Wednesday, October 31, 2012

ಅ ಆ ಇ ಈ ಉ ಊ ....


ಮ್ಮ ದಿನ ರುಳಲಿ ದಿನದ 
ಗಮಕ್ಕೆ ರಲ್ಲಿ ಡೆಬಿಡದೆ 
ಕಾಂಗಿಯಾಗಿ ವತ್ತಕ್ಷರ 
ಒಂದೊಂದಾಗಿ ದಿಸಿದಳು 
ದಾರ್ಯದಿ ಅಂಗಳದಲಿ

ಕಂದನ ಖುಷಿಯಲಿ ಗಂಡನಿಗೂ ಳಿಗೆ ಳಿಸಿದಳು
ಚಿರಂತನ ಛಾಯೆಯಾಗಿ ಜೊತೆಯಲಿ ಝೇಂಕರಿಸಿದಳು 
ಟೀಕೆ ಟಿಪ್ಪಣಿಗೆ ಡೊಂಕಾಗದೇ, ಮರುಗವಾದೆ
ವರು, ಳುಕು, ದ್ರವ್ಯಗಳ ಧಿಕ್ಕರಿಸಿದೆ ನಿನಗಾಗಿ 
ಪ್ರಗತಿಯಲಿ ಲವ ಯಸದೆ ವಿಷ್ಯವಾದೆ ಗನಿಗೆ 

ಯಾವನಿಗಾಗಿ ಕ್ತವ ವಲವಿಕೆಯಲಿ ವ್ಯಯಿಸಿದೆಯೋ
ಹರದಿ ಷೋಕಿ ರಸದಲಿರಲವನು 
ತಾಶ ಳಾಗದೆ ಕ್ಷೆಮಾಭಿಲಾಷೆಯಲೇ 
ತ್ರಿಕಾಲ ಜ್ನಾಪಿಸುತಲಿಇರುವಳಿವಳು.
  

ಕಾಮತ್ ಕುಂಬ್ಳೆ 
೩೧/೧೦/೨೦೧೨ 

Thursday, October 18, 2012

ಅಲೆಮಾರಿ ಜೀವಕೆ ಆಸರೆಯ ನೀಡಿದೆ

ಮನಸ್ಸಿನ ಕಿಟಕಿಯ ಬಾಗಿಲನು ತೆರೆಯುತ
ತೆರೆಮರೆಯಲಿ ಮರೆಯಾಗಿ ಇಣುಕುತಲಿರುವೆ
ಕನಸಿನ ಪುಟಗಳ ಸಾಲಗಳ ಕೊರೆಯುತ
ನನ್ನೆದೆಯಲಿ ಮೆದುವಾಗಿ ಕುಟುಕುತಲಿರುವೆ
ಅಲೆಮಾರಿ ಜೀವಕೆ ಆಸರೆಯ ನೀಡಿದೆ ||
ವ್ಯಭಿಚಾರಿ ಭಾವಕೆ ನೀ ಸೆರೆಯ ನೀಡಿದೆ ||

ಆಪ್ಯಾಯಮಾನ ಯಾತನೆಯ ನೆಮ್ಮದಿಯ   
ತೆರೆದಿಟ್ಟು ಮುಳುಗಿದ ಏಕಾಂತಕೆ ಉಸಿರು ನೀಡಿದೆ
ದೇದೀಪ್ಯಮಾನ ಯೋಜನೆಯ ಮುನ್ನುಡಿಯ
ಬರೆದಿಟ್ಟು ಬಳಲಿದ ಲೇಖನಿಗೆ ಹುರುಪು ನೀಡಿದೆ ||ಅಲೆಮಾರಿ ಜೀವಕೆ ||

ಮನದ ಮುಗಿಲಲಿ ಭಾವನೆಯ ಗಾಳಿಪಟವ 
ಹಾರಿಬಿಟ್ಟು ಹರಿದ ದಾರಕೆ ಚೇತನವ ನೀಡಿದೆ
ಕನಸ ಮಗ್ಗುಲಲಿ ಅಪ್ರಮೇಯ ಕನವರಿಕೆಯ
ಬಚ್ಚಿಟ್ಟು ಕಳೆದ ಗಳಿಗೆಗೆ ಸಾಂತ್ವನವ  ನೀಡಿದೆ ||ಅಲೆಮಾರಿ ಜೀವಕೆ ||

ನಿಮ್ಮ
ಕಾಮತ್ ಕುಂಬ್ಳೆ