಯಾಗುವ ಸ್ವಾತಂತ್ರ್ಯ 

ಉಪ್ಪು, ನೀರು, ಆಹಾರ, ಅಧಿಕಾರಕ್ಕಾಗಿ 
ಮಾಡಿದ ಸತ್ಯಾಗ್ರಹಕೆ ಸ್ವಾತಂತ್ರ್ಯ 
ಹಮ್ಮು, ಗತ್ತು, ವಿಚಾರ , ಅಹಂಕಾರಕ್ಕಾಗಿ 
ತೋರಿದ ಸಂಸ್ಕೃತಿ ಪ್ರಹರಕೆ ಸ್ವಾತಂತ್ರ್ಯ 

ಮೌನದಲ್ಲಿದ್ದ ಗಾಂಧಿ ಟೋಪಿಗೆ
ಧೇಶದ ಆಡಳಿತದ ಸ್ವಾತಂತ್ರ್ಯ 
ದರ್ಪದಲ್ಲಿ ಬೀಗಿತಿದ್ದ ಕೆಂಪು ಮೂತಿಗೆ 
ತವರಿಗೆ ಮರಳುವ ಸ್ವಾತಂತ್ರ್ಯ 

ಅಂದು ಹದಿನೈದರ ಮುಂಜಾನೆ ಇಡಿ ದೇಶವೇ ಸ್ವಾತಂತ್ರ್ಯ 
ಇಂದು ಅರವತ್ತೈದರ  ಹೊಸ್ತಿಲಲಿ ನಮ್ಮ ಸ್ವಾತಂತ್ರ್ಯ 
ಅಂದಿನಂತೆ ಇಂದೂ ಮತ್ತೆ ಅದೇ ಪ್ರಶ್ನೆ ಕೇಳುತಿದೆ 
ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ
ಸಾರ್ವಭೌಮತ್ವ ದಕ್ಕಿದ್ದು  ಯಾರಿಗೆ ..??

ಇನ್ನೊಬ್ಬರ ಜೂಥೆ ಪೋಲಿಷ್ ಮಾಡುವ ಕನಸುಕಣ್ಣಿಗೆ ಬೇಕಿದೆ 
ತುತ್ತಿಗಾಗಿ ನಾಲ್ಕು ಅಕ್ಷರ ಕಲಿಯುವ ಸ್ವಾತಂತ್ರ್ಯ 
ಇನ್ನುಬ್ಬಳ ಕಂತೆ ತುಂಬಿಸುವ ಬೆಲೆವೆಣ್ಣಿಗೆ ಬೇಕಿದೆ 
ನೀಯತ್ತಿನ ನಾಲ್ಕು ದಿನವನ್ನು ಕಳೆಯುವ ಸ್ವಾತಂತ್ರ್ಯ 

ನೇಗಿಲ ದೂಡುತ, ಸಾಲದ ನೋಗಗೆ ಹೆಗಲಾದ ದೇಹಕೆ ಬೇಕಿದೆ 
ತನ್ನವರಿಗಾಗಿ ನಾಲ್ಕು ಕಾಳು ಕೂಡಿ ಇಡುವ ಸ್ವಾತಂತ್ರ್ಯ 
ಉಂಡು ತೇಗುತ, ದೇಶದ ಸಾಲಕೆ ಕಾರಣವಾದ ರಾಜಕೀಯಕೆ ಬೇಕಿದೆ 
ದೇಶದ ಏಳಿಗೆಗೆ ನಾಲ್ಕು ಗಳಿಗೆ ಯೋಚಿಸುವ ಸ್ವಾತಂತ್ರ್ಯ 

ವರ್ಷದಲ್ಲಿ ಒಂದೆರಡು ದಿನ ಹಾರಾಡುವ 
ಮೂರು ಪಟ್ಟಿಯ ನಡುವಿನ ನೀಲಿಚಕ್ರಕ್ಕೆ ಸಿಗಬೇಕಿದೆ ಸ್ವಾತಂತ್ರ್ಯ 
ಹರ್ಷದಲಿ ಮಾದರಿ ರಾಷ್ಟ್ರದ ಸಂಕೇತವಾಗಿ 
ಪ್ರಗತಿಯ ನಾಗಾಲೋಟದಲ್ಲಿ ಉರುಳುತ ಸಾಗುವ ಸ್ವಾತಂತ್ರ್ಯ 


ಎಲ್ಲರಿಗೂ ಸ್ವಾತಂತ್ರದಿನದ ಶುಭಾಶಯಗಳು 
ನಿಮ್ಮ
ಕಾಮತ್ ಕುಂಬ್ಳೆ