Monday, February 27, 2012

ನೆನಪ ಪರದೆ ಬಿಡಿಸಿ ನೀ ಹೊರ ಬರಬೇಕಿದೆ....

ಕಾಣುವ ಕೋಟಿ ಹೆಜ್ಜೆ ಎದುರಿದ್ದರೂ ಕಣ್ಣಾಚೆಗಿನ ಮನದಲ್ಲಿ ನಿನ್ನ ಹೆಜ್ಜೆಯ ಅಚ್ಚಾಗುವ ಸದ್ದಾಗಿದೆ
ಕಾಡುವ ಕೋಟಿ ಹುಚ್ಚು ಭಾವವಿದ್ದರೂ ಬೆಚ್ಚಗಿನ ಕಣ್ಣಂಚಿನ ನಿನ್ನ ಬಗೆಯ ಕಂಬನಿ ಮುದನೀಡಿದೆ
ಹಾಡುವ ಕೋಟಿ ಸ್ವರ ಕಿವಿಗೆ ಬಿದ್ದರೂ ಮೌನದಲ್ಲಿ ಗುಂಯ್ಗುಡುವ ನಿನ್ನ ಮಾತೆ ಮೆಲುಕಾಗಿದೆ
ಆಡುವ ಕೋಟಿ ಮಾತು ತುಟಿ ಮೇಲಿದ್ದರೂ ನಿನ್ನಲ್ಲಿ ಕಲಿತ ಪ್ರೆಮಭಾಷೆಯ ಕೊರತೆ ಮೊದಲಾಗಿದೆ
ನೆನಪ ಪರದೆ ಬಿಡಿಸಿ ನೀ ಹೊರ ಬರಬೇಕಿದೆ....

ಗಾಳಿ  ಸೋಕಿ ದೂರ ಸರಿದಾದಾಗ ನೀನು ಬಂದು ಸ್ಪರ್ಶಿಸಿದಂತಾಗಿದೆ  
ಒಂಟಿ ಬಾಳಲಿ ಮೌನಿಯಾಗಿ ನೀನು ಬಂದು ಆಕರ್ಷಿಸಿದಂತಾಗಿದೆ
ಖಾಲಿ ಹಾಳೆಯಲಿ ಹೊಸ ಬಗೆಯ ವಿನೋದಕೆ ನೀನೇ ಮುನ್ನುಡಿ ಬರೆದಂತಾಗಿದೆ
ಪ್ರೀತಿ ಎಳೆಯಲಿ ನನ್ನ ಹಳೆಯ ವಿರಹಕೆ ನೀನೇ ತೆರೆ ಎಳೆದಂತಾಗಿದೆ
ನೆನಪ ಪರದೆ ಬಿಡಿಸಿ ನೀ ಹೊರ ಬರಬೇಕಿದೆ...

 
ಮನವಿಂದು ಮಿಡಿಯುತಿದೆ ಅದ್ಯಾಕೋ... ನಿನ್ನ ಸಖ್ಯ ಅದು ಬೇಡುತಿರುವುದು ಅದ್ಯಾಕೋ ...
ಪ್ರೀತಿಯ ಮಾಯೆಯೊಳಗೆ ಮತ್ತೆ  ನಾನಾಗಿಯೇ ಜಾರಿದೇನೋ...
ನನಗರಿವಾಗದಂತೆ ನೀನೇ ನನ್ನನ್ನು ಕೈಹಿಡಿದೆಳೆದಿರುವೆಯೋ...
ನಿನ್ನ ನೆನಪಿನ ಸುಳಿಯೊಳಗೆ ಈಜುವ ಸುಖವು ಮತ್ತೆ ಹಿತವೆನಿಸಿದೆ ಅದ್ಯಾಕೋ ...

ನೆನಪ ಪರದೆ ಬಿಡಿಸಿ ನೀ ಹೊರ ಬರಬೇಕಿದೆ
ಕಾಡಿ ಬೇಡಿ ಪಡೆದ ಪ್ರೀತಿ ಕಾಪಿಡಬೇಕಾಗಿದೆ
ನೆರಳಾಗಿ ಹಿಂಬಾಲಿಸುವ ನೀನು ಜೊತೆ ಬರಬೇಕಿದೆ
ಕೈ ಕೈ ಹಿಡಿದು ಕಾಲಕೆಳಗಿನ ನೆರಳಂತೆ ನಿನ್ನ ಆಲಂಗಿಸಬೇಕಿದೆ...

ಕಾಮತ್ ಕುಂಬ್ಳೆ

No comments:

Post a Comment