Saturday, May 28, 2011

ಗೆಳೆಯನೇ ಇನ್ನು ನೀನು ಬರಿಯ ನೆನಪು....






ಉದಯರವಿ ಪಡುವಣ ತೀರದಲಿ ಕರಗದೇ 
ಇಹ ತೊರೆದು ನಡುದಾರಿಯಲಿ ಮರೆಯಾದೆ
ನೆನಪ ಜೋಳಿಗೆಯಲಿ ಬಚ್ಚಿಟ್ಟು ತನ್ನ ಕಣ್ಣಿರ 
ನಗು ಮೊಗದಿ ನಗುನಗುತಲಿ ತೇಲಿಹೋದೆ


ನಾವಿಕನ ಆಟಕೆ ಒಂಟಿಯಾಗಿದೆ ದೋಣಿಯು 
ಪಯಣಿಕನಿಗೆ ಯಾರ ಆಸರೆ ನಡುನೀರಿನೋಳು 
ಬಂಧಿಪಂಜರದ ಉತ್ಸಾಹ ಮರೆಯಾಗಿದೆ ಇಂದು 
ಹೊರಟ ಗಿಳಿಯು ಯಾವ ಗೂಡು ಸೇರಿಹುದೋ ಎಂದು


ಹೆಗಲಾಗುವ ಮೊದಲೇ ಹೆಗಲೇರಿ ಮಲಗಿರುವುದು 
ಅಂದು ಹೆಗಲೇರಿ ಕುಣಿದಿದ್ದ ಕೂಸು,ಕೊನೆಯ ಪಯಣಕೆ ಇಂದು 
ಪಂಚಭೂತಗಳು ಕರೆಯುತಿವೆ ಪಂಚೇಂದ್ರಿಯಗಳನು 
ಬಂಧನವ ತೊರೆಯಲಾದೀತೇ ಹಳೆಯ ಋಣಕೆ


ಹನಿಯಿಡುವ ಕಣ್ಣಿಗೆ ಸಾಂತ್ವನ ಕೊಡುತಲಿದೆ
ಇನ್ನೊಂದು ಕೊರಗುವ ಮನಸು
ಪುತ್ರತ್ವ,ಭ್ರಾತತ್ವ, ಮಿತ್ರತ್ವ ಚಿತೆ ಸೇರಿ ಉರಿಯುತಿದೆ 
ಗೆಳೆಯನೇ ಇನ್ನು ನೀನು ಬರಿಯ ನೆನಪು


ಮನುಜಪಯಣ ಬಾಲ್ಯದಿಂದ ಗಮ್ಯದೆಡೆಗೆ 
ಉಸಿರಿಗೆ ಹೆಸರು ನಡುವೆಲ್ಲ, ಹೆಸರೇ ಉಸಿರು ಕೊನೆಗೆ 
ನಿಜಪಯಣ ಶೂನ್ಯದಿಂದ ಶೂನ್ಯದೆಡೆಗೆ 
ಅಲ್ಪವಿರಾಮ ನಡುವೆಲ್ಲ, ಪೂರ್ಣವಿರಾಮ ಕೊನೆಗೆ






ಕಾಮತ್ ಕುಂಬ್ಳೆ

Thursday, May 5, 2011

ದಿಲ್ಲಿನಲ್ಲಿ ಒಂದು ಮಿಲ್ಲಿಗ್ರಾಂ ಲವ್ ಶುರುವಾಗಿದೆ !!!


ದಿಲ್ಲಿನಲ್ಲಿ ಒಂದು ಮಿಲ್ಲಿಗ್ರಾಂ ಲವ್ ಶುರುವಾಗಿದೆ
ಬೀಟಿಂಗ್ ಹಂಗೆ ಏರುತ್ತ ಹೊಸ ರಿಂಗ್ಟೋನ್ ಕೇಳಿದೆ ....
ಫೆಸ್ಬುಕ್ ಸ್ಟೇಟಸ್ ನಲ್ಲಿ ಹೊಸ ಲವ್ ಸಾಂಗ್ ಪ್ಲೇ ಅಗುತಲಿದೆ..
ಫ್ಲಿಕರ್ ನ ಬಾಲ್ಕನಿಯಲ್ಲಿ ಫೋಟೋ ಒಂದು ನಗನಗುತಾ ಅಸುನೀಗಿದೆ ...

ಐಪಿಯಲ್ ಜ್ವರ ಯೋರ್ಕರ್ ನಗೆಗೆ ಕ್ಲೀನ್ ಬೋಲ್ಡ್
ಪಿವಿಆರ್ ದೂರ ಸೆವೆನ್ಟಿ ಯಂ.ಯಂ ಈಗ ಕಾಲೇಜ್ ಕಂಪೌಂಡ್
ಲವ್ ಸ್ಟೋರಿ ಕಂಡು ಆದ ರೋಮಿಯೋ ಇನ್ಸ್ಪಯರ್
ಅಲ್ಲೇ ಹಿಸ್ಟರಿ ಸೇರಿ ಗೆದ್ದಲು ಹಿಡಿದ ಶೇಕ್ಸ್ಪಿಯರ್

ಶಕೀರಾ, ಜಾಕ್ಸನ್ ಟ್ಯುಶನ್ ಗಾಗಿ ಬಡಿದರು ನನ್ನ ಮನೆ ಬೆಲ್
ಮಿರ್ಚಿ, ಸಿಟಿ ಟ್ರಾನ್ಸ್ಮಿಟ್ ಮಾಡಿತು ನನ್ನ ಮನದ ಸಾಂಗ್
ಐ.ಟಿ ರೈಡ್ ನಡೆತಿತು ನಿನ್ನ ನಗೆಯ ಬೌಂಡರಿ ಮೀರಿದ ಇನ್ಕಂಗೆ
ಬಿಲ್ ಗೆಟ್ ಸೀದಾ ಇಲ್ಲೇ ಲ್ಯಾಂಡ್ ಆದ ನಿನ್ನ ಸಾಲ ಕೇಳಲು

ಹೊಸ ವರ್ಡ್ ಬಂದು ಸೇರಿತು ಲೈಬ್ರರಿಯ ಹಳೆ ಡಿಶನರಿಯಲಿ
ಸದಾ ಆನ್ ಲೈನ್ ಇರುವುದು ಆ ಸ್ಟ್ರೋಬೆರಿ ನಗೆ ದಿನಚರಿಯಲಿ
ನನಗೆ ನನ್ನ ಮನವೀಗ ಔಟ್ ಆಫ್ ಕವರೇಜ್ ಏರಿಯ ಎನ್ನುತಲಿದೆ
ನಗೆಯ ನಿನ್ನ ಅಲೆಗೆ ಮೈಂಡ್ ಲಾಗ್ ಔಟ್ ಮೋಡಲಿ ಮಲಗಿದೆ .

ಹೊಸ ಪ್ರಯತ್ನ, ಭಾವ ಜೀವಿಯ ಗುಂಗಿನಿದ ಹೊರ ಬಂದು  ಹೀಗೆ ತೋಚಿದ್ದು ಗೀಚಿದ್ದು ಯೋಗರಾಜ್ ಭಟ್ ಸ್ಟಿಲ್ ನಲ್ಲಿ, ಇಷ್ಟವಾದರೆ ಕಮೆಂಟಿಸಿ.

ನಿಮ್ಮ
ಕಾಮತ್ ಕುಂಬ್ಳೆ