Thursday, December 1, 2011

ಕಲೆಯೂ ಮಾಸದು ಗಾಯವೂ ಮಾಗದು

ಮಿಡಿಯುವ ಹೃದಯದಲಿ
ಎರಡು ಹೆಜ್ಜೆಯ ಗುರುತಿಗೆ ಹಂಬಲಿಸುತಿದ್ದೆ  ನಾ 
ಬೇಡಿಕೆಯ ಇಡೇರಿಸಲು
ಹೃದಯದಲಿ ಪ್ರೀತಿ ಗಾಯದ ಕಲೆ ಚಿತ್ರಿಸಿದೆ ನೀ


ಕಲೆಯೂ ಮಾಸದು ಗಾಯವೂ ಮಾಗದು 
ತಲೆಯ ಮೂಲೆಯಲಿ ಮತ್ತೆ ಮೆಲುಕಾಗಿ ಕಾಡುವುದು 
ಕಲೆಯ ಬೆಲೆಯು ತಿಳಿಯುವುದು ಗಾಯದ ನೋವ ನೆನಪಿಸಿದರೆ 
ನಲಿವಿನ ಮನದಲಿ ನರಳುವ ಮನಸಿನ ತುಡಿತದ ಅರಿವಾಗುವುದು


ಮಾಸ ಬಾರದೇ ಕಲೆಯು ಹೃದಯದಿ
ವಿಕಸಿಸುವ ಹೊಸ ಬಾಳಿಗೆ ಸ್ಫೂರ್ತಿ ಯಾಗುವುದು ಕಲೆ ರಹಿತ ಹೃದಯವು
ಮಾಗ ಬಾರದೇ ಗಾಯವು ಹೃದಯದಿ
ಪ್ರಸವಿಸುವ ಹೊಸ ಜೀವಕೆ ದ್ಯೋತಿ ಯಾಗುವುದು ಕೊಳೆತ ಹೃದಯವು

ನೀಡದೆ ಕಾರಣ ಉಳಿದಿದೆ
ಗಾಯವೊಂದು ಕಲೆಯಾಗಿ ಹೃದಯದಿ 

ಕಲೆಯೂ ಮಾಸದು ಗಾಯವೂ ಮಾಗದು 
ತಲೆಯ ಮೂಲೆಯಲಿ ಮತ್ತೆ ಮೆಲುಕಾಗಿ ಕಾಡುವುದು