ಅಳಿಸಲಾಗದು ನಗುವ ನನ್ನ ಕಣ್ಣನು ನಿನ್ನ ನೆನಪ ಹೊರತು
ಅಳಿಸಲಾಗದು ಕೊರಗುವ ನನ್ನ ಹೃದಯದಿ ನಿನ್ನ ಹೆಜ್ಜೆ ಗುರುತು
ನೆನೆಯುತಿದೆ ಮತ್ತೆ ಇಂದು ಮನವು ಸವಿ ಸವಿ ಜೋಡಿ ವಿಹಾರಕೆ
ನೆನೆಯುತಿದೆ ಮತ್ತೆ ದಿಂಬು ದಿನವು ಹನಿ ಹನಿ ಕಂಬನಿ ವಿರಹಕೆ
ನಿನ್ನ ಕಣ್ಣ ಬೆಳಕ ಅನ್ವೇಷಿಸುತ
ಸುತ್ತಿ ಸುತ್ತಿ ಸುಸ್ತಾಗಿದೆ ಭುವಿಯು
ನಿನ್ನ ಮುಂಗುರುಳ ನೆರಳ ಅರಸಿ
ತಿರು ತಿರುಗಿ ಕರಗಿದೆ ಶಶಿಯು
ನಿನ್ನ ನೆನಪ ರಂಗೋಲಿಯ ಬಣ್ಣದಂತೆ
ಅಲ್ಲಲ್ಲಿ ಚೆಲ್ಲಿದೆ ಕೋಟಿ ತಾರೆಯು ||ಅಳಿಸಲಾಗದು ನಗುವ ||
ಯಾರೂ ಕೇಳಿರದ ಹೆಸರೊಂದನು ಹೆಕ್ಕಿ ತಂದಿಹುದು
ಹಾರಿ ಹಾರಿ ಹೂವಿಂದ ಹೊವಿಗೆ ಪತಂಗವು
ಯಾರೂ ಕಾಣದ ಹಸಿರೊಂದನು ಉಕ್ಕಿ ಚೆಲ್ಲಿಹುದು
ಕಾವೇರಿ ಒಣಗಿ ಬರುಡಾದ ಭುವಿಯು
ಯಾರೂ ಅನುಭವಿಸದ ಸಂತಸದಿ ಕುಪ್ಪಳಿಸುತಿಹುದು
ಏಕಾಂತ ಪ್ರಿಯ ಮೌನಿ ಕಡಲ ಒಡಲು ||ಅಳಿಸಲಾಗದು ನಗುವ ||
ಬಂದು ಸೇರಿ ಬಿಡು ನನ್ನಲಿ ನೀನು ಮಳೆನೀರಿನಲ್ಲಿನ ನನ್ನ ಕಣ್ಣೀರಿನಂತೆ
ಮರೆಸುತ ಕಳೆದು ಹೋದ ದಿನದ ಉಪ್ಪು ನೀರಿನ ಅಂಶವನು
ಹೊಸ ಮಳೆಯ ಶುದ್ದ ನೀರಿನ ಸ್ವಾದಕೆ ಇಬ್ಬರೂ ಮರುಳಾಗುವ
ಮಳೆ ನಿಂತ ಮೇಲಿನ ಮಣ್ಣ ವಾಸನೆಯಂತೆ ಎಲ್ಲರಿಗೂ ಪ್ರಿಯವಾಗುವ
ಬಂದು ಸೇರಿ ಬಿಡು ನನ್ನಲಿ....
ಕಾಮತ್ ಕುಂಬ್ಳೆ
ಭಾವಗೀತೆಯ ಎಲ್ಲಾ ಲಕ್ಷಣಗಳೂ ನಿಮ್ಮ ಕಾವ್ಯ ಶೈಲಿಯಲ್ಲಿದೆ.
ReplyDeleteಉತ್ತಮ ಕಾವ್ಯ ರಚನೆ ಇಷ್ಟವಾಯಿತು
ನನ್ನ ಬ್ಲಾಗಿಗೂ ಬನ್ನಿರಿ.