Friday, July 15, 2011

ಮಳೆ


ಬರಡಾದ ಮನಕ್ಕೆ ಸಾಂತ್ವನ ಕೊಟ್ಟು ನೀ ಜಿನುಗುತ್ತಿದ್ದಿಯೋ
ನವಿರಾದ ದುಃಖಕ್ಕೆ ಆಹ್ವಾನ ಇಟ್ಟು ನೀ ಛೇಡಿಸುತ್ತಿದ್ದಿಯೋ
ಕಾರಣ ಕೊಟ್ಟು ಜಾರಬಾರದೆ ಕಣ್ಣೀರಿಗೆ ಜೊತೆಯಾದ ಹನಿಯೇ
ಮಡುಗಟ್ಟುವ ಎದೆಯ ಭಾರಕೆ ಗುಡುಗುಟ್ಟುವ ಮೇಘವೇ ಇನಿಯ

ಒಂಟಿ ಬೀದಿಯಲಿ ವಿರಹದ ಮಳಿಗೆಯ ಬಾಗಿಲು ತೆರೆದಾಗಿದೆ
ಜಂಟಿ ದಾರಿಯಲಿ ಸವೆದ ಗಳಿಗೆಯ ನೆನಪ ಜೋಡಿಸಿಡಲಾಗಿದೆ
ನಡೆಯದ ವ್ಯವಹಾರಕ್ಕೆ ಕಾಯುವ ನಾಲ್ಕು ಗಳಿಗೆಯ ವರ್ತಕ
ಬಿಡದೆ ನೀ ಹೀಗೆ ಸುರಿದರೆ ನಿಲ್ಲದ ಪ್ರಯತ್ನ ಆಗವುದೆಂದು ಸಾರ್ಥಕ

ಹರೆಯದ ಉತ್ಸಾಹಕೆ ಸ್ಪೂರ್ತಿಯಾದ ಹನಿಯು ಬೇಕಾಗಿದೆ ಇಂದು
ಮರೆಮಾಡಲು ನಲ್ಲನ ವಿಯೋಗದ ಹನಿಯ ನಡುವಯಸ್ಸಿನೋಳು
ಒಡಲಲ್ಲಿ ಕುರುವ್ಹಿಟ್ಟು,ತನ್ನ ಅಸ್ತಿತ್ವ ಮರೆಮಾಡಿ,ವಿಧವೆ ಪದವಿಯು
ಹಣೆಯಲ್ಲಿ ಬೊಟ್ಟಿಟ್ಟು,ಹೊಸ ವ್ಯಕ್ತಿತ್ವ ತರೆಯಲು ಬೇಕಿದೆ ಆಸರೆಯು

ಕಿಟಕಿಯ ಹೊರ ಮಳೆ ನಿಂತರೂ ಒಳಗೆ ಇನ್ನೂ ಸುರಿಯುತ್ತಿದೆ
ಹೊರಗಿನ ಹನಿ ಸೇರಿ ಕವನದಂಚಿನಲಿ ಸಿಹಿ ಮತ್ತು ಪೇರಿಸಿದೆ
ಒಳಗಿನ ಹನಿ ಹರಿದ ಸೇರಗಿನಂಚಿನಲಿ ಮಣಿಮುತ್ತು ಪೋಣಿಸಿದೆ

ಕಾಮತ್ ಕುಂಬ್ಳೆ