Tuesday, March 22, 2011

ಭಾರತದ ಸೋಲಿಗೆ ಸಚಿನ್ ಶತಕ ಕಾರಣವಾ ....?

ಸಚಿನ್ ಈ ವರೆಗೆ ಹೊಡೆದ ೪೮ ಏಕದಿನ ಶತಕಗಳಲ್ಲಿ ಭಾರತ ೩೩ ರಲ್ಲಿ ಜಯ, ೧ ರಲ್ಲಿ ಟೈ, ೧ ಡ್ರಾ  ಮತ್ತು ೧೩ ರಲ್ಲಿ ಸೋತಿರುವುದು. ಈ ಪೈಕಿ ಸೋತಿರುವ ೧೩ ಪಂದ್ಯಗಳ ವಿಶ್ಲೇಷಣೆ :

೧: ೧೩೭  ರನ್ (೧೩೭ ಎಸೆತ ) ೧೯೯೬ ರ ಶ್ರೀಲಂಕಾ ವಿರುದ್ದ ದೆಹಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯ.
ಭಾರತ ೫೦ ಓವರ್ ಗಳಲ್ಲಿ  ೨೩೧/೩ ಮಾಡಿತ್ತು, ಈ ಪಂದ್ಯದಲ್ಲಿ ಅಜರುದ್ದಿನರ ವಯಕ್ತಿಕ ೫೦ ರನ್ ಎರಡನೇ ಉತ್ತಮ ಸ್ಕೋರ್.ಅದೇ ಶ್ರೀಲಂಕಾ ೨೭೨ ರನ್ ಅನ್ನು ೪೮.೪ ರಲ್ಲಿ ಬಾರಿಸಿ ಭಾರತವನ್ನು ಸೋಲಿಸಿತ್ತು. ಸೋಲಿಗೆ ಪ್ರಮುಖ ಕಾರಣ ಮನೋಜ್ ಪ್ರಭಾಕರ್ ರ ೪-೦-೪೭- ೦ ಗತಿಯ ಬೌಲಿಂಗ್ ನಿರ್ವಹಣೆ ಮತ್ತು ಓಪನರ್ ಆಗಿ ಬಂದು ೭ ರನ್ ಪೇರಿಸಲು ೩೬ ಎಸೆತ ಬಳಸಿದನ್ನು ಎಲ್ಲರೂ ಮರೆತಂತಿದೆ.

೨ : ೧೦೦ ರನ್ (೧೧೧ ಎಸೆತ) ಏಪ್ರಿಲ್ -೧೯೯೬ ರ ಸಿಂಗಾಪುರ್ ನಲ್ಲಿ ನಡೆದ ಪಾಕಿಸ್ತಾನದ ವಿರುದ್ದದ ಪಂದ್ಯ.
೧೮೬/೪ ಇದ್ದ ಭಾರತ ೨೨೬ ಕ್ಕೆ ಸರ್ವಪತನ ಗೊಂಡಿತ್ತು. ನಂತರದ ೩ ಆಟಗಾರರ ಸ್ಪಾಟ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡದ್ದು ಭಾರತದ ಕ್ರಿಕೆಟ್ ಇತಿಹಾಸಕ್ಕೆ ಇರುವ ಕಪ್ಪು ಚುಕ್ಕೆ.

೩: ೧೧೦ ರನ್ (೧೩೮ ಎಸೆತ) ಆಗೋಸ್ಟ್ ೯೬ ರ ಶ್ರೀಲಂಕಾವಿರುದ್ದದ ಪಂದ್ಯ.
 ೫೦ ಓವರ್ ಗಳಲ್ಲಿ ಭಾರತದ ಗಳಿಗೆ ೨೨೬ / ೫ ಇಲ್ಲೂ ಸಚಿನ್ ಗೆ ಸಾಥ್ ಆದವರು ಅಜರುದ್ದಿನ್ (೫೮  ರನ್ ೯೯ ಬಾಲ್ಸ್). ಇಲ್ಲಿ ಸಚಿನ್ ತಮ್ಮ ಬೌಲಿಂಗ್ ನಲ್ಲೂ ಮಿಂಚಿದ್ದರು ೬-೦-೨೯-೧ . ಶ್ರೀಲಂಕಾದ ಒಂದೇ ವಿಕೆಟ್ ಕಬಳಿಸಿದ್ದು ಸಚಿನ್ ವಿನಃ  ಅಜ್ಹರ್ ಬಳಸಿದ ಇತರ ೬ ಬೌಲರ್ ಗಳಲ್ಲ. ಶ್ರೀಲಂಕಾ ೪೪.೨ ಒವೆರ್ನಲ್ಲಿ ೨೩೦/೧ ನೊಂದಿಗೆ ಗೆಲುವಿನ ನಗೆ ಬೀರಿತ್ತು.

೪ : ೧೪೩ ರನ್ (೧೩೧ ಎಸೆತ) ಏಪ್ರಿಲ್ ೧೯೯೮ ರ ಶಾರ್ಜದಲ್ಲಿನ ಪಂದ್ಯ ಅಹರ್ನಿಶಿ ಪಂದ್ಯ.
೪೬ ಓವರ್ ನಲ್ಲಿ ೨೭೬ ರನ್ ಗಳ ಗುರಿ ಇದ್ದ ಭಾರತ ೪೩ ನೇ ಓವರ್ ನಲ್ಲಿ ಸಚಿನ್ ಔಟ್ ಆಗುವಾಗ ೨೪೨/೫ ಆಗಿತ್ತು , ಆದರೆ ಮುಂದಿನ ೩ ಓವರ್ ನಲ್ಲಿ ಗಳಿಸಿದ್ದು ಬರೇ ೮ ರನ್.

೫: ೧೦೧ ರನ್ (೧೪೦ ಎಸೆತ) ಒಕ್ಟೋಬರ್ ೨೦೦೦ ದ ಶಾರ್ಜದಲ್ಲಿನ  ಶ್ರೀಲಂಕಾ ವಿರುದ್ದದ ಪಂದ್ಯ.
ಭಾರತ ೫೦ ಓವರ್ ಗಳಲ್ಲಿ  ೨೨೪/ ೮ ಗಳಿಸಿದ್ದ ಭಾರತದ ಇತರ ಯಾವುದೇ ಆಟಗಾರ ೫೦ ರ ಗಡಿ ದಾಟಿರಲಿಲ್ಲ. ಅದೇ ಶ್ರೀಲಂಕಾ ೨೨೫/೫ ಕೇವಲ ೪೩.೫ ಓವರ್ ನಲ್ಲಿ ಪ್ರೇರೇಪಿಸಿತ್ತು. ಇಲ್ಲೂ ಸಚಿನ್ ಇತರ (ಶ್ರೀನಾಥ್ ಹೊರತಾಗಿ) ಬ್ಲೌಲರ್ ಗಿಂತ ಕಮ್ಮಿ ಇಕಾನೋಮಿ ಬೌಲಿಂಗ್ ಮಾಡಿದ್ದರು ೫-೦- ೨೨-೦


೬: ೧೪೬ (೧೫೩ ಎಸೆತ) ಡಿಸೆಂಬರ್ ೨೦೦೦ ಜೋದ್ಪುರ್ ಪಂದ್ಯ.
೫೦ ಓವರ್ ನಲ್ಲಿ ಭಾರತ ೨೮೩ / ೮ ,ಸಚಿನ್ ಔಟ್ ಆದಾಗ (೨೩೫/೮  ೪೬.೩ ಓವರ್ ನಲ್ಲಿ) ನಿಂದ ಬರೇ ೩.೩ ಓವರ್ ನಲ್ಲಿ ೨೮೩ ರವರೆಗೆ ಕೊಂಡುಹೋದ ಕೆಳಕ್ರಮಾಂಕದಲ್ಲಿ ಬಂದ ಜಾಹಿರ್ ಮತ್ತು ಅಗರ್ಕರ್ ಪಾತ್ರ ನಿಜಕ್ಕೂ ಶ್ಲಾಘನೀಯ, ಮೇಲ್ ಕ್ರಮಾಂಕದ ೮ ಬಾಟ್ಸ್ಮೆನ್ ಗಳು ಗಳಿಸಿದ ೨೮೩ ರಲ್ಲಿ  ೧೪೬ ಸಚಿನ್ ಗಳಿಸಿದ್ದು ಅಂದರೆ ಉಳಿದ ೭ ಮಂದಿ ಮಾಡಿರುವ ಸಾಧನೆ ...? ಇಲ್ಲೂ ಸಚಿನ್ ಬೌಲಿಂಗ್ ಮೆಚ್ಚುವಂತದ್ದು ೬-೦-೩೫ - ೧(ಇತರರ ಬೌಲರ್ ಗಳಲ್ಲಿ !!!)


೭: ೧೦೧ ರನ್ (೧೨೯ ಎಸೆತ ) ಒಕ್ಟೋಬರ್ ೨೦೦೧, ದ. ಆಫ್ರಿಕಾ ವಿರುದ್ದದ ಜೋಹಾನ್ಸ್ಬರ್ಗ್ ಪಂದ್ಯ.
೫೦ ಓವರ್ ನಲ್ಲಿ ಭಾರತ ೨೭೯/ ೫ . ಗಂಗೂಲಿ ಯ ವಯಕ್ತಿಕ ೧೨೭ ಮತ್ತು ತೆಂಡೂಲ್ಕರ್ ನ್ನೊಂದಿಗೆ ೧೯೩ ರನ್ಗಳ (೩೫.೨ ಓವರ್) ಜೊತೆಯಾಟದ ಹೊರತಾಗಿಯೂ ಭಾರತ ಸೋಲನುಭವಿಸಿತು. ದ. ಆಫ್ರಿಕಾ ೨೮೦ ಅನ್ನು ೪೮.೪ ಒವೆರ್ಗಳಲ್ಲಿ ದಾಖಲಿಸಿತ್ತು. ಇಲ್ಲೂ ಸಚಿನ್ ಎರಡನೇ ಉತ್ತಮ ಬೌಲರ್ ಆಗಿ ಹೊರ ಹೊಮ್ಮಿದ್ದರು(೯-೦-೫೧-0).

೮:೧೪೧ ರನ್ (೧೩೫ ಎಸೆತ) ಮಾರ್ಚ್ ೨೦೦೪ ರ ರಾವಲ್ಪಿಂಡಿಯಲ್ಲಿನ ಪಾಕಿಸ್ತಾನದ ವಿರುದ್ದದ ಪಂದ್ಯ.
೩೨೯ ರನ್ ಬೆನ್ನತ್ತಿದ ಭಾರತ ೪೮.೪ ಓವರ್ ಗಳಲ್ಲಿ  ೩೧೭ ಕ್ಕೆ ಸರ್ವಪತನ ವಾಗಿತ್ತು.  ಈ ಪಂದ್ಯ ದಲ್ಲಿ ಇತರ ಯಾವುದೇ ಆಟಗಾರ ಅರ್ಧ ಶತಕದ ಗಡಿ ದಾಟಲು ವಿಫಲರಾಗಿದ್ದರು.ಸಚಿನ್ ಪವೆಲಿಯನ್ ಗೆ ಬಂದಾಗ ೨೪೫-೪ ಇದ್ದ ಭಾರತ ೮೫ ರನ್ ಗಳನ್ನು ೬೮ ಎಸೆತಗಳಲ್ಲಿ ೬ ವಿಕೆಟ್ ಇದ್ದೂ ಗಳಿಸಲಾಗದೇ ಸೋಲೋಪ್ಪಿಕ್ಕೊಂಡಿತ್ತು.

೯: ೧೨೩ ರನ್ (೧೩೦ ಎಸೆತ) ಏಪ್ರಿಲ್ ೨೦೦೫ ರ ಅಹಮದಾಬಾದ್ ನಲ್ಲಿನ ಪಾಕ್ ವಿರುದ್ದದ ಪಂದ್ಯ.
೪೮ ಓವರ್ ಸೀಮಿತ ಪಂದ್ಯದಲ್ಲಿ ಭಾರತ ೩೧೫/೬ ಪೇರಿಸಿತ್ತು, ಇಲ್ಲೂ ಇತರ ಆಟಗಾರರ್ಯಾರು ಅರ್ಧ ಶತಕ ಹೊಡೆಯುವಲ್ಲಿ ವಿಫಲರಾಗಿದ್ದರು.(ಎರಡನೇ ಉತ್ತಮ ನಿರ್ವಹಣೆ ಧೋನಿ ೪೭ ೬೪ ಎಸೆತಗಳಿಂದ, ಮೂರನೇ ಸ್ಥಾನದಲ್ಲಿ ಇತರೆ ರನ್ಗಳು ೩೯ !!!). ಸ್ಪಿನರ್ (ಕುಂಬ್ಳೆ , ಬಜ್ಜಿ) ಆಡದ ಈ ಪಂದ್ಯದಲ್ಲಿ ೩ ಸೀಮೆರ್ (ಬಾಲಾಜಿ , ಜಾಹಿರ್ , ನೆಹ್ರಾ)೨೬ ಓವರ್ ಗಳಲ್ಲಿ ೧೮೮ ರನ್ ಎದುರಾಳಿಗೆ ನೀಡಿ ಬರೇ ೨ ವಿಕೆಟ್ ತೆಗೆದಿದ್ದರು .ಸಚಿನ್ ಪಾಲು ೬-೦-೩೬-೧


೧೦: ೧೦೦ ರನ್ (೧೧೩ ಎಸೆತ) ಫೆಬ್ರವರಿ ೨೦೦೬ ರ ಪೆಶಾವರ್ ನಲ್ಲಿನ ಪಾಕ್ ವಿರುದ್ದದ ಪಂದ್ಯ.
ಭಾರತ ೪೯.೪ ಓವರ್ ಗಳಲ್ಲಿ ೩೨೮ ಕ್ಕೆ ಸರ್ವಪತನ. ೪೫ ನೇ ಓವರ್ ನಲ್ಲಿ ಸಚಿನ್ ಔಟ್ ಆದಾಗ ಭಾರತ ೩೦೫-೫  ಕೊನೆಯ ೪.೪ ಓವರ್ ನಲ್ಲಿ ಕೊನೆಯ ೫ ವಿಕೆಟ್ಗಳನ್ನು ೨೩ ರನ್ ಗಳಿಗೆ ಕಳಕ್ಕೊಂಡಿತ್ತು. D / L  ನಿಯಮದನ್ವಯ ಪಾಕ್ ಜಯಶಾಲಿಯಾಗಿತ್ತು. 

೧೧ : ೧೪೧* (೧೪೮ ಎಸೆತ) ಮಲೇಶಿಯ ದಲ್ಲಿನ ವೆಸ್ಟ್ ಇಂಡಿಸ್ ನೊಂದಿಗಿನ ಪಂದ್ಯ.
ಭಾರತ ೫೦ ಓವರ್ ಗಳಿಗೆ ೩೦೯/೫  ಗಳಿಸಿತ್ತು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಇನ್ನೊಬ್ಬ ಆಟಗಾರ ಪಟಾನ್. ಇಲ್ಲೂ D / L  ನಿಯಮ ವೆಸ್ಟ್ ಇಂಡಿಸ್ ಅನ್ನು (೧೪೧ / ೨ ೨೦ ಓವರ್  ) ಜಯಶಾಲಿಯನ್ನಾಗಿಸಿತ್ತು.

೧೨: ೧೭೫ ರನ್ (೧೪೧ ಎಸೆತ) ನವೆಂಬರ್ ನ  ೨೦೦೯ ರ ಆಸ್ಟ್ರೇಲಿಯ ವಿರುದ್ದದ ಹೈದರಾಬಾದ್ ಪಂದ್ಯ .
೩೫೧ ರ ಗುರಿ ಬೆನ್ನು ಹತ್ತಿದ ಭಾರತ ಬರೇ ೩ ರನ್ ನಿಂದ ಸೋಲೋಪ್ಪಿಕ್ಕೊಂಡಿತು.ಇಲ್ಲಿ ಸಚಿನ್ ಗೆ ಸಾಥ್ ಕೊಟ್ಟವರು ರೈನಾ ( ೫೯ ) ಉಳಿದವರಂತು ತಮ್ಮ ಆಟ ಮರೆತು ಸಚಿನ್ ನ ಆಟ ನೋಡಿದ್ದರು !!!!

೧೩: ೧೧೧ (೧೦೧ ಎಸೆತ)  ದ . ಆಫ್ರಿಕಾ ವಿರುದ್ದದ ೨೦೧೧ ವಿಶ್ವಕಪ್ ಪಂದ್ಯ.
೨೬೭/೧ ಇದ್ದ ಭಾರತ ೨೯೬ ಕ್ಕೆ ಸರ್ವಪತನ .ಬರೇ ೨೯ ರನ್ ಅಂತರದಲ್ಲಿ ೯ ವಿಕೆಟ್ ಪತನ (ಅಧಃ ಪತನ !!!!) 

ಈಗ ಹೇಳಿ .....
ಭಾರತದ ಸೋಲಿಗೆ ಸಚಿನ್ ಶತಕ ಕಾರಣವಾ ....? !!!!

ಸಚಿನ್ ಗೆ ಶತಕದ ಶತಕ ದಾಖಲಿಸಲು ಕೇವಲ ಒಂದೇ ಶತಕದ ಅವಶ್ಯಕತೆ ಇದೆ. ಇದನ್ನು ಈ ವಿಶ್ವಕಪ್ ಮಹಾಸಮರದಲ್ಲಿ ಬಾರಿಸಲಿ ಎಂಬುದು ಎಲ್ಲ ಅಭಿಮಾನಿಗಳ ಆಶಯ . ಅವರು ಶತಕ ಬಾರಿಸಿ ಭಾರತಕ್ಕೆ ೨೮ ವರ್ಷದ ಕನಸು ವಿಶ್ವಕಪ್ ಮಾತ್ತೊಮ್ಮೆ ತಂದುಕೊಡಲಿ ಎಂದು ಆಶಿಸುವ.


ನಿಮ್ಮ
ಕಾಮತ್ ಕುಂಬ್ಳೆ 

1 comment: